twitter
    For Quick Alerts
    ALLOW NOTIFICATIONS  
    For Daily Alerts

    ಎಟಿಎಂ ವಿಮರ್ಶೆ : ಸತ್ಯ ಮತ್ತು ಕಾಲ್ಪನಿಕ ಘಟನೆಗಳ ಮಿಶ್ರಣ

    |

    Recommended Video

    ಎಷ್ಟು ಮಾರ್ಕ್ಸ್ ಅಟ್ಟೆಂಪ್ಟ್ ಟು ಮರ್ಡರ್ ಸಿನೆಮಾಗೆ ? | Filmibeat Kannada

    2013 ನವೆಂಬರ್ 19 ರಂದು ಇದೇ ರಾಜ್ಯವೇ ಬೆಚ್ಚಿ ಬೀಳಿಸುವ ಒಂದು ಘಟನೆ ನಡೆದಿತ್ತು. ಬೆಂಗಳೂರಿನ ಎಟಿಎಂ ಒಂದರಲ್ಲಿ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು. ಈ ಘಟನೆಯ ಬಳಿಕ ಎಟಿಎಂ ಒಳಗೆ ಹೋಗಲು ಭಯ ಪಡುವಂತೆ ಆಗಿತ್ತು. ಇಂತಹ ಭಯಾನಕ ಘಟನೆಯ ಆಧಾರವಾಗಿಟ್ಟುಕೊಂಡು ಬಂದಿರುವ ಸಿನಿಮಾ ಎಟಿಎಂ (ಅಟೆಂಪ್ಟ್ ಟು ಮರ್ಡರ್).

    Rating:
    3.5/5
    Star Cast: ಹೇಮಲತಾ, ಚಂದ್ರ ಗೌಡ, ಶೋಭಿತಾ, ವಿನಯ್ ಮ
    Director: ಅಮರ್

    ಹಂತಕನ ಹುಡುಕಾಟದ ಕಥೆ

    ಹಂತಕನ ಹುಡುಕಾಟದ ಕಥೆ

    ಸಿನಿಮಾ ಶುರು ಆದಾಗ ಎಟಿಎಂ ಒಳಗೆ ಒಬ್ಬ ಹೆಂಗಸು ಹೋಗುತ್ತಾಳೆ. ಆಕೆಯ ಮೇಲೆ ಹಿಂದೆಯಿಂದ ಬಂದ ಒಬ್ಬ ಹಂತಕ ಸಾಯುವ ಹಾಗೆ ಹಲ್ಲೆ ಮಾಡುತ್ತಾನೆ. ಆ ಹಂತಕ ಯಾರು?, ಆತನ ಹಿಂದಿನ ಉದ್ದೇಶ ಏನು, ದುಡ್ಡಿಗಾಗಿ ಮಾತ್ರ ಅವನು ಈ ರೀತಿ ಹಲ್ಲೆ ಮಾಡುತ್ತಿಲ್ಲ... ಈ ರೀತಿ ಸಿಐಡಿ ಆಫೀಸರ್ ಅಮರ್ (ವಿನಯ್) ತನಿಖೆ ಶುರು ಮಾಡುತ್ತಾನೆ. ಜೊತೆಗೆ ಇದರ ಬಗ್ಗೆ ಅತಿಯಾದ ಕುತೂಹಲ ಹೊಂದಿರುವ ಪತ್ರಕರ್ತೆ ಪ್ರಿಯಾ (ಹೇಮಲತಾ) ಕೂಡ ಹಂತಕನನ್ನು ಹುಡುಕುತಿರುತ್ತಾಳೆ. ಸಿನಿಮಾದ ಕೊನೆಗೆ ಆ ಹಂತಕ ಸಿಗುತ್ತಾನಾ ಇಲ್ವಾ? ಎಂಬುದು ಸಿನಿಮಾದ ಕಥೆ.

    ಕೆಲವು ಸತ್ಯ, ಕೆಲವು ಕಾಲ್ಪನಿಕ

    ಕೆಲವು ಸತ್ಯ, ಕೆಲವು ಕಾಲ್ಪನಿಕ

    ನವೆಂಬರ್ 19, 2013 ರಲ್ಲಿ ನಡೆದ ಎಟಿಎಂ ಹಲ್ಲೆ ಘಟನೆಯನ್ನು ಬೇಸ್ ಆಗಿ ಇಟ್ಟುಕೊಂಡು ಸಿನಿಮಾದ ಕಥೆ ಮಾಡಲಾಗಿದೆ. ಆ ಒಂದು ಘಟನೆಯ ಹಿಂದೆ ಮುಂದೆ ಅನೇಕ ಕಾಲ್ಪನಿಕ ಘಟನೆಗಳನ್ನು ಜೋಡಿಸಲಾಗಿದೆ. ಹಲ್ಲೆ ಮಾಡಿದ ಹಂತಕನ ವಿವರವನ್ನು ತಮ್ಮದೆ ಶೈಲಿಯಲ್ಲಿ ಕಟ್ಟಿಕೊಡಲಾಗಿದೆ. ಸಿನಿಮಾದಲ್ಲಿ ಹಲ್ಲೆ ಮಾಡಿದ ಘಟನೆಯೊಂದು ನಿಜ ಬಿಟ್ಟರೆ, ಬೇರೆ ಎಲ್ಲ ಅಂಶಗಳು ಸಿನಿಮ್ಯಾಟಿಕ್ ಆಗಿವೆ.

    ಕ್ರೈಂ ಥ್ರಿಲ್ಲರ್ ಜೊತೆಗೆ ಸಣ್ಣ ಪ್ರೇಮಕಥೆ

    ಕ್ರೈಂ ಥ್ರಿಲ್ಲರ್ ಜೊತೆಗೆ ಸಣ್ಣ ಪ್ರೇಮಕಥೆ

    ಸಿನಿಮಾದ ಪ್ರಾರಂಭದಲ್ಲಿ ಪತ್ರಕರ್ತೆ ಪ್ರಿಯಾ ಮತ್ತು ಸಿಐಡಿ ಅಮರ್ ದೃಷ್ಟಿಯಿಂದ ಕಥೆ ನಡೆಯುತ್ತಿದೆ. ಅದೇ ರೀತಿ ಇನ್ನೊಂದು ಕಡೆ ಪ್ರೇಮಿಗಳಾದ ಕ್ಯಾಬ್ ಡ್ರೈವರ್ ಶಿವು (ಚಂದ್ರು) ಮತ್ತು ಐಟಿ ಉದ್ಯೋಗಿ ರಿಯಾ (ಶೋಭಿತಾ) ನಡುವಿನ ಕಥೆ ನಡೆಯುತ್ತಿದೆ. ಸಿನಿಮಾದ ಮಧ್ಯ ಭಾಗದಲ್ಲಿ ಈ ಎರಡು ಕಥೆಗಳು ಒಂದು ಕಡೆ ಬಂದು ಸೇರುತ್ತದೆ. ಆ ನಂತರ ಕಥೆಯಲ್ಲಿ ಹೊಸ ತಿರುವು ಬರುತ್ತದೆ.

    ಸೀರಿಯಸ್ ಸಿನಿಮಾ

    ಸೀರಿಯಸ್ ಸಿನಿಮಾ

    ಎಟಿಎಂ (ಅಟೆಂಪ್ಟ್ ಟು ಮರ್ಡರ್ ) ಒಂದು ಸೀರಿಯಸ್ ಸಿನಿಮಾ. ಸಿನಿಮಾ ಶುರುವಿನಿಂದ ಅಂತ್ಯವಾಗುವವರೆಗೆ ಸೀಟಿನ ತುದಿಯಲ್ಲಿ ಕೂತು ನೋಡುವ ಚಿತ್ರವಿದು. ಹೆಚ್ಚಾಗಿ ಕಥೆಗೆ ಏನು ಬೇಕೋ ಅದರ ಬಗ್ಗೆ ಮಾತ್ರ ನಿರ್ದೇಶಕರು ಗಮನ ಹರಿಸಿದ್ದಾರೆ. ಸೋ, ಕಾಮಿಡಿ, ಆಕ್ಷನ್ ರೀತಿಯ ಕಮರ್ಶಿಯಲ್ ಹಂಗು ಇದರಲ್ಲಿ ಇಲ್ಲ.

    ಕ್ಯಾಮರಾ ಮ್ಯೂಸಿಕ್, ನಿರ್ದೇಶನ

    ಕ್ಯಾಮರಾ ಮ್ಯೂಸಿಕ್, ನಿರ್ದೇಶನ

    ಒಂದು ಸತ್ಯ ಘಟನೆಯನ್ನು ತಮ್ಮ ದೃಷ್ಟಿಕೋನದಲ್ಲಿ ನಿರ್ದೇಶಕರು ಸೋಗಸಾಗಿ ಹೇಳಿದ್ದಾರೆ. ಕ್ಯಾಮರಾ ಸಿನಿಮಾದ ಹೈಲೆಟ್ ಅಂಶಗಳಲ್ಲಿ ಒಂದಾಗಿದೆ. ಸಿನಿಮಾದ ಹಾಡುಗಳು ಮತ್ತು ಹಿನ್ನಲೆ ಸಂಗೀತ ಕಥೆಗೆ ಪೂರಕವಾಗಿದೆ.

    ವಿಭಿನ್ನ ಸಿನಿಮಾ

    ವಿಭಿನ್ನ ಸಿನಿಮಾ

    ಎಟಿಎಂ (ಅಟೆಂಪ್ಟ್ ಟು ಮರ್ಡರ್) ಒಂದು ವಿಭಿನ್ನ ಸಿನಿಮಾ. ಮಾಮೂಲಿ ಆದ ಲವ್ ಸ್ಟೋರಿ, ಆಕ್ಷನ್ ಈ ಸಿನಿಮಾದಲ್ಲಿ ಇಲ್ಲ. ನಿರ್ದೇಶಕ ಅಮರ್ ಒಂದೇ ಹಲ್ಲೆಯ ಎಳೆಯನ್ನು ಇಟ್ಟುಕೊಂಡು ರೋಚಕವಾಗಿ ಎ.ಟಿ.ಎಂ ಸಿನಿಮಾವನ್ನು ತೆರೆಗೆ ತಂದಿದ್ದಾರೆ.

    English summary
    TV Anchor VJ Hemalatha's 'Attempt To Murder' kannada movie review.
    Saturday, September 29, 2018, 12:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X