The Kerala Story Review: 'ದಿ ಕೇರಳ ಸ್ಟೋರಿ'.. ಇದು ಸತ್ಯವೇ? ಇದು ವಿಭಜನೆಯೇ?

By ಫಿಲ್ಮಿಬೀಟ್ ಡೆಸ್ಕ್

Rating:
3.0/5
Star Cast: Pranav MisshraAdah SharmaYogita Bihani
Director: Sudipto Sen

ವಿವಾದಾತ್ಮಕ ಸಿನಿಮಾ 'ದಿ ಕೇರಳ ಸ್ಟೋರಿ' ಇಂದು (ಮೇ 5) ದೇಶಾದ್ಯಂತ ರಿಲೀಸ್ ಆಗಿದೆ. ಕೇರಳ ಹಾಗೂ ತಮಿಳುನಾಡಿನಲ್ಲಿ ಕೆಲವು ಥಿಯೇಟರ್‌ಗಳಲ್ಲಿ ಮಾತ್ರ ಬಿಡುಗಡೆಯಾಗಿದೆ. ಆದರೆ, ಈ ಸಿನಿಮಾ ಬಗ್ಗೆ ದೇಶದೆಲ್ಲೆಡೆ ಚರ್ಚೆಯಾಗುತ್ತಿದೆ.

'ದಿ ಕೇರಳ ಸ್ಟೋರಿ' ಸಿನಿಮಾಗೆ ಸುದೀಪ್ತೋ ಸೇನ್ ಆಕ್ಷನ್ ಕಟ್ ಹೇಳಿದ್ದಾರೆ. ಅದಾ ಶರ್ಮಾ, ಸೋನಿಯಾ ಬಲಾನಿ, ಯೋಗಿತಾ ಬಿಹಾನಿ, ಸಿದ್ಧಿ ಇದ್ನಾನಿ, ವಿಜಯ್​ ಕೃಷ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ತೀವ್ರ ಪ್ರತಿಭಟನೆಗಳ ನಡುವೆಯೂ ಬಿಡುಗಡೆಯಾಗಿದ್ದು, ಇಷ್ಟಪಟ್ಟವರು ಹಾಗೂ ಕಷ್ಟಪಟ್ಟವರು ಇಬ್ಬರೂ ಇದ್ದಾರೆ.

Adah Sharma Starrer The Kerala Story Movie Review And Rating in Kannada

ಟೀಸರ್ ಹಾಗೂ ಟ್ರೈಲರ್‌ನಲ್ಲಿ ಕೇರಳದ ಸುಮಾರು 32 ಸಾವಿರ ಮಂದಿ ಇಸ್ಲಾಂಗೆ ಮತಾಂತರಗೊಂಡಿದ್ದು, ಭಯೋತ್ಪಾದನೆ ಸಂಘಟನೆ ಸೇರಿಕೊಂಡಿದ್ದಾರೆಂದು ಆರೋಪ ಮಾಡಲಾಗಿತ್ತು. ಹೀಗಾಗಿ ಕೇರಳದಲ್ಲಿ ಸಿನಿಮಾ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಆಗಿದ್ದರೆ, ಇಷ್ಟೊಂದು ವಿವಾದ ಸೃಷ್ಟಿಸಿದ್ದ 'ದಿ ಕೇರಳ ಸ್ಟೋರಿ' ಕಥೆಯೇನು? ಸಿನಿಮಾದ ಹೈಲೈಟ್ ಏನು? ಕಥೆಯಲ್ಲಿ ಸತ್ಯಾಂಶವಿದೇ? ಇದನ್ನು ತಿಳಿಯಲು ಮುಂದೆ ಓದಿ.

'ದಿ ಕೇರಳ ಸ್ಟೋರಿ' ಏನು?

'ದಿ ಕೇರಳ ಸ್ಟೋರಿ' ಸಿನಿಮಾ ಕಥೆಯೇನು? ಅನ್ನೋದು ಇಂದು (ಮೇ 5) ರಿವೀಲ್ ಆಗಿದೆ. ಇದು ಶಾಲಿನಿ ಉನ್ನಿ ಕೃಷ್ಣನ್ ಎಂಬ ಹುಡುಗಿ, ಫಾತಿಮಾ ಆದ ಕಥೆ. ಸಿನಿಮಾ ಟೀಮ್ ಇದನ್ನು ಸತ್ಯ ಘಟನೆಗಳನ್ನು ಆಧಾರಿಸಿದ ಕಥೆಯೆಂದು ಹೇಳಿದೆ. ಕೇರಳದ ಶಾಲಿನಿ ಎಂಬ ಮುದ್ದಾದ ಹುಡುಗಿ ಓದಲು ಕಾಸರಗೋಡಿನ ಕಾಲೇಜಿಗೆ ಸೇರುತ್ತಾಳೆ. ಅಲ್ಲೇ ಹಾಸ್ಟೆಲ್‌ಗೂ ಸೇರುತ್ತಾಳೆ. ಅಲ್ಲೇ ಅವಳಿಗೆ ಹೊಸ ಸ್ನೇಹಿತರು ಪರಿಚಯ ಆಗುತ್ತಾರೆ.

ಅವರಲ್ಲಿ ಒಬ್ಬರು ಹಿಂದೂ, ಮತ್ತೊಬರು ಕ್ರಿಶ್ಚಿಯನ್ ಹಾಗೂ ಇನ್ನೊಬ್ಬರು ಮುಸ್ಲಿಂ. ಇವರಲ್ಲಿರು ಮುಸ್ಲಿಂ ಹುಡುಗಿ, ಹಿಂದೂ ಯುವತಿಗೆ ಇಸ್ಲಾಂ ಧರ್ಮ ತುಂಬಿ, ಮತಾಂತರಗೊಳ್ಳುವಂತೆ ಮಾಡುತ್ತಾಳೆ. ಇದು ಯಾರ ಕೃತ್ಯ? ಸಂಚು ರೂಪಿಸಿದವರು ಯಾರು? ಈ ಸಂಘಟನೆ ಯುವತಿಯನ್ನು ಹೇಗೆ ಬಲೆಗೆ ಬೀಳಿಸಿಕೊಳ್ಳುತ್ತೆ? ಅನ್ನೋದನ್ನು ತೋರಿಸಲಾಗಿದೆ.

Adah Sharma Starrer The Kerala Story Movie Review And Rating in Kannada

ಹಿಜಾಬ್.. ಅಲ್ಲಾ ಬಗ್ಗೆ ಹೇಳಿರೋದೇನು?

ಈ ಸಿನಿಮಾದಲ್ಲಿ ಹಿಜಾಬ್, ಅಲ್ಲಾನ ಬಗ್ಗೆ ಸಾಂಕೇತಿಕವಾಗಿ ತೋರಿಸಲಾಗಿದೆ. ಏನೂ ಅರಿಯದ ಹುಡುಗಿಯರು (ಹೀರೋಯಿನ್ ಹಾಗೂ ಅವರ ಸ್ನೇಹಿತರು) ಮಾಲ್‌ಗೆ ಹೋಗಿರುತ್ತಾರೆ. ಈ ವೇಳೆ ಯುವಕ ಗುಂಪೊಂದು ಅವರ ಹಿಂದೆ ಬೀಳುತ್ತೆ. ಈ ದೃಶ್ಯದ ಬಳಿಕ ಸಿನಿಮಾ ಹಿಜಾಬ್ ಹಾಗೂ ಅಲ್ಲನ ಬಗ್ಗೆ ಯುವತಿ ಡೈಲಾಗ್ ಹೈಲೈಟ್ ಮಾಡಲಾಗಿದೆ.

ಹಿಜಾಬ್ ಧರಿಸಿದ್ರೆ ಹೆಣ್ಣು ಮಕ್ಕಳ ಮೇಲೆ ಯಾರು ಕಣ್ಣ ಹಾಕಲ್ಲ. ಅತ್ಯಾಚಾರ ನಡೆಯೋದಿಲ್ಲ. ಇಂತಹದ್ದೇ ಒಂದಿಷ್ಟು ಅಂಶಗಳನ್ನು ನಿರ್ದೇಶಕರು ಸನ್ನಿವೇಶಗಳ ಮೂಲಕ ಹೇಳುವುದಕ್ಕೆ ಹೊರಟಿದ್ದಾರೆ. ಹಾಗೆ ಶಾಲಿನಿ ಪಾತ್ರ (ಅದಾ ಶರ್ಮಾ) ಇದೆಲ್ಲವನ್ನೂ ಒಪ್ಪಿಕೊಳ್ಳುವುದನ್ನು ಸೆರೆ ಹಿಡಿಯಲಾಗಿದೆ.

ಅದಾ ಶರ್ಮಾ ನಟನೆಗೆ ಚಪ್ಪಾಳೆ

ಸಿನಿಮಾದ ವಿವಾದ, ಕಥೆಯಲ್ಲಿರುವ ಸತ್ಯಾಸತ್ಯತೆ ಇವೆಲ್ಲವನ್ನೂ ಪಕ್ಕಕ್ಕಿಟ್ಟು ನೋಡಿದಾಗ, ಶಾಲಿನಿ ಪಾತ್ರದಲ್ಲಿ ಅದಾ ಶರ್ಮಾ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಾರೆ. ಕೇರಳದ ಮುಗ್ಧ ಯುವತಿಯಾಗಿ ಇಷ್ಟವಾಗುತ್ತಾರೆ. ಇಸ್ಲಾಂಗೆ ಮತಾಂತರಗೊಂಡು ಫಾತಿಮಾ ಆಗುವ ಸಂದರ್ಭ, ಮೋಸ ಹೋಗಿದ್ದೀನಿ ಅಂತ ಗೊತ್ತಾಗ ಸಂದರ್ಭಗಳಲ್ಲಿ ಅದ್ಭುತ ಎನಿಸುತ್ತಾರೆ.

ಐಸಿಸ್​ ಉಗ್ರರ ಕೈಯಲ್ಲಿ ಸಿಕ್ಕು ಒದ್ದಾಡುವ ದೃಶ್ಯಗಳು ಪ್ರೇಕ್ಷಕರನ್ನು ಒದ್ದಾಡಿಸುವಂತೆ ಮಾಡುತ್ತೆ. ಹೀಗೆ ವಿಭಿನ್ನ ಶೇಡ್‌ಗಳಲ್ಲಿ ಅದಾ ಶರ್ಮಾ ಮನಗೆದ್ದಿದ್ದಾರೆ. ಅದಾ ಶರ್ಮಾ ಜೊತೆ ಪ್ರಣಯ್​, ಪ್ರಣವ್​ ಮಿಶ್ರಾ, ವಿಜಯ್​ ಕೃಷ್ಣ, ಸೋನಿಯಾ ಬಲಾನಿ, ಯೋಗಿತಾ ಬಿಹಾನಿ, ಸಿದ್ಧಿ ಇದ್ನಾನಿ ಕೂಡ ಇಷ್ಟವಾಗುತ್ತಾರೆ.

ಕಥೆಯಲ್ಲಿ ಸತ್ಯಾಂಶವಿದೇ?

ಚಿತ್ರತಂಡವೇನೋ ಸಿನಿಮಾವನ್ನು ಸತ್ಯ ಘಟನೆಯನ್ನು ಆಧರಿಸಿ ಸಿನಿಮಾ ಮಾಡಲಾಗಿದೆ ಎಂದು ಹೇಳಿಕೊಂಡಿದೆ. ಸಿನಿಮಾ ನೋಡಿದಾಗ, ಇಂತಹದ್ದೊಂದು ಭಯಾನಕ ಸನ್ನಿವೇಶದಲ್ಲಿ ಯಾರೂ ಸಿಕ್ಕಿಕೊಳ್ಳಬಾರದು ಎಂದೆನಿಸೋದು ನಿಜ. ಆದರೆ, ಕೊನೆಯಲ್ಲಿ ಹುಟ್ಟುವ ಪ್ರಶ್ನೆ ಈ ಕಥೆ ನಿಜವೇ? ಇಂತಹ ಸೂಕ್ಷ್ಮ ಕಥೆಯನ್ನು ಹೇಳುವಾಗ ತೆರೆಮೇಲೆ ಅದಕ್ಕೆ ಪೂರಕವಾದ ನಂಬಲರ್ಹವಾದ ಸಾಕ್ಷಿಯನ್ನೂ ತೋರಿಸಬೇಕಿತ್ತು.

ಐಸಿಸ್ ಉಗ್ರಸಂಘಟನೆ, ಮತಾಂತರ ಇವೆಲ್ಲವೂ ಭಾರತದಂತಹ ದೇಶದಲ್ಲಿ ಸೂಕ್ಷ್ಮ ವಿಚಾರ. ಈ ಅಂಶಗಳನ್ನು ಹೇಳುವಾಗ ತಪ್ಪು ಎಲ್ಲಿಂದ ಆಗುತ್ತಿದೆ? ಯಾರಿಂದ ಆಗುತ್ತಿದೆ? ಇದಕ್ಕೆ ಅಸಲಿ ಕಾರಣ ಯಾರು? ಅನ್ನೋದನ್ನು ಸ್ಪಷ್ಟವಾಗಿ ಹೇಳಬೇಕಿತ್ತು ಎನಿಸುತ್ತೆ. ಒಟ್ನಲ್ಲಿ, ವಿವಾದಾತ್ಮಕ ಸಿನಿಮಾ ಟೆಕ್ನಿಕಲಿ ಉತ್ತಮ ಎನ್ನಬಹುದು. ಆದರೆ, ಸತ್ಯಾಸತ್ಯಗಳು ಬಗ್ಗೆ ಈಗಲೇ ಏನೂ ಹೇಳಲು ಸಾಧ್ಯವಿಲ್ಲ.

More from Filmibeat

English summary
The Kerala Story Review in Kannada : Check out the Adah Sharma, Pranav Misshra, Yogita Bihani Starrer, Sensational The Kerala Story Movie Review and Rating under the director by Sudipto Sen.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X