Adipurush First Half Review: ಪುಷ್ಪಕ ವಿಮಾನವಿಲ್ಲ.. ರಾವಣನ ಗೆಟಪ್ ಬದಲಾಗಿಲ್ಲ.. 'ಆದಿಪುರುಷ್'.. ಹೇಗಿದೆ ಫಸ್ಟ್ ಹಾಫ್?

By Narayana M

Rating:
3.0/5
Star Cast: Prabhas, Kriti Sanon, Saif Ali Khan
Director: Om Raut

'ಆದಿಪುರುಷ್' ಭಾರತೀಯ ಚಿತ್ರರಂಗದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ. ಪ್ರಭಾಸ್ ಇದೇ ಮೊದಲ ಬಾರಿಗೆ ಐತಿಹಾಸಿಕ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಸುಮಾರು 500 ಕೋಟಿ ರೂ. ಬಜೆಟ್‌ನಲ್ಲಿ ನಿರ್ಮಾಣಗೊಂಡಿರೋ ಈ ಸಿನಿಮಾ ಇಂದು (ಜೂನ್ 16) ರಿಲೀಸ್ ಆಗಿದೆ.

ಮಹಾಗ್ರಂಥ 'ರಾಮಾಯಣ'ದ ಕಥೆಯನ್ನೇ 'ಆದಿಪುರುಷ್' ತರಲಾಗಿದೆ. ಪ್ರಭಾಸ್ ರಾಮನಾಗಿ, ಕೃತಿ ಸನೋನ್ ಸೀತೆಯಾಗಿ ಹಾಗೂ ಸೈಫ್ ಅಲಿಖಾನ್ ರಾವಣನಾಗಿ ಕಾಣಿಸಿಕೊಂಡಿದ್ದಾರೆ. ಆರಂಭದಿಂದಲೂ ಒಂದಲ್ಲ ಒಂದು ವಿವಾದದಿಂದ ಇಲ್ಲವೇ ಪಾತ್ರಗಳ ಬದಲಾವಣೆಯಿಂದ ಈ ಸಿನಿಮಾ ಸುದ್ದಿಯಲ್ಲಿತ್ತು.

Adipurush Movie First Half Review

'ಆದಿಪುರುಷ್' ತನ್ನೆಲ್ಲಾ ವಿವಾದಗಳಿಂದ ಮುಕ್ತಿ ಹೊಂದಿದ ಬಳಿಕ ರಿಲೀಸ್‌ ಆಗಿದೆ. ಹಾಗಿದ್ರೆ, ಈ ಸಿನಿಮಾ ಹೇಗಿದೆ? ಸಿನಿಮಾದ ಫಸ್ಟ್ ಹಾಫ್‌ನ ಹೈಲೈಟ್ ಏನು? ಯಾರ ಪಾತ್ರ ಹೇಗಿದೆ? ಅನ್ನೋದನ್ನು ತಿಳಿಯಲು ಮುಂದೆ ಓದಿ.

ರಾವಣನ ತಪಸ್ಸಿನೊಂದು ಆರಂಭ

'ಆದಿಪುರುಷ್' ಸಿನಿಮಾ ಆರಂಭ ಆಗುವುದೇ ರಾವಣ ತಪಸ್ಸಿನಿಂದ. ರಾಮ,ಸೀತಾ, ಲಕ್ಷ್ಮಣನ ವನವಾಸದಿಂದ ಕಥೆಯು ಮುಂದಕ್ಕೆ ಸಾಗುತ್ತೆ. 'ರಾಮಾಯಣ' ಕಥೆಯನ್ನೇ ಇಂಟ್ರೆಸ್ಟಿಂಗ್ ಸ್ಕ್ರೀನ್‌ಪ್ಲೇ ಮೂಲಕ ಜನರ ಮುಂದೆ ಇಡುವ ಪ್ರಯತ್ನ ಮಾಡಿದೆ ಚಿತ್ರತಂಡ.

'ಆದಿಪುರುಷ್' ಸಿನಿಮಾದ ಟೈಟಲ್ ಕಾರ್ಡ್‌ನಲ್ಲೇ ಇದು ವಾಲ್ಮೀಕಿ ರಾಮಾಯಣ ಕಾವ್ಯವನ್ನು ಆಧರಿಸಿದ ಸಿನಿಮಾ ಎಂದು ಚಿತ್ರತಂಡ ಹೇಳಿದೆ. ಆದರೆ, ಆ ಸಿನಿಮಾಗಾಗಿ ಒಂದಷ್ಟು ಬದಲಾವಣೆಯನ್ನು ಮಾಡಿಕೊಂಡಿದ್ದೇವೆ ಎಂದು ಸಿನಿಮಾ ಆರಂಭದಲ್ಲಿಯೇ ಚಿತ್ರತಂಡ ಹೇಳಿದೆ. ಅದರಂತೆ ರಾಮಾಯಣದ ಕಥೆಯಲ್ಲಿ ಬದಲಾವಣೆಯಾಗಿದೆ.

Adipurush Movie First Half Review

ರಾವಣನ ಹೇರ್ ಸ್ಟೈಲ್‌ನಲ್ಲಿ ಬದಲಾಗಿಲ್ಲ

'ಆದಿಪುರುಷ್' ಸಿನಿಮಾದ ಟೀಸರ್‌ನಲ್ಲಿ ರಾವಣ ಹೇರ್‌ಸ್ಟೈಲ್ ಬದಲಾಗಿತ್ತು. ಇದರ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಬಳಿಕ ಟ್ರೈಲರ್‌ನಲ್ಲಿ ರಾವಣನ ಹೇರ್‌ಸ್ಟೈಲ್ ಬದಲಾಗಿದ್ದನ್ನು ಕಂಡು ನಿಟ್ಟುಸಿರು ಬಿಟ್ಟಿದ್ದರು. ಆದರೆ, ಸಿನಿಮಾದಲ್ಲಿ ಟೀಸರ್‌ನಲ್ಲಿ ಇದ್ದಂತೆ ಹೇರ್ ಸ್ಟೈಲ್ ಇದೆ.

ರಾವಣನ ಹೇರ್‌ಸ್ಟೈಲ್ ಅಷ್ಟೇ ಅಲ್ಲ. ವೇಷಭೂಷಣ ಕೂಡ ಬದಲಾಗಿಲ್ಲ. ಇಷ್ಟೇ ಅಲ್ಲದೆ ಪುಷ್ಪಕ ವಿಮಾನದ ನಿಜವಾದ ಕಲ್ಪನೆ ಕೂಡ ಇಲ್ಲ. ಬಾವಲಿ ಮೇಲೇರಿ ಸೀತೆಯನ್ನು ಹೊತ್ತೋಯ್ಯವಂತೆ ರಾವಣನನ್ನು ಚಿತ್ರೀಸಲಾಗಿದೆ.

ಹಾಲಿವುಡ್‌ ಸಿನಿಮಾವೇ ಪ್ರೇರಣೆ?

ರಾವಣನ ಪಾತ್ರದಲ್ಲಿ ನಟಿಸಿರುವ ಸೈಫ್ ಅಲಿಖಾನ್ ಪತ್ನಿಯ ಮಂಡೋದರಿಯಾಗಿ ಸೋನಲ್ ಚೌಹಾಲ್ ನಟಿಸಿದ್ದಾರೆ. ವಾನರರು, ಲಂಕೆಯ ರಾಕ್ಷಸರು, ಲಂಕೆ ಎಲ್ಲದರ ಚಿತ್ರಣ ಬದಲಾಗಿದೆ. ಇಷ್ಟು ದಿನ ರಾಮಾಯಣದಲ್ಲಿ ಕೇಳಿದಂತೆ ಇಲ್ಲ. ಎಲ್ಲವನ್ನೂ ಹಾಲಿವುಡ್ ಸಿನಿಮಾ ಪಾತ್ರಗಳಂತೆ ಚಿತ್ರಿಸಲಾಗಿದೆ.

ವಾಲಿ, ಸುಘ್ರೀವ ಮತ್ತವರ ಸೈನ್ಯವನ್ನು ಕಿಂಗ್ ಕಾಂಗ್ ಮಾದರಿಯ ಕಪಿಗಳಂತೆ ಚಿತ್ರಿಸಲಾಗಿದೆ. ಹೀಗಾಗಿ ಹಾಲಿವುಡ್ ಸಿನಿಮಾವನ್ನು ಪ್ರೇರಣೆಯಾಗಿಟ್ಟುಕೊಂಡು ಸಿನಿಮಾವನ್ನು ಮಾಡಿದಂತಿದೆ. ಹೀಗಾಗಿ ಕೆಲವು ಪ್ರೇಕ್ಷಕರಿಗೆ ಈ ಸಿನಿಮಾ ಇಷ್ಟ ಆಗುವುದು ಅನುಮಾನ.

ಪ್ರಭಾಸ್ ಪಾತ್ರದಲ್ಲೂ ಧಮ್ಮಿಲ್ಲ

ಈ ಹಿಂದೆ ಬಂದ ರಾಮಾಯಣವನ್ನೇ ಮಾದರಿಯಾಗಿಟ್ಟುಕೊಂಡು ಸಿನಿಮಾವನ್ನು ನೋಡಲು ಜನರು ಬಯಸುತ್ತಿದ್ದಾರೆ. ಆದರೆ, ಇದಕ್ಕೆ ನಿರ್ದೇಶಕ ಓಂ ರಾವುತ್ ಫ್ಯಾಂಟಸಿ ಟಚ್ ಕೊಟ್ಟಿದ್ದಾರೆ. ಅದರಲ್ಲೂ ರಾಮನ ಪಾತ್ರದಲ್ಲಿ ನಟಿಸುತ್ತಿರುವ ಪ್ರಭಾಸ್‌ಗೆ ಜುಟ್ಟು, ತಿಳಿ ಗಡ್ಡದ ಗೆಟಪ್ ಕೊಟ್ಟಿದ್ದಾರೆ. ಇದು ಬಹುಶ: ಪ್ರೇಕ್ಷಕರಿಗೆ ಹಿಡಿಸುವುದು ಅನುಮಾನ.

ರಾಮ ಪಾತ್ರದಲ್ಲಿ ನಟಿಸಿರುವ ಪ್ರಭಾಸ್ ಸ್ವಲ್ಪ ಡಲ್ ಅಂತ ಅನಿಸುತ್ತಾರೆ. ಪ್ರಭಾಸ್‌ ಅನ್ನು ಅಭಿಮಾನಿಗಳು ಮೃದುವಾಗಿ ನೋಡಲು ಇಷ್ಟ ಪಡುವುದಿಲ್ಲ. ಇದೆಲ್ಲ ಬಿಟ್ಟರೆ, ವಿಎಫ್‌ಎಕ್ಸ್ ಅದ್ಭುತವಾಗಿದೆ. ಮಕ್ಕಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಸಿನಿಮಾ ಮಾಡಿದಂತಿದೆ. ಒಟ್ಟಿನಲ್ಲಿ ಈ ಸಿನಿಮಾದ ಮೂಲಕ 'ರಾಮಯಾಣ'ದ ಸ್ವರೂಪ ಬದಲಾಗಿದೆ ಎನ್ನಬಹುದು.

More from Filmibeat

English summary
Prabhas, Kriti Sanon, Saif Ali Khan Starrer Adipurush Movie First Half Review In Kannada, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X