twitter
    For Quick Alerts
    ALLOW NOTIFICATIONS  
    For Daily Alerts

    ವಿಮರ್ಶೆ : ಆಡಿಸಿದಾತ ಬೇಸರ ಮೂಡಿಸಿ ಆಟ ಮುಗಿಸಿದ

    |

    'ಆಡುವ ಗೊಂಬೆ' ಸಿನಿಮಾದ ವಿಮರ್ಶೆ ಮಾಡುವ ಮುನ್ನ ಅದರ ನಿರ್ದೇಶಕ ಭಗವಾನ್ ಅವರಿಗೆ ಒಂದು ದೊಡ್ಡ ಚಪ್ಪಾಳೆ ಬರಬೇಕು. ಈ ಸಿನಿಮಾ ಹೇಗೆ ಇರಲಿ 85 ವರ್ಷಗಳಲ್ಲಿಯೂ ಸಿನಿಮಾ ಮಾಡುವ ಅವರ ಉತ್ಸಾಹ ನಿಜಕ್ಕೂ ಸ್ಫೂರ್ತಿದಾಯಕ. 'ಆಡುವ ಗೊಂಬೆ' ಮೂಲಕ 22 ವರ್ಷದ ನಂತರ ಮತ್ತೆ ಭಗವಾನ್ ಸಿನಿಮಾ ಮಾಡಿದ್ದಾರೆ. ಇದು ಅವರ ನಿರ್ದೇಶನದ 50ನೇ ಸಿನಿಮಾ ಎನ್ನುವುದು ಕೂಡ ಮತ್ತೊಂದು ವಿಶೇಷ.

    ದೇವರು ಆಡಿಸುವ ಗೊಂಬೆ

    ದೇವರು ಆಡಿಸುವ ಗೊಂಬೆ

    ಸಿನಿಮಾ ಹೆಸರಿಗೆ ತಕ್ಕ ಹಾಗೆ ಇದು ಆಡುವ ಗೊಂಬೆಯ ಕಥೆ. ಕಥಾ ನಾಯಕ ಮಾಧವ (ಸಂಚಾರಿ ವಿಜಯ್) ಬದುಕಿನಲ್ಲಿ ನಡೆಯುವ ಏಳು ಬೀಳಿನ ನಿರೂಪಣೆಯೇ ಈ ಸಿನಿಮಾವಾಗಿದೆ. ದೇವರು ಆಡಿಸಿದ ಹಾಗೆ ಆತನ ಜೀವನ ಹೇಗೆ ಬದಲಾಗುತ್ತದೆ, ಏನೆಲ್ಲ ತಿರುವು ಪಡೆಯುತ್ತದೆ, ಯಾವ ರೀತಿಯ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎನ್ನುವುದೇ ಸಿನಿಮಾ ಕಥೆ.

    ವಿಮರ್ಶೆ : ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು? ವಿಮರ್ಶೆ : ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?

    ಮಾಧವನ ಕಥೆ, ವ್ಯಥೆ

    ಮಾಧವನ ಕಥೆ, ವ್ಯಥೆ

    ಮಾಧವನ (ಸಂಚಾರಿ ವಿಜಯ್) ಅಕ್ಕ ಆತನನ್ನು ಮಗನ ರೀತಿ ನೋಡಿಕೊಳ್ಳುತ್ತಿರುತ್ತಾಳೆ. ಮುಂಬೈಗೆ ಹೋದ ತಮ್ಮ ಒಂದು ಹುಡುಗಿಯನ್ನ ಪ್ರೀತಿ ಮಾಡುತ್ತಾನೆ. ಅಕ್ಕ ಹಾಗೂ ಭಾವನಿಗಾಗಿ ಆ ಪ್ರೀತಿಯನ್ನ ತ್ಯಾಗ ಮಾಡುತ್ತಾನೆ. ಅಕ್ಕನ ಹಿರಿಯ ಮಗಳನ್ನು ಮದುವೆ ಮಾಡಿಕೊಳ್ಳಲು ತಯಾರಿ ನಡೆಯುತ್ತಿದೆ. ಅದು ನೆರವೇರಿವುದಿಲ್ಲ. ಹೀಗೆ ಒಂದಲ್ಲ ಒಂದು ಕಷ್ಟಗಳು ಮಾಧವನಿಗೆ ಬರುತ್ತದೆ. ಎಲ್ಲ ಕಷ್ಟಗಳನ್ನು ಮಾಧವ ಎದುರಿಸುತ್ತಾನೆಯೇ ಎನ್ನುವುದಕ್ಕೆ ಉತ್ತರ ಸಿನಿಮಾದಲ್ಲಿ.

    ವಿಮರ್ಶೆ-2: 'ಕೆಜಿಎಫ್' ಇಷ್ಟವಾಗೋದು ಈ ಎರಡೇ ಕಾರಣಕ್ಕೆ.! ವಿಮರ್ಶೆ-2: 'ಕೆಜಿಎಫ್' ಇಷ್ಟವಾಗೋದು ಈ ಎರಡೇ ಕಾರಣಕ್ಕೆ.!

    ಕೌಟುಂಬಿಕ ಕಥೆ

    ಕೌಟುಂಬಿಕ ಕಥೆ

    ಭಗವಾನ್ ಅವರ ಹಳೆಯ ಸಿನಿಮಾಗಳ ರೀತಿ ಈ ಸಿನಿಮಾವೂ ಒಂದು ಕೌಟುಂಬಿಕ ಕಥೆಯಾಗಿದೆ. ಒಂದು ಕುಟುಂಬದಲ್ಲಿ ನಡೆಯುವ ಈ ಕಥೆಯನ್ನು ಎಲ್ಲರೂ ನೋಡಬಹುದು. ಆದರೆ, ವಯಸ್ಸರಿಗೆ ಇಷ್ಟ ಆಗುವ ಈ ಕಥೆ ಇಂದಿನ ಪೀಳಿಗೆಯವರಿಗೆ ಸ್ವಲ್ಪ ಬೋರ್ ಹೊಡೆಸಬಹುದು. ಸಿನಿಮಾ ನೋಡುವಾಗ ಕೆಲವು ಬಾರಿ ಧಾರಾವಾಹಿ ನೋಡುತ್ತಿರುವ ಅನುಭವ ಕೂಡ ಆಗುತ್ತದೆ.

    ಅಭಿನಯ

    ಅಭಿನಯ

    ನಟ ಅನಂತ್ ನಾಗ್, ಸಂಚಾರಿ ವಿಜಯ್, ಸುಧಾ ಬೆಳವಾಡಿ ಅವರ ಅನುಭವ ತೆರೆ ಮೇಲೆ ಕಾಣುತ್ತದೆ. ಅದು ಬಿಟ್ಟರೆ ನಟಿಯರು ಸಹ ಪಾತ್ರಗಳು ಕಿರಿಕಿರಿ ಉಂಟು ಮಾಡುತ್ತವೆ. ಅವರ ಕೆಲವು ದೃಶ್ಯಗಳಂತು ಯಾವಾಗ ಮುಗಿಯುತ್ತದೆಯೋ ಅನಿಸುತ್ತದೆ.

    ಹಾಡುಗಳಿಗೆ ದೊಡ್ಮನೆ ಧ್ವನಿ

    ಹಾಡುಗಳಿಗೆ ದೊಡ್ಮನೆ ಧ್ವನಿ

    ಸಿನಿಮಾದ ಹಾಡುಗಳಿಗೆ ದೊಡ್ಮನೆ ಧ್ವನಿ ಇದೆ. ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಹಾಗೂ ಪುನೀತ್ ರಾಜ್ ಕುಮಾರ್ ತಲಾ ಒಂದು ಹಾಡನ್ನು ಹಾಡಿದ್ದಾರೆ. ಆದರೆ, ಸಿನಿಮಾದ ಹಾಡುಗಳು ಹಾಗೂ ಹಿನ್ನಲೆ ಸಂಗೀತ ಇನ್ನಷ್ಟು ಚೆನ್ನಾಗಿರಬೇಕಿತ್ತು. ಒಂದು ಹಾಡಿನಲ್ಲಿ ಭಗವಾನ್ ಶೃಂಗಾರ ತುಂಬಿದ್ದಾರೆ.

    ನಿಧಾನ, ತುಂಬ ನಿಧಾನ

    ನಿಧಾನ, ತುಂಬ ನಿಧಾನ

    ಈ ಸಿನಿಮಾವನ್ನು ನೋಡಲು ತಾಳ್ಮೆ ಬೇಕು. ಇಂದಿನ ಸಿನಿಮಾಗಳ ರೀತಿ ಈ ಸಿನಿಮಾದ ಚಿತ್ರಕಥೆ ಇರುವುದಿಲ್ಲ. ಸಿನಿಮಾ ನಿಧಾನ.. ತುಂಬ ನಿಧಾನವಾಗಿ ಸಾಗುತ್ತದೆ. ಒಳ್ಳೆಯ ವಿಷಯ ಇದ್ದರೂ ಅದನ್ನು ಕೇಳುವ ತಾಳ್ಮೆ ಪ್ರೇಕ್ಷಕರಿಗೆ ಉಳಿಯುವುದಿಲ್ಲ.

    ಫ್ಯಾಮಿಲಿ ಸಿನಿಮಾ, ಒಳ್ಳೆಯ ಸಂದೇಶ

    ಫ್ಯಾಮಿಲಿ ಸಿನಿಮಾ, ಒಳ್ಳೆಯ ಸಂದೇಶ

    'ಆಡುವ ಗೊಂಬೆ' ಸಿನಿಮಾ ಒಂದು ಶುದ್ಧ ಫ್ಯಾಮಿಲಿ ಸಿನಿಮಾ ಎನ್ನುವುದೊಂದೆ ಖುಷಿಯ ವಿಷಯ. ಭಗವಾನ್ ಅವರು ಈ ವಯಸ್ಸಿನಲ್ಲಿ ಒಂದು ಸಿನಿಮಾ ನಿರ್ದೇಶನ ಮಾಡಿದ್ದಾರೆ ಎನ್ನುವುದು ಮೆಚ್ಚುವ ಸಂಗತಿ. ಆದರೆ, ಸಿನಿಮಾ ಎಲ್ಲ ವರ್ಗದ ಪ್ರೇಕ್ಷಕರ ಮೆಚ್ಚುಗೆ ಪಡೆಯುವುದು ಅನುಮಾನ.

    English summary
    Kannada actor Sanchari vijay' 'Aduva Gombe' kannada movie review.
    Friday, January 4, 2019, 17:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X