For Quick Alerts
  ALLOW NOTIFICATIONS  
  For Daily Alerts

  'ಚೆಹರೆ' ಸಿನಿಮಾ ಬಿಡುಗಡೆ: ಹೇಗಿದೆ ಸಿನಿಮಾ? ನೆಟ್ಟಿಗರ ಅಭಿಪ್ರಾಯ

  By ಫಿಲ್ಮಿಬೀಟ್ ಡೆಸ್ಕ್
  |

  ಅಮಿತಾಬ್ ಬಚ್ಚನ್, ಇಮ್ರಾನ್ ಹಶ್ಮಿ ಒಟ್ಟಿಗೆ ನಟಿಸಿರುವ 'ಚೆಹರೆ' ಸಿನಿಮಾ ಇಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಈ ಸಿನಿಮಾ ಹಲವು ಕಾರಣಕ್ಕೆ ದೇಶದ ಸಿನಿ ಪ್ರೇಮಿಗಳ ಗಮನ ಸೆಳೆದಿದೆ.

  ಕೋವಿಡ್‌ನ ಕಠಿಣ ಕಾಲದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುವ ಮೂಲಕ ಧೈರ್ಯ ಪ್ರದರ್ಶಿಸಿರುವ ಸಿನಿಮಾ ಆಗಿರುವ ಜೊತೆಗೆ, ಇಮ್ರಾನ್ ಹಷ್ಮಿ ಹಾಗೂ ಅಮಿತಾಬ್ ಬಚ್ಚನ್ ಮೊದಲ ಬಾರಿಗೆ ಒಟ್ಟಿಗೆ ನಟಿಸುತ್ತಿರುವ ಸಿನಿಮಾ ಸಹ ಇದು. ಅದು ಮಾತ್ರವೇ ಅಲ್ಲದೆ ಸಿನಿಮಾದ ಕತೆಯ ಮೇಲೆ ಬಹು ನಂಬಿಕೆ ಇಟ್ಟು ಸಂಭಾವನೆಯೇ ಪಡೆಯದೆ ಅಮಿತಾಬ್ ಬಚ್ಚನ್ ಈ ಸಿನಿಮಾದಲ್ಲಿ ನಟಿಸಿರುವುದು ಸಹ ಸಿನಿಮಾದ ಮೇಲೆ ಕುತೂಹಲ ಹೆಚ್ಚಾಗಲು ಮತ್ತೊಂದು ಕಾರಣ.

  ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದ್ದಾಗ ಕುತೂಹಲ ಮೂಡಿಸಿದ್ದ ಈ ಸಿನಿಮಾ ಇಂದು ದೇಶದ ಹಲವು ರಾಜ್ಯಗಳಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಸಿನಿಮಾ ನೋಡಿದ ನೆಟ್ಟಿಗರು, ಯೂಟ್ಯೂಬ್ ವಿಮರ್ಶಕರು ಸಿನಿಮಾದ ಬಗ್ಗೆ ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

  ತರಣ್ ಆದರ್ಶ್ ಎಷ್ಟು ರೇಟಿಂಗ್ ಕೊಟ್ಟರು

  ತರಣ್ ಆದರ್ಶ್ ಎಷ್ಟು ರೇಟಿಂಗ್ ಕೊಟ್ಟರು

  ಬಾಲಿವುಡ್ ಹಂಗಾಮಾದ ತರಣ್ ಆದರ್ಶ್ 'ಚೆಹರೆ' ಸಿನಿಮಾವನ್ನು ಆಸಕ್ತಿದಾಯಕ, ನೋಡಬಹುದಾದ ಸಿನಿಮಾ ಎಂದು ಬಣ್ಣಿಸಿದ್ದಾರೆ. ಹಿಡಿದಿಟ್ಟುಕೊಳ್ಳುವ ಚಿತ್ರಕತೆಯ ಜೊತೆಗೆ ಅದ್ಭುತ ನಟನೆ ಸೇರಿಕೊಂಡು 'ಚೆಹರೆ'ಯನ್ನು ನೋಡಬಹುದಾದ ಸಿನಿಮಾ ಮಾಡಿದೆ. ಈ ಹಿಂದೆ ಕಾಮಿಡಿ ಸಿನಿಮಾಗಳನ್ನು ಮಾಡಿದ್ದ ರೂಮಿ ಜೆಫ್ರಿ ಥ್ರಿಲ್ಲರ್ ಸಿನಿಮಾದಿಂದಲೂ ಗಮನ ಸೆಳೆದಿದ್ದಾರೆ. ಸಿನಿಮಾಕ್ಕೆ 3.5 ರೇಟಿಂಗ್ ಕೊಡುತ್ತೇನೆ ಎಂದಿದ್ದಾರೆ.

  ''ಕುರ್ಚಿಗೆ ಅಂಟಿಕೊಂಡು ಕೂರುವಂತಿದೆ ಸಿನಿಮಾ''

  ''ಕುರ್ಚಿಗೆ ಅಂಟಿಕೊಂಡು ಕೂರುವಂತಿದೆ ಸಿನಿಮಾ''

  'ಚೆಹರೆ ಅದ್ಭುತವಾದ ಸಿನಿಮಾ. ಸಿನಿಮಾದಿಂದ ಪ್ರಾರಂಭದಿಂದ ಅಂತ್ಯದ ವರೆಗೆ ಕುರ್ಚಿ ಮೇಲೆ ಕುಳಿತು ಕದಲದಂತೆ ಪರದೆ ನೋಡುವಂತೆ ಮಾಡುತ್ತದೆ. ಎಲ್ಲರೂ ಅದ್ಭುತವಾಗಿ ನಟಿಸಿದ್ದಾರೆ. ಅಮಿತಾಬ್ ಬಚ್ಚನ್ ನಟನೆಯಂತೂ ಅತ್ಯದ್ಭುತ. 'ಪಿಂಕ್‌' ನಂತರ ಬಚ್ಚನ್‌ರ ಅತ್ಯುತ್ತಮ ನಟನೆಯ ಸಿನಿಮಾ ಇದು'' ಎಂದಿದ್ದಾರೆ ಪಂಕಜ್.

  ಸಿನಿಮಾ ಚೆನ್ನಾಗಿಲ್ಲ ಎಂದ ರೋಹಿತ್ ಜೈಸ್ವಾಲ್

  ಸಿನಿಮಾ ಚೆನ್ನಾಗಿಲ್ಲ ಎಂದ ರೋಹಿತ್ ಜೈಸ್ವಾಲ್

  ರೋಹಿತ್ ಜೈಸ್ವಾಲ್ ಟ್ವೀಟ್ ಮಾಡಿ, ''ಚೆಹರೆ' ಸಿನಿಮಾ ಕಳಪೆಯಾಗಿದೆ. ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆ ಇತ್ತು. ಸಿನಿಮಾದ ಕತೆ ಬಹಳ ಸ್ಲೋ, ಅತಿ ನಾಟಕೀಯತೆ, ಕಳಪೆ ಕತೆ, ನಿಧಾನಗತಿಯ ನಿರೂಪಣೆ, ಊಹಿಸಬಹುದಾದ ತಿರುವುಗಳಿಂದ ಸಿನಿಮಾ ಕೂಡಿದೆ. ಸಿನಿಮಾವನ್ನು ಅಮಿತಾಬ್ ಬಚ್ಚನ್ ನಟನೆ ಮತ್ತು ಇಮ್ರಾನ್ ಹಷ್ಮಿ ನಟನೆ ಅಷ್ಟೆ ಕಾಪಾಡಬಲ್ಲದು ಎಂದಿದ್ದಾರೆ.

  ಮರಾಠಿ ಸಿನಿಮಾದ ರೀಮೇಕ್!?

  ಮರಾಠಿ ಸಿನಿಮಾದ ರೀಮೇಕ್!?

  ಮತ್ತೊಬ್ಬರು ಟ್ವೀಟ್ ಮಾಡಿ, 'ಚೆಹರೆ' ಸಿನಿಮಾ ಮರಾಠಿಯ 'ಅನುಸಂಧಾನ್' ಸಿನಿಮಾದ ರೀಮೇಕ್ ಇದು ಎಂದಿದ್ದಾರೆ. ಮತ್ತೊಬ್ಬರು ಈ ಸಿನಿಮಾವು ಫೆಡ್ರಿಕ್ ಡರನ್‌ಮ್ಯಾಟ್‌ ಬರೆದಿರುವ 'ದಿ ಡೇಂಜರಸ್ ಗೇಮ್‌' ಕಾದಂಬರಿಯ ಸಿನಿಮಾ ಅಳವಡಿಕೆ ಎಂದಿದ್ದಾರೆ. ಮರಾಠಿಯ 'ಅನುಸಂಧಾನ್' ಸಿನಿಮಾ ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ.

  ಭಿನ್ನ ಕತೆ ಹೊಂದಿರುವ 'ಚೆಹರೆ'

  ಭಿನ್ನ ಕತೆ ಹೊಂದಿರುವ 'ಚೆಹರೆ'

  'ಚೆಹರೆ' ಸಿನಿಮಾವು ಭಿನ್ನವಾದ ಕತೆಯನ್ನು ಹೊಂದಿದೆ. ಅಮಿತಾಬ್ ಬಚ್ಚನ್ ಹಾಗೂ ಅವರ ಕೆಲವು ಗೆಳೆಯ ಇರುವ ಮನೆಗೆ ಅಚಾನಕ್ಕಾಗಿ ಇಮ್ರಾನ್ ಹಷ್ಮಿ ಬರುತ್ತಾರೆ. ಮನೆಯಲ್ಲಿ ಸಮಯ ಕಳೆಯಲು 'ನ್ಯಾಯದ ಆಟ' ಆಡುತ್ತಾರೆ. ನಿಜ ಜೀವನಕ್ಕೆ ಸಂಬಂಧಿಸಿದ ಆಟವದು. ತಪ್ಪು-ಒಪ್ಪುಗಳನ್ನು ಗುರುತಿಸುವ ಆಟವದು. ಆ ಆಟದಲ್ಲಿ ಹಿಮ್ರಾನ್ ಹಷ್ಮಿ ಸ್ಪರ್ಧಿಯಾಗುತ್ತಾರೆ. ಇಮ್ರಾನ್ ಜೀವನದಲ್ಲಿ ಮಾಡಿರುವ ಸರಿ-ತಪ್ಪುಗಳನ್ನು ಗುರುತಿಸಿ ಅದಕ್ಕೆ ಶಿಕ್ಷೆ ನೀಡುವ ಆಟವದು. ಆ ಆಟದಿಂದ ಇಮ್ರಾನ್ ಹಷ್ಮಿ ಹೇಗೆ ತಪ್ಪಿಸಿಕೊಳ್ಳುತ್ತಾರೆ ಎಂಬುದು ಕತೆ. ಸಿನಿಮಾವನ್ನು ರೂಮಿ ಜಫ್ರಿ ನಿರ್ದೇಶನ ಮಾಡಿದ್ದಾರೆ. ನಿರ್ಮಾಣ ಮಾಡಿರುವುದು ಆನಂದ್ ಪಂಡಿತ್.

  English summary
  Amitabh Bachchan and Imran Hashmi Starrer Chehre movie twitter review. Netizen showing mixed opinions about the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X