'Hi Nanna' Twitter review: ನಾನಿಯ 'ಹಾಯ್ ನಾನ್ನ' ಸಿನಿಮಾದ ಆತ್ಮವೇ ಮೃಣಾಲ್ ಠಾಕೂರ್ ಎಂದ ಫ್ಯಾನ್ಸ್!
ತೆಲುಗಿನ ನ್ಯಾಚುರಲ್ ಸ್ಟಾರ್ ನಾನಿ ಮತ್ತು ನಟಿ ಮೃಣಾಲ್ ಠಾಕೂರ್ ನಟನೆಯ 'ಹಾಯ್ ನಾನ್ನ' ಸಿನಿಮಾ ಡಿಸೆಂಬರ್ 7 (ಗುರುವಾರ) ರಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಸಿನಿಮಾ ನೋಡಿದ ಅನೇಕ ನೆಟ್ಟಿಗರು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ತಮ್ಮ ವಿಮರ್ಶೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ನಟ ನಾನಿ ತನ್ನ 6 ವರ್ಷದ ಮಗಳನ್ನು (ಕೈರಾ ಖನ್ನಾ) ಸಿಂಗಲ್ ಪೇರೆಂಟ್ ಆಗಿ ನೋಡಿಕೊಳ್ಳುವುದರ ಸುತ್ತ ಸಿನಿಮಾ ಸುತ್ತುತ್ತದೆ. ರಂದೆ- ಮಗಳ ಮುದ್ದಾದ ಬಾಂಧವ್ಯ ಮತ್ತು ಇದರ ನಡುವೆ ಅವರ ಜೀವನದಲ್ಲಿ ಎಂಟ್ರಿ ಕೂಡುವ ನಾಯಕಿ. ಅದರಿಂದ ಆಗುವ ಬದಲಾವಣೆಗಳನ್ನು ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ. ಚಿತ್ರಕ್ಕೆ ಬಂದಿರುವ ಪ್ರತಿಕ್ರಿಯೆಗಳು ಸಕತ್ ಆಗಿದ್ದು ಜನ ಚಿತ್ರದ ಬಗ್ಗೆ ಏನ್ ಏನ್ ಹೇಳಿದ್ದಾರೆ ಎಂಬುದನ್ನು ಮುಂದೆ ನೋಡೋಣ.

'ಹಾಯ್ ನಾನ್ನ' ಸಿನಿಮಾ ಹೇಗಿದೆ...?
ಕೆಲವರು 'ಹಾಯ್ ನಾನ್ನ' ಹೃದಯಸ್ಪರ್ಶಿ ಎಂದು ಕರೆಯುತ್ತಿದ್ದರೆ, ಇನ್ನು ಕೆಲವರು ಕಲಾವಿದರ ಅಭಿನಯಕ್ಕೆ ಮರುಳಾಗಿದ್ದಾರೆ. ಟ್ವೀಟ್‌ನಲ್ಲಿ, "ಇದೊಂದು ಬ್ಲಾಕ್‌ಬಸ್ಟರ್. ನಾನಿ ಮತ್ತು ಮೃಣಾಲ್ ಠಾಕೂರ್ ನಡುವಿನ ಕೆಮಿಸ್ಟ್ರಿ ಅಕ್ಷರಶಃ ಮನಸ್ಸಿಗೆ ಮುದ ನೀಡುತ್ತದೆ. ಸೂಪರ್ ಚಲನಚಿತ್ರವಾಗಿದೆ. ಬ್ಲಾಕ್‌ಬಸ್ಟರ್ ಲೋಡಿಂಗ್" ಎಂದು ಬೆಂಕಿಯ ಎಮೋಜಿಗಳನ್ನು ಹಾಕಿ ಹೊಗಳಿದ್ದಾರೆ.
ಮತ್ತೊಬ್ಬರು, "ಹಾಯ್ ನಾನ್ನ ಸಿನಿಮಾದಲ್ಲಿ ನಾನಿ ಮತ್ತು ಮೃಣಾಲ್ ನಡುವಿನ ಕೆಮಿಸ್ಟ್ರಿಯನ್ನು ನೀವು ಮಿಸ್ ಮಾಡಲೇಬಾರದು" ಎಂದು ಹೇಳಿದ್ದಾರೆ. ಮತ್ತೊಬ್ಬ ನೆಟ್ಟಿಗರು, "ಮೃಣಾಲ್ ಠಾಕೂರ್ ಅವರನ್ನು ನೋಡುವುದೇ ಚಂದ. ಮೃಣಾಲ್ ಠಾಕೂರ್ ಹಾಯ್ ನಾನ್ನ ಸಿನಿಮಾದ ಆತ್ಮ. ದಯವಿಟ್ಟು ಹೆಚ್ಚು ತೆಲುಗು ಚಿತ್ರಗಳನ್ನು ಮಾಡಿ" ಎಂದು ನಟಿಗೆ ಮನವಿ ಮಾಡಿದ್ದಾರೆ.
ನಟಿ ಮೃಣಾಲ್ ಠಾಕೂರ್ 2022ರಲ್ಲಿ ಬಿಡುಗಡೆಯಾದ ದುಲ್ಖರ್ ಸಲ್ಮಾನ್ ನಟನೆಯ 'ಸೀತಾ ರಾಮಂ' (2022) ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದವರು. ಬಳಿಕ ಹಲವು ತೆಲುಗು ಸಿನಿಮಾಗಳಲ್ಲಿ ಬಣ್ಣ ಹಚ್ಚುತ್ತಿದ್ದಾರೆ.

ಹಾಯ್ ನಾನ್ನ ಅಪ್ಪ-ಮಗಳ ಬಾಂಧವ್ಯದ ಪರಿಪೂರ್ಣ ಚಿತ್ರ
ಟ್ವಿಟ್ಟರ್ ಬಳಕೆದಾರರೊಬ್ಬರು, " ಹಾಯ್ ನಾನ್ನ ಅದ್ಭುತ ಚಿತ್ರ. ಅಪ್ಪ-ಮಗಳ ಬಾಂಧವ್ಯದ ಪರಿಪೂರ್ಣ ಚಿತ್ರ. ಕ್ಲೈಮ್ಯಾಕ್ಸ್ ತುಂಬಾ ಭಾವನಾತ್ಮಕವಾಗಿತ್ತು" ಎಂದು ಕಣ್ಣಿರಿನ ಎಮೋಜಿಗಳನ್ನು ಹಾಕಿದ್ದಾರೆ. ಮತ್ತೊಬ್ಬರು "ಹಾಯ್ ನಾನ್ನ ಉತ್ತಮ ಸೆಟಪ್‌ನೊಂದಿಗೆ ಪ್ರಾರಂಭವಾಗುತ್ತದೆ. ಪ್ರತಿ ಫ್ರೇಮ್‌ನಲ್ಲಿ ಫೇಶ್ ಫೀಲ್ ಕೊಡುತ್ತದೆ. ಮೊದಲಾರ್ಧವು ತುಂಬಾ ಚೆನ್ನಾಗಿತ್ತು. ನಂತರ ನಿರೂಪಣೆ ಕೆಲ ಕಾಲ ಬೋರ್ ಅನಿಸುತ್ತದೆ. ಆದರೆ, ಸಿನಿಮಾಕ್ಕೆ ಬರವಣಿಗೆಯು ದೊಡ್ಡ ಪ್ಲಸ್ ಆಗಿದೆ. ನಾನಿ, ಮೃಣಾಲ್, ಬೇಬಿ ಕಿಯಾರಾ ಅವರ ಅಭಿನಯವು ಅತ್ಯುತ್ತಮವಾಗಿದೆ" ಎಂದು ಹೊಗಳಿದ್ದಾರೆ.
ಹಾಯ್ ನಾನ್ನ
ಹಾಯ್ ನಾನ್ನ ಸಿನಿಮಾವನ್ನು ಶೌರ್ಯುವ್ ಬರೆದು ನಿರ್ದೇಶಿಸಿದ್ದಾರೆ. ಇದನ್ನು ವೈರಾ ಎಂಟರ್ಟೈನ್ಮೆಂಟ್ಸ್ ನಿರ್ಮಿಸಿದೆ. ಈ ಚಲನಚಿತ್ರವನ್ನು ಜನವರಿ 2023 ರಲ್ಲಿ 'ನಾನಿ 30' ಎಂಬ ತಾತ್ಕಾಲಿಕ ಶೀರ್ಷಿಕೆಯೊಂದಿಗೆ ಘೋಷಿಸಲಾಗಿತ್ತು. ಜುಲೈ 2023 ರಲ್ಲಿ ಅಧಿಕೃತ ಶೀರ್ಷಿಕೆಯನ್ನು ಬಹಿರಂಗಪಡಿಸಲಾಯಿತು. ಹಾಯ್ ನಾನ್ನ ಡಿಸೆಂಬರ್ 21 ರಂದು ವಿಶ್ವಾದ್ಯಂತ ಬಿಡುಗಡೆಯಾಗಬೇಕಿತ್ತು. ಆದರೆ, ಆ ಸಮಯದಲ್ಲಿ ಶಾರುಖ್ ಖಾನ್ ನಟನೆಯ ಡಂಕಿ ಮತ್ತು ಪ್ರಭಾಸ್ ನಟನೆಯ ಬಹುನಿರೀಕ್ಷಿತ ಸಿನಿಮಾ ಸಲಾರ್ ಬಿಡುಗಡೆಯಾಗಲಿದ್ದು, ಹಾಯ್ ನಾನ್ನ ಸಿನಿಮಾ ಡಿಸೆಂಬರ್ 7ರಂದು ರಿಲೀಸ್ ಆಗಿದೆ.


Click it and Unblock the Notifications










