For Quick Alerts
ALLOW NOTIFICATIONS  
For Daily Alerts

'ಗೋಧಿ ಬಣ್ಣ' ವಿಮರ್ಶೆ: ಅಪ್ಪ-ಮಗನ ಅ'ಸಾಧಾರಣ' ಭಾವ-ಬಂಧ

|

ಸಾಮಾನ್ಯವಾಗಿ ಹೆಣ್ಮಕ್ಕಳಿಗೆ ತಂದೆ ಮೇಲೆ ಅಕ್ಕರೆ ಹೆಚ್ಚು. ತಂದೆಯರಿಗೂ ಗಂಡು ಮಕ್ಕಳಿಗಿಂತ ಪುತ್ರಿಯರ ಮೇಲೆ ಪ್ರೀತಿ ಜಾಸ್ತಿ. ತಂದೆ-ಮಗಳ 'ಸಾಧಾರಣ' ಸೆಂಟಿಮೆಂಟ್ ಕಥಾನಕವನ್ನು ಬದಿಗೆ ಸರಿಸಿರುವ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರ ಅಪ್ಪ-ಮಗನ ಅನುಬಂಧದ ಕಥೆ ಸಾರಿದೆ.

ಒಂದು ಕಮರ್ಶಿಯಲ್ ಚಿತ್ರಕ್ಕೆ ಬೇಕಾದ ಎಲ್ಲಾ ಅಂಶಗಳೂ ಹದವಾಗಿ ಬೆರೆತಿರುವ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನಿಮಾ ಹೆಂಗಳೆಯರ ಕಣ್ಣಾಲಿಗಳನ್ನು ಒದ್ದೆ ಮಾಡುವುದು ಖಾತ್ರಿ.

ಕೆಳಗಿರುವ ಫೋಟೋ ಸ್ಲೈಡ್ ಗಳಲ್ಲಿ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದ ಸಂಪೂರ್ಣ ವಿಮರ್ಶೆ ಓದಿರಿ.....

Rating:
4.0/5
Star Cast: ರಕ್ಷಿತ್ ಶೆಟ್ಟಿ, ಅನಂತ್ ನಾಗ್, ಶ್ರುತಿ ಹರಿಹರನ್, ಅಚ್ಯುತ್ ಕುಮಾರ್, ವಸಿಷ್ಠ ಸಿಂಹ
Director: ಹೇಮಂತ್ ರಾವ್

ಮಗನಿಗೆ ಅಪ್ಪನ ಕಂಡ್ರೆ ಅಷ್ಟಕಷ್ಟೆ.!

ಮಗನಿಗೆ ಅಪ್ಪನ ಕಂಡ್ರೆ ಅಷ್ಟಕಷ್ಟೆ.!

ಸದಾ ಕೆಲಸದಲ್ಲಿ ಮುಳುಗಿರುವ ಶಿವ (ರಕ್ಷಿತ್ ಶೆಟ್ಟಿ) ನಿಗೆ ಅಪ್ಪ-ಅಮ್ಮ, ಮನೆ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಕ್ಯಾನ್ಸರ್ ನಿಂದ ಅಮ್ಮ ತೀರಿಕೊಂಡ ಮೇಲಂತೂ ಅಪ್ಪ ವೆಂಕೋಬ ರಾವ್ (ಅನಂತ್ ನಾಗ್) ಕಂಡ್ರೆ ಮಗನಿಗೆ ನಿರ್ಲಕ್ಷ್ಯ.

ಅಪ್ಪನಿಗೆ ಮಾನಸಿಕ ಕಾಯಿಲೆ.!

ಅಪ್ಪನಿಗೆ ಮಾನಸಿಕ ಕಾಯಿಲೆ.!

ಕಾಲಚಕ್ರ ಉರುಳಿದಂತೆ ವೃದ್ಧಾಶ್ರಮದ ಪಾಲಾಗುವ ವೆಂಕೋಬ ರಾವ್ ಗೆ Alzheimer's ಎಂಬ ಮಾನಸಿಕ ಕಾಯಿಲೆ ಬೇರೆ. ಹಳೇ ನೆನಪುಗಳಲ್ಲೇ ಕಳೆದುಹೋಗಿರುವ ವೆಂಕೋಬ ರಾವ್ ಇದ್ದಕ್ಕಿದ್ದಂತೆ ನಾಪತ್ತೆ ಆಗುತ್ತಾರೆ. ಮಗ ಶಿವ ಹಾಗೂ ವೃದ್ಧಾಶ್ರಮದ ವೈದ್ಯೆ ಡಾ.ಸಹನಾ (ಶ್ರುತಿ ಹರಿಹರನ್) ಹುಡುಕಾಟ ಆರಂಭಿಸುತ್ತಾರೆ.

ಅಪ್ಪನ ಹುಡುಕಾಟದ ನಡುವೆ ಮಗನಿಗೆ ಜ್ಞಾನೋದಯ.!

ಅಪ್ಪನ ಹುಡುಕಾಟದ ನಡುವೆ ಮಗನಿಗೆ ಜ್ಞಾನೋದಯ.!

ಕೊಲೆಗಾರರ ಜೊತೆಗೆ ಕಳೆದು ಹೋಗಿರುವ ಅಪ್ಪನ ಹುಡುಕಾಟದ ನಡುವೆ ಅಪ್ಪನ ಪ್ರೀತಿ ಮಗನಿಗೆ ಅರಿವಾಗುವುದೇ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರ ಕಥೆಯ ಹೂರಣ.

ಆವರಿಸಿಕೊಳ್ಳುವ ಅನಂತ್ ನಾಗ್.!

ಆವರಿಸಿಕೊಳ್ಳುವ ಅನಂತ್ ನಾಗ್.!

'ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರ' ಅಸಾಧಾರಣ ಎನಿಸಲು ಏಕೈಕ ಕಾರಣ ಅನಂತ್ ನಾಗ್. ಅವರ ಅಮೋಘ ಅಭಿನಯ ವರ್ಣಿಸಲು ಸಾಧ್ಯವಿಲ್ಲ. ಮಾನಸಿಕ ರೋಗಿಯಾಗಿ ಅನಂತ್ ನಾಗ್ ನೀಡಿರುವ ಮುಗ್ಧ ಅಭಿನಯ ಕೆಲವೊಮ್ಮೆ ನಗು ತರಿಸಿದರೆ, ಹಲವು ಬಾರಿ ಕಣ್ಣಲ್ಲಿ ನೀರು ತರಿಸುತ್ತೆ.

ರಕ್ಷಿತ್ ಶೆಟ್ಟಿ ಅಭಿನಯ ಹೇಗಿದೆ?

ರಕ್ಷಿತ್ ಶೆಟ್ಟಿ ಅಭಿನಯ ಹೇಗಿದೆ?

ಮೊದಲು ಕೈತುಂಬ ಸಂಬಳ ದುಡಿಯುವ ದುರಹಂಕಾರಿಯಾಗಿ, ನಂತರ ಕಳೆದು ಹೋಗಿರುವ ಅಪ್ಪನ ಪ್ರೀತಿಯನ್ನು ಹಂಬಲಿಸುವ ಮಗನಾಗಿ ರಕ್ಷಿತ್ ಶೆಟ್ಟಿ ಅಭಿನಯ ಬೊಂಬಾಟ್. ಬದಲಾಗಿರುವ ಅವರ ಹೇರ್ ಸ್ಟೈಲ್ ಮಾತ್ರ ತೆರೆಮೇಲೆ ಚೆನ್ನಾಗಿ ಕಾಣಲ್ಲ.

ಸ್ಕ್ರೀನ್ ಮೇಲೆ 'ಸಹನೆ' ತೋರಿದ ಶ್ರುತಿ

ಸ್ಕ್ರೀನ್ ಮೇಲೆ 'ಸಹನೆ' ತೋರಿದ ಶ್ರುತಿ

ಡಾ.ಸಹನಾ ಪಾತ್ರ ನಿರ್ವಹಿಸಿರುವ ಶ್ರುತಿ ಹರಿಹರನ್ ಅಭಿನಯ ಅಚ್ಚುಕಟ್ಟಾಗಿದೆ.

ಉಳಿದವರು ಹೇಗೆ?

ಉಳಿದವರು ಹೇಗೆ?

ಅಪ್ಪಟ ಫ್ಯಾಮಿಲಿ ಮ್ಯಾನ್ ಆಗಿ ಅಚ್ಯುತ್ ಕುಮಾರ್, ಕೊಲೆಗಾರನಾಗಿ ವಸಿಷ್ಠ ಸಿಂಹ ಜಿದ್ದಿಗೆ ಬಿದ್ದಂತೆ ಅಭಿನಯಿಸಿದ್ದಾರೆ.

ಹಾಡುಗಳು ಅತಿಯಾಯ್ತು.!

ಹಾಡುಗಳು ಅತಿಯಾಯ್ತು.!

'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರಕಥೆಯನ್ನ ಹಾಡುಗಳ ಮೂಲಕವೇ ನಿರ್ದೇಶಕರು ಹೇಳಿದ್ದಾರೆ. ಸನ್ನಿವೇಶಕ್ಕೆ ತಕ್ಕ ಹಾಗೆ ಚರಣ್ ರಾಜ್ ಸಂಗೀತ ನೀಡಿರುವ ಹಾಡುಗಳಿದ್ದರೂ, ಅತಿಯಾದ ಹಾಡುಗಳ ಅಬ್ಬರದಲ್ಲಿ ಅಪ್ಪ-ಮಗನ ಭಾವನೆಗಳು ಮಂಕಾಗಿದೆ.

ಕಾಯಿಲೆ ತೀವ್ರತೆ ಬಗ್ಗೆ ಮಾಹಿತಿ ಇಲ್ಲ.!

ಕಾಯಿಲೆ ತೀವ್ರತೆ ಬಗ್ಗೆ ಮಾಹಿತಿ ಇಲ್ಲ.!

ಅನಂತ್ ನಾಗ್ ಗೆ Alzheimer's ಎಂಬ ಮಾನಸಿಕ ರೋಗ ಇದೆ ಎನ್ನುವುದು ಬಿಟ್ಟರೆ, ಆ ಕಾಯಿಲೆಯ ಮಾಹಿತಿ ಹಾಗೂ ತೀವ್ರತೆ ಬಗ್ಗೆ ಸಿನಿಮಾದಲ್ಲಿ ಉಲ್ಲೇಖವಿಲ್ಲ. ಸೆಂಟಿಮೆಂಟ್ ಗೆ ಹೆಚ್ಚು ಒತ್ತು ನೀಡಿರುವ ಈ ಚಿತ್ರದಲ್ಲಿ ವೈದ್ಯಕೀಯ ನೆಲೆಯಿಲ್ಲ.

ಸ್ವಲ್ಪ ಹೋಮ್ ವರ್ಕ್ ಮಾಡಬಹುದಿತ್ತು.!

ಸ್ವಲ್ಪ ಹೋಮ್ ವರ್ಕ್ ಮಾಡಬಹುದಿತ್ತು.!

Alzheimer's ಕಾಯಿಲೆ ಬಗ್ಗೆ ನಿರ್ದೇಶಕರು ಸ್ವಲ್ಪ ಹೋಮ್ ವರ್ಕ್ ಮಾಡಿದ್ರೆ, 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರಕಥೆ ಇನ್ನಷ್ಟು ಗಟ್ಟಿಯಾಗಿರುತ್ತಿತ್ತು. ವೈದ್ಯಕೀಯ ನೆಲೆಯಲ್ಲಿ ಪ್ರೇಕ್ಷಕರಿಗೆ ಅರಿವು (ಅರುಳು-ಮರಳು.?) ಮೂಡುತ್ತಿತ್ತು.

ನಿಧಾನಗತಿಯಲ್ಲಿ ಸಾಗುವ ಸಿನಿಮಾ

ನಿಧಾನಗತಿಯಲ್ಲಿ ಸಾಗುವ ಸಿನಿಮಾ

ಕೊಂಚ ನಿಧಾನಗತಿಯಲ್ಲಿ ಸಿನಿಮಾ ಸಾಗುತ್ತೆ. ಮಧ್ಯೆ ಮಧ್ಯೆ ಫ್ಲ್ಯಾಶ್ ಬ್ಯಾಕ್ ಫಾರ್ಮುಲಾಗೆ ನಿರ್ದೇಶಕರು ಮೊರೆ ಹೋಗಿದ್ದಾರೆ. ನಂದಕಿಶೋರ್ ಕ್ಯಾಮರಾ ವರ್ಕ್ ಓಕೆ. ಶ್ರೀಕಾಂತ್ ಶ್ರಾಫ್ ಸಂಕಲನ ಚುರುಕಾಗಿರಬೇಕಿತ್ತು.

ಚೊಚ್ಚಲ ಪ್ರಯತ್ನಕ್ಕೆ ಚಪ್ಪಾಳೆ ಬರಲೇಬೇಕು.!

ಚೊಚ್ಚಲ ಪ್ರಯತ್ನಕ್ಕೆ ಚಪ್ಪಾಳೆ ಬರಲೇಬೇಕು.!

'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಖಂಡಿತ ಒಂದೊಳ್ಳೆ ಪ್ರಯತ್ನ. ಚೊಚ್ಚಲ ಪ್ರಯತ್ನದಲ್ಲೇ ನಿರ್ದೇಶಕ ಹೇಮಂತ್ ರಾವ್ ಯಶಸ್ವಿ ಆಗಿದ್ದಾರೆ. ಭಾವನಾತ್ಮಕ ತಳಹದಿ ಮೇಲೆ ಸಾಮಾಜಿಕ ಸಂದೇಶ ಸಾರಿರುವ ನಿರ್ದೇಶಕರ ಪ್ರಯತ್ನಕ್ಕೊಮ್ಮೆ ಚಪ್ಪಾಳೆ ಹೊಡಿಯಲೇಬೇಕು.

ಫೈನಲ್ ಸ್ಟೇಟ್ ಮೆಂಟ್

ಫೈನಲ್ ಸ್ಟೇಟ್ ಮೆಂಟ್

ವಯಸ್ಸಾದ ತಂದೆ-ತಾಯಿಯರನ್ನ ವೃದ್ಧಾಶ್ರಮಕ್ಕೆ ದೂಡುವ ಇಂದಿನ ಯುವ ಪೀಳಿಗೆ ಕಡ್ಡಾಯವಾಗಿ ನೋಡಲೇಬೇಕಾದ ಸಿನಿಮಾ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು'. ತಂದೆ-ತಾಯಿಯ ಮೇಲೆ ಪ್ರೀತಿ/ಕೋಪ ಇರುವ ಎಲ್ಲಾ ಮಕ್ಕಳೂ ಈ ಚಿತ್ರವನ್ನ ಒಮ್ಮೆ ನೋಡಿ. ಮಿಸ್ ಮಾಡ್ಬೇಡಿ.

ವಿಡಿಯೋ ನೋಡಿ....

ವಿಡಿಯೋ ನೋಡಿ....

'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದ ಫಸ್ಟ್ ಡೇ ಫಸ್ಟ್ ಶೋ ನೋಡಿದ ಪ್ರೇಕ್ಷಕರು ಪ್ರತಿಕ್ರಿಯೆ ನೀಡಿರುವ ವಿಡಿಯೋ ಇಲ್ಲಿದೆ ನೋಡಿ...

English summary
Kannada Actor Anant Nag starrer 'Godhi Banna Sadharana Mykattu' movie has hit the screens today (June 3rd). Anant Nag has given his lifetime best performance in the movie which stars Rakshit Shetty. Actress Sruthi Hariharan looks pleasant on screen.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more