For Quick Alerts
  ALLOW NOTIFICATIONS  
  For Daily Alerts

  'ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ವಿಮರ್ಶೆ: ಅನಂತ್ ನಾಗ್ ಸೂಪರ್ರು.!

  |

  ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ವೃದ್ಧಾಪ್ಯದಲ್ಲೂ ಕೆಲಸ ಮಾಡಲು ಮುಂದಾಗುವ ಹಿರಿಜೀವದ ಕಷ್ಟ-ನಷ್ಟ, ಒಂಟಿ ಜೀವನದ ಸಂಕಷ್ಟ, ಒಡೆದ ಸಂಸಾರದ ದುಷ್ಪರಿಣಾಮ, ಲಿವ್-ಇನ್ ರಿಲೇಶನ್ ಶಿಪ್ ನ ಸಾಧಕಬಾಧಕ, ದುಡಿಯುವ ಮಹಿಳೆಯ ಮನಸ್ಸಿನೊಳಗಿನ ತೊಳಲಾಟ... ಇವೆಲ್ಲವನ್ನೂ ಸೂಕ್ಷ್ಮವಾಗಿ ಕಟ್ಟಿಕೊಡುವ ಸಿನಿಮಾ 'ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ'.

  Rating:
  3.0/5
  Star Cast: ಅನಂತ್ ನಾಗ್, ರಾಧಿಕಾ ಚೇತನ್
  Director: ಕೆ.ನರೇಂದ್ರ ಬಾಬು

  ಕಥಾಹಂದರ

  ಕಥಾಹಂದರ

  ಹೆಂಡತಿಯನ್ನು ಕಳೆದುಕೊಂಡು ಮಕ್ಕಳಿಲ್ಲದೇ ಒಂಟಿ ಜೀವನ ಸಾಗಿಸುತ್ತಿರುವ ವೃದ್ಧ ಶ್ಯಾಮ್ ಪ್ರಸಾದ್ (ಅನಂತ್ ನಾಗ್). ಅದಾಗಲೇ ನಿವೃತ್ತಿಗೊಂಡಿರುವ ಶ್ಯಾಮ್ ಪ್ರಸಾದ್ ಗೆ 'ಕೂತು ತಿಂದರೆ ಕುಡಿಕೆ ಹೊನ್ನೂ ಸಾಲದು' ಎಂಬಂಥ ಪರಿಸ್ಥಿತಿ. ಪೆನ್ಷನ್ ಇಲ್ಲದೇ ಜೀವನ ನಡೆಸುವುದು ಕಷ್ಟ ಎಂಬ ಅರಿವಿಗೆ ಬಂದ್ಮೇಲೆ, ಮತ್ತೆ 'ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ದುಡಿಯಲು ಮನಸ್ಸು ಮಾಡುವ ಶ್ಯಾಮ್ ಪ್ರಸಾದ್ ಗೆ ಕೆಲಸ ಕೊಡುವವರು ಶ್ರಾವ್ಯ (ರಾಧಿಕಾ ಚೇತನ್) ಒಡೆತನದ ಕಂಪನಿ.

  ಸ್ಫೂರ್ತಿ ತುಂಬುವ ಶ್ಯಾಮ್ ಪ್ರಸಾದ್

  ಸ್ಫೂರ್ತಿ ತುಂಬುವ ಶ್ಯಾಮ್ ಪ್ರಸಾದ್

  ಯುವ ತಂಡ ಒಡೆತನದ ಕಂಪನಿ ಸೇರುವ ಶ್ಯಾಮ್ ಪ್ರಸಾದ್ ಅಲ್ಲಿನ ವಾತಾವರಣಕ್ಕೆ ಹೊಂದಾಣಿಕೆ ಆಗುತ್ತಾರಾ, ಕಂಪನಿ ಬಾಸ್ ಶ್ರಾವ್ಯಗೆ ಶ್ಯಾಮ್ ಪ್ರಸಾದ್ ಹೇಗೆಲ್ಲ ಸ್ಫೂರ್ತಿ ಆಗುತ್ತಾರೆ ಎಂಬುದು ಬಾಕಿ ಕಥೆ. ಅದನ್ನ ನೀವು ಚಿತ್ರಮಂದಿರದಲ್ಲಿಯೇ ನೋಡಿ...

  'ಸ್ಫೂರ್ತಿ' ಪಡೆದ ಸಿನಿಮಾ.?

  'ಸ್ಫೂರ್ತಿ' ಪಡೆದ ಸಿನಿಮಾ.?

  'ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ಚಿತ್ರದ ಕಥಾಹಂದರ, ಪಾತ್ರಗಳು ಹಾಗೂ ಕೆಲ ಸೀನ್ ಗಳು ಹಾಲಿವುಡ್ ನ 'ದಿ ಇನ್ಟರ್ನ್' ಚಿತ್ರದಂತೆಯೇ ಇದೆ. ಹಾಗಾದ್ರೆ, ಈ ಸಿನಿಮಾ 'ದಿ ಇನ್ಟರ್ನ್' ಚಿತ್ರದಿಂದ ಸ್ಫೂರ್ತಿ ಪಡೆದಿದೆ ಎನ್ನಬಹುದೇ.?

  ಅನಂತ್ ನಾಗ್ ಸೂಪರ್ರು.!

  ಅನಂತ್ ನಾಗ್ ಸೂಪರ್ರು.!

  'ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ಚಿತ್ರದ ಬಹುದೊಡ್ಡ ಪ್ಲಸ್ ಪಾಯಿಂಟ್ ಅಂದ್ರೆ ಅದು ಅನಂತ್ ನಾಗ್. ವೃದ್ಧನಾಗಿ ಅನಂತ್ ನಾಗ್ ನಟನೆ ನೈಜವಾಗಿದೆ. ಚಿತ್ರದಲ್ಲಿ ಕೆಲ ಸನ್ನಿವೇಶಗಳಲ್ಲಂತೂ ಪ್ರೇಕ್ಷಕರ ಕಣ್ಣಾಲಿಗಳನ್ನು ಒದ್ದೆ ಮಾಡಿಸುತ್ತಾರೆ. ಅಷ್ಟರಮಟ್ಟಿಗೆ ಅನಂತ್ ನಾಗ್ ನಟನೆ ಪರಿಣಾಮಕಾರಿ ಆಗಿದೆ.

  ರಾಧಿಕಾ ಚೇತನ್ ಕೂಡ ಕಮ್ಮಿ ಏನಿಲ್ಲ.!

  ರಾಧಿಕಾ ಚೇತನ್ ಕೂಡ ಕಮ್ಮಿ ಏನಿಲ್ಲ.!

  ಆನ್ ಲೈನ್ ಕಂಪನಿಯ ಒಡತಿಯಾಗಿ ರಾಧಿಕಾ ಚೇತನ್ ಅಭಿನಯ ಚೆನ್ನಾಗಿದೆ. ಅವರ ಸ್ಟೈಲ್ ಹಾಗೂ ಬಾಡಿ ಲ್ಯಾಂಗ್ವೇಜ್ ಮೆಚ್ಚುವಂಥದ್ದು. ಮನಸ್ಸಿಗೆ ಸರಿ ಎನಿಸಿದ್ದನ್ನ ಮಾಡುವ ದಿಟ್ಟ ಮಹಿಳೆಯಾಗಿ ರಾಧಿಕಾ ಚೇತನ್ ಇಷ್ಟ ಆಗುತ್ತಾರೆ.

  ಉತ್ತಮ ಸಂದೇಶ ಸಾರುವ ಸಿನಿಮಾ

  ಉತ್ತಮ ಸಂದೇಶ ಸಾರುವ ಸಿನಿಮಾ

  ಲಿವ್-ಇನ್ ರಿಲೇಶನ್ ಶಿಪ್ ಮೇಲೆ ಒಲವು ತೋರುತ್ತಿರುವ ಈಗಿನ ಯುವ ಜನಾಂಗಕ್ಕೆ 'ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ಸಿನಿಮಾದಲ್ಲಿ ಒಂದೊಳ್ಳೆ ಸಂದೇಶ ಇದೆ. ಜನರೇಷನ್ ಗ್ಯಾಪ್ ಅಂತೆಲ್ಲ ಬೊಬ್ಬೆ ಹೊಡೆಯುವವರಿಗೂ ಈ ಚಿತ್ರದಲ್ಲಿ ಉತ್ತಮ ಮೆಸೇಜ್ ಇದೆ.

  ಫೈನಲ್ ಸ್ಟೇಟ್ಮೆಂಟ್

  ಫೈನಲ್ ಸ್ಟೇಟ್ಮೆಂಟ್

  ಫ್ಯಾಮಿಲಿ ಆಡಿಯನ್ಸ್ ಗೆ 'ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ' ಹೇಳಿ ಮಾಡಿಸಿದ ಚಿತ್ರ. ಇಡೀ ಕುಟುಂಬ ಕೂತು ಈ ಚಿತ್ರವನ್ನ ಒಮ್ಮೆ ನೋಡಬಹುದು.

  English summary
  Read Kannada Actor Anant Nag and Radhika Chethan starrer Kannada Movie 'Hottegagi Genu Battegagi' review. '

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X