For Quick Alerts
  ALLOW NOTIFICATIONS  
  For Daily Alerts

  'ಆದಿಲಕ್ಷ್ಮಿ ಪುರಾಣ' ನೋಡಿದ ವಿಮರ್ಶಕರಿಗೆ ಇಷ್ಟ ಮತ್ತು ಕಷ್ಟ ಆಗಿದ್ದೇನು?

  |

  ಮದುವೆ ಬಳಿಕ ನಟಿ ರಾಧಿಕಾ ಪಂಡಿತ್ ಅಭಿನಯಿಸಿದ ಸಿನಿಮಾ ಆದಿಲಕ್ಷ್ಮಿ ಪುರಾಣ. ಬಹಳ ನಿರೀಕ್ಷೆಯೊಂದಿಗೆ ತೆರೆಗೆ ಬಂದಿರುವ ಈ ಚಿತ್ರದ ಬಗ್ಗೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿದೆ. ಯಾವುದೇ ರೋಚಕತೆ, ಟ್ವಿಸ್ಟ್, ಥ್ರಿಲ್ಲ ಇಲ್ಲದಿರುವು ಸಾಮಾನ್ಯವಾದ ಮನರಂಜನೆ ಇದು ಎಂಬ ಅಭಿಪ್ರಾಯವನ್ನ ಪ್ರೇಕ್ಷಕರು ವ್ಯಕ್ತಪಡಿಸಿದ್ದಾರೆ.

  ಸುಮಾರು ಎರಡೂವರೆ ವರ್ಷದ ನಂತರ ರಾಧಿಕಾ ಪಂಡಿತ್ ಅವರನ್ನ ತೆರೆಮೇಲೆ ನೋಡೋದೆ ಒಂದು ಮಜಾ. ರಾಧಿಕಾಗೆ ನಾಯಕನಾಗಿ ನಿರೂಪ್ ಭಂಡಾರಿ ಒಳ್ಳೆಯ ಪರ್ಫಾಮೆನ್ಸ್ ನೀಡಿದ್ದಾರೆ ಎಂಬುದು ನಿರಾಳದ ವಿಷ್ಯ.

  Aadi Lakshmi Purana Review : ಸಾಮಾನ್ಯ ಕಥೆ... ಸಾಮಾನ್ಯ ಸಿನಿಮಾ...Aadi Lakshmi Purana Review : ಸಾಮಾನ್ಯ ಕಥೆ... ಸಾಮಾನ್ಯ ಸಿನಿಮಾ...

  ಮಣಿರತ್ನಂ ಬಳಿ ಕೆಲಸ ಮಾಡಿದ್ದ ಖ್ಯಾತಿಯಿಂದಲೇ ಕನ್ನಡ ಸಿನಿಮಾ ನಿರ್ದೇಶನ ಮಾಡಿರುವ ಪ್ರಿಯಾ ಅವರ ಕೆಲಸದ ಬಗ್ಗೆ ವಿಮರ್ಶಕರು ಏನಂದ್ರು? ರಾಧಿಕಾ ಮತ್ತು ನಿರೂಪ್ ಜೋಡಿಯ ಹೇಗಿದೆ? ಒಟ್ಟಾರೆ ಸಿನಿಮಾ ಹೇಗಿದೆ ಎಂಬ ಪ್ರಶ್ನೆಗಳಿಗೆ ಉತ್ತರವನ್ನ ವಿಮರ್ಶಕರು ಕೊಟ್ಟಿದ್ದಾರೆ. ಆದಿಲಕ್ಷ್ಮಿ ಪುರಾಣ ಚಿತ್ರದ ಬಗ್ಗೆ ಕರ್ನಾಟಕದ ಜನಪ್ರಿಯ ಪತ್ರಿಕೆಗಳಲ್ಲಿ ಪ್ರಕಟವಾಗಿರುವ ವಿಮರ್ಶೆಯ ಕಲೆಕ್ಷನ್ ಇಲ್ಲಿದೆ. ಮುಂದೆ ಓದಿ....

  ಸುಳ್ಳು ಸತ್ಯಗಳ ನಡುವಿನ ಪುರಾಣ

  ಸುಳ್ಳು ಸತ್ಯಗಳ ನಡುವಿನ ಪುರಾಣ

  ''ರಾಧಿಕಾ ಪಂಡಿತ್‌ ಮತ್ತು ನಿರೂಪ್ ಭಂಡಾರಿ ನಟನೆಯ ಆದಿ ಲಕ್ಷ್ಮಿ ಪುರಾಣ ಸತ್ಯ ಮತ್ತು ಸುಳ್ಳಿನ ನಡುವಿನ ಪುರಾಣವಾಗಿದೆ. ಸುಳ್ಳು ಹೇಳುವುದರಿಂದ ಸಂಬಂಧದಲ್ಲಿ ಉಂಟಾಗುವ ತೊಂದರೆಗಳೇನು ಎಂಬುದನ್ನು ಕೊಂಚ ಹಾಸ್ಯ ಮಿಕ್ಸ್ ಮಾಡಿ ಹೇಳಲಾಗಿದೆ. ಮಣಿರತ್ನಂ ಅವರ ಜತೆ ಕೆಲಸ ಮಾಡುತ್ತಿದ್ದ ಪ್ರಿಯಾ ಚೊಚ್ಚಲ ನಿರ್ದೇಶನದ ಆದಿ ಲಕ್ಷ್ಮಿ ಪುರಾಣ ಕಾಮಿಡಿ, ಲವ್‌, ಆಕ್ಷನ್, ಸೆಂಟಿಮೆಂಟ್, ಎಲ್ಲವೂ ಇರುವ ಒಂದು ಮಾಮೂಲಿ ಕಥೆ. ಇಂತಹ ಕಥೆಗಳು ಬಹಳಷ್ಟು ಹಿಂದೆಯೂ ಬಂದಿವೆ. ಆದರೆ ಈ ಸಿನಿಮಾ ಗಮನ ಸೆಳೆಯುವುದು ಸ್ಟಾರ್‌ ಕಾಸ್ಟ್‌ ಮತ್ತು ಲವಲವಿಕೆಯ ಚಿತ್ರಕಥೆಯಿಂದ. ನಿರ್ದೇಶಕಿ ಪ್ರಿಯಾ ಅವರು ತಮ್ಮ ಮೊದಲ ನಿರ್ದೇಶನದಲ್ಲಿಯೇ ಗೆದ್ದಿರುವುದು ಈ ಅಂಶದಿಂದಲೇ'' - ವಿಜಯ ಕರ್ನಾಟಕ

  ಇದು ಆದಿಲಕ್ಷ್ಮಿಯ ಹಾದಿಯಲ್ಲಿನ ನಮ್ಮ ಪಯಣ: ನಿರ್ದೇಶಕಿ ವಿ ಪ್ರಿಯಾಇದು ಆದಿಲಕ್ಷ್ಮಿಯ ಹಾದಿಯಲ್ಲಿನ ನಮ್ಮ ಪಯಣ: ನಿರ್ದೇಶಕಿ ವಿ ಪ್ರಿಯಾ

  ಪ್ರೀತಿ-ಪ್ರೇಮದ ಸಹಜ ಪುರಾಣ

  ಪ್ರೀತಿ-ಪ್ರೇಮದ ಸಹಜ ಪುರಾಣ

  ''ನವಿರಾದ ಲವ್​ಸ್ಟೋರಿ ಜತೆಗೆ ಮಾದಕ ವಸ್ತುಗಳ ಮಾರಾಟ ಜಾಲದ ಬಗ್ಗೆಯೂ ಬೆಳಕು ಚೆಲ್ಲುವ ಪ್ರಯತ್ನ ಮಾಡಲಾಗಿದೆ. ಹೊಸ ತರಹದ ಡ್ರಗ್ಸ್ ಹೇಗೆ ಯುವಕರನ್ನು ಕೊಲ್ಲುತ್ತಿದೆ ಎಂಬುದನ್ನೂ ತಿಳಿಸಿಕೊಡಲಾಗಿದೆ. ಆದರೆ ಇತ್ತ ಲವ್​ಸ್ಟೋರಿಗೂ ಪೂರ್ಣ ಪ್ರಮಾಣದ ನ್ಯಾಯ ಒದಗಿಸದೆ, ಅತ್ತ ಮಾದಕ ದ್ರವ್ಯ ಜಾಲದ ಥ್ರಿಲ್ಲರ್ ಕಥೆಗೂ ಸ್ಕ್ರೀನ್​ಸ್ಪೇಸ್ ನೀಡದೆ ಇರುವುದು ಈ ಚಿತ್ರದ ಮೊದಲ ಮೈನಸ್ ಪಾಯಿಂಟ್. ಚಿತ್ರದ ಒಟ್ಟಾರೆ ಕಥೆ ಸಾಧಾರಣವಾಗಿದ್ದರೂ ಅದನ್ನು ಎಷ್ಟು ಸಾಧ್ಯವೋ ಅಷ್ಟು ಉಲ್ಲಾಸಮಯವಾಗಿಸುವ ಪ್ರಯತ್ನ ನಡೆದಿದೆ'' - ವಿಜಯವಾಣಿ ವಿಮರ್ಶೆ

  ಸುಳ್ಳು ಪುರಾಣದ ರಗಳೆ-ರಾದ್ಧಾಂತ

  ಸುಳ್ಳು ಪುರಾಣದ ರಗಳೆ-ರಾದ್ಧಾಂತ

  ''ತುಂಬಾ ಸರಳವಾದ ಕಥೆ ಇಲ್ಲಿದೆ. ಅದನ್ನು ಇನ್ನಷ್ಟು ಬಿಗಿಯಾದ ಚಿತ್ರಕಥೆಯನ್ನು ಕಟ್ಟಿಕೊಡುವ ಅವಶ್ಯಕತೆ ಇತ್ತು. ನಿರೂಪಣೆಯ ಶೈಲಿಯಲ್ಲೂ ಮಂದಗತಿ ಆವರಿಸಿದೆ. ಎಲ್ಲೋ ಒಂದು ಕಡೆ ಸಿನಿಮಾ ನಿಧಾನ ಎನಿಸುತ್ತಿದೆ ಎನ್ನುವ ಹೊತ್ತಿಗೆ ಅಲ್ಲೊಂದು ಫೈಟು, ಸಾಂಗ್ ಕಾಣಿಸಿಕೊಂಡು, ಕೊಂಚ ಮಂದಗತಿಯ ವೇಗವನ್ನು ಚುರುಕಾಗಿಸುತ್ತದೆ. ಅಲ್ಲಲ್ಲಿ ಹಾಸ್ಯದ ಸನ್ನಿವೇಶಗಳಿದ್ದರೂ, ಅವು ಅಷ್ಟೊಂದು ನಗುವಿಗೆ ಕಾರಣವಾಗಲ್ಲ. ಮೊದಲರ್ಧ ಲವಲವಿಕೆ ತುಂಬಿದೆ. ದ್ವಿತಿಯಾರ್ಧದಲ್ಲೂ ಆ ಲವಲವಿಕೆ ಮುಂದುವರೆದಿದೆಯಾದರೂ, ಕ್ಲೈಮ್ಯಾಕ್ಸ್ ನಲ್ಲಿ ದೊಡ್ಡದೇನೋ ತಿರುವು ಸಿಗುತ್ತೆ ಅಂತ ಭಾವಿಸಿದವರಿಗೆ ಸ್ವಲ್ಪಮಟ್ಟಿಗಿನ ಸಮಾಧಾನ ಹೊರತಾಗಿ ಬೇರೇನೂ ಇಲ್ಲ. ಇನ್ನು, ಸರಾಗವಾಗಿ ನೋಡಿಸಿಕೊಂಡು ಹೋಗುವ ಚಿತ್ರಕ್ಕೆ ಮಾತುಗಳು ಹೆಗಲು ಕೊಡುವಂತಿರಬೇಕು'' - ಉದಯವಾಣಿ ವಿಮರ್ಶೆ

  ನಿರೂಪ್ ಭಂಡಾರಿ ಈಸ್ ಎ ನೈಸ್ ಪರ್ಸನ್: ರಾಧಿಕಾ ಪಂಡಿತ್ನಿರೂಪ್ ಭಂಡಾರಿ ಈಸ್ ಎ ನೈಸ್ ಪರ್ಸನ್: ರಾಧಿಕಾ ಪಂಡಿತ್

  ಸಡಿಲ ಹೆಣೆಗೆಯೇ 'ಪುರಾಣ'ದ ಮೀತಿ

  ಸಡಿಲ ಹೆಣೆಗೆಯೇ 'ಪುರಾಣ'ದ ಮೀತಿ

  ''ತಿಳಿಹಾಸ್ಯದ ಮಿಶ್ರಣ ಇರುವ ಪ್ರೀತಿ ಕತೆ ಹಾಗೂ ಡ್ರಗ್ಸ್ ಮಾಫಿಯಾ ಬೆನ್ನುತ್ತುವ ಪೊಲೀಸ್ ಅಧಿಕಾರಿಯ ಕಥೆ ನಡುವೆ ಸಮತೋಲನ ಕಾಯ್ದುಕೊಳ್ಳುವಲ್ಲಿ ಚಿತ್ರ ಯಶಸ್ಸು ಕಾಣದಿರುವುದು ವೀಕ್ಷಕನ ಅನುಭವಕ್ಕೆ ಸುಲಭವಾಗಿ ದಕ್ಕುತ್ತದೆ. ಇದೇ ಈ ಚಿತ್ರದ ಮಿತಿ. ದಕ್ಷ ಪೊಲೀಸ್ ಅಧಿಕಾರಿ ಎನ್ನುವ ವ್ಯಕ್ತಿತ್ವ ಕಟ್ಟಿಕೊಂಡ ಆದಿ, ತಾನು ಪ್ರೀತಿಸಲಿರುವ ಹುಡುಗಿಯನ್ನು ಕಂಡಾಕ್ಷಣ ಪ್ರಮುಖ ಕರ್ತವ್ಯವನ್ನೂ ಮರೆತುಬಿಡುವಂತೆ ನಿರ್ದೇಶಕಿ ಪ್ರಿಯಾ ಅವರ ಚಿತ್ರಿಸಿರುವುದು ಸಿನಿಮಾದ ಸಡಿಲ ಹೆಣಿಗೆಗೆ ನಿದರ್ಶನ'' - ಪ್ರಜಾವಾಣಿ

  A feel-good entertainer

  A feel-good entertainer

  ''The story revolves around Aadi (Nirup Bhandari), an undercover cop out on a drug-busting operation when he accidnently meets Lakshmi (Radhika Pandit), who works at a travel agency and is a habitual lia. Throughout the film, Priya maintains a balance in capturing the conflicting subplots. Although walking a veritable tightrope with her debut directorial in Sandalwood, she makes it a simple yet engaging affair, joyful yet not too starkly honest. She has taken up a subject that is universal, and can be set in any city''- ಇಂಡಿಯನ್ ಎಕ್ಸ್ ಪ್ರೆಸ್

  English summary
  Sandalwood princess Radhika pandit and nirup bhandari starrer Adi lakshmi purana movie has released july 19th all over karnataka. here is the critics review of this movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X