twitter
    For Quick Alerts
    ALLOW NOTIFICATIONS  
    For Daily Alerts

    choked movie review: ನೋಟು ರದ್ಧತಿ ವ್ರಣಕ್ಕೆ ಅನುರಾಗ್ ಕಶ್ಯಪ್ ಕನ್ನಡಿ

    |

    ನೋಟು ರದ್ಧತಿಯ ದೂರಗಾಮಿ ಪರಿಣಾಮಗಳು, ಸರ್ಕಾರ ತೋರಿದ ಬಣ್ಣದ ಅಂಕಿ-ಅಂಶಗಳು, ಕನಸುಗಳು ಏನೇ ಇರಲಿ, ನೋಟು ರದ್ಧತಿ ಆದ ಸಮಯದಲ್ಲಿ ಬಡ ಹಾಗೂ ಮಧ್ಯಮ ವರ್ಗ ಕಷ್ಟ ಅನುಭವಿಸಿದ್ದು ಸುಳ್ಳಲ್ಲ.

    ನಾಲ್ಕು ವರ್ಷಗಳ ಹಿಂದಾಗಿದ್ದ ನೋಟು ರದ್ಧತಿ ಗಾಯವನ್ನು ಮತ್ತೆ ಸಣ್ಣಗೆ ಕೆರೆಯುವ ಪ್ರಯತ್ನ ಮಾಡಿದ್ದಾರೆ ನಿರ್ದೇಶಕ ಅನುರಾಗ್ ಕಶ್ಯಪ್ ತಮ್ಮ 'ಚೋಕ್ಡ್; ಪೈಸಾ ಬೋಲ್ತಾ ಹೈ' ಸಿನಿಮಾದ ಮೂಲಕ.

    Ponmagal Vanthal Review: ಗಂಭೀರ ವಿಷಯಕ್ಕೆ ಕುತೂಹಲಕಾರಿ ಕತೆಯ ಚೌಕಟ್ಟುPonmagal Vanthal Review: ಗಂಭೀರ ವಿಷಯಕ್ಕೆ ಕುತೂಹಲಕಾರಿ ಕತೆಯ ಚೌಕಟ್ಟು

    ಕತೆ ಹೇಳಲು ಅನುರಾಗ್ ಕಶ್ಯಪ್ ಮಧ್ಯಮ ವರ್ಗದ ಕುಟುಂಬವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಒಂದು ವಠಾರದಲ್ಲಿ ಕೆಲವೇ ಕುಟುಂಬಗಳ ನಡುವೆ ಕತೆಯೊಂದನ್ನು ಹುಟ್ಟಿಸಿ ಕೊನೆಗೆ ನೋಟ್‌ ಬ್ಯಾನ್ ನಿರ್ಧಾರವನ್ನು ಟೀಕೆಗೊಳಪಡಿಸಿದ್ದಾರೆ.

     Amazon Prime Choked Hindi Movie Review

    ಈ ಸಿನಿಮಾ, ನೋಟು ರದ್ಧತಿಯ ನಿರ್ಣಯವನ್ನು, ಅದರ ಅಂತಿಮ ಫಲಿತಾಂಶವನ್ನು, ದೇಶದ ಮೇಲೆ ಅದು ಬೀರಿದ ಪರಿಣಾಮವನ್ನು ಪೂರ್ಣವಾಗಿ ನಿಕಶಕ್ಕೆ ಒಳಪಡಿಸುವುದಿಲ್ಲ. ಬದಲಿಗೆ ಸಿನಿಮಾದ ಕತೆಯ ಒಂದು ಭಾಗವಾಗಿಯಷ್ಟೆ ಬಂದು ನೋಟು ರದ್ಧತಿ ಬಂದು ಹೋಗುತ್ತದೆ. ಅದೇ ಸಿನಿಮಾ ಆಗಿಲ್ಲ ಆದರೆ ಸಿನಿಮಾದ ಕತೆಯ ಮುಖ್ಯ ಭಾಗ ನೋಟು ರದ್ಧತಿಯೇ.

    ಅಂಗ್ರೇಜಿ ಮೀಡಿಯಂ: ಇರ್ಫಾನ್ ಅಭಿನಯ, ಮನಮುಟ್ಟುವ ''ಸ್ಪೀಚ್''ಅಂಗ್ರೇಜಿ ಮೀಡಿಯಂ: ಇರ್ಫಾನ್ ಅಭಿನಯ, ಮನಮುಟ್ಟುವ ''ಸ್ಪೀಚ್''

    ಸಿನಿಮಾದಲ್ಲಿ ಕೇವಲ ನೋಟ್‌ ಬ್ಯಾನ್ ಕುರಿತ ಟೀಕೆ ಮಾತ್ರವೇ ಇದೆ ಎನ್ನುವಂತಿಲ್ಲ. ಮಧ್ಯಮವರ್ಗದ ಹಣಕಾಸಿನ ಸಮಸ್ಯೆ, ಅಪನಂಬಿಕೆ, ಪ್ರೀತಿ, ಜುಗ್ಗತನ, ಕನಸು ಕೊಂದು ಬದುಕುವ ಅಸಹಾಯಕತೆ ಎಲ್ಲವೂ ಮಿಳಿತವಾಗಿದೆ.

     Amazon Prime Choked Hindi Movie Review

    ಗಾಯಕಿಯಾಗುವ ದೊಡ್ಡ ಕನಸನ್ನು ಕೊಂದು ಬ್ಯಾಂಕ್ ಉದ್ಯೋಗಿಯಾಗಿ ತನ್ನ ಹಿಡಿ ಸಂಬಳವನ್ನು ಶಪಿಸುತ್ತಾ ಬದುಕು ದೂಡುತ್ತಿರುವ ಮಹಿಳೆ ಮತ್ತು ಆಕೆಯ ನಿರುದ್ಯೋಗಿ ಗಂಡನ ಸುತ್ತಾ ಕತೆ ಸುತ್ತುವರಿದಿದೆ. ಇದಕ್ಕೆ ಪೂರಕವಾಗಿ ನೆರೆ-ಹೊರೆಯ ಪಾತ್ರಗಳು ಇವೆ.

    ನಾ ನೋಡಿದ ಸಿನಿಮಾ ಶಿವಾಜಿ ಸುರತ್ಕಲ್: ಜೀ.. ನನ್ನ ಮದುವೆ ಆಗ್ತೀಯಾ..ನಾ ನೋಡಿದ ಸಿನಿಮಾ ಶಿವಾಜಿ ಸುರತ್ಕಲ್: ಜೀ.. ನನ್ನ ಮದುವೆ ಆಗ್ತೀಯಾ..

    ಅತೃಪ್ತಿಯ ಬದುಕು ಬದುಕುತ್ತಿರುವ ಗೃಹಿಣಿ ಅಚಾನಕ್ಕಾಗಿ ದೊಡ್ಡ ಮೊತ್ತದ ಹಣ ದೊರಕುತ್ತದೆ. ಒಂದು ರಾತ್ರಿ ಇದ್ದಕ್ಕಿದ್ದಂತೆ ಅಡುಗೆ ಮನೆಯ ಪಾತ್ರೆ ತೊಳೆಯುವ ಸಿಂಕ್‌ನ ಅಡಿಯಿಂದ ಕೊಳಚೆ ನೀರಿನ ಜೊತೆಗೆ ನೋಟಿನ ಕಂತೆಗಳು ತೇಲಿ ಬರುತ್ತವೆ!

     Amazon Prime Choked Hindi Movie Review

    ಹಣ ತೇಲಿ ಬರಲು ಕಾರಣವೇನು, ಹಣ ಏನಾಗುತ್ತದೆ? ಹಣ ಎಲ್ಲಿಂದ ತೇಲಿ ಬಂತು ಇನ್ನಿತರೆ ವಿಷಯಗಳನ್ನು ತಿಳಿದುಕೊಳ್ಳಲು ಸಿನಿಮಾ ನೋಡಬೇಕು. ಅಮೆಜಾನ್‌ ಪ್ರೈಮ್‌ ನಲ್ಲಿ ಸಿನಿಮಾ ಬಿಡುಗಡೆ ಆಗಿದೆ.

    ಸಿನಿಮಾದಲ್ಲಿ ನಟಿಸಿರುವ ಎಲ್ಲರದ್ದೂ ಉತ್ತಮ ಅಭಿನಯವೇ, ಸಿನಿಮಾದ ಮುಖ್ಯ ಪಾತ್ರದಾರಿ ಸಯಾಮಿ ಖೇರ್ ಹಾಗೂ ನೆರೆಹೊರೆಯ ಶರಾವತಿ ತಾಯಿ ಪಾತ್ರ ನಿರ್ವಹಿಸಿರುವ ಅಮೃತಾ ಸುಭಾಶ್ ಅಭಿನಯ ಬಹುಸಮಯ ನೆನಪುಳಿಯುತ್ತದೆ. ಸಿನಿಮಾದ ಇತರೆ ತಾಂತ್ರಿಕ ಅಂಶಗಳು ಉತ್ತಮವಾಗಿಯೇ ಇವೆ.

    English summary
    Anurag Kashyap's Chocked hindi movie review. choked movie review
    Sunday, June 14, 2020, 10:25
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X