Agnyathavasi X Review: ಕ್ರೈಂ ಥ್ರಿಲ್ಲರ್ 'ಅಜ್ಞಾತವಾಸಿ' ಸಿನಿಮಾ ನೋಡಿದವರು ಏನಂದ್ರು?
ಆಗೊಮ್ಮೆ ಈಗೊಮ್ಮೆ ಕನ್ನಡದಲ್ಲಿ ಕ್ರೈಂ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳು ಬರುತ್ತವೆ. ಕಳೆದ ವರ್ಷ ಬಂದಿದ್ದ 'ಶಾಖಾಹಾರಿ' ಸಿನಿಮಾ ಗಮನ ಸೆಳೆದಿತ್ತು. ರಂಗಾಯಣ ರಘು ಚಿತ್ರದ ಪ್ರಧಾನ ಪಾತ್ರದಲ್ಲಿ ನಟಿಸಿದ್ದರು. ಇವತ್ತು(ಏಪ್ರಿಲ್ 11) ಅಂಥದ್ದೇ ಮತ್ತೊಂದು ಕ್ರೈಂ ಥ್ರಿಲ್ಲರ್ ಸಿನಿಮಾ 'ಅಜ್ಞಾತವಾಸಿ' ತೆರೆಗೆ ಬಂದಿದೆ.
ಜನಾರ್ಧನ್ ಚಿಕ್ಕಣ್ಣ ನಿರ್ದೇಶನದ ಈ ಚಿತ್ರದಲ್ಲಿ ಮತ್ತೊಮ್ಮೆ ರಂಗಾಯಣ ರಘು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಶುಕ್ರವಾರ ಸಿನಿಮಾ ತೆರೆಗೆ ಬರುವ ಮುನ್ನ ಗುರುವಾರ ಸಂಜೆಯೇ 'ಅಜ್ಞಾತವಾಸಿ' ಸಿನಿಮಾ ಪ್ರೀಮಿಯರ್ ಶೋಗಳು ನಡೆದಿತ್ತು. ಕೆಲವರು ಈಗಾಗಲೇ ಸಿನಿಮಾ ನೋಡಿ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಹೇಮಂತ್ ಎಂ ರಾವ್, ಪ್ರಚುರ ಪಿ ಪಿ, ಜಯಲಕ್ಷ್ಮಿ 'ಅಜ್ಞಾತವಾಸಿ' ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಕೃಷ್ಣ ರಾಜ್ ಕಥೆ ಬರೆದಿದ್ದಾರೆ. ಪವನಗೌಡ, ಸಿದ್ದು ಮೂಲಿಮನಿ, ಶರತ್ ಲೋಹಿತಾಶ್ವ, ರವಿಶಂಕರ್ ಗೌಡ ಕೂಡ ಚಿತ್ರದ ತಾರಾಗಣದಲ್ಲಿದ್ದಾರೆ. ಟೀಸರ್, ಟ್ರೈಲರ್ ಮೂಲಕ ಕುತೂಹಲ ಮೂಡಿಸಿದ್ದ ಸಿನಿಮಾ ಈಗ ಪ್ರೇಕ್ಷಕರ ಮುಂದೆ ಬಂದಿದೆ. ಸಿನಿಮಾ ನೋಡಿದವರು ಎಷ್ಟು ಅಂಕ ಕೊಟ್ಟಿದ್ದಾರೆ ಮುಂದೆ ಓದಿ.
ಚಿತ್ರಕಥೆಗೆ ದೊಡ್ಡ ನಮನ
"ಕಥೆ-ಮೂಲ ಕಥಾಹಂದರ ಹಾಗೂ ಒಳ್ಳೆ ಟ್ವಿಸ್ಟ್‌ಗಳ ಜೊತೆ ಕಥಾವಸ್ತು, ಚಿತ್ರಕಥೆಯನ್ನು ವಿನ್ಯಾಸಗೊಳಿಸಿದವರಿಗೆ ದೊಡ್ಡ ನಮನ. ಇಡೀ ಚಿತ್ರವು ತೆಳುವಾದ ಕಥಾವಸ್ತುವಿನ ನಡುವೆಯೂ ಆಕರ್ಷಕವಾಗಿತ್ತು. ಹಿನ್ನೆಲೆ ಸಂಗೀತವಂತೂ ಚಿಂದಿ. ರಂಗಾಯಣ ರಘು ಮೆಚ್ಚುಗೆಗೆ ಅರ್ಹರು. ರವಿಶಂಕರ್ ಗೌಡ ನಟನೆಯನ್ನು ಮರೆಯುವಂತಿಲ್ಲ" ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.
ಮೋಸ ಹೋಗಬೇಡಿ
'ಅಜ್ಞಾತವಾಸಿ' ಬರೀ ಸಿನಿಮಾ ಅಲ್ಲ, ಇದು ಸಸ್ಪೆನ್ಸ್ ಮತ್ತು ಡ್ರಾಮಾ ಸೇರಿದ ಭಾವನಾತ್ಮಕ ಅನುಭವ ನೀಡುವ ಸಿನಿಮಾ. ಇದು ಶಾಂತ ಸಮುದ್ರದಂತೆ ಪ್ರಾರಂಭವಾಗುತ್ತದೆ. ಆದರೆ ಮೋಸಹೋಗಬೇಡಿ. ಕಥೆ ತೆರೆದುಕೊಳ್ಳುತ್ತಿದ್ದಂತೆ, ಅದು ನಿಮ್ಮನ್ನು ಬಿಗಿಯಾಗಿ ಹಿಡಿದಿಟ್ಟುಕೊಂಡು ನೀರಿಗೆ ಎಳೆಯುತ್ತದೆ. ಸಿನಿಮಾ ಹಿನ್ನೆಲೆ, ಫಿಲ್ಮ್ ಮೇಕರ್ಸ್ ತುಂಬಾ ತಲ್ಲೀನಗೊಳಿಸುವ ಮನಸ್ಥಿತಿಯನ್ನು ಸೃಷ್ಟಿಸುತ್ತಾರೆ, ನೀವು ಪ್ರತಿಯೊಂದು ಪಾತ್ರದ ಭಾವನೆಯನ್ನು ಅನುಭವಿಸಲು ಪ್ರಾರಂಭಿಸುತ್ತೀರಿ. ಇದು ಕೇವಲ ಕಥೆ ಹೇಳುವುದಲ್ಲ, ಇದು ಪರದೆಯ ಮೇಲೆ ಜೀವನದ ಒಂದು ತುಣುಕನ್ನು, ಕಚ್ಚಾ ಮತ್ತು ನೈಜವಾಗಿ ತೆರೆದುಕೊಳ್ಳುವುದನ್ನು ನೋಡುವಂತಿದೆ" ಎಂದು ಮತ್ತೊಬ್ಬರು ಬಣ್ಣಿಸಿದ್ದಾರೆ.
ಸೊಗಸಾದ ಕ್ರೈಂ ಥ್ರಿಲ್ಲರ್
ಒಳ್ಳೆ ಅಭಿನಯದ ಜೊತೆಗೆ ಸೊಗಸಾಗಿ ಮಾಡಿರುವ ಕ್ರೈಂ ಥ್ರಿಲ್ಲರ್ ಸಿನಿಮಾ 'ಅಜ್ಞಾತವಾಸಿ'. ಕಥೆ, ಪ್ರಮೇಯ, ಸಂಗೀತ, ಇಂಟರ್‌ವಲ್, ಪ್ರೀ ಕ್ಲೈಮ್ಯಾಕ್ಸ್ ಮತ್ತು ಕ್ಲೈಮ್ಯಾಕ್ಸ್ ಚಿತ್ರದ ಪ್ರಮುಖ ಮುಖ್ಯಾಂಶಗಳು. ತಲ್ಲೀನರಾಗಿ ಸಿನಿಮಾ ನೋಡಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಆದರೆ ಒಮ್ಮೆ ನೀವು ಕಥೆಯಲ್ಲಿ ಲೀನವಾದರೆ ನಿಧಾನವಾಗಿ ನಿಮ್ಮನ್ನು ಆವರಿಸಿಕೊಂಡುಬಿಡುತ್ತದೆ ಎಂದು ಇನ್ನೊಬ್ಬರು ಬರೆದುಕೊಂಡಿದ್ದಾರೆ.
ಕಂಟೆಂಟ್ ವಿನ್ನರ್
'ಅಜ್ಞಾತವಾಸಿ' ಒಳ್ಳೆಯ ಕ್ರೈಮ್ ಥ್ರಿಲ್ಲರ್. ಚಿತ್ರಕಥೆ ಮಾದರಿ ಇಷ್ಟವಾಯಿತು, ಹೊಸತನ ಅನಿಸಿತು. ಉತ್ತಮ ಸಂಗೀತ ಮತ್ತು ದೃಶ್ಯಗಳ ಬೆಂಬಲದೊಂದಿಗೆ ಪಾತ್ರವರ್ಗದಿಂದ ಉತ್ತಮ ಅಭಿನಯವಿದೆ. ಜನಾರ್ಧನ್ ಚಿಕ್ಕಣ್ಣ, ಹೇಮಂತ್ ರಾವ್ ಇದು ಅಚ್ಚುಕಟ್ಟಾಗಿ ರಚಿಸಲಾದ ಸಿನಿಮಾ. ಕಂಟೆಂಟ್ ಇಲ್ಲಿವ ವಿನ್ನರ್. ಇದು ಚಿತ್ರಮಂದಿರಗಳಲ್ಲಿ ಒಳ್ಳೆ ಪ್ರದರ್ಶನ ಕಾಣುತ್ತದೆ ಎಂದು ಭಾವಿಸುವುದಾಗಿ ಲಿಖಿತ್ ಎಂಬುವವರು ಟ್ವೀಟ್ ಮಾಡಿದ್ದಾರೆ.
ಎಂಗೇಜಿಂಗ್ ಸಿನಿಮಾ
ಹಿಡಿದಿಟ್ಟುಕೊಳ್ಳುವಂತಹ ಕ್ರೈಂ ಥ್ರಿಲ್ಲರ್ ಸಿನಿಮಾ 'ಅಜ್ಞಾತವಾಸಿ'. ನಿಧಾನಗತಿಯ ನಿರೂಪಣೆಯಿಂದಲೂ ಅದನ್ನು ಆಸಕ್ತಿದಾಯಕವಾಗಿಡುವಲ್ಲಿ ನಿರ್ದೇಶಕ ಜನಾರ್ಧನ್ ಚಿಕ್ಕಣ್ಣ ಯಶಸ್ವಿಯಾಗಿದ್ದಾರೆ. ಎಲ್ಲಾ ನಟರು ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ರಂಗಾಯಣ ರಘು ಸರ್ ಬಗ್ಗೆ ಹೆಚ್ಚು ಹೇಳಲು ಏನೂ ಇಲ್ಲ. 'ಶಾಖಾಹಾರಿ' ನಂತರ ಮಲೆನಾಡು ಹಿನ್ನೆಲೆಯ ಮತ್ತೊಂದು ಚಿತ್ರ ಎಂದು ಆದರ್ಶ ಹೆಚ್. ಎಂ ಬರೆದುಕೊಂಡಿದ್ದಾರೆ.


Click it and Unblock the Notifications











