For Quick Alerts
  ALLOW NOTIFICATIONS  
  For Daily Alerts

  ಅಲಿಘರ್: ಸಲಿಂಗಿ, ಸಮಾಜ, ಸಂವೇದನಾ ಮನೋಜ್ಞ ಚಿತ್ರ

  By ಜೇಮ್ಸ್ ಮಾರ್ಟಿನ್
  |

  ಮಾನವ ಹಕ್ಕುಗಳು, ಸಲಿಂಗ ಕಾಮಿಗಳು ಎಂಬ ವಿಷಯ ಬಂದರೆ ಮೂಗು ಮುರಿಯುವವರೇ ಅಧಿಕ. ಇಂಥ ಒಂದು ಸಬ್ಜೆಕ್ಟ್ ಇಟ್ಟುಕೊಂಡು ಸತ್ಯಘಟನೆಗಳನ್ನು ಆಧಾರಿಸಿದ ಚಿತ್ರವನ್ನು ನಿರ್ದೇಶನ ಹನ್ಸಲ್ ಮೆಹ್ತಾ ಸಮರ್ಥವಾಗಿ ತೆರೆಯ ಮೇಲೆ ತಂದಿದ್ದಾರೆ.

  ಮನೋಜ್ ಬಾಜಪೇಯಿ ಹಾಗೂ ರಾಜ್ ಕುಮಾರ್ ರಾವ್ ಅವರ ಪ್ರತಿಭೆಗೆ ಸವಾಲೆಸೆಯುವಂಥ ಪಾತ್ರಗಳು ಇಲ್ಲಿವೆ. [ಟಿಕೆಟ್ ಬುಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ]

  ಭಾರತೀಯ ನೀತಿ ಸಂಹಿತೆ ಸೆಕ್ಷನ್ 377 ಬಗ್ಗೆ ದೆಹಲಿ ಕೋರ್ಟ್ ಹಾಗೂ ನಂತರ ಸುಪ್ರೀಂಕೋರ್ಟ್ ನೀಡಿರುವ ತೀರ್ಪು, ಸಮಾಜದಲ್ಲಿ ಇಂಥದ್ದೊಂದು ಸಂಬಂಧ, ಬಾಂಧವ್ಯ, ಬೆಸುಗೆ, ಸಲುಗೆ ಹೇಗೆ ಹಾಸುಹೊಕ್ಕಬಹುದು ಎಂಬುದನ್ನು ಸರಳವಾಗಿ ತೋರಿಸಲಾಗಿದೆ.

  Rating:
  4.0/5

  ಅಸಲಿಗೆ ಇದು ಅಲಿಘರ್ ವಿಶ್ವ ವಿದ್ಯಾಲಯದ ಮರಾಠಿ ಪ್ರೊಫೆಸರ್ ಹಾಗೂ ಕ್ಲಾಸಿಕಲ್ ಮಾರ್ಡನ್ ಇಂಡಿಯನ್ ಲಾಂಗ್ವೆಜ್ ಫ್ಯಾಕಲ್ಟಿ ಡಾ. ಎಸ್.ಆರ್ ಸಿರಾಸ್ ಅವರನ್ನು ನೈತಿಕ ಹೊಣೆ ಹೊತ್ತು ವಿದ್ಯಾಸಂಸ್ಥೆ ತೊರೆದಿದ್ದರು.

  Aligarh Movie Review: Soul-Stirring Story With Powerful Performances

  ಏನಿದು ಘಟನೆ?: ಪ್ರೊಫೆಸರ್ ಅವರ ಖಾಸಗಿತನ ಬಹಿರಂಗವಾಗಿತ್ತು. ದುಷ್ಕರ್ಮಿಗಳು ಒಮ್ಮೆ ಪ್ರೊಫೆಸರ್ ಮನೆಗೆ ನುಗ್ಗಿದ್ದರು. ಪ್ರೊಫಸರ್ ಅವರು ರಿಕ್ಷಾವಾಲನೊಂದಿಗೆ ಹಾಸಿಗೆ ಹಂಚಿಕೊಂಡಿದ್ದ ದೃಶ್ಯ ಸೆರೆ ಹಿಡಿದು ಬಹಿರಂಗ ಪಡಿಸಿದ್ದರು. ಚಿತ್ರದಲ್ಲಿ ಪ್ರೊ. ಸಿರಾಸ್ ಪಾತ್ರದಲ್ಲಿ ಮನೋಜ್ ಮನೋಜ್ಞ ಅಭಿನಯ ನೀಡಿದ್ದಾರೆ. ಆಶೀಶ್ ವಿದ್ಯಾರ್ಥಿ ಅವರು ಸಿರಾಸ್ ಪಾತ್ರವನ್ನು ಸಮರ್ಥಿಸಿಕೊಳ್ಳುವ ವಕೀಲನಾಗಿ ಕಾಣಿಸಿಕೊಂಡಿದ್ದಾರೆ.

  ಕರಣ್ ಕುಲಕರ್ಣಿ ಅವರ ಹಿನ್ನಲೆ ಸಂಗೀತ ಹಾಗೂ ಸತ್ಯ ರಾಯ್ ನಾಗ್ಪಾಲ್ ಅವರ ಕೆಮೆರಾ ವರ್ಕ್ ಚಿತ್ರಕ್ಕೆ ಹೊಸ ಮೆರಗು ನೀಡಿದೆ. ಸೆನ್ಸಾರ್ ದೃಷ್ಟಿಯಿಂದ ಸಂಕಲನಕಾರ ಅಪೂರ್ವ ಅಸ್ರಾಣಿ ಅವರು ಹೆಚ್ಚಿನ ಪ್ರಮಾಣದಲ್ಲಿ ಕತ್ತರಿಯಾಡಿಸಿದ್ದಾರೆ. ಒಟ್ಟಾರೆ ಒಮ್ಮೆಯಾದರೂ ನೋಡಲೇಬೇಕಾದ ಚಿತ್ರ ಎಂದು ವಿಮರ್ಶಕರು ಷರಾ ಬರೆದಿದ್ದಾರೆ.

  Read in English: Aligarh Movie Review
  English summary
  Director Hansal Mehta's Aligarh is a human rights story that reveals the plight of homosexuals in conservative Indian society.. The actors have given their career best performances and the story is so touching and inspiring! All in all, Aligarh is a must watch!

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X