ಕೊನೆಗೂ ಅಕ್ಷಯ್ ಕುಮಾರ್ ಗೆದ್ರಾ? 'ರಾಮ್‌ಸೇತು' ಟ್ವಿಟ್ಟರ್ ರಿವ್ಯೂ!

ದೀಪಾವಳಿ ಸಂಭ್ರಮದಲ್ಲೇ ಅಕ್ಷಯ್‌ಕುಮಾರ್ ನಟನೆಯ 'ರಾಮ್‌ ಸೇತು' ಬಿಡಗಡೆಯಾಗಿ ಒಳ್ಳೆ ರೆಸ್ಪಾನ್ಸ್ ಪಡೆದುಕೊಳ್ತಿದೆ. ರಾಮ ಸೇತು ಪ್ರಾಕೃತಿಕವೋ ಅಥವಾ ಮನುಷ್ಯ ನಿರ್ಮಿತವೋ ಎನ್ನುವ ಚರ್ಚೆಯನ್ನು ಈ ಸಿನಿಮಾದಲ್ಲಿ ಮಾಡಲಾಗಿದೆ. ಹಾಗಾಗಿ ಸಹಜವಾಗಿಯೇ ಸಿನಿಮಾ ಭಾರೀ ನಿರೀಕ್ಷೆ ಮೂಡಿಸಿತ್ತು. ಈಗಾಗಲೇ ವಿದೇಶಗಳಲ್ಲಿ ಪ್ರೀಮಿಯರ್‌ ಶೋಗಳು ಮುಗಿದಿದ್ದು ಸಿನಿಮಾ ನೋಡಿದವರು ಟ್ವಿಟ್ಟರ್‌ನಲ್ಲಿ ರಿವ್ಯೂ ಹಂಚಿಕೊಳ್ಳುತ್ತಿದ್ದಾರೆ.

ಅಭಿಷೇಕ್ ಶರ್ಮಾ ನಿರ್ದೇಶನದ 'ರಾಮ್‌ ಸೇತು' ಚಿತ್ರದಲ್ಲಿ ಪುರಾತತ್ವಶಾಸ್ತ್ರಜ್ಞನಾಗಿ ಅಕ್ಷಯ್‌ ಕುಮಾರ್ ನಟಿಸಿದ್ದಾರೆ. ಪ್ರಪಂಚದಾದ್ಯಂತ 2800ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ ಸಿನಿಮಾ ರಿಲೀಸ್ ಆಗಿದೆ. ಅಜಯ್ ದೇವಗನ್ ನಟನೆಯ 'ಥ್ಯಾಂಕ್‌ಗಾಡ್' ಸಿನಿಮಾ ಜೊತೆಗೆ 'ರಾಮ್‌ ಸೇತು' ತೆರೆಗೆ ಬಂದಿದೆ. ದೀಪಾವಳಿ ಲಾಂಗ್ ವೀಕೆಂಟ್ ಟಾರ್ಗೆಟ್ ಮಾಡಿ ಬುಧವಾರವೇ ಸಿನಿಮಾಗಳನ್ನು ರಿಲೀಸ್ ಮಾಡಿದ್ದಾರೆ. ಎರಡೂ ಸಿನಿಮಾಗಳು ದೊಡ್ಡಮಟ್ಟದಲ್ಲಿ ತರೆಗಪ್ಪಳಿಸಿ ಸದ್ದು ಮಾಡ್ತಿವೆ. ಕೇಪ್ ಆಫ್ ಗುಡ್ ಫಿಲ್ಮ್ಸ್, ಅಮೇಜಾನ್ ಪ್ರೈಂ, ಲೈಕಾ ಪ್ರೊಡಕ್ಷನ್ಸ್‌ ಸಂಸ್ಥೆಗಳು ಜಂಟಿಯಾಗಿ 'ರಾಮ್‌ ಸೇತು' ಚಿತ್ರವನ್ನು ನಿರ್ಮಿಸಿವೆ.

'ರಾಮ್‌ ಸೇತು' ಚಿತ್ರಕ್ಕೆ ಪ್ರೇಕ್ಷಕರಿಂದ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ದೀಪಾವಳಿಗೆ ಪರ್ಫೆಕ್ಟ್ ಗಿಫ್ಟ್ ಎಂದು ಸಿನಿಮಾ ನೋಡಿದವರು ಹೇಳುತ್ತಿದ್ದಾರೆ. ಮೊದಲ ದಿನವೇ ಸಿನಿಮಾ ಒಳ್ಳೆ ಕಲೆಕ್ಷನ್ ಮಾಡುವ ನಿರೀಕ್ಷೆಯಿದೆ. ಪ್ರೇಕ್ಷಕರ ಟ್ವಿಟ್ಟರ್ ರಿವ್ಯೂ ಮುಂದೆ ಇದೆ ಓದಿ.

'ರಾಮ್‌ ಸೇತು' ಕ್ಲೈಮ್ಯಾಕ್ಸ್ ಸೂಪರ್

'ರಾಮ್‌ ಸೇತು' ಕ್ಲೈಮ್ಯಾಕ್ಸ್ ಸೂಪರ್

ಮೆಲ್ಬೋರ್ನ್‌ನಲ್ಲಿ ಸಿನಿಮಾ ವೀಕ್ಷಿಸಿದ ಪ್ರೇಕ್ಷಕರೊಬ್ಬರು 'ರಾಮ್‌ ಸೇತು' ಅದ್ಭುತ ಸಿನಿಮಾ ಎಂದು ಬರೆದುಕೊಂಡಿದ್ದಾರೆ. ರಾಮ ಮತ್ತು ರಾಮ್‌ಸೇತು ಅಸ್ತಿತ್ವದ ಕುರಿತ ಸಾಹಸಮಯ ಸಿನಿಮಾ ಸೊಗಸಾಗಿದೆ. ಭಾವನಾತ್ಮಕವಾಗಿ ಮನಸಿಗೆ ತಾಕುತ್ತದೆ. ಅಕ್ಷಯ್ ಕುಮಾರ್ ಇಂಡಿಯಾನ ಜೋನ್ಸ್ ಅವತಾರದಲ್ಲಿ ಚಿತ್ರಕ್ಕೆ ಶಕ್ತಿ ತುಂಬಿದ್ದಾರೆ. ಸತ್ಯರಾಜ್ ನಟನೆ ಅದ್ಭುತ. ಸಿನಿಮಾ ಖಂಡಿತ ಸೂಪರ್ ಹಿಟ್ ಆಗುತ್ತದೆ. ಕ್ಲೈಮ್ಯಾಕ್ಸ್, ಬಿಜಿಎಂ ಥಿಯೇಟರ್‌ನಲ್ಲಿ ಮಜಾ ಕೊಡುವಂತಿದ್ದು, ಸಾಕಷ್ಟ ಗೂಸ್‌ಬಂಪ್ಸ್ ಮೊಮೆಂಟ್ಸ್ ಇದೆ. ಇತಿಹಾಸದ ಉಲ್ಲೇಖಗಳನ್ನು ಬಹಳ ಬುದ್ಧಿವಂತಿಕೆಯಿಂದ ತೆರೆಗೆ ತರಲಾಗಿದೆ. ನಮ್ಮ ಗತಕಾಲದ ಬಗ್ಗೆ ತಿಳಿದರೆ ಹೆಮ್ಮೆ ಎನಿಸುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

ಸಾಹಸಮಯ ಧಾರ್ಮಿಕ ಪಯಣ

ಸಾಹಸಮಯ ಧಾರ್ಮಿಕ ಪಯಣ

ಮತ್ತೊಬ್ಬ ನೆಟ್ಟಿಗ ಟ್ವೀಟ್ ಮಾಡಿ "ಒಂದೇ ಪದದಲ್ಲಿ ಹೇಳಬೇಕು ಎಂದರೆ 'ರಾಮ್ ಸೇತು' ಒಂದು ಸಾಹಸಮಯ ಧಾರ್ಮಿಕ ಪಯಣ. ದೀಪಾವಳಿಗೆ ಒಳ್ಳೆ ಉಡುಗೊರೆ. ಸುದೀರ್ಘ ಸಮಯದ ಅದ್ಭುತ ವಿಷ್ಯುವಲ್ ಎಫೆಕ್ಟ್ ಮತ್ತು VFX ತೆರೆಮೇಲೆ ನೋಡಿದಂತಾಯಿತು. ಅಕ್ಷಯ್ ಕುಮಾರ್ ಚಿತ್ರವನ್ನು ಆವರಿಸಿಕೊಂಡಿದ್ದಾರೆ. ನಿರ್ದೇಶನವೂ ಸೊಗಸಾಗಿದೆ. ಸಹ ಕಲಾವಿದರ ಚಿತ್ರಕ್ಕೆ ಜೋಶ್ ತುಂಬಿದ್ದಾರೆ.

ನಿಮ್ಮ ಉಸಿರನ್ನು ಬಿಗಿ ಹಿಡಿಯಿರಿ ಸಿನಿಮಾ ಖಂಡಿತ ನಿರಾಸೆ ಮಾಡುವುದಿಲ್ಲ" ಎಂದು ಬರೆದುಕೊಂಡಿದ್ದಾರೆ.
ನೀವು ಸೀಟ್ ಬಿಟ್ಟು ಕದಲುವುದಿಲ್ಲ

ನೀವು ಸೀಟ್ ಬಿಟ್ಟು ಕದಲುವುದಿಲ್ಲ

ಈಗಷ್ಟೇ 'ರಾಮ್‌ಸೇತು' ಸಿನಿಮಾ ನೋಡಿ ಮುಗಿಸಿದೆ. ಸಿನಿಮಾ ಆಕ್ಷನ್, ಸಾಹಸಮಯ ಸನ್ನಿವೇಶಗಳು, ಸಸ್ಪೆನ್ಸ್‌ನಿಂದ ಕೂಡಿದೆ. ನೀವು ನಿಮ್ಮ ಸೀಟ್ ಬಿಟ್ಟು ಕದಲುವುದಿಲ್ಲ ಅಂತಾದೊಂದು ಅದ್ಭುತ ಅನುಭವ ನೀಡುತ್ತದೆ. ಒಳ್ಳೆ ಕಥೆ, ಅದ್ಭುತ ನಿರ್ದೇಶನದ ಜೊತೆಗೆ ಬಿಜಿಎಂನಲ್ಲಿರುವ ರಾಮ್ ರಾಮ್ ಎನ್ನುವ ಮಂತ್ರವಂತೂ ಅದ್ಭುತ. ಎಲ್ಲಾ ಹಿಂದೂಗಳು ಈ ಸಿನಿಮಾ ನೋಡಲೇಬೇಕು" ಎಂದು ಇನ್ನೊಬ್ಬರು ಟ್ವೀಟ್ ಮಾಡಿದ್ದಾರೆ.

ಪ್ರೇಕ್ಷಕರಿಗೆ ಕನೆಕ್ಟ್ ಆಗುತ್ತದೆ

ಪ್ರೇಕ್ಷಕರಿಗೆ ಕನೆಕ್ಟ್ ಆಗುತ್ತದೆ

"ಮಾಸ್ಟರ್‌ಪೀಸ್ ಸಿನಿಮಾ. ಅದ್ಭುತ ನಿರ್ದೇಶನ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ. ನಂಬಿಕೆ ಹಾಗೂ ವಿಜ್ಞಾನ ಎರಡನ್ನು ಸೇರಿಸಿ ಪರಿಣಾಮಕಾರಿಯಾಗಿ ಚಿತ್ರವನ್ನು ಕಟ್ಟಿಕೊಡಲಾಗಿದೆ. ಮನರಂಜನೆ, ಭಾವನೆಗಳು, ಸಾಹಸ ಹಾಗೂ ಇತಿಹಾಸ ಥೀಮ್‌ ಪ್ರೇಕ್ಷಕರಿಗೆ ಕನೆಕ್ಟ್ ಆಗುತ್ತದೆ. ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ. ಅಕ್ಷಯ್‌ಕುಮಾರ್ ಅಭಿನಯ ಅದ್ಭುತ" ಎಂದು ನೆಟ್ಟಿಗರೊಬ್ಬರು ಟ್ವೀಟ್ ಮಾಡಿದ್ದಾರೆ.

More from Filmibeat

English summary
Akshay Kumar Starrer Ramsetu Movie Review and Rating. Action Adventure Ram Setu has finally released in theatres today. Movie opened with positive word-of-mouth. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X