twitter
    For Quick Alerts
    ALLOW NOTIFICATIONS  
    For Daily Alerts

    ವಿಮರ್ಶಕರ ಮನ ಲೂಟಿ ಮಾಡಿದನಾ 'ಈ' ಕೋಟಿಗೊಬ್ಬ.?

    By Suneetha
    |

    ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಹಾಗೂ ಸಿನಿ ರಸಿಕರಿಗೆ ಭಾರಿ ನಿರೀಕ್ಷೆ ಮೂಡಿಸಿದ್ದ 'ಕೋಟಿಗೊಬ್ಬ 2' ಸಿನಿಮಾ ಕೊನೆಗೂ ನಿನ್ನೆ (ಆಗಸ್ಟ್ 12) ವರಮಹಾಲಕ್ಷ್ಮಿ ಹಬ್ಬದ ದಿನ, ಕನ್ನಡ ಮತ್ತು ತಮಿಳಿನಲ್ಲಿ ಏಕಕಾಲದಲ್ಲಿ ಅದ್ಧೂರಿಯಾಗಿ ತೆರೆಗೆ ಅಪ್ಪಳಿಸಿದೆ. ಖ್ಯಾತ ನಿರ್ದೇಶಕ ಕೆ.ಎಸ್ ರವಿಕುಮಾರ್ ನಿರ್ದೇಶನ ಮಾಡಿದ್ದ ಈ ಚಿತ್ರದ ಬಗ್ಗೆ ಎಲ್ಲಾ ಕಡೆಯಿಂದ ವಿಭಿನ್ನ ರೆಸ್ಪಾನ್ಸ್ ಬರುತ್ತಿದೆ.

    ನಿನ್ನೆ ಬೆಳ್ಳಂ-ಬೆಳಗ್ಗೆ ಮೊದಲ ಶೋ ನೋಡಿದ ಅಭಿಮಾನಿಗಳಂತೂ ಕೇಕೆ ಹಾಕಿ, ಹಬ್ಬ ಮಾಡಿದ್ದರು. ಎಲ್ಲರೂ ಸಿನಿಮಾ ಖಂಡಿತ 100 ದಿನ ಓಡುತ್ತೆ, ಸುದೀಪ್ ಅವರಿಗೆ ಬೆಸ್ಟ್ ಆಕ್ಟರ್ ಅವಾರ್ಡ್ ಗ್ಯಾರೆಂಟಿ ಅಂತ ಈಗಿನಿಂದಲೇ ಅಭಿಮಾನಿಗಳು ಲೆಕ್ಕಾಚಾರ ಹಾಕುತ್ತಿದ್ದಾರೆ.

    ಅದಕ್ಕೆ ತಕ್ಕಂತೆ, ಸಿನಿಮಾ ಕೂಡ ಬಹಳ ಚೆನ್ನಾಗಿ ಮೂಡಿಬಂದಿದೆ, ಪಕ್ಕಾ ಪೈಸಾ ವಸೂಲ್ ಸಿನಿಮಾ, ಕೊಟ್ಟ ದುಡ್ಡಿಗೆ ಮೋಸ ಇಲ್ಲ, ಹೀಗೆ ಭಿನ್ನ-ವಿಭಿನ್ನ ವಿಮರ್ಶೆಗಳು ವ್ಯಕ್ತವಾಗಿವೆ. ಒಟ್ನಲ್ಲಿ ಸುದೀಪ್ ಅವರನ್ನು ಡಿಫರೆಂಟ್ ಆಗಿ ನೋಡಿದ ಧನ್ಯತಾ ಭಾವ ಅಭಿಮಾನಿಗಳ ಮುಖದಲ್ಲಿ ಮೂಡಿಬಂದಿತ್ತು.[ವಿಮರ್ಶೆ: ಆ 'ಕೋಟಿಗೊಬ್ಬ'ನಂತಲ್ಲ ಈ 'ಕೋಟಿಗೊಬ್ಬ'.!]

    ಇದೀಗ ಸುದೀಪ್ ಮತ್ತು ನಿತ್ಯಾ ಮೆನನ್ ಅವರು ಇದೇ ಮೊದಲ ಬಾರಿಗೆ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ 'ಕೋಟಿಗೊಬ್ಬ 2' ಚಿತ್ರದ ಬಗ್ಗೆ ಕನ್ನಡದ ಖ್ಯಾತ ವಿಮರ್ಶಕರು ವಿಭಿನ್ನ ಕಾಮೆಂಟ್ ಮಾಡಿದ್ದಾರೆ.

    ಹಾಗಂತ ವಿಮರ್ಶಕರ ವಿಮರ್ಶೆ ನೋಡಿ, ಸಿನಿಮಾ ನೋಡದೇ ಹಾಗೆ ಮನೆಯಲ್ಲೇ ಇರಬೇಡಿ, ಯಾವುದಕ್ಕೂ ಒಂದ್ಸಾರಿ ಸಿನಿಮಾ ನೋಡಿ ಬಿಡಿ. ಇದೀಗ ವಿಮರ್ಶಕರ, ವಿಮರ್ಶೆಯ ಕಲೆಕ್ಷನ್ಸ್ ನಿಮಗಾಗಿ ಹೊತ್ತು ತಂದಿದ್ದೇವೆ. ನೋಡಿ ಕೆಳಗಿನ ಸ್ಲೈಡ್ಸ್ ಗಳಲ್ಲಿ...

    'ಮಾಸ್ ಮನಗೆಲ್ಲುವ ಕೋಟಿಗೊಬ್ಬ 2' -ವಿಜಯ ಕರ್ನಾಟಕ

    'ಮಾಸ್ ಮನಗೆಲ್ಲುವ ಕೋಟಿಗೊಬ್ಬ 2' -ವಿಜಯ ಕರ್ನಾಟಕ

    ತಮಿಳಿನ ಹಿರಿಯ ನಿರ್ದೇಶಕ ಕೆ.ಎಸ್‌. ರವಿಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ತಮಿಳು ಛಾಯೆ ಇದೆ. ಆದರೆ ಸುದೀಪ್‌ ನಟನೆ, ಮೈನಸ್‌ ಪಾಯಿಂಟ್ ‌ಗಳನ್ನು ಮರೆಸಿಬಿಡುತ್ತದೆ. ಎರಡು ಕ್ಯಾರೆಕ್ಟರ್‌ಗಳಲ್ಲಿ ಸಿನಿಮಾ ಪೂರ್ತಿ ಅಭಿಮಾನಿಗಳನ್ನು ಅವರು ರಂಜಿಸುತ್ತಾರೆ. ರಿಯಲ್‌ ಎಸ್ಟೇಟ್ ಉದ್ಯಮ ನಡೆಸುವ ಸತ್ಯ ಹಾಗೂ ಕೋಟ್ಯಂತರ ರೂಪಾಯಿ ಕಪ್ಪು ಹಣ ಲೂಟಿ ಮಾಡುವ ಶಿವ ಪಾತ್ರಗಳಲ್ಲಿ ಸುದೀಪ್‌ ಮಿಂಚಿದ್ದಾರೆ. ಹೀಗೆ ಎರಡು ಕ್ಯಾರೆಕ್ಟರ್‌ಗಳಲ್ಲಿ ಕಾಣಿಸಿಕೊಳ್ಳುವ ಸುದೀಪ್‌ ಒಬ್ಬರೇನಾ? ಇಬ್ಬರಾ? ಎನ್ನುವುದು ಚಿತ್ರದ ಕುತೂಹಲಕಾರಿ ಅಂಶ. ಬಹು ನಿರೀಕ್ಷೆ ಮತ್ತು ಕುತೂಹಲ ಹುಟ್ಟಿಸಿದ್ದ 'ಕೋಟಿಗೊಬ್ಬ-2' ಚಿತ್ರ ಅವರ ಅಭಿಮಾನಿಗಳಿಗೆ ನಿರಾಶೆ ಮಾಡುವುದಿಲ್ಲ. ಒಂದಿಷ್ಟು ಸಸ್ಪೆನ್ಸ್, ಕಾಮಿಡಿ, ಲವ್‌, ಸೆಂಟಿಮೆಂಟ್ ಇರುವ ಚಿತ್ರ ಬೋರ್‌ ಹೊಡೆಸದಿದ್ದರೂ, ಅದ್ಭುತ ಅಂತ ಹೇಳಲೂ ಸಾಧ್ಯವಾಗುವುದಿಲ್ಲ. ಕೊಟ್ಟ ಕಾಸಿಗೆ ಮೋಸವಿಲ್ಲ ಎಂದಷ್ಟೇ ಹೇಳಬಹುದು. ರೇಟಿಂಗ್: 3/5. ಪದ್ಮಾ ಶಿವಮೊಗ್ಗ.

    ಹೃದಯ ವಿದ್ರಾವಕ ದರೋಡೆ!- ಪ್ರಜಾವಾಣಿ

    ಹೃದಯ ವಿದ್ರಾವಕ ದರೋಡೆ!- ಪ್ರಜಾವಾಣಿ

    ಉಳ್ಳವರನ್ನು ದೋಚಿ ಇಲ್ಲದವರಿಗೆ ಕೊಡುವ ರಾಬಿನ್‌ಹುಡ್ ಶೈಲಿಯ ಹತ್ತಾರು ಕಥೆಗಳು ಈಗಾಗಲೇ ಸಿನಿಮಾ ರೂಪದಲ್ಲಿ ಬಂದುಹೋಗಿವೆ. ಆದರೆ ‘ಕೋಟಿಗೊಬ್ಬ 2' ನಿರ್ದೇಶಕ ಕೆ.ಎಸ್. ರವಿಕುಮಾರ್ ಕೈಚಳಕ ತೋರಿಸಿರುವುದು ನಾಯಕನ ದರೋಡೆ ವಿಧಾನದಲ್ಲಿ. ಅದಕ್ಕೊಂದಷ್ಟು ಪ್ರೀತಿ-ಪ್ರೇಮದ ಮಸಾಲೆ ಬೆರೆಸಿ ಶೇಕಡ ನೂರರಷ್ಟು ಕಮರ್ಷಿಯಲ್ ಚಿತ್ರ ಒಪ್ಪಿಸಿದ್ದಾರೆ. ಶಿವ ಹಾಗೂ ಸತ್ಯ ಎಂಬ ಎರಡು ಪಾತ್ರಗಳನ್ನು ಮುಂದಿಟ್ಟುಕೊಂಡು ಕಥೆ ಬರೆದ ರವಿಕುಮಾರ್, ಆರಂಭದಲ್ಲೇ ಆ ಎರಡೂ ಪಾತ್ರಗಳ ನಟನೆ ಮಾಡುತ್ತಿರುವುದು ಒಬ್ಬನೇ, ಎಂಬ ಗುಟ್ಟನ್ನು ರಟ್ಟು ಮಾಡಿರುತ್ತಾರೆ. ಮುಂದೆ ಎದುರಾಗುವ ಗೊಂದಲಗಳೆಲ್ಲಾ ಪೊಲೀಸರು ಹಾಗೂ ಹಣ ಕಳೆದುಕೊಂಡ ಉದ್ಯಮಿಗಳದ್ದು ಅಷ್ಟೇ. ರೇಟಿಂಗ್: 3/5. - ಆನಂದತೀರ್ಥ ಪ್ಯಾಟಿ.

    ಲೂಟಿಗೊಬ್ಬ ಕೋಟಿಗೊಬ್ಬ ಪೈಪೋಟಿಗೊಬ್ಬ!- ಉದಯವಾಣಿ

    ಲೂಟಿಗೊಬ್ಬ ಕೋಟಿಗೊಬ್ಬ ಪೈಪೋಟಿಗೊಬ್ಬ!- ಉದಯವಾಣಿ

    'ಕೋಟಿಗೊಬ್ಬ 2' ಚಿತ್ರದ ಕಥೆಯನ್ನು ಸುಲಭಕ್ಕೆ ಹೇಳಿ ಮುಗಿಸುವುದು ಕಷ್ಟ, ಏಕೆಂದರೆ, ಚಿತ್ರದಲ್ಲಿ ಸಾಕಷ್ಟು ಟ್ವಿಸ್ಟುಗಳು, ಮತ್ತಷ್ಟು ಟರ್ನುಗಳು ಇವೆ. ಹಾಗಾಗಿ ಬೆಳ್ಳಗಿದ್ದ ಪರದೆ, ಕಪ್ಪಾಗುವವರೆಗೂ ಏಳುವ ಹಾಗಿಲ್ಲ ಮತ್ತು ಇದೇ ಸತ್ಯ ಎಂಬ ತೀರ್ಮಾನಕ್ಕೆ ಬರುವ ಹಾಗಿಲ್ಲ. ಅಂಥದ್ದೊಂದು ಬ್ರೇನಿ ಕಥೆಯನ್ನು ಶಿವಕುಮಾರ್ ಹೆಣೆದಿದ್ದಾರೆ ಮತ್ತು ಇದನ್ನು ರವಿಕುಮಾರ್ ತೆರೆಯ ಮೇಲೆ ತಂದಿದ್ದಾರೆ. ಅಷ್ಟೆಲ್ಲಾ ಟ್ವಿಸ್ಟು, ಟರ್ನುಗಳನ್ನು ಹೇಳುವುದು ಕಷ್ಟವಾದರೂ, ಚಿತ್ರದ ಕಥೆಯನ್ನು ಹೀಗೆ ಸರಳವಾಗಿ ಹೇಳಬಹುದು. ಕೋಟಿ ಕೋಟಿ ಬ್ಲ್ಯಾಕ್ ಮನಿ ಇಟ್ಟುಕೊಂಡ ಶ್ರೀಮಂತರ ತಿಜೋರಿಯಲ್ಲಿದ್ದ ಕಂತೆ-ಕಂತೆ ನೋಟುಗಳನ್ನು ಒಂದು ಗ್ಯಾಂಗ್ ದೋಚುತ್ತಿರುತ್ತದೆ. ಆ ಗ್ಯಾಂಗ್ ನಾಯಕ ಸತ್ಯ ಎಂಬ ರಿಯಲ್ ಎಸ್ಟೇಟ್ ಏಜೆಂಟ್, ಎಂದು ಪೊಲೀಸ್ ಪತ್ತೆ ಮಾಡುತ್ತಾರೆ. ಅವನನ್ನು ಲಾಕ್ ಮಾಡಿ ರುಬ್ಬಿದಾಗ, ದರೋಡೆ ಮಾಡಿದ್ದು ತಾನಲ್ಲ, ತನ್ನ ಸಹೋದರ ಶಿವ ಎಂದು ಬಾಯಿ ಬಿಡುತ್ತಾನೆ. ಆದರೆ ಇನ್ ಸ್ಪೆಕ್ಟರ್ ಗೆ ಮಾತ್ರ ಶಿವ-ಸತ್ಯ ಇಬ್ಬರೂ, ಒಬ್ಬರೇ ಇರಬಹುದಾ? ಅಂತ ಅನುಮಾನ ಕಾಡುತ್ತದೆ. ಅಷ್ಟಕ್ಕೂ ಸತ್ಯ ಮತ್ತು ಶಿವ ಇಬ್ಬರೂ ಒಬ್ಬರೇನಾ?, ಇದರ ಹಿನ್ನಲೆ ಏನು? ಎಂಬ ಹಲವು ಪ್ರಶ್ನೆಗೆ ಉತ್ತರ ಸಿಗೋದು ಸುಲಭವಲ್ಲ, ಸಿನಿಮಾ ನೋಡುವುದಷ್ಟೇ ಪರಿಹಾರ. -ಚೇತನ್ ನಾಡಿಗೇರ್.

    'ಸತ್ಯಂ ಶಿವಂ ಮತ್ತು ಸುದೀಪ್ ಸುಂದರಂ' -ಕನ್ನಡ ಪ್ರಭ

    'ಸತ್ಯಂ ಶಿವಂ ಮತ್ತು ಸುದೀಪ್ ಸುಂದರಂ' -ಕನ್ನಡ ಪ್ರಭ

    ಇದು ಒಂದೇ ನಾಣ್ಯದ ಎರಡು ಮುಖದ ಕತೆ. ಆದರೆ, ಮಾಡೋದೆಲ್ಲ ಮಾಡುತ್ತಲೇ 'ನಾನವನಲ್ಲ...ನಾನವನಲ್ಲ' ಎಂದು ನಟಿಸುವ ನಾಣ್ಯದ ಪ್ರತಿಭೆ ನೋಡಿ ಪ್ರೇಕ್ಷಕರು ಶಿಳ್ಳೆ ಹೊಡೆಯುತ್ತಾರೆ. ಇಲ್ಲಿ ಆ ನಾಣ್ಯವೇ ಸುದೀಪ್. ಹೆಸರಿನಲ್ಲೇ '2' ಇರುವುದರಿಂದ ನಿರ್ದೇಶಕರು ಇಬ್ಬರನ್ನು ಸೃಷ್ಟಿಸಿದಂತೆ ಮಾಡಿ ಒಬ್ಬನ ಜತೆ ಆಟವಾಡುತ್ತಾರೆ. ಈ ಆಟ, ಒಮ್ಮೆ ಖುಷಿ ಕೊಟ್ಟರೆ, ಮಗದೊಮ್ಮೆ ಚೆಸ್ ಗೇಮ್ ನಂತೆ ತಾಳ್ಮೆ ಪರೀಕ್ಷೆ ಮಾಡುತ್ತಲೇ ಸಾಗುವ 'ಕೋಟಿಗೊಬ್ಬ 2' ಸಿನಿಮಾ, ಒಂದು ಹಂತದಲ್ಲಿ 'ವಿಷ್ಣುವರ್ಧನ'ವನ್ನು ಮಾಡಿಫೈ ಮಾಡಿದ್ದಾರೆಂಬ ಗುಮಾನಿಯೂ ಹುಟ್ಟಿಕೊಳ್ಳುತ್ತದೆ. ಆದರೆ, ಸುದೀಪ್ ರ ಅಮಾಯಕತೆಯ ಮುಖ, ನಿತ್ಯಾ ಮೆನನ್ ರ ಕಂಫರ್ಟ್ ಝೋನ್ ನ ಅಭಿನಯವು ಚಿತ್ರಕ್ಕೆ ಹೊಳಪು ತಂದುಕೊಟ್ಟಿವೆ. ರೇಟಿಂಗ್: 3/5, -ಆರ್ ಕೇಶವಮೂರ್ತಿ.

    'ಕೋಟಿಗೊಬ್ಬಟ್ಟು' ಸತ್ಯಂ-ಶಿವಂ ಸುಂದರಂ -ವಿಜಯವಾಣಿ

    'ಕೋಟಿಗೊಬ್ಬಟ್ಟು' ಸತ್ಯಂ-ಶಿವಂ ಸುಂದರಂ -ವಿಜಯವಾಣಿ

    'ಸುದೀಪ್-ನಿತ್ಯಾ ಮೆನನ್ ಅಭಿನಯ ಆಕರ್ಷಕ. ಚಿಕ್ಕಣ್ಣ ದೊಡ್ಡದಾಗಿ ನಗಿಸುತ್ತಾರೆ. ತಬಲಾ ನಾಣಿ-ಸಾಧುಕೋಕಿಲಾ ಬಂದಾಗೆಲ್ಲ ಕಿಲಕಿಲ. 'ಸಾಲುತ್ತಿಲ್ಲವೇ...' ಎಂಬ ಹಾಡೊಂದೇ ಸ್ವೀಟು, ಸಂಭಾಷಣೆ ಸ್ಮಾರ್ಟು, ಛಾಯಾಗ್ರಹಣ ಎಕ್ಸಲೆಂಟು, ಚಿತ್ರಕಥೆ ಎಲ್ಲೂ ಬೋರೆನಿಸದಷ್ಟು ಟೈಟು. ಗಂಭೀರ ವೀಕ್ಷಕರಿಗೆ ಇದು ಸ್ಟಂಟ್-ಫೈಟ್ ಗಳ ಎಂಟರ್ ಟೇನ್ಮೆಂಟು. ಆದರೆ ಸುದೀಪ್ ಅಭಿಮಾನಿಗಳ ಪಾಲಿಗೆ ಈ ಚಿತ್ರ, ನೆಚ್ಚಿನ ನಾಯಕ ಹಬ್ಬಕ್ಕೆ ನೀಡಿದ 'ಕೋಟಿಗ್-ಒಬ್ಬಟ್ಟು'.

    English summary
    Kannada Movie 'Kotigobba 2' Critics Review. Kannada Actor Sudeep, Actress Nithya menen starrer 'Kotigobba 2' has received mixed response from the critics. Here is the collection of reviews by Top News Papers of Karnataka. The movie is directed by KS Ravi Kumar.
    Saturday, August 13, 2016, 12:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X