Su From So X Review ;ಕರುನಾಡಿನ ಹೃದಯ ಗೆದ್ದ 'ಸು ಫ್ರಮ್ ಸೋ', ರಾಜ್ ಬಿ ಶೆಟ್ಟಿ ತಂಡಕ್ಕೆ ಉಘೇ ಉಘೇ ಎಂದ ಕನ್ನಡಿಗರು

ಸೋಲು ಗೆಲುವು ಏನೇ ಇರಲಿ ಕನ್ನಡ ಚಿತ್ರರಂಗದಲ್ಲಿ ಕಳೆದ ಕೆಲ ವರ್ಷಗಳಿಂದ ಕೆಲವರು ಭಿನ್ನ .. ವಿಭಿನ್ನ .. ಪ್ರಯತ್ನಗಳನ್ನು ಮಾಡುತ್ತಲೇ ಇದ್ದಾರೆ. ಆ ಪೈಕಿ ಭರವಸೆ ಮೂಡಿಸಿದ ಕೆಲ ಚಿತ್ರಗಳು ಗೆಲ್ಲುವಲ್ಲಿ ಯಶಸ್ವಿಯಾದರೆ.. ಇನ್ನು ಕೆಲ ಚಿತ್ರಗಳು ಮಲ್ಟಿಪ್ಲೆಕ್ಸ್‌ನವರ ರಾಜಕೀಯದಿಂದ ಕೊನೆಯುಸಿರೆಳೆಯುತ್ತಾವೆ. ಆದರೂ.. ಈ ತರಹದ ಪ್ರಯೋಗಗಳನ್ನು ಮಾಡುವ ತಂಡದ ಆತ್ಮ ಸ್ಮೈರ್ಯ ಕುಗ್ಗಿಲ್ಲ.

ಕನ್ನಡಿಗರು ಕೂಡ ಗೆಲ್ಲುವ ಅರ್ಹತೆ ಹೊಂದಿರುವ ಚಿತ್ರಗಳನ್ನಾಗಲಿ.. ವ್ಯಕ್ತಿಗಳನ್ನು ಕೈ ಬಿಡುತ್ತಿಲ್ಲ. ಸಾಧ್ಯವಾದಷ್ಟು ಹೊಸತನದ ಪ್ರಯತ್ನ ಮಾಡುವ ಅರ್ಹ ವ್ಯಕ್ತಿಗಳಿಗೆ ಬೆಂಬಲವನ್ನು ನೀಡುತ್ತಲೇ ಬಂದಿದ್ದಾರೆ. ಉದಾಹರಣೆಗೆ ರಾಜ್ ಬಿ ಶೆಟ್ಟಿ ನಿರ್ಮಾಣದ ''ಸು ಫ್ರಮ್ ಸೋ''.

audiences-rave-raj-b-shettys-su-from-so-is-a-blockbuster-hit-see-viral-twitter-x-reactions-now

ಹೌದು.. ಚಿತ್ರವೊಂದಕ್ಕೆ ಪ್ರಚಾರವೇ ಮುಖ್ಯವೆಂದುಕೊಂಡ ಈ ಕಾಲದಲ್ಲಿ ಯಾವ ಪ್ರಚಾರವನ್ನು ಮಾಡದೇ ರಾಜ್ ಬಿ ಶೆಟ್ಟಿ ಕಥೆಯ ಮೇಲೀನ ನಂಬಿಕೆಯಿಂದ ಚಿತ್ರವನ್ನು ನಿರ್ಮಾಣ ಮಾಡಿ ಬಿಡುಗಡೆ ಮಾಡಿದ್ದಾರೆ.

ಅಚ್ಚರಿ ಅಂದರೆ 'ಎಕ್ಕಾ'.. 'ಜೂನಿಯರ್'.. 'ಸೈಯಾರ'.. 'ಹರಿಹರ ವೀರಮಲ್ಲು'.. ಹೀಗೆ ಹಲವಾರು ಚಿತ್ರಗಳ ಅಬ್ಬರ ಆರ್ಭಟದ ನಡುವೆ ಈ ಚಿತ್ರವನ್ನು ಇಂದು [ ಜುಲೈ 25 ] ಕರುನಾಡಿನಲ್ಲಿ ಅನೇಕರು ಮುಗಿಬಿದ್ದು ನೋಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಚಿತ್ರದ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಆ ಪೈಕಿ ಕೆಲವು ಇಲ್ಲಿ ಕೆಳಗಿನಂತೆ ಇವೆ.

ನಕ್ಕು ನಕ್ಕು ಸುಸ್ತಾಯ್ತು

ನೀವು ಕರಾವಳಿಯವರಾಗಿದ್ದರೆ ಈ ಚಿತ್ರ ನಿಮಗೆ ತುಂಬಾ ಆಪ್ತವಾಗುತ್ತೆ. ಸರಳಾ ಕಥಾವಸ್ತು ಹೊಂದಿರುವ ಈ ಚಿತ್ರ ಪರಿಪೂರ್ಣ ಮನರಂಜನಾತ್ಮಕ ಚಿತ್ರ. So ತಂಡದಿಂದ Su ಗೆ ಹ್ಯಾಟ್ಸ್ ಆಫ್. ನಕ್ಕು ನಕ್ಕು ಸಾಕಾಯ್ತು. ತಪ್ಪದೇ ಈ ಚಿತ್ರವನ್ನು ನೋಡಿ. ಯಾರು ಹೊಲಿದ ಇರುಳು..ಭಾವವೀಗ ಕಡಲು..

ಕರಾವಳಿಯವರ ಹೆಮ್ಮೆಯ ಕನ್ನಡ ಚಿತ್ರ

#SuFromSo ನಮ್ಮ ಕರಾವಳಿಯ ಪ್ರತಿಭಾನ್ವಿತ ಜನರು ನಿರ್ಮಿಸಿದ ಹೆಮ್ಮೆಯ ಕನ್ನಡ ಚಿತ್ರ. ತುಳುವರು ನಿರ್ಮಿಸಿದ್ದಾರೆ ಎಂದ ಮಾತ್ರಕ್ಕೆ ಅದು ಕನ್ನಡಕ್ಕಿಂತ ಕಡಿಮೆ ಎಂದು ಅರ್ಥವಲ್ಲ. ಅವರ ಕಠಿಣ ಪರಿಶ್ರಮವನ್ನಾಗಲಿ ಅಥವಾ ಅವರ ಕ್ರೀಯಾಶೀಲತೆಯನ್ನಾಗಲಿ ಅವಮಾನ ಮಾಡಬೇಡಿ. ಒಳ್ಳೆಯ ಚಿತ್ರ ಗೆಲ್ಲುತ್ತೆ ಎನ್ನುವುದಕ್ಕೆ ಇದೇ ಅತ್ಯುತ್ತಮ ಉದಾಹರಣೆ. ಒಳ್ಳೆಯ ಚಿತ್ರಗಳನ್ನು ಬೆಂಬಲಿಸಿ.

ತಪ್ಪದೇ ನೋಡಿ

ಈಗಷ್ಟೇ #SuFromSo ನೋಡಿಕೊಂಡು ಬಂದೆ. ಅತ್ಯುತ್ತಮ ಹಾಸ್ಯಭರಿತ ಚಿತ್ರ. ನಗುವನ್ನು ಉಕ್ಕಿಸುವ ಜೊತೆ ಭಾವನಾತ್ಮಕವಾದ ಬೇರೂರಿರುವ ಕಥೆಯನ್ನೊಂದಿರುವ ಸಿನಿಮಾ. ಚಿತ್ರದಲ್ಲಿನ ಪ್ರತಿಯೊಬ್ಬ ಕಲಾವಿದರು ಅದ್ಭುತವಾಗಿ ಅಭಿನಯಿಸಿದ್ದಾರೆ. ಎಲ್ಲರ ಅಭಿನಯದ ಬಹುಕಾಲದವರೆಗೆ ನೆನಪಿನಲ್ಲಿ ಉಳಿಯುತ್ತೆ. ತಪ್ಪದೇ ಈ ಚಿತ್ರವನ್ನು ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ವೀಕ್ಷಿಸಿ

ಚಿತ್ರಮಂದಿರಕ್ಕೆ ಈಗಲೇ ಹೋಗಿ

ನಕ್ಕು-ನಕ್ಕು ಸುಸ್ತಾಯ್ತು ಮಾರ್ರೇ.. ಲವ್ ಯೂ ರಾಜ್ ಬಿ ಶೆಟ್ಟಿ ಅಣ್ಣ. ಇಂತ ಅದ್ಭುತ ಸಿನಿಮಾ ಕೊಟ್ಟಿದ್ದಕ್ಕೆ ಧನ್ಯವಾದಗಳು. ಕನ್ನಡಿಗರೇ ಥಿಯೇಟರ್‌ ‌ಕಡೇ ಓಡಿ... SI - ಸುಲೋಚನ‌ ಫ್ರಮ್ ಸೋಮೇಶ್ವರ.

ಪರಿಪೂರ್ಣ ಕೌಟಂಬಿಕ ಚಿತ್ರ

#SufromSo ಪ್ರೀಮಿಯರ್ ಶೋ ನೋಡಿದೆ. ಉತ್ತಮವಾದ ಅಂಶಗಳನ್ನೊಂದಿರುವ ಹಾಸ್ಯಭರಿತ ಚಿತ್ರ ಇದು. ಮನೆಮಂದಿತೆಲ್ಲ ಕುಳಿತು ಆರಾಮಾಗಿ ನೋಡಬಹುದಾದ ಈ ಚಿತ್ರ ನಿಮಗೆ ಎಲ್ಲಿಯೂ ಬೋರ್ ಹೊಡೆಸುವುದಿಲ್ಲ. ಶನೀಲ್ ಗೌತಮ್ ರವಿ ಅಣ್ಣ ಜೊತೆ ಅದ್ಭುತವಾಗಿ ಅಭಿನಯಿಸಿದ್ದಾರೆ. ನಿರ್ದೇಶಕ ಜೆಪಿ ತೂಮಿನಾಡುನಿಮಗೆ ಹ್ಯಾಟ್ಸ್‌ ಆಫ್. 2025ರ ಕನ್ನಡದ ಹಿಟ್ ಸಿನಿಮಾ ಇದು.

ಸು ಫ್ರಮ್ ಸೋ ತಾರಾಬಳಗ

ಅಂದ್ಹಾಗೇ ರಾಜ್ ಬಿ ಶೆಟ್ಟಿ ನಿರ್ಮಾಣದಲ್ಲಿ ಶಶಿಧರ್ ಶೆಟ್ಟಿ ಬರೋಡ, ರವಿ ರೈ ಕಳಸ ಜೊತೆ ಕೈ ಜೋಡಿಸಿದ್ದಾರೆ. ಜೆ.ಪಿ.ತೂಮಿನಾಡು ನಿರ್ದೇಶನ ಮಾಡುವುದರ ಜೊತೆ ಚಿತ್ರದಲ್ಲಿನ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ಧಾರೆ. ಶನೀಲ್ ಗೌತಮ್.. ಪ್ರಕಾಶ್ ತೂಮಿನಾಡು..ದೀಪಕ್ ರೈ ಪಾಣಾಜೆ..ಮೈಮ್ ರಾಮದಾಸ್..ಪುಷ್ಪರಾಜ್ ಬೋಳಾರ್..ಸಂಧ್ಯಾ ಅರೆಕೆರೆ.. ಮುಂತಾದವರು ಚಿತ್ರದಲ್ಲಿದ್ದಾರೆ. ರಾಜ್ ಬಿ ಶೆಟ್ಟಿ ಕೂಡ ವಿಶೇಷ ಪಾತ್ರವೊಂದನ್ನು ನಿರ್ವಹಿಸಿದ್ದಾರೆ. ಸುಮೇಧ್ ಕೆ ಸಂಗೀತ ನಿರ್ದೇಶನ ಮತ್ತು ಸಂದೀಪ್ ತುಳಸಿದಾಸ್ ಛಾಯಾಗ್ರಹಣ ಚಿತ್ರಕ್ಕಿದೆ.

More from Filmibeat

English summary
The verdict is in! Raj B Shetty's 'Su From So' is a blockbuster phenomenon, captivating audiences everywhere. Read the incredible Twitter/X reviews that prove its massive success
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X