»   » ವಿಮರ್ಶೆ: ಮ್ಯಾಡ್ ಅಲ್ಲ ಇವನು ಪ್ಯಾಡ್ ಮ್ಯಾನ್

ವಿಮರ್ಶೆ: ಮ್ಯಾಡ್ ಅಲ್ಲ ಇವನು ಪ್ಯಾಡ್ ಮ್ಯಾನ್

Posted By:
Subscribe to Filmibeat Kannada

ಬಹು ನಿರೀಕ್ಷಿತ ಪ್ಯಾಡ್ ಮ್ಯಾನ್ ಸಿನಿಮಾ ತೆರೆಕಂಡಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಪುರುಷರು ಕೂಡ ಮಹಿಳೆಯರ ಪ್ರತಿ ವಿಚಾರಗಳನ್ನ ತಿಳಿದುಕೊಳ್ಳಬೇಕು. ಇಂದಿಗೂ ಕದ್ದು ಮುಚ್ಚಿ ಮಾತನಾಡುವಂತಹ ಮಹಿಳೆಯರ ಮುಟ್ಟಿನ ವಿಚಾರ ಪುರುಷರು ತಿಳಿದಿಕೊಳ್ಳುವುದು ಅವಶ್ಯಕ ಹಾಗೂ ಸ್ವಚ್ಛತೆ ಆರೋಗ್ಯಕ್ಕೆ ಒಳ್ಳೆಯದು ಹೀಗೆ ಸಾಕಷ್ಟು ವಿಚಾರಗಳನ್ನ ಹೊತ್ತು ಬಂದಿರುವ ಸಿನಿಮಾ ಪ್ಯಾಡ್ ಮ್ಯಾನ್.

ಚಿತ್ರ: ಪ್ಯಾಡ್ ಮ್ಯಾನ್
ನಿರ್ದೇಶನ ; ಆರ್ ಬಲ್ಕಿ
ತಾರಾಗಣ; ಅಕ್ಷಯ್ ಕುಮಾರ್, ರಾಧಿಕಾ ಆಪ್ಟೆ, ಸೋನಂ ಕಪೂರ್
ನಿರ್ಮಾಣ: ಟ್ವಿಂಕಲ್ ಖನ್ನಾ, ಕೇಪ್ ಆಫ್ ಗುಡ್ ಫಿಲ್ಮ್ಸ್, ಎಸ್ ಪಿ ಈ ಫಿಲ್ಮ್ಸ್ ಇಂಡಿಯಾ
ತುಂಬಾ ಇಷ್ಟವಾಗುವ ಅಂಶ : ಅಕ್ಷಯ್ ಕುಮಾರ್, ನಿರ್ದೇಶನ, ಪರಿಕಲ್ಪನೆ
ಬೇಸರ ಮೂಡಿಸುವ ಅಂಶ: ಮೊದಲಾರ್ಧದಲ್ಲಿ ಸ್ವಲ್ಪ ಲ್ಯಾಗ್

ಹೇಗಿದೆ ಪ್ಯಾಡ್ ಮ್ಯಾನ್ ಸಿನಿಮಾ ಕಥೆ

ಪ್ಯಾಡ್ ಮ್ಯಾನ್ ಸಿನಿಮಾದ ಲಕ್ಷ್ಮೀ ಕಾಂತ್ ಪಾತ್ರದಲ್ಲಿ ಅಕ್ಷಯ್ ಕುಮಾರ್ ಅಭಿನಯಿಸಿದ್ದು ಅಕ್ಷಯ್ ಕುಮಾರ್ ಪತ್ನಿ ಗಾಯತ್ರಿ ಪಾತ್ರವನ್ನ ರಾಧಿಕಾ ಆಪ್ಟೆ ನಿರ್ವಹಿಸಿದ್ದಾರೆ. ಹೊಸದಾಗಿ ಮದುವೆಯಾದ ನಾಯಕ ತನ್ನ ಪತ್ನಿಯನ್ನ ತುಂಬಾ ಕಾಳಜಿಯಿಂದ ನೋಡಿಕೊಳ್ಳುತ್ತಿರುತ್ತಾನೆ. ಮುಟ್ಟಿನ ಸಮಯದಲ್ಲಿ ಪತ್ನಿ ಬಳಸುವ ಕೊಳಕಾಗಿರುವ ಬಟ್ಟೆಯನ್ನ ಬಳಸದಂತೆ ಹೋರಾಟ ಮಾಡಿ ಸ್ಯಾನಿಟರಿ ಪ್ಯಾಡ್ ಬಳಸುವಂತೆ ಆಕೆಯನ್ನ ಬದಲು ಮಾಡುವಲ್ಲಿ ನಾಯಕನ ಹೋರಾಟದತ್ತ ಸಿನಿಮಾ ಕಥೆ ಸಾಗುತ್ತೆ. ಅಂಗಡಿಯಲ್ಲಿ ಸಿಗುವ ದುಬಾರಿ ಸ್ಯಾನಿಟರಿ ಪ್ಯಾಡ್ ಗಳನ್ನ ತಾನೇ ತಯಾರು ಮಾಡಿ ಅದನ್ನ ಅನೇಕರಿಗೆ ನೀಡಿ ಪೇಚಾಟಕ್ಕೆ ಸಿಲುಕಿಕೊಳ್ಳುವ ನಾಯಕ ತನ್ನ ಪತ್ನಿಗಾಗಿ ಸ್ಯಾನಿಟರಿ ಪ್ಯಾಡ್ ಮಾಡುವುದನ್ನ ಕಲಿತು ಆ ಕೆಲಸದಲ್ಲಿ ಹೇಗೆ ಯಶಸ್ಸು ಕಾಣುತ್ತಾನೆ ಎನ್ನುವುದು ಪ್ಯಾಡ್ ಮ್ಯಾನ್ ನ ಕಥೆ.

ಬಲ್ಕಿ ನಿರ್ದೇಶನ ಹೇಗಿದೆ

ಅರುಣಚಲಂ ಮುರುಗನಾಥಂ ಅವರ ಜೀವನ ಕಥೆಯನ್ನ ಸಿನಿಮಾವನ್ನಾಗಿ ತೆರೆ ಮೇಲೆ ತಂದಿದ್ದಾರೆ ಆರ್ ಬಲ್ಕಿ. ಮಹಿಳೆಯರಲ್ಲಿ ನೈಸರ್ಗಿಕವಾಗಿ ಆಗುವ ಮುಟ್ಟಿನ ವಿಚಾರವನ್ನ ತೆರೆಮೇಲೆ ತುಂಬಾ ಚೆನ್ನಾಗಿ ತೋರಿಸಲಾಗಿದೆ. ಯಾವುದೇ ವೈಭವಿಕರಣವಿಲ್ಲದೆ ನ್ಯಾಚುರಲ್ ಆಗಿ ಸಿನಿಮಾ ಮೂಡಿ ಬಂದಿದೆ.

ಎಲ್ಲರ ಅಭಿನಯ ಚೆನ್ನಾಗಿದೆ.

ನಾಯಕನಾಗಿ ಅಭಿನಯಿಸಿರುವ ಅಕ್ಷಯ್ ಕುಮಾರ್ ದಿನ ಕಳೆದಂತೆ ಸಾಮಾನ್ಯ ಜನರಿಗೆ ಹತ್ತಿರವಾಗುತ್ತಿದ್ದಾರೆ. ಚಿತ್ರಗಳು ಮತ್ತು ಪಾತ್ರಗಳ ಆಯ್ಕೆ ಸಿನಿಮಾ ನೋಡುವ ಪ್ರೇಕ್ಷಕ ತಮ್ಮನ್ನ ತಾವು ತೆರೆ ಮೇಲೆ ನೋಡಿಕೊಳ್ಳುವಂತಾಗುತ್ತಿದೆ. ಪ್ಯಾಡ್ ಮ್ಯಾನ್ ಸಿನಿಮಾದಲ್ಲಿ ಅಕ್ಷಯ್ ಪಾತ್ರ ಮನಸ್ಸಿನಲ್ಲಿ ಉಳಿದುಕೊಂಡು ಬಿಡುತ್ತದೆ.

ಗಮನ ಸೆಳೆಯುವ ನಾಯಕಿಯರು

ಅಭಿನಯದ ಮೂಲಕವೇ ಗುರುತಿಸಿಕೊಂಡಿರುವ ನಟಿ ರಾಧಿಕಾ ಆಪ್ಟೆ ಅಭಿನಯ ತುಂಬಾ ಚೆನ್ನಾಗಿದೆ. ಸೋನಂ ಕಪೂರ್ ಪಾತ್ರ ಕೂಡ ಚೆನ್ನಾಗಿ ಮೂಡಿ ಬಂದಿದ್ದು ಇಬ್ಬರು ತಮ್ಮ ಪಾತ್ರಗಳಿಗೆ ನ್ಯಾಯ ದಕ್ಕಿಸಿದ್ದಾರೆ.

ನೋಡಲೇ ಬೇಕಾದ ಸಿನಿಮಾ

ಪ್ಯಾಡ್ ಮ್ಯಾನ್ ಗೊತ್ತಿರುವ ಕಥೆ ಆದರೂ ಕೂಡ ಎಲ್ಲರೂ ನೋಡಲೇಬೇಕಾದ ಸಿನಿಮಾ ಹೆಣ್ಣು ಮಕ್ಕಳು ಮುಟ್ಟಾಗುವುದು ನೈಸರ್ಗಿಕ ಪ್ರಕ್ರಿಯೆ ಎನ್ನುವುದನ್ನ ತುಂಬಾ ಅಚ್ಚುಕಟ್ಟಾಗಿ ಹೇಳುವುದರಲ್ಲಿ ನಿರ್ದೇಶಕರು ಯಶಸ್ವಿ ಆಗಿದ್ದಾರೆ. ಸಿನಿಮಾಗೆ ಬೇಕಿರುವ ಅಂಶ ಹಾಗೂ ಸಮಾಜದ ಬದಲಾವಣೆಗೆ ಬೇಕಿರುವ ವಿಚಾರ ಎರಡು ಚಿತ್ರದಲ್ಲಿದ್ದು ಕುಟುಂಬ ಸಮೇತರಾಗಿ ನೋಡಬಹುದಾದ ಚಿತ್ರ.

English summary
Bollywood actor Akshay Kumar, Sonam Kapoor and Radhika Apte starrer Pad Man's review. The first day of pad man cinema was get good response

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada