For Quick Alerts
ALLOW NOTIFICATIONS  
For Daily Alerts

ಪತ್ರಿಕೆಗಳ ವಿಮರ್ಶೆ : 'ಅಮರ್' ಕೆಲವರಿಗೆ ಇಷ್ಟವಾಗಿದೆ.. ಕೆಲವರಿಗೆ ತೀರಾ ಕಷ್ಟವಾಗಿದೆ..

|

'ಅಮರ್' ಸಿನಿಮಾ ಹೇಗಿದೆ..? ಅಭಿಷೇಕ್ ಹೇಗೆ ನಟಿಸಿದ್ದಾರೆ..? ಇದು ಎಲ್ಲರಿಗೆ ಇದ್ದ ಕುತೂಹಲ. ಅದಕ್ಕೆ ಕಾರಣ ಅಂಬರೀಶ್ ಪುತ್ರನ ಮೊದಲ ಸಿನಿಮಾ. ಇಂತಹ ಆ ಪ್ರಶ್ನೆಗಳಿಗೆ ಉತ್ತರ ಸಿಕ್ಕಿದೆ. 'ಅಮರ್' ಸಿನಿಮಾ ನಿನ್ನೆ (ಶುಕ್ರವಾರ) ಬಿಡುಗಡೆಯಾಗಿದೆ.

ಪ್ರೇಕ್ಷಕರಿಂದ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಅದೇ ರೀತಿ ವಿಮರ್ಶಕರು ಸಹ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರಿಗೆ ಚಿತ್ರ ಇಷ್ಟ ಆಗಿದ್ದರೆ, ಇನ್ನೂ ಕೆಲವರಿಗೆ ತೀರಾ ಕಷ್ಟವಾಗಿದೆ.

Amar Review : ಲವ್ ಸ್ಟೋರಿ ತರ ಅಲ್ಲ.. ಲವ್ ಸ್ಟೋರಿನೇ..

ನಿರ್ದೇಶಕ ನಾಗಶೇಖರ್ ಸಾಮಾನ್ಯ ಕಥೆ, ಅವರು ಹೇಳಿರುವ ರೀತಿ, ಸಾಧು ಕೋಕಿಲ ಕಾಮಿಡಿ, ಅಭಿಷೇಕ್ ನಟನೆ ಎಲ್ಲದರ ಬಗ್ಗೆ ಕೆಲ ವಿಮರ್ಶಕರು ಬೇಸರಗೊಂಡಿದ್ದಾರೆ. ನಿರೀಕ್ಷೆಯ ಮಟ್ಟಕ್ಕೆ ಸಿನಿಮಾ ಇಲ್ಲ ಎನ್ನುವುದು ವಿಮರ್ಶಕರ ಮಾತಾಗಿದೆ. ಸತ್ಯ ಹೆಗಡೆ ಕ್ಯಾಮರಾ ವರ್ಕ್ ಹಾಗೂ ಅರ್ಜುನ್ ಜನ್ಯ ಸಂಗೀತ ಎಲ್ಲರಿಗೆ ಮೆಚ್ಚುಗೆಯಾಗಿದೆ.

ಅಂದಹಾಗೆ, ಕನ್ನಡದ ಜನಪ್ರಿಯ ಪತ್ರಿಕೆಗಳಲ್ಲಿ ಬಂದಿರುವ 'ಅಮರ್' ಸಿನಿಮಾದ ವಿಮರ್ಶೆ ಹೀಗಿದೆ...

ಅಮರ ಪ್ರೇಮಕಾವ್ಯ - ಉದಯವಾಣಿ

ಅಮರ ಪ್ರೇಮಕಾವ್ಯ - ಉದಯವಾಣಿ

''ಒಂದು ಔಟ್‌ ಅಂಡ್‌ ಔಟ್‌ ಕಮರ್ಷಿಯಲ್ ಸಿನಿಮಾಕ್ಕೆ ಏನು ಬೇಕೋ ಆ ಎಲ್ಲಾ ಅಂಶಗಳಿಂದ "ಅಮರ್‌' ತುಂಬಿದೆ. ಜೊತೆಗೆ ನಾಗಶೇಖರ್ ತಮ್ಮ ಎಂದಿನ ಶೈಲಿಯನ್ನೂ ಬಿಟ್ಟುಕೊಟ್ಟಿಲ್ಲ. ಅದು ಲೊಕೇಶನ್‌ನಿಂದ ಹಿಡಿದು ಸೆಂಟಿಮೆಂಟ್ ವರೆಗೂ. ಹಾಗಾಗಿ, "ಅಮರ್‌'ನಲ್ಲಿ ಆ ಅಂಶಗಳಿಗೆ ನಾಗಶೇಖರ್ ಸ್ವಲ್ಪ ಹೆಚ್ಚಿನ ಜಾಗವನ್ನೇ ನೀಡಿದ್ದಾರೆ. ಒಬ್ಬ ಹೊಸ ಹೀರೋನಾ ಇಮೇಜ್‌ ಬಿಲ್ಡ್ ಮಾಡೋದು ಸುಲಭದ ಕೆಲಸವಲ್ಲ. ಕಥೆಯ ಹಂಗು ತೊರೆದು ತೆರೆಮೇಲೆ ಅದಕ್ಕಾಗಿ ಒಂದಷ್ಟು ಸಮಯ ಮೀಸಲಿರಿಸಬೇಕು. ಆ ಕೆಲಸವನ್ನು ನಾಗಶೇಖರ್ "ಅಮರ್‌' ಚಿತ್ರದಲ್ಲೂ ಮಾಡಿದ್ದಾರೆ. ಅಭಿಷೇಕ್ ಅವರ ಇಮೇಜ್‌ ಬಿಲ್ಡ್ ಮಾಡೋದಕ್ಕಾಗಿಯೇ ಚಿತ್ರದಲ್ಲಿ ಮೊದಲರ್ಧವನ್ನು ಮೀಸಲಿಟ್ಟಿದ್ದಾರೆ. ಹಾಗಾಗಿ, ಇಲ್ಲಿ ಕಥೆಯನ್ನು ಹೆಚ್ಚು ಬಯಸುವಂತಿಲ್ಲ. ಕಥೆಯ ಜಾಗವನ್ನು ಸುಂದರ ತಾಣಗಳು ತುಂಬುತ್ತವೆ.'' - ರವಿಪ್ರಕಾಶ್ ರೈ

ಒಟ್ಟಿಗೆ ಸೇರೋಣ.. ಒಟ್ಟಿಗೆ ಕೆಲಸ ಮಾಡೋಣ : ಅಭಿಗೆ ಕಿಚ್ಚನ ವಿಶ್

ಅಭಿಷೇಕ್ ಸಿನಿ ಜರ್ನಿಗೆ ಮ್ಯೂಸಿಕಲ್‌ ಟಚ್ - ವಿಜಯ ಕರ್ನಾಟಕ

ಅಭಿಷೇಕ್ ಸಿನಿ ಜರ್ನಿಗೆ ಮ್ಯೂಸಿಕಲ್‌ ಟಚ್ - ವಿಜಯ ಕರ್ನಾಟಕ

''ಚಿತ್ರರಂಗದ ಮೇರು ನಟ ಅಂಬರೀಶ್‌. ಇವರ ಪುತ್ರನನ್ನು ಸಿನಿಮಾ ರಂಗಕ್ಕೆ ಲಾಂಚ್‌ ಮಾಡುವುದು ನಿರ್ದೇಶಕರಿಗೆ ಸಿಗುವ ಅಪರೂಪದ ಅವಕಾಶ. ಅದನ್ನು ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕಾಗಿದ್ದು ನಿರ್ದೇಶಕರ ಜಾಣ್ಮೆ. ಆದರೆ, ನಿರ್ದೇಶಕ ನಾಗಶೇಖರ್ ಪೇಲವ ಕಥೆಯ ಮೂಲಕ ಸಿಕ್ಕ ಅವಕಾಶಕ್ಕೆ ಬೆನ್ನು ತೋರುತ್ತಾರೆ. ಕಥೆ ವಿಷಯದಲ್ಲಿ ಮಾತ್ರವಲ್ಲ, ನಿರೂಪಣೆ ಮತ್ತು ಸಿನಿಮಾ ಕಟ್ಟುವ ವಿಚಾರದಲ್ಲೂ ನಿರ್ದೇಶಕರ ವೈಫಲ್ಯ ಎದ್ದು ಕಾಣುತ್ತದೆ. ತೆರೆಯ ಮೇಲೆ ಥೇಟ್‌ ಅಪ್ಪನಂತೆ ಅಭಿಷೇಕ್ ಕಂಡಿದ್ದಾರೆ. ಕಣ್ಣುಗಳಂತೂ ಅಂಬರೀಶ್‌ ಅವರೇ ಎದುರು ಬಂದು ನಿಂತಂತೆ ಮಿಟುಕುತ್ತವೆ. ಜತೆಗೆ ಅಭಿ ಸ್ಮಾರ್ಟ್‌. ಆದರೆ ಮಾತಿನಲ್ಲಿರುವ ತಾಕತ್ತು ನಟನೆಯಲ್ಲಿ ಬೇಕಿತ್ತು ಅನಿಸದೇ ಇರದು. ಒಂದಷ್ಟು ತಯಾರಿ ಮಾಡಿಕೊಂಡರೆ ಮಾಸ್‌ ಹೀರೋ ಆಗುವುದರಲ್ಲಿ ಅನುಮಾನಬೇಡ.'' - ಹರೀಶ್ ಬಸವರಾಜ್

ಅಂಬಿ ನಟನೆಯ ಕೊನೆಯ ದೃಶ್ಯ 'ಅಮರ್' ಸಿನಿಮಾದಲ್ಲಿದೆ

ಅಭಿಷೇಕ್ ಮುಂದಿನ ಚಿತ್ರಕ್ಕೆ ಕಾಯೋಣ - ಕನ್ನಡ ಪ್ರಭ

ಅಭಿಷೇಕ್ ಮುಂದಿನ ಚಿತ್ರಕ್ಕೆ ಕಾಯೋಣ - ಕನ್ನಡ ಪ್ರಭ

''ಪ್ರೀತಿಯ ಕಥೆಯ ವಿವಿಧ ಮಜಲುಗಳನ್ನು ತೋರಿಸುವ ಚಿತ್ರವಿದು. ಇದೊಂದು ಹೊಸತೇನೂ ಅಲ್ಲದೇ ಪ್ರೇಮಕಥೆ. ಅಸಲಿಗೆ ಗಟ್ಟಿಗೆ ಕತೆಯೇ ಇಲ್ಲ. ಬಹುತೇಕ ಅಂಬರೀಶ್ ಅವರ ನೆರಳಿನಲ್ಲಿಯೇ ಅಭಿಷೇಕ್ ಗೂ ಕರ್ಣನ ರೂಪ ಕೊಟ್ಟು ಪ್ರೇಕ್ಷಕರನ್ನು ರಂಜಿಸಲು ಹೊರಟಿದ್ದಾರೆ ನಿರ್ದೇಶಕರು. ಅದು ಇಲ್ಲಿ ವರ್ಕೌಟ್ ಆಗಿಲ್ಲ. ನಟನೆ ಮತ್ತು ಆಕ್ಷನ್ ಗಳಲ್ಲಿ ಅವರ ಫರ್ ಫಾರ್ಮೆನ್ಸ್ ತುಂಬಾ ಸಪ್ಪೆ. ಸಾಧುಕೋಕಿಲ ಕಳಪೆ ಹಾಸ್ಯ ನಗಿಸುವುದಕ್ಕಿಂತ ಕಿರಿ ಕಿರಿ ಎನಿಸುತ್ತದೆ. ಚಿತ್ರ ಟೇಕಾಫ್ ಆಗುವುದು ದರ್ಶನ್ ಹಾಗೂ ನಿರೂಪ್ ಎಂಟ್ರಿ ಮೂಲಕ. ಆದರೆ, ರಚಿತಾ ರಾಮ್ ಅಲ್ಲಿ ಯಾಕೆ ಬಂದರು ಎನ್ನುವುದೇ ಗೊತ್ತಾಗಲ್ಲ.'' - ದೇಶಾದ್ರಿ ಹೊಸ್ಮನೆ

ಹಳೆ ಬಾಟಲಿಗೆ ಹೊಸ ಮುಚ್ಚಳ - ಪ್ರಜಾವಾಣಿ

ಹಳೆ ಬಾಟಲಿಗೆ ಹೊಸ ಮುಚ್ಚಳ - ಪ್ರಜಾವಾಣಿ

''ಸಿಗರೇಟು, ಮದ್ಯ, ನಡುನಡುವೆ ಮಳೆಯಲ್ಲಿ ಮಿಂದೇಳುವ ಅಮರ್ ಪ್ರೇಯಸಿ ಬಾಬಿ. ಆತ ಕೊಡುಗೈ ದಾನಿ. ಈಗುಣವೇ ಆತನ ಬದುಕಿನ ಮುಳುವಾಗುತ್ತದೆ. 'ಅಮರ್' ಎನ್ನುವ ಟೈಟಲ್ ಗೆ ತಕ್ಕಂತೆ ಕಥೆ ಹೊಸೆಯುವುದರಲ್ಲಿ ಆಗಿರುವ ಆಧ್ವಾನಗಳು ಚಿತ್ರದುದ್ದಕ್ಕೂ ಎದ್ದು ಕಾಣುತ್ತವೆ. ಗಟ್ಟಿಯಾದ ಕಥೆ ಇಲ್ಲದೆ ಮನಸ್ಸು ಕೆರಳಿಸುವ ರಂಜನೆ ಇಲ್ಲದೆ ಚಿತ್ರಕಥೆ ಸೊರಗಿದೆ. ಸತ್ಯ ಹೆಗಡೆ ಛಾಯಾಗ್ರಹಣ ಚಿತ್ರದಲ್ಲಿ ಎದ್ದುಕಾಣುವ ಗುಣಾತ್ಮಕ ಅಂಶ. ಅರ್ಜುನ್ ಜನ್ಯ ಸಂಗೀತ ಸಂಯೋಜನೆಯ ಒಂದು ಹಾಡು ಗುನುಗುವಂತಿದೆ.'' - ಕೆ ಎಚ್ ಓವಳೇಶ್

ಅಮರ್ ವಿಮರ್ಶೆ - ಟೈಮ್ಸ್ ಆಫ್ ಇಂಡಿಯಾ

ಅಮರ್ ವಿಮರ್ಶೆ - ಟೈಮ್ಸ್ ಆಫ್ ಇಂಡಿಯಾ

The film has everything going for it technically, stunning visuals, great locations and some good songs. But, the narrative seems a bit wobbly and it could seem a little longer than what the actual duration of the film is. Also, there is an unnecessary comic track that could have easily been done away with.

Abishek Ambareesh has good screen presence. Tanya Hope follows up with another good outing in Sandalwood. the ones that take the cake are Sathya Hegde and Arjun Janya for their work. This can be a one-time watch for those who like their staple commercial romantic fare. And for the Ambareesh fans, there is a special, heartwarming treat if you wait till the end. - Sunayana Suresh

English summary
Actor Abhishek Ambareesh's 'Amar' kannada movie critics review. Abhishek debut movie is a love story and it have mass dialogues and scenes. The songs are good.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more