For Quick Alerts
  ALLOW NOTIFICATIONS  
  For Daily Alerts

  ಬೆಲ್ ಬಾಟಮ್ ವಿಮರ್ಶೆ: ಅಕ್ಷಯ್ ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ

  |

  ಬಾಲಿವುಡ್ ನಟ ಅಕ್ಷಯ್ ಕುಮಾರ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ 'ಬೆಲ್ ಬಾಟಮ್' ಸಿನಿಮಾ ಇಂದು (ಆಗಸ್ಟ್ 18) ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. ಸುಮಾರು ತಿಂಗಳು ನಂತರ ಬಿಟೌನ್ ಬೆಳ್ಳಿ ಪರದೆ ಮೇಲೆ ಸ್ಟಾರ್ ನಟನ ಚಿತ್ರ ಪ್ರದರ್ಶನ ಕಾಣ್ತಿದ್ದು, ಬಿಟೌನ್ ಪ್ರೇಕ್ಷಕರು ಖುಷಿಯಾಗಿದ್ದಾರೆ. ನಿರೀಕ್ಷೆಯಂತೆ ಸಿನಿಮಾನೂ ಚೆನ್ನಾಗಿ ಮೂಡಿಬಂದಿರುವುದು ಸಹಜವಾಗಿ ಅಭಿಮಾನಿಗಳಿಗೆ ಸಮಾಧಾನ ನೀಡಿದೆ.

  ಈ ಹಿಂದೆ ಬೆಲ್ ಬಾಟಮ್ ಸಿನಿಮಾದ ಟ್ರೈಲರ್ ಬಂದಾಗಲೇ ಈ ಚಿತ್ರದ ಬಗ್ಗೆ ಹೆಚ್ಚು ನಿರೀಕ್ಷೆ ಹುಟ್ಟಿಕೊಂಡಿತ್ತು. ಅಕ್ಷಯ್ ಕುಮಾರ್ ವೃತ್ತ ಜೀವನದಲ್ಲಿ ಇದೊಂದು ಬ್ಲಾಕ್ ಬಸ್ಟರ್ ಆಗಬಹುದು ಎಂದು ಅಂದಾಜಿಸಿದ್ದರು. ಇದೀಗ, ಮೊದಲ ದಿನದ ಮೊದಲ ಶೋ ಪ್ರತಿಕ್ರಿಯೆ ಹೊರಬಿದ್ದಿದ್ದು, ಲೆಕ್ಕಾಚಾರದಂತೆ ಅಕ್ಷಯ್ ಕುಮಾರ್‌ಗೆ ಯಶಸ್ಸಿನ ಹೂಮಾಲೆ ಸಿಕ್ಕಿದೆ.

  'ಇಂದಿರಾ' ಪಾತ್ರಕ್ಕಾಗಿ ಲಾರಾ ದತ್ತಾ ಮೇಕ್ ಓವರ್ ನೋಡಿ ಗಂಡ-ಮಗಳು ಹೇಳಿದ್ದೇನು?'ಇಂದಿರಾ' ಪಾತ್ರಕ್ಕಾಗಿ ಲಾರಾ ದತ್ತಾ ಮೇಕ್ ಓವರ್ ನೋಡಿ ಗಂಡ-ಮಗಳು ಹೇಳಿದ್ದೇನು?

  ರಂಜಿತ್ ಎಂ ತಿವಾರಿ ನಿರ್ದೇಶನದ ಬೆಲ್ ಬಾಟಮ್ ನೈಜ ಘಟನೆಗಳನ್ನು ಆಧರಿಸಿ ಮಾಡಿರುವ ಚಿತ್ರ. ಭಾರತೀಯ ರಾ ಏಜೆಂಟ್ ಪಾತ್ರದಲ್ಲಿ ಅಕ್ಷಯ್ ಕುಮಾರ್ ಮಿಂಚಿದ್ದು, ವಾಣಿ ಕಪೂರ್, ಹುಮಾ ಖುರೇಶಿ, ಲಾರಾ ದತ್ತಾ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕೋವಿಡ್ ಎರಡನೇ ಲಾಕ್‌ಡೌನ್ ಬಳಿಕ ಥಿಯೇಟರ್‌ಗೆ ಬಂದ ಮೊದಲ ಹಿಂದಿ ಸಿನಿಮಾ ಇದಾಗಿದ್ದು, ಸಿನಿಮಾ ನೋಡಿದ ಪ್ರೇಕ್ಷಕರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಪ್ರತಿಕ್ರಿಯೆ ಇಲ್ಲಿದೆ. ಮುಂದೆ ಓದಿ....

  Rating:
  3.5/5

  4 ಸ್ಟಾರ್ ಕೊಟ್ಟ ತರಣ್ ಆದರ್ಶ್

  4 ಸ್ಟಾರ್ ಕೊಟ್ಟ ತರಣ್ ಆದರ್ಶ್

  ''ದೊಡ್ಡ ಪರದೆಯಲ್ಲಿ ಬೆಲ್ ಬಾಟಮ್ ಸಿನಿಮಾ ನೋಡುವುದು ಮಜಾ ಇದೆ. ಹಾಗೆಯೇ ಮನರಂಜನೆಯಿಂದ ಕೂಡಿದೆ. ಅದ್ಭುತ ಪರ್ಫಾಮೆನ್ಸ್ ನೋಡಸಿಗುತ್ತದೆ. ಅಕ್ಷಯ್ ಕುಮಾರ್ ಮತ್ತೊಮ್ಮೆ ಮಿಂಚಿದ್ದಾರೆ. ರಂಜಿತ್ ತಿವಾರಿ ನಿರ್ದೇಶಕ ಟಾಪ್ ಕ್ಲಾಸ್ ಎನ್ನಬಹುದು'' ಎಂದು ಖ್ಯಾತ ಚಿತ್ರ ವಿಶ್ಲೇಷಕ ತರಣ್ ಆದರ್ಶ್ ವಿಮರ್ಶೆ ಮಾಡಿದ್ದು, 4 ಸ್ಟಾರ್ ಕೊಟ್ಟಿದ್ದಾರೆ.

  'ಬೆಲ್ ಬಾಟಮ್' ಚಿತ್ರದಲ್ಲಿ ಇಂದಿರಾ ಗಾಂಧಿ ಪಾತ್ರ ಮಾಡಿರೋದು ಯಾರು?'ಬೆಲ್ ಬಾಟಮ್' ಚಿತ್ರದಲ್ಲಿ ಇಂದಿರಾ ಗಾಂಧಿ ಪಾತ್ರ ಮಾಡಿರೋದು ಯಾರು?

  ಅಕ್ಷಯ್ ಸೂಪರ್, ನಿರ್ದೇಶನ ಮಾಸ್ಟರ್

  ಅಕ್ಷಯ್ ಸೂಪರ್, ನಿರ್ದೇಶನ ಮಾಸ್ಟರ್

  "ಸೂರತ್‌ನಲ್ಲಿ ಬೆಲ್‌ ಬಾಟಮ್ ಸಿನಿಮಾ ನೋಡಿದೆ. ಬಹಳ ಒಳ್ಳೆಯ ಚಿತ್ರ. ಅಕ್ಷಯ್ ಕುಮಾರ್ ಅದ್ಭುತ ನಟನೆ ಮಾಡಿದ್ದಾರೆ. ಲಾರಾ, ಹುಮಾ ಮತ್ತು ವಾಣಿ ಎಲ್ಲರೂ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಡೈರೆಕ್ಟರ್ ರಂಜಿತ್ ತಿವಾರಿ ಅವರ ನಿರ್ದೇಶನ ತುಂಬಾ ಚೆನ್ನಾಗಿದೆ. ರೇಟಿಂಗ್ 3.5 ಸ್ಟಾರ್." ಎಂದು ನೆಟ್ಟಿಗರೊಬ್ಬ ಕಾಮೆಂಟ್ ಮಾಡಿದ್ದಾರೆ.

  ಅದ್ಭುತ ವಿಶ್ಯೂಲ್ಸ್, ಅಚ್ಚರಿ ಕ್ಲೈಮ್ಯಾಕ್ಸ್

  ಅದ್ಭುತ ವಿಶ್ಯೂಲ್ಸ್, ಅಚ್ಚರಿ ಕ್ಲೈಮ್ಯಾಕ್ಸ್

  ''ಬೆಲ್ ಬಾಟಮ್ ಚಲನಚಿತ್ರ ನೋಡಿದೆ. ಇದು ನಿಜಕ್ಕೂ ಅತ್ಯದ್ಭುತ. ಚಿತ್ರಮಂದಿರಕ್ಕೆ ಒಳ್ಳೆಯ ಚಿತ್ರದೊಂದಿಗೆ ಬಂದ ಅಕ್ಷಯ್ ಕುಮಾರ್‌ಗೆ ಸಲ್ಯೂಟ್ ಹೇಳಬೇಕು. ಮಾಸ್ ಹಾಗು ಕ್ಲಾಸ್ ಆಗಿರುವ ಚಿತ್ರಕ್ಕೆ ನನ್ನದು 3.5 ಸ್ಟಾರ್. ಮೇಕಿಂಗ್+ಥ್ರಿಲ್+ಭಾವನೆ+ಅದ್ಭುತ ವಿಶ್ಯೂಲ್ಸ್ ಜೊತೆ ಅಚ್ಚರಿ ಕ್ಲೈಮ್ಯಾಕ್ಸ್. ಇದೆಲ್ಲದರ ಜೊತೆ ಅಕ್ಷಯ್ ಕುಮಾರ್ ಸೂಪರ್'' ಎಂದು ನೀಲ್ ಎಂಬ ವ್ಯಕ್ತಿ ಟ್ವೀಟ್ ಮಾಡಿದ್ದಾರೆ.

  ಕನಿಷ್ಠ 170 ಕೋಟಿ ಪಕ್ಕಾ

  ಕನಿಷ್ಠ 170 ಕೋಟಿ ಪಕ್ಕಾ

  ''ಅಕ್ಷಯ್ ಕುಮಾರ್ ಮತ್ತೆ ತಮ್ಮ ಟ್ರ್ಯಾಕ್‌ಗೆ ಮರಳಿದ್ದಾರೆ. ಕಾಮಿಡಿ ಟೈಮಿಂಗ್ಸ್, ಒಳಸಂಚು, ತಂತ್ರಗಾರಿಕೆ ಸೇರಿದಂತೆ ಅದ್ಭುತ ಪ್ರೆಸೆಂಟೆಶನ್ ಅಕ್ಷಯ್ ಬಿಟ್ಟು ಬೇರೆ ಯಾವ ನಟರಿಂದಲೂ ಸಾಧ್ಯವಿಲ್ಲ. ಕನಿಷ್ಠ ಅಂದ್ರು 170 ಕೋಟಿ ಈ ಸಿನಿಮಾ ಬಾಚಿಕೊಳ್ಳುತ್ತದೆ'' ಎಂದು ಉಮೇಶ್ ಪುನ್ವಾಣಿ ಟ್ವೀಟ್ ಮಾಡಿದ್ದಾರೆ.

  ಇಂಟರ್‌ವಲ್‌ವರೆಗೂ ಆಸಕ್ತಿ

  ಇಂಟರ್‌ವಲ್‌ವರೆಗೂ ಆಸಕ್ತಿ

  ''ಬೆಲ್ ಬಾಟಮ್ ಸಿನಿಮಾ ನೋಡ್ತಿದ್ದೇನೆ, ಇಂಟರ್‌ವಲ್‌ವರೆಗೂ ಆಸಕ್ತಿದಾಯಕವಾಗಿ ಬಂದಿದೆ'' ಎಂದು ದೀಪಿಕಾ ಶರ್ಮಾ ಟ್ವೀಟ್ ಮಾಡಿದ್ದಾರೆ.

  ರಂಜಿತ್ ತಿವಾರಿ ಮಾಸ್ಟರ್ ಕ್ಲಾಸ್ ಡೈರೆಕ್ಷನ್

  ರಂಜಿತ್ ತಿವಾರಿ ಮಾಸ್ಟರ್ ಕ್ಲಾಸ್ ಡೈರೆಕ್ಷನ್

  ''ಬೆಲ್ ಬಾಟಮ್ ಕಥೆ ಬಹಳ ವೇಗವಾಗಿ ಸಾಗುತ್ತದೆ, ಜೊತೆ ಪಾತ್ರಗಳು ಅಷ್ಟೇ ರೋಚಕತೆಯಿಂದ ಇದೆ. ಅದರಲ್ಲೂ ಸ್ಪೈ ಥ್ರಿಲ್ಲರ್ ಚಿತ್ರಗಳಲ್ಲಿ ಸಂಭಾಷಣೆ ಹೆಚ್ಚು ಪ್ರಾಮುಖ್ಯತೆ ಹೊಂದಿರುತ್ತದೆ ಎನ್ನುವುದಕ್ಕೆ ಇದು ಉತ್ತಮ ಉದಾಹರಣೆ. ಇದೊಂದು ಸಾಮೂಹಿಕ ಅಂಶವುಳ್ಳ ಮಾಸ್ ಎಂಟರ್‌ಟೈನರ್. ಬೆಲ್ ಬಾಟಮ್ ಡೈಲಾಗ್ಸ್ ಅದ್ಭುತ, ರಂಜಿತ್ ತಿವಾರಿ ನಿರ್ದೇಶನಕ್ಕೆ ಮೆಚ್ಚುಗೆ'' ಎಂದು ವ್ಯಕ್ತಿಯೊಬ್ಬರು ಟ್ವೀಟ್ ಮಾಡಿದ್ದಾರೆ.

  English summary
  Bollywood actor Akshay kumar and Lara dutta starrer Bell Bottom movie released all over world. here is the twitter reaction of movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X