twitter
    For Quick Alerts
    ALLOW NOTIFICATIONS  
    For Daily Alerts

    ಅನುಕ್ತ Review: ಕೊಲೆಯ ಹಿಂದಿನ ಸತ್ಯಾನ್ವೇಷಣೆ

    |

    ಒಂದು ಕೊಲೆ, ಆ ಕೊಲೆಯ ರಹಸ್ಯವನ್ನ ಭೇದಿಸಲು ಒಬ್ಬ ಸ್ಪೆಷಲ್ ಆಫೀಸರ್. ಆ ಕೊಲೆಯ ತನಿಖೆ ಮಾಡುವ ಅಧಿಕಾರಿಗೆ ಇನ್ನೊಂದು ಕೊಲೆಯ ಪ್ರಕರಣ ಎದುರಾಗುತ್ತೆ. ಆ ಕೇಸ್ ಹಿಂದೆಯೇ ಇನ್ನೊಂದು ರೋಚಕ ಕಥೆ ತೆರೆದುಕೊಳ್ಳುತ್ತೆ. ಹೀಗೆ, ಚಿತ್ರದ ಕೊನೆಯವರೆಗೂ ಥ್ರಿಲ್ಲಿಂಗ್ ಆಗಿ ಸಾಗುವ 'ಅನುಕ್ತ' ನೋಡಬೇಕಾದ ಸಿನಿಮಾ.

    Rating:
    3.5/5

    ಥ್ರಿಲ್ಲರ್ ಅಥವಾ ಹಾರರ್

    ಥ್ರಿಲ್ಲರ್ ಅಥವಾ ಹಾರರ್

    ಅನುಕ್ತ ಟ್ರೈಲರ್ ನೋಡಿ ಈ ಚಿತ್ರ ಹಾರರ್ ಇರಬಹುದು ಎಂಬ ನಿರೀಕ್ಷೆಯಿಂದ ಹೋದವರಿಗೆ ಅಚ್ಚರಿ ಪಕ್ಕಾ. ಯಾಕಂದ್ರೆ, ಈ ಸಿನಿಮಾ ಹಾರರ್ ಅಥವಾ ಥ್ರಿಲ್ಲರ್ ಎಂದು ತಿಳಿಯುವುದಕ್ಕೆ ಕೊನೆಯವರೆಗೂ ಕಾಯಬೇಕು. ಅಷ್ಟರ ಮಟ್ಟಿಗೆ ಕಥೆಯಲ್ಲಿ ರೋಚಕತೆಯನ್ನ ಉಳಿಸಿಕೊಂಡು ಹೋಗುತ್ತೆ. ಒಂದೇ ಮಾತಿನಲ್ಲಿ ಹೇಳುವುದಾದರೇ ಸಿನಿಮಾ ಚೆನ್ನಾಗಿದೆ.

    ಪ್ರೇಕ್ಷಕರಿಗೆ ಥ್ರಿಲ್ ಕೊಡುತ್ತೆ

    ಪ್ರೇಕ್ಷಕರಿಗೆ ಥ್ರಿಲ್ ಕೊಡುತ್ತೆ

    ಚಿತ್ರದ ಮೊದಲ ಸೀನ್ ನಲ್ಲೇ ಒಂದು ಮಿಸ್ಟರಿ ತೋರಿಸಿ ತಲೆಗೆ ಹುಳ ಬಿಡುವ ಅನುಕ್ತ, ಅಲ್ಲಿಂದ ಆಟ ಶುರು ಮಾಡುತ್ತೆ. ಮೊದಲಾರ್ಧದಲ್ಲೇ ಕೆಲವು ಭಯಾನಕ ದೃಶ್ಯಗಳನ್ನ ಸೃಷ್ಟಿಸಿ ಪ್ರೇಕ್ಷಕರಿಗೆ ಎದೆಯಲ್ಲಿ ಭಯ ಮೂಡಿಸುತ್ತೆ. ಯಾಕೆ ಹೀಗೆ ಆಗ್ತಿದೆ, ಏನಿದು ಕಥೆ, ಯಾರು ಎಂಬ ಪ್ರಶ್ನೆಗಳನ್ನಿಟ್ಟು ಮೊದಲಾರ್ಧ ಮೂಡಿಬಂದಿದೆ. ಫಸ್ಟ್ ಹಾಫ್ ಪೂರ್ತಿ ಸಂಗೀತಾ ಭಟ್ ಮತ್ತು ಕಾರ್ತಿಕ್ ಅತ್ತಾವರ್ ನಡುವೆಯೇ ಮುಗಿದು ಹೋಗುತ್ತೆ.

    ಅಸಲಿ ಕಥೆ ಸೆಕೆಂಡ್ ಹಾಫ್ ನಲ್ಲಿ

    ಅಸಲಿ ಕಥೆ ಸೆಕೆಂಡ್ ಹಾಫ್ ನಲ್ಲಿ

    ಅನುಕ್ತ ಚಿತ್ರದ ಅಸಲಿ ಕಥೆ ತೆರೆದುಕೊಳ್ಳುವುದು ಚಿತ್ರದ ಸೆಕೆಂಡ್ ಹಾಫ್ ನಲ್ಲಿ. ಒಂದು ಕೊಲೆಯ ತನಿಖೆಗೆ ಬಂದ ಸಿಸಿಬಿ ಆಫೀಸರ್ (ಕಾರ್ತಿಕ್) ಗೆ ಇನ್ನೊಂದು ಕೊಲೆ ಎದುರಾಗುತ್ತೆ. ಆ ಕೊಲೆಗೂ ಸ್ವತಃ ತನಿಖೆ ನಡೆಸಲು ಬಂದ ಆಫೀಸರ್ ಗೂ ಸಂಬಂಧವಿರುತ್ತೆ. ಅದನ್ನ ಗಂಭೀರವಾಗಿ ತೆಗೆದುಕೊಳ್ಳುವ ಕಾರ್ತಿಕ್ ಅದನ್ನ ಹೇಗೆ ಭೇದಿಸುತ್ತಾನೆ ಎಂಬುದೇ ಕ್ಲೈಮ್ಯಾಕ್ಸ್. ಸಿನಿಮಾ ಮುಗಿದು ಹೋಯ್ತು ಎನ್ನುವಾಗ ಇನ್ನೊಂದು ಟ್ವಿಸ್ಟ್ ಚಿತ್ರಕ್ಕೆ ಕ್ಲೈಮ್ಯಾಕ್ಸ್ ಗೆ ಧಮ್ ನೀಡಿದೆ.

    ಕಾರ್ತಿಕ್-ಸಂಗೀತಾ ಭಟ್ ಇಂಪ್ರೆಸ್

    ಕಾರ್ತಿಕ್-ಸಂಗೀತಾ ಭಟ್ ಇಂಪ್ರೆಸ್

    ಕಾರ್ತಿಕ್ ಅತ್ತಾವರ್ ಈ ಚಿತ್ರದ ನಾಯಕ. ಸಿಸಿಬಿ ಆಫೀಸರ್ ಪಾತ್ರ ನಿರ್ವಹಿಸಿರುವ ಕಾರ್ತಿಕ್ ತುಂಬಾ ಅಚ್ಚುಕಟ್ಟಾಗಿ ನಟಿಸಿದ್ದಾರೆ. ನಟನೆಗೆ ಹೆಚ್ಚು ಪ್ರಾಮುಖ್ಯತೆ ಹೊಂದಿರುವ ಇಲ್ಲಿ ಫೈಟ್, ಡ್ಯಾನ್ಸ್, ಆಕ್ಷನ್ ಏನೂ ಇಲ್ಲ. ಕಥೆಗೆ ತಕ್ಕ ಅಭಿನಯದ ನೋಡಬಹುದು. ಕಾರ್ತಿಕ್ ಪತ್ನಿಯಾಗಿ ಸಂಗೀತಾ ಭಟ್ ಕೂಡ ಇಷ್ಟವಾಗ್ತಾರೆ. ಕಾರ್ತಿಕ್ ಅವರಷ್ಟೇ ಪ್ರಾಮುಖ್ಯತೆ ಹೊಂದಿರುವ ಪಾತ್ರ ಸಂಪತ್ ರಾಜ್ (ಧರ್ಮಣ್ಣ ಶೆಟ್ಟಿ) ಅನು ಪ್ರಭಾಕರ್, ಶ್ರೀಧರ್. ಇವರ ನಟನೆ ಬಗ್ಗೆ ಕಾಮೆಂಟ್ ಮಾಡೋದಕ್ಕಿಂತ ತೆರೆಮೇಲೆ ನೋಡಲು ಚೆಂದ.

    ನಿರ್ದೇಶನಕ್ಕೆ ಸಿಕ್ಕ ಜಯ

    ನಿರ್ದೇಶನಕ್ಕೆ ಸಿಕ್ಕ ಜಯ

    ಅಂದ್ಹಾಗೆ, ಇದು ಸಿಂಪಲ್ ಕಥೆ. ಸಿನಿಮಾ ಪೂರ್ತಿ ಕರಾವಳಿ ಭಾಗದಲ್ಲೇ ನಡೆಯುತ್ತೆ. ತುಳುನಾಡಿನ ಸಂಸ್ಕೃತಿ, ಕಲೆ, ಆಚಾರ-ವಿಚಾರಗಳು ಈ ಚಿತ್ರದಲ್ಲಿದೆ. ಇಂತಹ ಕಥೆ ಮತ್ತು ದೃಶ್ಯಗಳು ಈ ಹಿಂದಿನ ಸಿನಿಮಾಗಳಲ್ಲೂ ನೋಡಿರಬಹುದು. ಬಟ್, ಸರಳವಾದ ಕಥೆಯನ್ನಿಟ್ಟು ಬಹಳ ಗಟ್ಟಿಯಾಗಿ ಪ್ರೆಸೆಂಟ್ ಮಾಡಿದ್ದಾರೆ ನಿರ್ದೇಶಕ ಅಶ್ವಥ್‌ ಸಾಮ್ಯುಯಲ್. ಈ ಸಿನಿಮಾನ ಯಾರು ನೋಡ್ತಾರೆ ಎಂದು ಯಾವುದೋ ಕಾರಣಕ್ಕಾಗಿ ಥಿಯೇಟರ್ ಗೆ ಬಂದವರೂ ಕೂಡ ಕೊನೆಯವರೆಗೂ ನೋಡಿ ಸಿನಿಮಾ ಚೆನ್ನಾಗಿದೆ ಎಂದು ಹೇಳುವಂತಿದೆ. ಅಲ್ಲಿಗೆ, ಸಿನಿಮಾ ಗೆದ್ದಿದೆ ಮತ್ತು ನಿರ್ದೇಶಕ ಪಾಸ್ ಎಂದರ್ಥ. ಇದನ್ನ ಈ ಸಿನಿಮಾದಲ್ಲಿ ನೋಡಬಹುದು.

    ಕೊನೆಯದಾಗಿ ಹೇಳುವುದಾದರೇ

    ಕೊನೆಯದಾಗಿ ಹೇಳುವುದಾದರೇ

    ಛಾಯಾಗ್ರಾಹಕ ಮನೋಹರ್ ಜೋಶಿಯ ಹಾರ್ಡ್ ವರ್ಕ್ ಮತ್ತು ನೋಬಿಲ್ ಪೌಲ್ ಅವರ ಸಂಗೀತ ಅನುಕ್ತ ಚಿತ್ರದ ಮತ್ತೊಂದು ತಾಕತ್ತು. ಇಂತಹ ಥ್ರಿಲ್ಲರ್ ಕಥೆಯಲ್ಲಿ ಐದು ಹತ್ತು ನಿಮಿಷ ಲವ್, ರೋಮ್ಯಾನ್ಸ್, ಸೆಂಟಿಮೆಂಟ್ ಬಂದ್ರೆ ಅದೊಂದು ಕಡೆ ಪ್ರೇಕ್ಷಕರ ಮನಸ್ಸನ್ನ ಇನ್ನೊಂದೆಡೆಗೆ ಕರೆದುಕೊಂಡು ಹೋಗುತ್ತೆ. ಅಂತಹ ಕೆಲವು ದೃಶ್ಯಗಳು ಈ ಚಿತ್ರದಲ್ಲೂ ಇದೆ. ಆದ್ರೆ, ಇದು ಕಥೆಗೆ ಪೂರಕವಾಗಿರುವುದರಿಂದ ಅವಶ್ಯಕ. ಅದನ್ನ ಬಿಟ್ಟರೇ ಮೊದಲನೇ ಸಲ ನೋಡುವ ಪ್ರೇಕ್ಷಕರಿಗೆ ಮಜಾ ಅಂತೂ ಗ್ಯಾರೆಂಟಿ.

    English summary
    Anukta movie has released today and it is new experience to watch.
    Friday, February 1, 2019, 14:55
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X