ವಿಮರ್ಶೆ : ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?

'ಅನಂತು v/s ನುಸ್ರತ್' ಒಂದು ಪ್ರೇಮಕಥೆ ಸಿನಿಮಾ. ಆದರೆ, ಇದು ಬರೀ ಪ್ರೇಮಕತೆಯಲ್ಲ ಬ್ರಾಹ್ಮಣ ಹುಡುಗ ಮತ್ತು ಮುಸ್ಲಿಂ ಹುಡುಗಿ ನಡುವಿನ ಅಪರೂಪದ ಪ್ರೀತಿಯ ಕಥೆ. ಹಾಗೆಂದ ಮಾತ್ರಕ್ಕೆ ಇದೊಂದು ಧರ್ಮ ಯುದ್ಧವಲ್ಲ, ಒಂದು ಸರಳ ಪ್ರೇಮ ಯುದ್ಧ. ಕುವೆಂಪು ಅವರ ''ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?'' ಎಂಬ ಸಂದೇಶವನ್ನ ಈ ಸಿನಿಮಾ ಹೇಳುತ್ತಿದೆ.

ಬ್ರಾಹ್ಮಣ ಹುಡುಗ ಅನಂತು - ಮುಸ್ಲಿಂ ಹುಡುಗಿ ನುಸ್ರತ್

ಬ್ರಾಹ್ಮಣ ಹುಡುಗ ಅನಂತು - ಮುಸ್ಲಿಂ ಹುಡುಗಿ ನುಸ್ರತ್

ಚಿತ್ರ ಶುರು ಆಗುವುದೇ ಹಿಂದೂ ಮತ್ತು ಮುಸ್ಲಿಂ ಧರ್ಮದ ಆಚರಣೆಗಳ ಮೂಲಕ. ಒಂದು ಕಡೆ ಪೂಜೆಯ ಪ್ರಾರ್ಥನೆ ಮತ್ತೊಂದು ಕಡೆ ನಮಾಜ್ ನೊಂದಿಗೆ ಸಿನಿಮಾದ ಕಥೆ ಶುರುವಾಗುತ್ತದೆ. ಮುಂದೆ ಮುಸ್ಲಿಂ ಹುಡುಗಿ ನುಸ್ರತ್ ಮೇಲೆ ಬ್ರಾಹ್ಮಣ ಹುಡುಗ ಅನಂತುಗೆ ಪ್ರೀತಿಯಾಗುತ್ತದೆ. ಆಚಾರ ವಿಚಾರವೇ ದೊಡ್ಡದು ಎನ್ನುವ ಅಪ್ಪ ಅಮ್ಮನ ಮೀರಿ ಅನಂತು ಪ್ರೀತಿ ಗೆಲ್ಲುತ್ತದೆಯೇ ಎನ್ನುವುದು ಚಿತ್ರದ ಕಥೆಯ ಕುತೂಹಲಕಾರಿ ಅಂಶ.

ಏಳು ವರ್ಷಗಳ ನಂತರ

ಏಳು ವರ್ಷಗಳ ನಂತರ

ಏಳು ವರ್ಷದ ಹಿಂದೆ ಸ್ಟೂಡೆಂಡ್ ಕ್ಯಾಂಪ್ ನಲ್ಲಿ ನೋಡಿದ ನುಸ್ರತ್ ಮೇಲೆ ಅನಂತುಗೆ ಮನಸಾಗುತ್ತದೆ. ಆಕೆಗಾಗಿ ಏಳು ವರ್ಷಗಳಿಂದ ಕಾಯುತ್ತಿದ್ದ ಅನಂತು ಎಲ್ಲ ಹುಡುಗಿಯರನ್ನ ರಿಜೆಕ್ಟ್ ಮಾಡುತ್ತಿರುತ್ತಾನೆ. ಕಟ್ ಮಾಡಿದರೆ, ಅದೇ ನುಸ್ರತ್ ಜಡ್ಜ್ ಆಗಿದ್ದು, ಅನಂತು ಲಾಯರ್ ಆಗಿರುತ್ತಾನೆ. ಫ್ಯಾಮಿಲಿ ಕೋರ್ಟ್ ಮೆಟ್ಟಿಲು ಹತ್ತುವುದಿಲ್ಲ ಎನ್ನುವ ಅಪ್ಪನ ಮಾತನ್ನು ಆಕೆಗಾಗಿ ಅನಂತು ಮುರಿಯುತ್ತಾನೆ.

ವಿವಾಹ - ವಿಚ್ಚೇದನ

ವಿವಾಹ - ವಿಚ್ಚೇದನ

ಅಪ್ಪ ಮದುವೆ ಮಾಡಿ ಎರಡು ಮನಸ್ಸುಗಳನ್ನು ಒಂದು ಮಾಡುತ್ತಾನೆ. ಮಗ ಅನಂತು ವಿಚ್ಚೇದನಕ್ಕೆ ಬರುವ ಜೋಡಿಗಳನ್ನು ಒಂದು ಮಾಡುತ್ತಿರುತ್ತಾನೆ. ಆದರೆ, ವಿಚ್ಚೇದನದ ಕೇಸ್ ತೆಗೆದುಕೊಳ್ಳುವುದಿಲ್ಲ ಎನ್ನುವ ಅಪ್ಪನ ಮಾತನ್ನು ಅನಂತು ಮಿರಿರುತ್ತಾನೆ ಮತ್ತೊಂದು ಕಡೆ ನುಸ್ರತ್ ಗೆ ನಿಶ್ಚಿತಾರ್ಥ ಆಗುತ್ತದೆ. ಈ ಎಲ್ಲ ಅಡೆತಡೆಗಳ ನಡುವೆ ಹೇಗೆ ಅನಂತು ತನ್ನ ಪ್ರೀತಿಯನ್ನ ಗೆಲ್ಲುತ್ತಾನೆ ಎನ್ನುವುದು ಚಿತ್ರದ ಕಥೆ.

ಹೇಗಿದೆ ಅನಂತು, ನುಸ್ರತ್ ನಟನೆ ?

ಹೇಗಿದೆ ಅನಂತು, ನುಸ್ರತ್ ನಟನೆ ?

ವಿನಯ್ ರಾಜ್ ಕುಮಾರ್ ಅನಂತು ಪಾತ್ರದಲ್ಲಿ ಚೆನ್ನಾಗಿ ಕಾಣುತ್ತಾರೆ. ಇಲ್ಲಿ ಅವರು ಒಬ್ಬ ಲಾಯರ್ ಆಗಿದ್ದಾರೆ. ಇನ್ನು ನಟನೆಯ ವಿಚಾರಕ್ಕೆ ಬಂದರೆ, ವಿನಯ್ ಇನ್ನಷ್ಟು ಚೆನ್ನಾಗಿ ಅಭಿನಯಿಸಬೇಕಿತ್ತು. ಅವರ ಭಾವನಾತ್ಮಕ ಮತ್ತು ಹಾಸ್ಯದ ದೃಶ್ಯಗಳು ಇನ್ನೂ ವರ್ಕ್ ಆಗಬೇಕಿತ್ತು. ಲತಾ ಹೆಗ್ಡೆ ತೆರೆ ಮೇಲೆ ಅಂದವಾಗಿ ಕಾಣುತ್ತಾರೆ. ಆದರೆ, ನಟನೆ ವಿಚಾರದಲ್ಲಿ ಒಕೆ ಒಕೆ ಅಷ್ಟೇ.

ಉಳಿದ ಪಾತ್ರಗಳು

ಉಳಿದ ಪಾತ್ರಗಳು

ಚಿತ್ರದಲ್ಲಿ ಸಣ್ಣ ಸಣ್ಣ ಪಾತ್ರಗಳು ತುಂಬ ಇವೆ. ಆ ಎಲ್ಲ ಪಾತ್ರಗಳು ಖುಷಿ ನೀಡುತ್ತದೆ. ತಂದೆಯ ಪಾತ್ರದಲ್ಲಿ ಬಿ ಸುರೇಶ್, ತಾತನ ಪಾತ್ರದಲ್ಲಿ ದತ್ತಣ್ಣ ಗೆಳೆಯನ ಪಾತ್ರದಲ್ಲಿ ವಿಜೇತ್ ಹಾಗೂ ಮುಖ್ಯವಾಗಿ ರವಿಶಂಕರ್ ಗಮನ ಸೆಳೆಯುತ್ತಾರೆ. ಈ ರೀತಿಯ ಪಾತ್ರಗಳು ಚೆನ್ನಾಗಿ ಮೂಡಿ ಬಂದಿದೆ.

ಗೆದ್ದು ಸೋತ್ತಿದ್ದಾರೋ, ಸೋತು ಗೆದ್ದಿದ್ದಾರೋ

ಗೆದ್ದು ಸೋತ್ತಿದ್ದಾರೋ, ಸೋತು ಗೆದ್ದಿದ್ದಾರೋ

ಸಿನಿಮಾದ ನಿರ್ದೇಶಕರು ಗೆದ್ದು ಸೋತ್ತಿದ್ದಾರೋ, ಸೋತು ಗೆದ್ದಿದ್ದಾರೋ ತಿಳಿಯುವುದಿಲ್ಲ. ಕಾರಣ ಈ ಸಿನಿಮಾ ಸೂಪರ್ ಅಂತ ಹೇಳಲು ಆಗಾದ, ಸುಮಾರು ಎಂದು ತಿರಸ್ಕಾರ ಮಾಡಲಾದ ಚಿತ್ರ. ಸಿನಿಮಾದ ಎಷ್ಟೋ ಅಂಶಗಳು ನಿಜಕ್ಕೂ ಚೆನ್ನಾಗಿವೆ. ಆದರೆ, ಅವುಗಳನ್ನು ಹೇಳಿರುವ ರೀತಿಯಲ್ಲಿ ಕೊಂಚ ದಾರಿ ತಪ್ಪಿದಂತಾಗಿದೆ.

ಮಾರು ಹೋಗುವ ಆಗಿದೆ ಮ್ಯೂಸಿಕ್

ಮಾರು ಹೋಗುವ ಆಗಿದೆ ಮ್ಯೂಸಿಕ್

ಸಿನಿಮಾದಲ್ಲಿ ಇಷ್ಟ ಆಗುವ ಎರಡು ಅಂಶಗಳು ಮ್ಯೂಸಿಕ್ ಹಾಗೂ ಡೈಲಾಗ್. ಚಿತ್ರದ ಹಾಡುಗಳು ಚೆನ್ನಾಗಿವೆ. ಅದರಲ್ಲಿಯೂ ಹಿನ್ನಲೆ ಸಂಗೀತ ಸಿನಿಮಾದ ಹೈಲೆಟ್ ಆಗಿದೆ. ಒಳ್ಳೆ ಒಳ್ಳೆ ಡೈಲಾಗ್ ಗಳು ಕೂಡ ಸಿನಿಮಾಗೆ ಪ್ಲಾಸ್ ಆಗಿವೆ. ಎಲ್ಲ ಇದ್ದರೂ ಸಿನಿಮಾ ನೋಡುವಾಗ ಕೆಲವು ಬಾರಿ ಬೋರ್ ಆಗುತ್ತಿದೆ.

ಒಮ್ಮೆ ನೋಡಿಬಹುದು

ಒಮ್ಮೆ ನೋಡಿಬಹುದು

ಒಳ್ಳೆಯ ವಿಷಯ ಹೊಂದಿರೋ ಈ ಸಿನಿಮಾ ಒಂದು ಒಳ್ಳೆಯ ಚಿತ್ರ. ಆಗಿದ್ದರೂ ಈ ಸಿನಿಮಾವನ್ನು ಒಮ್ಮೆ ನೋಡಬಹುದು. ತುಂಬ ನಿರೀಕ್ಷೆ ಇಟ್ಟು, ಚಿತ್ರಮಂದಿರಕ್ಕೆ ಹೋದರೆ ನಿರಾಸೆ ಖಂಡಿತ.

More from Filmibeat

English summary
Kannada Actor Vinay Rajkumar and Actress Latha Hegde's 'Ananthu vs Nusruth' movie review.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X