For Quick Alerts
  ALLOW NOTIFICATIONS  
  For Daily Alerts

  'ತಾನಾಜಿ': ಭಾರತೀಯ ಚಿತ್ರರಂಗದ ಮಾಸ್ಟರ್ ಪೀಸ್ ಎಂದು ಕೊಂಡಾಡಿದ ಟ್ವೀಟಿಗರು.!

  |
  ಅಭಿಮಾನಿ ಕೇಳಿದ ಪ್ರಶ್ನೆಗೆ ಬಾಲಿವುಡ್ ನಟಿ ಕಾಜೋಲ್ ಕೊಟ್ಟ ಉತ್ತರ ಏನು?

  ಬಾಲಿವುಡ್ ಹೀರೋ ಅಜಯ್ ದೇವಗನ್ ಅಭಿನಯದ 100ನೇ ಚಿತ್ರ 'ತಾನಾಜಿ: ದಿ ಅನ್ ಸಂಗ್ ವಾರಿಯರ್' ಚಿತ್ರ ಇಂದು ದೇಶದಾದ್ಯಂತ ತೆರೆಗೆ ಬಂದಿದೆ. ಮರಾಠಾ ಚಕ್ರವರ್ತಿ ಛತ್ರಪತಿ ಶಿವಾಜಿ ಮಹಾರಾಜ್ ಬಳಿ ಜನರಲ್ ಆಗಿದ್ದ ಮರಾಠಿ ವೀರ ತಾನಾಜಿ ಮಾಲುಸರೆ ಜೀವನಚರಿತ್ರೆ ಆಧಾರಿತ ಐತಿಹಾಸಿಕ ಚಿತ್ರ ಈ 'ತಾನಾಜಿ: ದಿ ಅನ್ ಸಂಗ್ ವಾರಿಯರ್'.

  ಅಜಯ್ ದೇವ್ಗನ್, ಕಾಜೋಲ್, ಸೈಫ್ ಅಲಿ ಖಾನ್ ಮುಂತಾದವರು ಅಭಿನಯಿಸಿರುವ 'ತಾನಾಜಿ: ದಿ ಅನ್ ಸಂಗ್ ವಾರಿಯರ್' ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ. ಚಿತ್ರವನ್ನು ಫಸ್ಟ್ ಡೇ ಫಸ್ಟ್ ಶೋ ಕಣ್ತುಂಬಿಕೊಂಡ ವೀಕ್ಷಕರು ಟ್ವಿಟ್ಟರ್ ನಲ್ಲಿ ಹೊಗಳುತ್ತಿದ್ದಾರೆ.

  'ತಾನಾಜಿ' ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಬರಬೇಕು, ಅಜಯ್ ದೇವ್ಗನ್ ನಟನೆ ರಾಷ್ಟ್ರ ಪ್ರಶಸ್ತಿಗೆ ಅರ್ಹವಾಗಿದೆ ಎಂದು ನೆಟ್ಟಿಗರು ಟ್ವೀಟ್ ಮಾಡಿದ್ದಾರೆ. ಬೇಕಾದ್ರೆ, ನೀವೇ ಕೆಲ ಟ್ವೀಟ್ ಗಳತ್ತ ಕಣ್ಣಾಡಿಸಿ...

  ನೆನಪಿನಲ್ಲಿ ಉಳಿಯುವಂಥ ಚಿತ್ರ

  ನೆನಪಿನಲ್ಲಿ ಉಳಿಯುವಂಥ ಚಿತ್ರ

  ''ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ತೆರೆಕಂಡ ಅತ್ಯುತ್ತಮ ಚಿತ್ರಗಳ ಸಾಲಿನಲ್ಲಿ 'ತಾನಾಜಿ: ದಿ ಅನ್ ಸಂಗ್ ವಾರಿಯರ್' ಸಿನಿಮಾ ಖಂಡಿತ ನೆನಪಿನಲ್ಲಿ ಉಳಿಯುವಂಥದ್ದು. ಅಜಯ್ ದೇವ್ಗನ್ ಮುಡಿಗೆ ಈ ಚಿತ್ರದಿಂದ ಹೊಸ ಗರಿ ಲಭಿಸಿದೆ. ಚಿತ್ರದ ಆಕ್ಷನ್ ಸನ್ನಿವೇಶಗಳು ಮೈನವಿರೇಳಿಸುವಂತಿದೆ'' ಎಂದು ರೋಹಿತ್ ಜೈಸ್ವಾಲ್ ಟ್ವೀಟ್ ಮಾಡಿ 4 ಸ್ಟಾರ್ಸ್ ಕೊಟ್ಟಿದ್ದಾರೆ.

  'ತಾನಾಜಿ' ವಿರುದ್ಧ ತಿರುಗಿಬಿದ್ದ ಕನ್ನಡಿಗರು: ಅಜಯ್ ದೇವ್ಗನ್ ಚಿತ್ರಕ್ಕೆ ಬಹಿಷ್ಕಾರ ಭೀತಿ.!'ತಾನಾಜಿ' ವಿರುದ್ಧ ತಿರುಗಿಬಿದ್ದ ಕನ್ನಡಿಗರು: ಅಜಯ್ ದೇವ್ಗನ್ ಚಿತ್ರಕ್ಕೆ ಬಹಿಷ್ಕಾರ ಭೀತಿ.!

  ಮಾಸ್ಟರ್ ಪೀಸ್.!

  ಮಾಸ್ಟರ್ ಪೀಸ್.!

  ''ತಾನಾಜಿ' ಚಿತ್ರದಲ್ಲಿ ಯಾವುದೇ ತಪ್ಪುಗಳಿಲ್ಲ. ಅಸಂಬದ್ಧ ಸನ್ನಿವೇಶಗಳಿಲ್ಲ. ಸ್ಕ್ರಿಪ್ಟ್, ಸ್ಕ್ರೀನ್ ಪ್ಲೇ, ಡೈರೆಕ್ಷನ್, ಆಕ್ಷನ್.. ಎಲ್ಲವೂ ಪರ್ಫೆಕ್ಟ್ ಆಗಿ ಇರುವುದರಿಂದ ಸಿನಿಮಾ 'ಮಾಸ್ಟರ್ ಪೀಸ್' ಆಗಿದೆ. ಅಜಯ್ ದೇವ್ಗನ್ ರಾಷ್ಟ್ರ ಪ್ರಶಸ್ತಿಗೆ ಅರ್ಹವಾದ ನಟನೆ. ಸೈಫ್ ನಟನೆ ಕೂಡ ಬ್ರಿಲ್ಲಿಯೆಂಟ್'' ಎಂದು ಬಾಬನ್ ಝೆಂಡೆ ಎಂಬುವರು ಟ್ವೀಟ್ ಮಾಡಿ 4.5 ಸ್ಟಾರ್ಸ್ ಕೊಟ್ಟಿದ್ದಾರೆ.

  'ಮರಾಠಿ ಮುಲ್ಗಿ'ಯಾಗಿ ಕಾಜೋಲ್: 'ತಾನಾಜಿ' ಚಿತ್ರದ ಫಸ್ಟ್ ಲುಕ್ ಔಟ್'ಮರಾಠಿ ಮುಲ್ಗಿ'ಯಾಗಿ ಕಾಜೋಲ್: 'ತಾನಾಜಿ' ಚಿತ್ರದ ಫಸ್ಟ್ ಲುಕ್ ಔಟ್

  ದ್ವಿತೀಯಾರ್ಧ ಕೊಂಚ ಸ್ಲೋ

  ದ್ವಿತೀಯಾರ್ಧ ಕೊಂಚ ಸ್ಲೋ

  ''ತಾನಾಜಿ' ಚಿತ್ರವನ್ನು ತೆರೆಗೆ ತಂದಿರುವ ರೀತಿ ಚೆನ್ನಾಗಿದೆ. ಸಿನಿಮಾದ ಮೊದಲಾರ್ಧ ಅತ್ಯುತ್ತಮವಾಗಿದೆ. ಚಿತ್ರದ ದ್ವಿತೀಯಾರ್ಧ ಕೊಂಚ ನಿಧಾನಗತಿಯಲ್ಲಿ ಸಾಗುತ್ತದೆ. ವಿಷುವಲ್ ಎಫೆಕ್ಟ್ಸ್ ಉತ್ತಮವಾಗಿ ಮೂಡಿಬಂದಿದೆ. ಎಲ್ಲಾ ನಟರ ಅಭಿನಯ ಸೂಪರ್'' ಎಂದು ತನ್ಮಯ್ ಎಂಬವರು ಟ್ವೀಟ್ ಮಾಡಿದ್ದಾರೆ.

  ತಾನಾಜಿ ಬ್ಲಾಕ್ ಬಸ್ಟರ್ ಚಿತ್ರ

  ತಾನಾಜಿ ಬ್ಲಾಕ್ ಬಸ್ಟರ್ ಚಿತ್ರ

  ''ತಾನಾಜಿ' ಬ್ಲಾಕ್ ಬಸ್ಟರ್ ಚಿತ್ರ. ಈ ಸಿನಿಮಾನ ನೀವು ಮಿಸ್ ಮಾಡಿಕೊಳ್ಳಬೇಡಿ. ಅಜಯ್ ದೇವಗನ್ ಪವರ್ ಪ್ಯಾಕ್ಡ್ ಪರ್ಫಾಮೆನ್ಸ್ ಕೊಟ್ಟಿದ್ದಾರೆ. ತೆರೆಮೇಲೆ ಕಾಜೋಲ್ ಸುಂದರವಾಗಿ ಕಾಣ್ತಾರೆ. ಸೈಫ್ ಅಲಿ ಖಾನ್ ಅಭಿನಯ ಕೂಡ ಉತ್ತಮವಾಗಿ ಮೂಡಿಬಂದಿದೆ'' ಎಂದು ಗುರು ಎಂಬುವರು ಟ್ವೀಟ್ ಮಾಡಿದ್ದಾರೆ.

  ಮೈನವಿರೇಳಿಸುವ ಚಿತ್ರ

  ಮೈನವಿರೇಳಿಸುವ ಚಿತ್ರ

  ''ತಾನಾಜಿ' ಚಿತ್ರದಲ್ಲಿ ಇರುವ ಕ್ಲೈಮ್ಯಾಕ್ಸ್ ಅಜಯ್ ದೇವ್ಗನ್ ವೃತ್ತಿ ಜೀವನದಲ್ಲಿಯೇ ದಿ ಬೆಸ್ಟ್ ಕ್ಲೈಮ್ಯಾಕ್ಸ್. ನಿಮ್ಮೆಲ್ಲರ ಮೈನವಿರೇಳಿಸುವ ಚಿತ್ರ ಇದು. 'ತಾನಾಜಿ' ಚಿತ್ರ ಮತ್ತು ಅಜಯ್ ದೇವ್ಗನ್ ನಟನೆ ರಾಷ್ಟ್ರ ಪ್ರಶಸ್ತಿಗೆ ಅರ್ಹವಾಗಿದೆ. ಸಿನಿಮಾದ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಚೆನ್ನಾಗಿದೆ'' ಅಂತ ಲಾಲು ಮಖೀಜಾ ಎಂಬುವರು ಟ್ವೀಟ್ ಮಾಡಿದ್ದಾರೆ.

  English summary
  Bollywood Actor Ajay Devgan starrer Tanhaji: The Unsung Warrior gets good response in Twitter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X