AndhraKing Taluka twitter Review: 'ಆಂಧ್ರಕಿಂಗ್' ದರ್ಬಾರ್ ಹೇಗಿದೆ? ಉಪ್ಪಿ ನಟನೆಗೆ ಎಷ್ಟು ಮಾರ್ಕ್ಸ್?
ತೆಲುಗಿನ 'ಆಂಧ್ರಕಿಂಗ್ ತಾಲೂಕ' ಸಿನಿಮಾ ವಿಶ್ವದಾದ್ಯಂತ ತೆರೆಗೆ ಬಂದಿದೆ. ಕನ್ನಡ ನಟ ಉಪೇಂದ್ರ ಕೂಡ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ರಾಮ್ ಪೋತಿನೇನಿ ಹೀರೊ ಆಗಿ ಮಿಂಚಿದ್ದಾರೆ. ಅರ್ಲಿ ಮಾರ್ನಿಂಗ್ ಶೋಗಳಿಂದಲೇ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದೆ. ರಾಮ್ ಹಾಗೂ ಉಪ್ಪಿ ಜುಗಲ್ಬಂದಿ ಬಗ್ಗೆ ಪ್ರೇಕ್ಷಕರು ಮಾತನಾಡುತ್ತಿದ್ದಾರೆ.
'ಆಂಧ್ರಕಿಂಗ್ ತಾಲೂಕ' ಸಿನಿಮಾ ಕನ್ನಡಕ್ಕೂ ಡಬ್ ಆಗಿ ರಿಲೀಸ್ ಆಗಿದೆ. ಒಬ್ಬ ಸಿನಿಮಾ ನಟ ಹಾಗೂ ಆತನನ್ನು ಆರಾಧಿಸುವ ಅಭಿಮಾನಿಯೊಬ್ಬನ ಕಥೆ ಈ ಚಿತ್ರದಲ್ಲಿದೆ. ಮಹೇಶ್ ಬಾಬು ಪಚ್ಚಿಗೋಲ ಎಂಬುವವರು ಆಕ್ಷನ್ ಕಟ್ ಹೇಳಿದ್ದಾರೆ. ಸತತ ಸೋಲುಗಳಿಂದ ಕಂಗೆಟ್ಟಿದ್ದ ನಟ ರಾಮ್ ಈ ಬಾರಿ ಗೆಲ್ಲುವ ಭರವಸೆ ಮೂಡಿಸಿದ್ದಾರೆ. ಭಾಗ್ಯಶ್ರೀ ಬ್ರೋಸ್ ಚಿತ್ರಕ್ಕೆ ನಾಯಕಿಯಾಗಿ ಮಿಂಚಿದ್ದಾರೆ.

ರಾವು ರಮೇಶ್, ಮುರಳಿ ಶರ್ಮಾ, ರಾಜೀವ್ ಕನಕಾಲ, ತುಳಸಿ ಸೇರಿ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದೆ. ಸಿದ್ಧಾರ್ಥ ನುನಿ ಹಾಗೂ ಜಾರ್ಜ್ ಸಿ. ವಿಲಿಯಮ್ಸ್ ಛಾಯಾಗ್ರಹಣ ಮತ್ತು ವಿವೇಕ್ ಮೆರ್ವಿನ್ ಸಂಗೀತ ಚಿತ್ರಕ್ಕಿದೆ. ಈಗಾಗಲೇ ಸಿನಿಮಾ ನೋಡಿದವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.
ಕೊನೆ 40 ನಿಮಿಷ ಸೂಪರ್
"ಸೂಪರ್ ಹಿಟ್ ಸಿನಿಮಾ.. ಕೊನೆಯ 40 ಸಿನಿಮಾ ಅಂತೂ ಬೊಂಬಾಟ್. ವೃತ್ತಿ ಜೀವನದಲ್ಲಿ ರಾಮ್ ಪೋನಿನೇನಿ ಅದ್ಭುತ ಅಭಿನಯ. ಸಖತ್ತಾಗಿ ಮಾಡಿದ್ದೀರಾ. ರಿಯಲ್ ಸ್ಟಾರ್ ಉಪೇಂದ್ರ ನಟನೆ ಕೂಡ ಚೆನ್ನಾಗಿದೆ. ಸಿನಿಮಾ ಚೆನ್ನಾಗಿ ಮಾಡಿದ್ದೀರಾ ಮಹೇಶ್ ಬಾಬು ಪಚ್ಚಿಗೋಲ" ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.

ಉಪೇಂದ್ರ ಆಕ್ಟಿಂಗ್ ಚಿಂದಿ
"ಹೀರೊ ಹಾಗೂ ಅಭಿಮಾನಿ ನಡುವೆ ಭಾವನಾತ್ಮಕ ಪಯಣ. ರಾಮ್ ಅದ್ಭುತ ನಟನೆ. ಕೊನೆ 1 ಗಂಟೆ ಪಕ್ಕಾ ಸಿನಿಮಾ. ಉಪೇಂದ್ರ ಆಕ್ಟಿಂಗ್ ಚಿಂದಿ. ಹಿನ್ನೆಲೆ ಸಂಗೀತ ಬೆಂಕಿ, ನಾಯಕಿ ಭಾಗ್ಯಶ್ರೀ ಸೀರೆಯಲ್ಲಿ ಸುಂದರವಾಗಿ ಕಾಣ್ತಾರೆ. ಅಭಿಮಾನ ತೋರಿದ್ರೆ ಹೀರೊ ಕಡೆಯಿಂದ ಕೂಡ ಗೌರವ ಸಿಗುತ್ತಾ ಅಂತ ಹೇಳಿರುವ ಸಿನಿಮಾ ಇದು" ಅಂತ ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.
ಮಿಸ್ ಮಾಡಬೇಡಿ
ಫೈನಲಿ ರಾಮ್ ಒಳ್ಳೆ ಕಂಬ್ಯಾಕ್. ರಾಮ್ ಸ್ಟ್ರಾಂಗ್ ಪರ್ಫಾರ್ಮನ್ಸ್.. ಅದ್ಭುತ ಸ್ಕ್ರೀನ್‌ಪ್ಲೇ ಹಾಗೂ ನಿರ್ದೇಶನ. ಸಾಗರ್ ಹಾಗೂ ಮಹಾಲಕ್ಷ್ಮಿ ಪರಿಣಾಮಕಾರಿ ನಟನೆ. ಮ್ಯೂಸಿಕ್ ಹಾಗೂ ಛಾಯಾಗ್ರಹಣ ಕೂಡ ಚೆನ್ನಾಗಿದೆ. ಮಿಸ್ ಮಾಡಬೇಡಿ ಎಂದು ಮತ್ತೊಬ್ಬರು ಅಭಿಪ್ರಾಯ ತಿಳಿಸಿದ್ದಾರೆ.
ರಾಮ್ ಕಂಬ್ಯಾಕ್ ಸಿನಿಮಾ
"ಒಳ್ಳೆ ಸಂಗೀತದ ಜೊತೆ ಸುಂದರವಾದ ಫಸ್ಟ್ ಹಾಫ್.. ಚಾಲೆಂಜಿಂಗ್ ಇಂಟರ್‌ವಲ್ ಬ್ಲಾಕ್. ಒಳ್ಳೆಯ ಹಾಗೂ ಭಾವನಾತ್ಮಕ ಸೆಕೆಂಡ್ ಹಾಫ್. ಅಭಿಮಾನವನ್ನು ಬಹಳ ಚೆನ್ನಾಗಿ ತೋರಿಸಿದ್ದಾರೆ. ರಾಮ್ ಎನರ್ಜಿ ಮತ್ತೆ ಗಮನ ಸೆಳೆದಿದೆ. ಇದು ಅವರ ಕಂಬ್ಯಾಕ್ ಸಿನಿಮಾ. ಭಾಗ್ಯಶ್ರೀ ಬೋರ್ಸೆ ತಮ್ಮ ಮುದ್ದಾದ ಅಭಿನಯದಿಂದ ಮೋಡಿ ಮಾಡಿದ್ದಾರೆ" ಎನ್ನುವುದು ಮತ್ತೊಬ್ಬರ ರಿವ್ಯೂ.
ಅದ್ಭುತ ಸಿನಿಮಾ ನಿರ್ದೇಶಕರೇ
ಒಬ್ಬ ಸಿನಿಮಾ ಅಭಿಮಾನಿಯನ್ನು ನೋಡಿ ನಿನಗೆ ಯಾಕಪ್ಪಾ ಸಿನಿಮಾ ಅಂದ್ರೆ ಅಷ್ಟು ಹುಚ್ಚು. ಇದು ಸಂಭ್ರಮ. ಅದರಿಂದ ನಿನಗೆ ಏನು ಸಿಗುತ್ತದೆ, ಯಾರಿಗೆ ಏನು ಸಿಗುತ್ತದೆ ಎಂದು ಲೆಕ್ಕ ಹಾಕಿ ಮಾತನಾಡುವವರಿಗೆ ಈ ಸಿನಿಮಾ ಉತ್ತರ. ನಮ್ಮ ಪಾಲಿಗೆ ಸಿನಿಮಾ ಗುರು, ಜ್ಞಾಪಕ. ಸಿನಿಮಾ ಸ್ನೇಹಿತ. ಅದೇ ಜೀವನ. ಸಿನಿಮಾ ನೋಡುವುದು ಒಂದು ಅದೃಷ್ಟ. 100% ಸಿನಿಮಾ ಫೀಲ್ ಆಗುವುದು ಒಂದು ವರ. ಎಂತಹ ಭಾವನಾತ್ಮಕ ಸಿನಿಮಾ ನಿರ್ದೇಶಕರೇ. ಕೊನೆಗೂ ರಾಮ್‌ಗೆ ಒಂದು ಹಿಟ್ ಸಿನಿಮಾ ಸಿಕ್ತು. ಫಸ್ಟ್ ಹಾಫ್ ಕೊಂಚ ಲ್ಯಾಗ್ ಇದೆ. ಆದರೂ ಪರವಾಗಿಲ್ಲ ಎಂದು ಮತ್ತೊಬ್ಬರು ಬರೆದುಕೊಂಡಿದ್ದಾರೆ.
ಒಟ್ಟಾರೆ ಒಳ್ಳೆ ಸಿನಿಮಾ
ಊಹಿಸಬಹುದಾದ ಕಥೆ. ಆದರೂ ಅದ್ಭುತ ಅಭಿನಯ, ಒಳ್ಳೆ ಸನ್ನಿವೇಶಗಳಿಂದ ಮೂಲಕ ಸಿನಿಮಾ ಹಿಡಿದಿಟ್ಟುಕೊಳ್ಳುತ್ತದೆ. ನಾಯಕಿ ಚಿತ್ರಕ್ಕೆ ಹೆಚ್ಚಿನ ಬಲ ತುಂಬಿದ್ದಾರೆ. ಒಟ್ಟಾರೆಯಾಗಿ ಅರ್ಥಪೂರ್ಣ, ಬೆಚ್ಚಗಿನ ಅನುಭವ ಎಂದು ಮಗದೊಬ್ಬರು ಅಭಿಪ್ರಾಯ ತಿಳಿಸಿದ್ದಾರೆ.


Click it and Unblock the Notifications











