'ಲಕ್ಷ್ಮಣ' ವಿಮರ್ಶೆ: ಕನ್ನಡ ಚಿತ್ರರಂಗಕ್ಕೆ ಸಿಕ್ಕ ಭರವಸೆಯ 'ಆಕ್ಷನ್ ಹೀರೋ'
ಸಾಕಿದ ಅಪ್ಪ-ಅಮ್ಮ, ತಂಗಿ ಸುತ್ತ 'ಲಕ್ಷ್ಮಣ' ರೇಖೆ ಹಾಕಿ, ಅಟ್ಟಾಡಿಸಿಕೊಂಡು ಬರುವ ಹತ್ತಾರು ರೌಡಿಗಳ ರುಂಡಗಳನ್ನ ಒಬ್ಬನೇ ಚೆಂಡಾಡುತ್ತಾನೆ. ಸಾವಿಗೆ ಹೆದರದೆ, ಬೆನ್ನಿಗೆ ಬೆಂಕಿ ಬಿದ್ದರೂ ಲೆಕ್ಕಿಸದೆ, ಖತರ್ನಾಕ್ ಖೇಡಿಗಳನ್ನ ಒಬ್ಬೊಬ್ಬರನ್ನಾಗಿ ಮಣ್ಣು ಮುಕ್ಕಿಸುತ್ತಾನೆ. ಅಲ್ಲಿಗೆ, ದುಷ್ಟ ಸಂಹಾರ ಸಮಾಪ್ತಿ. ಅದನ್ನ ಕಣ್ತುಂಬಿಕೊಂಡ ಪ್ರೇಕ್ಷಕರಿಗೆ ಹೊಸ 'ಆಕ್ಷನ್ ಹೀರೋ' ಸಿಕ್ಕ ಎಂಬ ಖಾತ್ರಿ.
ಆರ್.ಚಂದ್ರು ನಿರ್ದೇಶನ ಮಾಡಿರುವ, ಕಾಂಗ್ರೆಸ್ ನಾಯಕ ಎಚ್.ಎಂ.ರೇವಣ್ಣ ಪುತ್ರ ಅನೂಪ್ ರೇವಣ್ಣ ಅಭಿನಯದ ಚೊಚ್ಚಲ ಚಿತ್ರ 'ಲಕ್ಷ್ಮಣ' ಸಂಪೂರ್ಣ ವಿಮರ್ಶೆಗಾಗಿ ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ....
ಪಕ್ಕಾ ರಿವೆಂಜ್ ಸ್ಟೋರಿ.!
ಆನಂದ ಸಾಗರದಲ್ಲಿ ಮುಳುಗಿರುವ ಸುಂದರ ಸಂಸಾರಕ್ಕೆ ಬೆಂಕಿ ಇಟ್ಟ ವಿಲನ್ ಗಳನ್ನ 'ಮುಗಿಸುವುದಕ್ಕೆ' ಹೊಂಚು ಹಾಕುವ ಅಂಜಲಿ (ಮೇಘನಾ ರಾಜ್) ಮತ್ತು ಆಕೆಯ ಮಾವ (ಸುಚೇಂದ್ರ ಪ್ರಸಾದ್) ಒಂದ್ಕಡೆ ಆದ್ರೆ, ಇನ್ನೊಂದ್ಕಡೆ ಸೈಲೆಂಟ್ ಆಗಿ 'ಕೆಲಸ ಮುಗಿಸುವ' ಲಕ್ಷ್ಮಣ (ಅನೂಪ್ ರೇವಣ್ಣ).!
ದ್ವೇಷ ಯಾಕೆ.?
ಅಷ್ಟಕ್ಕೂ, ಅಂಜಲಿ ಹಾಗೂ ಲಕ್ಷ್ಮಣನಿಗೆ ಇರುವ ಸಂಬಂಧ ಏನು.? ಇಬ್ಬರಿಗೂ ಒಬ್ಬರ ಮೇಲೆ ದ್ವೇಷ ಯಾಕೆ? ಎಂಬುದೇ 'ಲಕ್ಷ್ಮಣ' ಚಿತ್ರದ ಪ್ರಮುಖ ಕಥಾಹಂದರ. ಅದನ್ನ ನೀವು ಚಿತ್ರಮಂದಿರದಲ್ಲೇ ನೋಡಿ....
ಅನೂಪ್ ಅಭಿನಯ ಹೇಗಿದೆ.?
ಚೊಚ್ಚಲ ಚಿತ್ರದಲ್ಲಿಯೇ ಅನೂಪ್ ಭರವಸೆ ಮೂಡಿಸುತ್ತಾರೆ. ಡ್ಯಾನ್ಸ್ ಮತ್ತು ಡೈಲಾಗ್ ಡೆಲಿವರಿ ಟೈಮಿಂಗ್ ನಲ್ಲಿ ಕೊಂಚ ಪಳಗಬೇಕು ಅನ್ನೋದು ಬಿಟ್ರೆ ಆಕ್ಷನ್ ಮತ್ತು ಸ್ಟಂಟ್ಸ್ ವಿಷಯದಲ್ಲಿ ಅನೂಪ್ ಗುಡ್.
ಮೇಘನಾ ರಾಜ್ ಆಕ್ಟಿಂಗ್ ಬಗ್ಗೆ....
ಹಿಂದೆಂದಿಗಿಂತಲೂ 'ಲಕ್ಷ್ಮಣ' ಚಿತ್ರದಲ್ಲಿ ಮೇಘನಾ ರಾಜ್ ತುಂಬಾ ಮುದ್ದಾಗಿ ಕಾಣುತ್ತಾರೆ. ಹಾಡುಗಳಲ್ಲಿ ಮಾರ್ಡನ್ ಅವತಾರ ತಾಳುವ ಮೇಘನಾ ತಮ್ಮ ಅಭಿನಯದಿಂದ ಗಮನ ಸೆಳೆಯುತ್ತಾರೆ.
'ರಣಧೀರ' ರವಿಚಂದ್ರನ್ ಬೊಂಬಾಟ್!
ದಶಕಗಳ ನಂತರ ಖಾಕಿ ತೊಟ್ಟು, ಪೊಲೀಸ್ ಆಫೀಸರ್ 'ರಣಧೀರ' ಪಾತ್ರ ನಿರ್ವಹಿಸಿರುವ ಕ್ರೇಜಿ ಸ್ಟಾರ್ ರವಿಚಂದ್ರನ್ ಮನಸ್ಸಲ್ಲಿ ಉಳಿಯುತ್ತಾರೆ.
ಉಳಿದವರ ಕಥೆ?
ಉಳಿದಂತೆ ಅವಿನಾಶ್, ಜೈ ಜಗದೀಶ್, ಚಿತ್ರಾ ಶೆಣೈ ಹಾಗೂ ಸುಚೇಂದ್ರ ಪ್ರಸಾದ್, ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ದೇಸಾಯಿ ಪಾತ್ರದಲ್ಲಿ ಪ್ರದೀಪ್ ರಾವತ್ ಅಬ್ಬರಿಸಿದರೆ, 'ಮಾರಿ' ಪಾತ್ರದಲ್ಲಿ 'ಬಾಹುಬಲಿ' ಪ್ರಭಾಕರ್ ಅಭಿನಯ ಅಚ್ಚುಕಟ್ಟಾಗಿದೆ.
ಚಿಕ್ಕಣ್ಣ - ಸಾಧು ಕೋಕಿಲ ಕಾಮಿಡಿ ಮಸ್ತ್.!
ಆಗಾಗ ಪ್ರತ್ಯಕ್ಷವಾಗುವ ಚಿಕ್ಕಣ್ಣ ಹಾಗೂ ಒಂದೇ ಬಾರಿ ಬಂದು ಹೋಗುವ ಸಾಧು ಕೋಕಿಲ ಪ್ರೇಕ್ಷಕರನ್ನ ನಗೆಗಡಲಲ್ಲಿ ತೇಲಿಸುತ್ತಾರೆ.
ಹೊಸ ಹೀರೋಗೆ ಏನೇನು ಬೇಕೋ, ಎಲ್ಲಾ ಇದೆ
ಸ್ಯಾಂಡಲ್ ವುಡ್ ನಲ್ಲಿ ಭದ್ರ ನೆಲೆ ಕಂಡುಕೊಳ್ಳಲು ಹೊಸ ಹೀರೋಗೆ ಬೇಕಾದ ಎಲ್ಲಾ ಎಲಿಮೆಂಟ್ಸ್ ಕೂಡ 'ಲಕ್ಷ್ಮಣ' ಚಿತ್ರದಲ್ಲಿ ಇದೆ. ಅದನ್ನ ಅನೂಪ್ ಕೂಡ ಸದ್ಬಳಕೆ ಮಾಡಿಕೊಂಡಿದ್ದಾರೆ.
ಟೆಕ್ನಿಕಲಿ ಸಿನಿಮಾ ಹೇಗಿದೆ?
ಎಷ್ಟು ಬೇಕೋ ಅಷ್ಟು ಫೈಟ್ಸ್ ಮತ್ತು ಸಾಂಗ್ಸ್ ಇಟ್ಟು ಸ್ವಲ್ಪ ಕಾಮಿಡಿ ಫೀಲ್ ಕೊಟ್ಟು ಪ್ರೇಕ್ಷಕರಿಗೆ ಎಲ್ಲೂ ಬೋರ್ ಆಗದಂತೆ ನೋಡಿಕೊಳ್ಳುವಲ್ಲಿ ಆರ್.ಚಂದ್ರು ಸಫಲ. ಸಂಕಲನ ಕೊಂಚ ಚುರುಕಾಗಿರಬೇಕಿತ್ತು. ಅಲ್ಲಲ್ಲಿ ಡಲ್ ಆದಂತೆ ಕಾಣುವ ವಿಶುವಲ್ ಕ್ವಾಲಿಟಿ ಬಗ್ಗೆ ಛಾಯಾಗ್ರಾಹಕರು ಗಮನ ಹರಿಸಬೇಕಿತ್ತು.
ಫೈನಲ್ ಸ್ಟೇಟ್ ಮೆಂಟ್
ತೆಲುಗಿನ 'ಆತನೊಕ್ಕಡೆ' ಚಿತ್ರದಂತೆಯೇ ಇರುವ 'ಲಕ್ಷ್ಮಣ' ಚಿತ್ರವನ್ನ ಇಡೀ ಫ್ಯಾಮಿಲಿ ಕೂತು ಆರಾಮಾಗಿ ನೋಡಬಹುದು. ಅದರಲ್ಲೂ ಆಕ್ಷನ್ ಪ್ರಿಯರಿಗೆ 'ಲಕ್ಷ್ಮಣ' ಹಬ್ಬ.


Click it and Unblock the Notifications











