»   » 'ಪದ್ಮಾವತಿ' ಎಕ್ಸ್ ಕ್ಲೂಸಿವ್ ವಿಮರ್ಶೆ: ವಿವಾದದ ಮಧ್ಯೆ ಸಿನಿಮಾ ನೋಡಿದ ಪತ್ರಕರ್ತ

'ಪದ್ಮಾವತಿ' ಎಕ್ಸ್ ಕ್ಲೂಸಿವ್ ವಿಮರ್ಶೆ: ವಿವಾದದ ಮಧ್ಯೆ ಸಿನಿಮಾ ನೋಡಿದ ಪತ್ರಕರ್ತ

Posted By:
Subscribe to Filmibeat Kannada

ದೀಪಿಕಾ ಪಡುಕೋಣೆ ಅಭಿನಯದ 'ಪದ್ಮಾವತಿ' ಸಿನಿಮಾಗೆ ದೇಶಾದ್ಯಂತ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಸಿನಿಮಾ ಬಿಡುಗಡೆ ಮಾಡದಂತೆ ರಜಪೂತ ಕರಣಿ ಸೇನೆ ಸದಸ್ಯರು ಪ್ರತಿಭಟನೆ ಮಾಡುತ್ತಿದ್ದಾರೆ.

ಸಿನಿಮಾದಲ್ಲಿ 'ರಾಣಿ ಪದ್ಮಾವತಿ'ಯನ್ನ ಕೆಟ್ಟದಾಗಿ ಬಿಂಬಿಸಲಾಗಿದೆ ಎಂದು ಆರೋಪಿಸಿ 'ಪದ್ಮಾವತಿ' ಬಿಡುಗಡೆಗೆ ಅಡ್ಡಗಾಲಗಿದ್ದಾರೆ. ಹೀಗಾಗಿ, ಸಿನಿಮಾದಲ್ಲಿ ಅಂತಹದ್ದೇನಿದೆ? ಎಂಬ ಕುತೂಹಲ ಎಲ್ಲರನ್ನ ಕಾಡಿತ್ತು.

ಇದೀಗ, 'ಪದ್ಮಾವತಿ' ಚಿತ್ರವನ್ನ ಖ್ಯಾತ ಪತ್ರಕರ್ತ 'ರಿಪಬ್ಲಿಕ್ ಟಿವಿ'ಯ ಮುಖ್ಯಸ್ಥ ಅರ್ನಬ್ ಗೋಸ್ವಾಮಿ ವೀಕ್ಷಿಸಿದ್ದಾರೆ. ಸಿನಿಮಾ ನೋಡಿದ ಅರ್ನಬ್ ಚಿತ್ರದ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಈ ಚಿತ್ರ 'ರಾಣಿ ಪದ್ಮಾವತಿ'ಗೆ ಹೆಮ್ಮೆ ತರುವಂತಿದೆ. ರಜಪೂತರ ಮೇಲಿರುವ ಗೌರವ ಈ ಚಿತ್ರದಿಂದ ಹೆಚ್ಚಾಗುತ್ತೆ ಎಂದಿದ್ದಾರೆ.

ಅರ್ನಬ್ ಗೋಸ್ವಾಮಿ 'ಪದ್ಮಾವತಿ' ಚಿತ್ರದ ಬಗ್ಗೆ ಹೇಳಿರುವ ಪೂರ್ತಿ ವಿಮರ್ಶೆ ಮುಂದೆ ಓದಿ......

ರಜಪೂತರ ಗೌರವ ಹೆಚ್ಚಿಸುವ 'ಪದ್ಮಾವತಿ'

''ಪದ್ಮಾವತಿ' ಚಿತ್ರದ ವಿರುದ್ಧ ಹೋರಾಟ ಮಾಡುವಂತೆ ಈ ಚಿತ್ರದಲ್ಲಿ ಅಂತಹದ್ದೇನು ಇಲ್ಲ. ಈ ಚಿತ್ರವನ್ನ ನೋಡಿದ ಮೇಲೆ ರಜಪೂತರ ಮೇಲಿರುವ ಗೌರವ ಮತ್ತಷ್ಟು ಹೆಚ್ಚಾಗುತ್ತೆ. ಸಂಜಯ್ ಲೀಲಾ ಬನ್ಸಾಲಿ ಅವರ ಈ ಸಿನಿಮಾ ರಜಪೂರಿಗೆ ಸಿಕ್ಕಿರುವ ಗೌರವ'' - ಅರ್ನಬ್ ಗೋಸ್ವಾಮಿ, ಪತ್ರಕರ್ತ

'ಪದ್ಮಾವತಿ' ಬೆಂಬಲಕ್ಕೆ ನಿಂತ ಸಿಎಂ, ಡಿಕೆಶಿ ಮತ್ತು ಸ್ಯಾಂಡಲ್ ವುಡ್

'ರಾಣಿ ಪದ್ಮಾವತಿ' ನಿಜಕ್ಕೂ ಗ್ರೇಟ್

''ಈ ಸಿನಿಮಾದಲ್ಲಿ ತೋರಿಸುವಂತೆ ರಾಣಿ ಪದ್ಮಾವತಿ ಇದ್ದದ್ದೇ ಆದರೇ, ಪದ್ಮಾವತಿ ನಿಜಕ್ಕೂ ಗ್ರೇಟ್. ಇತಿಹಾಸ, ಪುರಾಣಗಳಲ್ಲಿರುವ ಪದ್ಮಾವತಿಗೆ ಈ ಚಿತ್ರದ ಮೂಲಕ ಗೌರವ ನೀಡಲಾಗುತ್ತಿದೆ'' - ಅರ್ನಬ್ ಗೋಸ್ವಾಮಿ, ಪತ್ರಕರ್ತ

ಖಿಲ್ಜಿ ಮತ್ತು ಪದ್ಮಾವತಿ ದೃಶ್ಯದ ಬಗ್ಗೆ

''ಪ್ರತಿಭಟನೆಕಾರರು ಆರೋಪಿಸಿರುವಾಗೆ ಬನ್ಸಾಲಿ ಅವರ 'ಪದ್ಮಾವತಿ' ಚಿತ್ರದಲ್ಲಿ, ದೆಹಲಿ ಸುಲ್ತಾನ ಅಲ್ಲಾವುದ್ದೀನ್ ಖಿಲ್ಜಿ ಮತ್ತು ರಾಣಿ ಪದ್ಮಾವತಿ ನಡುವೆ ಒಂದೇ ಒಂದು ದೃಶ್ಯವಿಲ್ಲ'' - ಅರ್ನಬ್ ಗೋಸ್ವಾಮಿ, ಪತ್ರಕರ್ತ

'ಪದ್ಮಾವತಿ' ವಿವಾದಕ್ಕೆ ಟ್ವಿಸ್ಟ್: ರಿಲೀಸ್ ದಿನಾಂಕ ಮುಂದಕ್ಕೆ ಹೋಯ್ತು.!

ಪತಿಯ ಜೊತೆಯೂ ಅಂತಹ ದೃಶ್ಯವಿಲ್ಲ

''ದೆಹಲಿ ಸುಲ್ತಾನ ಅಲ್ಲಾವುದ್ದೀನ್ ಖಿಲ್ಜಿ ಮತ್ತು ಪದ್ಮಾವತಿ ನಡುವೆ ಅಲ್ಲ, ಸ್ವತಃ ಪದ್ಮಾವತಿಯ ಪತಿ ರತನ್ ಸಿಂಗ್ ಅವರ ನಡುವೆಯೂ ಒಂದೇ ಒಂದು ರೊಮ್ಯಾಂಟಿಕ್ ದೃಶ್ಯವಿಲ್ಲ. ಅತಿ ಸೂಕ್ಷ್ಮವಾಗಿ ಸಿನಿಮಾವನ್ನ ಮಾಡಲಾಗಿದೆ'' - ಅರ್ನಬ್ ಗೋಸ್ವಾಮಿ, ಪತ್ರಕರ್ತ

ದೀಪಿಕಾ 'ತಲೆ' ಬಗ್ಗೆ ಕಾಳಜಿ ತೋರಿದ ಕಮಲ್ ಹಾಸನ್.!

ಬನ್ಸಾಲಿ ಕೆಲಸವನ್ನ ಶ್ಲಾಘಿಸಬೇಕು

''ರಜಪೂತರು ತಿಳಿದುಕೊಂಡಿರುವುದಕ್ಕಿಂತ ಹೆಚ್ಚು ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಸಂಶೋಧನೆ ಮಾಡಿ ಈ ಸಿನಿಮಾ ಮಾಡಿದ್ದಾರೆ. ಒಂದೇ ಒಂದು ಅಶ್ಲೀಲ ದೃಶ್ಯವಿಲ್ಲ. ಸೆನ್ಸಾರ್ ನವರು ಕೂಡ ಯಾವ ದೃಶ್ಯವನ್ನ ವಿರೋಧಿಸುವ ಅವಕಾಶ ಇಲ್ಲ. ಇದು ರಜಪೂತರು ಹೆಮ್ಮೆ ಪಡುವಂತಹ ಸಿನಿಮಾ'' - ಅರ್ನಬ್ ಗೋಸ್ವಾಮಿ, ಪತ್ರಕರ್ತ

'ಪದ್ಮಾವತಿ' ಚಿತ್ರದ ವಿವಾದ ಏನಿದು? ವಿರೋಧ ಯಾಕೆ?

ರಾಜಕೀಯ ಕೈವಾಡ ಅಷ್ಟೇ

''ಪದ್ಮಾವತಿ ಚಿತ್ರವನ್ನ ಬಳಸಿಕೊಂಡು ರಾಜಕೀಯ ಪಕ್ಷಗಳು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದೆ. ಇದನ್ನ ರಜಪೂತರು ಅರ್ಥ ಮಾಡಿಕೊಳ್ಳಬೇಕು. ಈ ಚಿತ್ರವನ್ನ ವಿರೋಧಿಸುತ್ತಿರುವ ಬಿಜೆಪಿಯವರು ಕೂಡ ಈ ಸಿನಿಮಾ ಪರವಾಗಿ ನಿಂತು ಬಿಡುಗಡೆಗೆ ಅವಕಾಶ ಮಾಡಿಕೊಡಬೇಕು'' - ಅರ್ನಬ್ ಗೋಸ್ವಾಮಿ, ಪತ್ರಕರ್ತ

ರಜಪೂತರ ದೃಷ್ಟಿಕೋನ ಬದಲಾಗುತ್ತೆ

''ಪದ್ಮಾವತಿ' ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಎಂಬುದು ಗೊತ್ತಿಲ್ಲ. ಆದ್ರೆ, ರಿಲೀಸ ಆದಾಗ ಈ ಸಿನಿಮಾ ಮೆಗಾ ಹಿಟ್ ಆಗೋದಂತೂ ಪಕ್ಕಾ. ಯಾಕಂದ್ರೆ, ಸಿನಿಮಾದಲ್ಲಿ 'ಪದ್ಮಾವತಿ' ತುಂಬ ಗ್ರೇಟ್ ಅನ್ಸುತ್ತೆ. ಈ ಚಿತ್ರ ನೋಡಿದ ನಂತರ ವಿರೋಧ ಮಾಡುತ್ತಿರುವುದು ಕರಣಿ ಸೇನೆ ಕಾರ್ಯಕರ್ತರ ದೃಷ್ಟಿಕೋನ ಸಂಪೂರ್ಣವಾಗಿ ಬದಲಾಗಲಿದೆ'' - ಅರ್ನಬ್ ಗೋಸ್ವಾಮಿ, ಪತ್ರಕರ್ತ

ನಾನು ವಿರ್ಮಶಕನ್ನಲ್ಲ, ಪ್ರೇಕ್ಷಕ

''ಸಂಗೀತ, ಚಿತ್ರಕಥೆ, ಸ್ಕ್ರಿಪ್ಟ್, ಅಭಿನಯ ಹೇಗಿದೆ ಎಂದು ಹೇಳುವುದಕ್ಕೆ ನಾನು ವಿಮರ್ಶಕನಲ್ಲ, ಪ್ರೇಕ್ಷಕನಾಗಿ ಈ ಸಿನಿಮಾ ನೋಡಿದ್ದೇನೆ. ನನಗೆ ತೋರಿಸಿರುವ ಕಾಪಿಯನ್ನ ನೀವು ನೋಡಿದರೇ ಖಂಡಿತಾ ಅದು ಅದ್ಭುತ. ದೀಪಿಕಾ ಅವರ ಮೂಗು ಕತ್ತರಿಸುತ್ತೇನೆ, ತಲೆ ಕಡಿಯುತ್ತೇನೆ ಎನ್ನುತ್ತಿರುವುದೆಲ್ಲ ಮೂರ್ಖತನ'' - ಅರ್ನಬ್ ಗೋಸ್ವಾಮಿ, ಪತ್ರಕರ್ತ

English summary
Padmavati Review: Arnab Goswami Calls Deepika Padukone’s Film The Greatest Tribute To Rajput Pride. 'ಪದ್ಮಾವತಿ' ಚಿತ್ರವನ್ನ ನೋಡಿದ ಪತ್ರಕರ್ತ ಅರ್ನಬ್ ಗೋಸ್ವಾಮಿ, ಈ ಚಿತ್ರ ರಜಪೂತರಿಗೆ ಹೆಮ್ಮೆ ಎಂದಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada