twitter
    For Quick Alerts
    ALLOW NOTIFICATIONS  
    For Daily Alerts

    ಪುಂಡ ಪ್ರಚಂಡ 'ಪಂಟ'ನಿಗೆ ವಿಮರ್ಶಕರು ಕೊಟ್ಟ ಮಾರ್ಕ್ಸ್ ಎಷ್ಟು?

    By Suneel
    |

    ಕಾಂಗ್ರೆಸ್ ನಾಯಕ ಎಚ್.ಎಂ.ರೇವಣ್ಣ ಪುತ್ರ ಅನೂಪ್ ರೇವಣ್ಣ ಅಭಿನಯದ ಎರಡನೇ ಚಿತ್ರ 'ನಾ ಪಂಟ ಕಣೋ' ರಾಜ್ಯಾದ್ಯಂತ ಉತ್ತಮ ಪ್ರದರ್ಶನ ಕಾಣುತ್ತಿದೆ. ಪ್ರೀತಿ, ಪ್ರೇಮ, ಕೌಟುಂಬಿಕ ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದ ಕಲಾ ಸಾಮ್ರಾಟ್ ಎಸ್.ನಾರಾಯಣ್ ಮೊದಲ ಬಾರಿಗೆ ಆಕ್ಷನ್ ಮತ್ತು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವನ್ನು ಅನೂಪ್ ರೇವಣ್ಣನಿಗೆ ನಿರ್ದೇಶನ ಮಾಡಿ ತಕ್ಕಮಟ್ಟಿಗೆ ಯಶಸ್ವಿ ಆಗಿದ್ದಾರೆ.

    ಚಿತ್ರ ನೋಡಿದ ಪ್ರೇಕ್ಷಕರು ಅನೂಪ್ ರೇವಣ್ಣ ಎರಡನೇ ಸಿನಿಮಾದಲ್ಲಿ ನಟನೆಯಲ್ಲಿ 'ಪಂಟ' ಎಂಬುದನ್ನು ಇನ್ನಷ್ಟು ಸಾಭೀತು ಪಡಿಸಿದ್ದಾರೆ ಎಂದು ಮೆಚ್ಚಿಕೊಂಡಿದ್ದಾರೆ. ಪ್ರೇಕ್ಷಕರಂತೆ ಚಿತ್ರವನ್ನು ನಮ್ಮ ವಿಮರ್ಶಕರು ಸಹ ಇಷ್ಟಪಟ್ಟರೇ? ಚಿತ್ರಕ್ಕೆ ಅವರು ಕೊಟ್ಟ ಮಾರ್ಕ್ಸ್ ಎಷ್ಟು? ಅದಕ್ಕೆ ಉತ್ತರ ಇಲ್ಲಿದೆ[ವಿಮರ್ಶೆ: ತಪ್ಪು ದಾರಿಯಲ್ಲಿ ನಡೆದರೂ ನೊಂದವರ ಕಣ್ಣೀರು ಹೊರೆಸುವ 'ಪಂಟ']

    ಕರ್ನಾಟಕದ ಜನಪ್ರಿಯ ದಿನಪತ್ರಿಕೆಗಳು ಪ್ರಕಟಿಸಿದ 'ಪಂಟ' ಚಿತ್ರದ ವಿಮರ್ಶೆಗಳ ಕಲೆಕ್ಷನ್ ಇಲ್ಲಿದೆ ಓದಿರಿ..

    ಪುಂಡ ಪ್ರಚಂಡನೋ, ಬಲ್ಲಿದರಿಗೆ ಭಂಟನೋ ಈ ಪಂಟ: ಕನ್ನಡಪ್ರಭ

    ಪುಂಡ ಪ್ರಚಂಡನೋ, ಬಲ್ಲಿದರಿಗೆ ಭಂಟನೋ ಈ ಪಂಟ: ಕನ್ನಡಪ್ರಭ

    ಅತಿ ಚಮತ್ಕಾರದ ಕಥೆಯಿದು ಎಂಬ ಮುಖವಾಡ ಹೊದ್ದ, ಅತಿ ದಡ್ಡತನದಿಂದ ಕೂಡಿದ ಈ ತಮಿಳು ಸಿನೆಮಾದ ರಿಮೇಕ್ ಮಾಡಲು ಮನಸ್ಸು ಮಾಡಿರುವ ನಿರ್ಧಾರವನ್ನೇ ಬಹುಶಃ 'ಪಂಟತನ' ಎನ್ನಬಹುದೆನೋ. ನಾಯಕನಟನ ವೈಭವಕ್ಕಾಗಿಯೇ ಕಥೆ ಹೆಣೆದಿರುವಂತೆ ಕಂಡುಬರುತ್ತದೆ ಅದರೂ ಅದರಲ್ಲೂ ನಿರಾಶೆ ಮೂಡುತ್ತದೆ. ತಾಂತ್ರಿಕವಾಗಿ ಚಿತ್ರದಲ್ಲಿ ಮಾಂತ್ರಿಕತೆಯ ಸ್ಪರ್ಶವಿಲ್ಲ. ಛಾಯಾಗ್ರಹಣ ಸಾಧಾರಣ. ನಿರ್ದೇಶಕ ಎಸ್ ನಾರಾಯಣ್ ಅವರೇ ಸಂಗೀತ ನೀಡಿರುವ ಹಾಡುಗಳು ಮನಸ್ಸಿನಲ್ಲಿ ನಿಲ್ಲದೆ ಜಾರಿ ಮಾಯವಾಗುತ್ತದೆ. ಇನ್ನು ಈ ಚಿತ್ರತಂಡಕ್ಕೆ ಗ್ರಾಫಿಕ್ಸ್ ಬಳಕೆಯ ತಂತ್ರಗಾರಿಕೆಯೇ ತಿಳಿದಿಲ್ಲ ಎಂಬುದು ಒಂದು ಹಾಡಿನಿಂದ ಸಾಭೀತು ಆಗುತ್ತದೆ. ಅನೂಪ್ ರೇವಣ್ಣ ಇನ್ನೂ ಹೆಚ್ಚು ಪಳಗಬೇಕು.

    ಸ್ವಲ್ಪ ಕುತೂಹಲ ಜಾಸ್ತಿ ಗದ್ದಲ: ವಿಜಯ ಕರ್ನಾಟಕ

    ಸ್ವಲ್ಪ ಕುತೂಹಲ ಜಾಸ್ತಿ ಗದ್ದಲ: ವಿಜಯ ಕರ್ನಾಟಕ

    ಪ್ರೀತಿ, ಪ್ರೇಮ, ಕೌಟುಂಬಿಕ ಚಿತ್ರಗಳನ್ನು ನಿರ್ದೇಶಿಸಿರುವ ಎಸ್.ನಾರಾಯಣ್ 'ಪಂಟ' ಮೂಲಕ ಆಕ್ಷನ್ ಚಿತ್ರ ನಿರ್ದೇಶನದಲ್ಲೂ ತಾವು ಪಂಟ ಎಂಬುದನ್ನು ತಕ್ಕಮಟ್ಟಿಗೆ ಸಾಬೀತು ಪಡಿಸಿದ್ದಾರೆ. ಈ ಚಿತ್ರದಲ್ಲಿ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಅವರ ಅನುಭವ ಕೆಲಸ ಮಾಡಿದೆ. ಪಾತ್ರಗಳ ಆಯ್ಕೆ ಉತ್ತಮವಾಗಿದೆ. ಸಂಭಾಷಣೆಯಲ್ಲಿ ಗಟ್ಟಿತನವಿಲ್ಲ. ಕತೆಯಲ್ಲಿನ ಗೊಂದಲ ಚಿತ್ರಕ್ಕೆ ತುಸು ಹಿನ್ನೆಡೆಯಾಗಿದೆ. ಸಂಗೀತ ಗಮನಾರ್ಹವಾಗಿಲ್ಲ. ಅನೂಪ್ ನಟನೆ ಓಕೆ. ಮುಖದ ಎಕ್ಸ್ ಪ್ರೆಷನ್, ಹಾವಭಾವ, ಫೈಟ್, ಎಲ್ಲವೂ ಸೂಪರ್. ಡೈಲಾಗ್ ಡೆಲಿವರಿಗೆ ಸ್ವಲ್ಪ ತಾಕತ್ತು ಬೇಕಿತ್ತು. ನಾಯಕಿ ರಿತಿಕ್ಷಾ ಉತ್ತಮ ನಟಿಯಾಗುವ ಭರವಸೆಯನ್ನು ಮೂಡಿಸಿದ್ದಾರೆ -ಮಹಾಬಲೇಶ್ವರ ಕಲ್ಕಣಿ

    ಪ್ರೇಕ್ಷಕರ ಬ್ರೇನ್ ಜೊತೆಗೆ ನಾರಾಯಣ್ ಗೇಮ್: ಉದಯವಾಣಿ

    ಪ್ರೇಕ್ಷಕರ ಬ್ರೇನ್ ಜೊತೆಗೆ ನಾರಾಯಣ್ ಗೇಮ್: ಉದಯವಾಣಿ

    ಮೊದ ಮೊದಲು ಚಿತ್ರದಲ್ಲಿ ಏನಾಗುತ್ತಿದೆ ಎಂದು ಬರೀ ಪಾತ್ರಕಷ್ಟೇ ಅಲ್ಲ. ಪ್ರೇಕ್ಷಕನಿಗೂ ಸ್ಪಷ್ಟವಾಗುವುದಿಲ್ಲ. ಆದ್ರೆ ನಿಧಾನಕ್ಕೆ ಹೋಗುತ್ತಾ ಎಲ್ಲವೂ ಅರ್ಥವಾಗುತ್ತದೆ. ಇಂತಹ ಚಿತ್ರಕಥೆ ಬಗ್ಗೆ ಒಂದು ಹಂತದಲ್ಲಿ ಮೆಚ್ಚುಗೆ ಆಗುತ್ತದೆ. ಆಕ್ಷನ್, ಸಸ್ಪೆನ್ಸ್ ನಿರ್ದೇಶನದಲ್ಲಿ ಎಸ್.ನಾರಾಯಣ್ ತಕ್ಕ ಮಟ್ಟಿಗೆ ಯಶಸ್ವಿ ಆಗಿದ್ದಾರೆ. ಚಿತ್ರದ ಹೈಲೈಟ್ ನಾಯಕ ಮತ್ತು ಖಳನಾಯಕನ ಮೈಂಡ್ ಗೇಮ್. ಮೊದಲಾರ್ಧ ಚಿತ್ರ ಇನ್ನಷ್ಟು ಚುರುಕಾಗಿದ್ದರೆ, ಪ್ರೇಕ್ಷಕರಿಗೆ ಇನ್ನಷ್ಟು ಖುಷಿಕೊಡುತಿತ್ತು. ಅನೂಪ್ ರೇವಣ್ಣ 'ಲಕ್ಷ್ಮಣ' ಚಿತ್ರಕ್ಕೆ ಹೋಲಿಸಿದರೆ ಸಾಕಷ್ಟು ಸುಧಾರಿಸಿದ್ದಾರೆ. ಚಿತ್ರದ ಸರ್‌ಪ್ರೈಸ್ ಎಂದರೆ ನಾಯಕಿ ರಿತಿಕ್ಷಾ ಮತ್ತು ಶಾಸಕ ಶ್ರೀನಿವಾಸ ಮೂರ್ತಿ. ಮೊದಲ ಪ್ರಯತ್ನದಲ್ಲೇ ಇಬ್ಬರೂ ಗಮನಸೆಳೆಯುತ್ತಾರೆ. ಚಿತ್ರದ ಇನ್ನೊಂದು ಹೈಲೈಟ್ ಎಂದರೇ ಸುದೀಪ್ ಹಾಡಿರುವ ರೊಮ್ಯಾಂಟಿಕ್ ಹಾಡು. -ಚೇತನ್ ನಾಡಿಗೇರ್

    'Naa Panta Kano' Movie Review: Bangalore Mirror

    'Naa Panta Kano' Movie Review: Bangalore Mirror

    Panta could have been a good thriller. But the first half is drowsy. It is only in the second half that it takes on some character. There are a few nicely created roles. But many of the minor characters played by non-professional actors kills the thrills. The songs are eyesores. The buildup to the heist and the actual act itself does not give the necessary goosebumps. Maybe they are lost in translation. Anup has improved as an actor in his second film but is far from being a showstopper. Ritiksha has hardly anything to do. Narayan's experience does not help the film which lacks finesse. Even the emotional scenes, for which he is famous for, hardly impress. This heist is by amateurs. -Shyam Prasad S

    English summary
    Anup Revanna Starrer Kannada Movie 'Panta' has recieved positive response from the Critics. Here is the 'Panta' movie critics review.
    Saturday, June 24, 2017, 12:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X