For Quick Alerts
  ALLOW NOTIFICATIONS  
  For Daily Alerts

  Avane Srimannarayana Review : ದೃಶ್ಯ ವೈಭವ.. ಸಂಗೀತದ ಸೊಬಗು..

  |

  ಈ ವರ್ಷದ ಬಹು ನಿರೀಕ್ಷಿತ ಸಿನಿಮಾ ಅಂತೂ ತೆರೆ ಮೇಲೆ ಬಂದಿದೆ. ವರ್ಷಗಳಿಂದ ಕಾಯಿಸಿದ್ದ ಶ್ರೀಮನ್ನಾರಾಯಣ ಭಕ್ತರಿಗೆ ದರ್ಶನ ನೀಡಿದ್ದಾನೆ. ನಾರಾಯಣನ ಲೋಕ ಬೇರೆಯದ್ದೆ ರೀತಿ ಇದೆ. ದೃಶ್ಯ ವೈಭವದ ಮೂಲಕ ಸಿನಿಮಾದ ಕಥೆ ಹೇಳಿದ್ದಾರೆ. ಚಿತ್ರತಂಡದ ಶ್ರಮ ಪ್ರತಿ ದೃಶ್ಯದಲ್ಲಿಯೂ ಕಾಣುತ್ತಿದೆ.

  Rating:
  3.5/5

  ಜಯರಾಮ, ತುಕಾರಮ ಮತ್ತು 'ಅವನು'

  ಜಯರಾಮ, ತುಕಾರಮ ಮತ್ತು 'ಅವನು'

  ಚಿತ್ರದ ಇಡೀ ಕಥೆ ನಡೆಯುವುದು ಅಮರಾವತಿಯಲ್ಲಿ. ಚಿತ್ರಮಂದಿರದಲ್ಲಿ ಕುಳಿತ ಪ್ರೇಕ್ಷಕರಿಗೆ ಮೊದಲು ಅಭೀರ ಹಾರಿಸುವ ಗುಂಡಿನ ಸದ್ದು ಕೇಳಿಸುತ್ತದೆ. ಮೊದಲು ಕಥೆ ಅರ್ಥ ಆಗುತ್ತಿಲ್ಲವಲ್ಲ ಎನ್ನುವ ಭಾವನೆ ಬಂದರೂ, ನಂತರ ಪಾತ್ರಗಳು ತಲೆಯ ಒಳಗೆ ಹೋಗುತ್ತದೆ. ಜಯರಾಮ ಹಾಗೂ ತುಕಾರಮನ ಈ ಕಥೆ ನಮಗೆ ಗೊತ್ತಾಯ್ತು ಎನ್ನುವ ಹೊತ್ತಿಗೆ ಸರಿಯಾಗಿ 'ಅವನ' ಆಗಮನ ಆಗುತ್ತದೆ.

  'ಲೂಟಿ' ಅಂದ್ರೆ ಏನು..?

  'ಲೂಟಿ' ಅಂದ್ರೆ ಏನು..?

  ಸಿನಿಮಾ ನೋಡುವವರಿಗೆ ಲೂಟಿ ಅಂದ್ರೆ ಏನು ಎನ್ನುವ ಪ್ರಶ್ನೆ ಬರುತ್ತದೆ. ಇಡೀ ಕಥೆಯ ಕೀ ಪಾಯಿಂಟ್ ಇದೇ ಆಗಿದೆ. ಈ ಅಂಶದ ಮೂಲಕವೇ ಕಥೆ ಪ್ರಾರಂಭವಾಗಿ, ಅದೇ ಅಂಶದಿಂದ ಕೊನೆಯಾಗುತ್ತದೆ. ಸಿನಿಮಾದ ಕ್ಲೈಮ್ಯಾಕ್ಸ್ ನಲ್ಲಿ ಇದಕ್ಕೆ ಉತ್ತರ ಸಿಗುತ್ತದೆ. ಕಥೆಯ ಈ ಜರ್ನಿಯಲ್ಲಿ ಅಭೀರ, ಜಯರಾಮ, ತುಕಾರಾಮ, ನಾರಾಯಣ, ಲಕ್ಷ್ಮಿ ಪಾತ್ರಗಳು ಪ್ರಮುಖವಾಗಿ ಬರುತ್ತದೆ.

  ಪಾಸ್ ಆದ ರಕ್ಷಿತ್, ಶಾನ್ವಿ

  ಪಾಸ್ ಆದ ರಕ್ಷಿತ್, ಶಾನ್ವಿ

  ಇಲ್ಲಿ ಕಿಲಾಡಿ ಪೊಲೀಸ್ ಅಧಿಕಾರಿಯಾಗಿ ರಕ್ಷಿತ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಅವರ ನಾರಾಯಣ ಪಾತ್ರ ಪ್ರೇಕ್ಷಕರಿಗೆ ಮಜಾ ನೀಡುತ್ತದೆ. ಕಾಮಿಡಿ, ಕಿಲಾಡಿತನ, ಸಾಹಸ, ಜಾಣತನ ಹೀಗೆ ಎಲ್ಲ ಅಂಶಗಳು ಈ ಪಾತ್ರದಲ್ಲಿದೆ. ಶಾನ್ವಿ ಶ್ರೀವಾಸ್ತವ ಲಕ್ಷ್ಮಿ ಪಾತ್ರ ಸುಂದರವಾಗಿದೆ. ಸರಳ ಸುಂದರಿಯಾಗಿ ಸಹಜ ನಟನೆಯ ಮೂಲಕ ಅವರು ತುಂಬ ಇಷ್ಟ ಆಗುತ್ತದೆ. ಕನ್ನಡ ಕಲಿತು ತಾನೇ ಚೆನ್ನಾಗಿ ಡಬ್ ಮಾಡಿದ್ದಕ್ಕೆ ಶಾನ್ವಿಗೆ ದೊಡ್ಡ ಚಪ್ಪಾಳೆ.

  ಶಕ್ತಿಶಾಲಿ ಪಾತ್ರಗಳು

  ಶಕ್ತಿಶಾಲಿ ಪಾತ್ರಗಳು

  ಸಿನಿಮಾದ ಐದಾರು ಪಾತ್ರಗಳು ಬಹಳ ಶಕ್ತಿಶಾಲಿಯಾಗಿವೆ. ನಾರಾಯಣ (ರಕ್ಷಿತ್ ಶೆಟ್ಟಿ), ಲಕ್ಷ್ಮಿ (ಶಾನ್ವಿ ಶ್ರೀವಾಸ್ತವ), ಜಯರಾಮ (ಬಾಲಾಜಿ ಮನೋಹರ್), ತುಕರಾಮ (ಪ್ರಮೋದ್ ಶೆಟ್ಟಿ), ಅಚ್ಚುತ್ತಣ್ಣ (ಅಚ್ಚುತ್ ಕುಮಾರ್) ಪಾತ್ರಗಳಿಗೆ ಕಥೆಯಲ್ಲಿ ಹೆಚ್ಚು ಪ್ರಾಮುಖ್ಯತೆ ಇದೆ. ಅದನ್ನು ಅಷ್ಟೇ ಚೆನ್ನಾಗಿ ಎಲ್ಲ ಕಲಾವಿದರು ಬಳಸಿಕೊಂಡಿದ್ದಾರೆ.

  ಮೇ'ಕಿಂಗ್' ಮ್ಯಾಜಿಕ್

  ಮೇ'ಕಿಂಗ್' ಮ್ಯಾಜಿಕ್

  ಸಿನಿಮಾದ ಮೇಕಿಂಗ್ ನಲ್ಲಿ ಹೆಚ್ಚು ಅಂಕ ಪಡೆಯುತ್ತದೆ. ಪ್ರತಿ ದೃಶ್ಯವನ್ನು ಹೊಸ ರೀತಿಯಲ್ಲಿ, ಅತ್ಯಂತ ಸುಂದರವಾಗಿ ತೋರಿಸಿದ್ದಾರೆ. ಕ್ಯಾಮರಾ ವರ್ಕ್, ಎಡಿಟಿಂಗ್ ಎರಡೂ ವಿಭಾಗದ ಶ್ರಮ ತೆರೆ ಮೇಲೆ ಹೊಸ ಅನುಭವ ನೀಡುತ್ತದೆ. ವಿಶ್ಯೂವಲಿ ಸಿನಿಮಾ ನೆಕ್ಸ್ಟ್ ಲೆವೆಲ್ ನಲ್ಲಿದೆ. ಸಾಹಸ ದೃಶ್ಯಗಳಲ್ಲಂತು ದೊಡ್ಡ ಮ್ಯಾಜಿಕ್ ಸೃಷ್ಟಿ ಆಗಿದೆ.

  ಗೊಂದಲ ಹಾಗೂ ಗಾಂಭೀರ್ಯತೆ

  ಗೊಂದಲ ಹಾಗೂ ಗಾಂಭೀರ್ಯತೆ

  ಫಸ್ಟ್ ಹಾಫ್ ಗೆ ಹೋಲಿಕೆ ಮಾಡಿದರೆ, ಸೆಕೆಂಡ್ ಹಾಫ್ ಕೆಲವು ದೃಶ್ಯಗಳು ಬೋರ್ ಎನಿಸುತ್ತದೆ. ಸಿನಿಮಾದ ಅವಧಿ 3 ಗಂಟೆ 6 ನಿಮಿಷ ಇದ್ದು, ಕೊಂಚ ಕಡಿಮೆ ಮಾಡಬಹುದಿತ್ತು. ಚಿತ್ರದಲ್ಲಿ ಲಾಜಿಕ್ ಹುಡುಕಬಾರದು. ಕೆಲವು ಕಡೆ ಗೊಂದಲ ಕಥೆ ಅನಿಸುತ್ತೆ. ಇನ್ನು ಕೆಲವು ಕಡೆ ನಾಯಕನ ಪಾತ್ರದಲ್ಲಿ ಗಾಂಭೀರ್ಯತೆ ಕೊರತೆ ಕಾಣುತ್ತದೆ.

  ಸೆಟ್, ಕಾಸ್ಟೂಮ್ ಹಾಗೂ ಗ್ರಾಫಿಕ್ಸ್

  ಸೆಟ್, ಕಾಸ್ಟೂಮ್ ಹಾಗೂ ಗ್ರಾಫಿಕ್ಸ್

  ಸಿನಿಮಾದ ಸೆಟ್ ತುಂಬ ಚೆನ್ನಾಗಿದೆ. ಬಾರ್ ಸೆಟ್ ಅಪ್ ಹಾಗೂ ಕೋಟೆ ಸೆಟ್ ಗಳು ತುಂಬ ನೈಜವಾಗಿ ಕಾಣುತ್ತವೆ. ಸೆಟ್ ಗಳ ಅಂದ ಸಿನಿಮಾದ ಅಂದವನ್ನು ಹೆಚ್ಚು ಮಾಡಿದೆ. ಕಾಸ್ಟೂಮ್ ಪಾತ್ರಕ್ಕೆ ತಕ್ಕ ಹಾಗಿದೆ. ಗ್ರಾಫಿಕ್ಸ್ ಕೆಲಸ ತುಂಬ ಚೆನ್ನಾಗಿ ಆಗಿದೆ.

  ಸಿನಿಮಾವನ್ನು ಹೊತ್ತ ಹಿನ್ನಲೆ ಸಂಗೀತ

  ಸಿನಿಮಾವನ್ನು ಹೊತ್ತ ಹಿನ್ನಲೆ ಸಂಗೀತ

  ಅಜನೀಶ್ ಲೋಕನಾಥ್ ಹಿನ್ನಲೆ ಸಂಗೀತ ಪ್ರತಿ ದೃಶ್ಯಗಳಿಗೂ ಶಕ್ತಿ ತುಂಬಿದೆ. ಅನೇಕ ಕಡೆಯಲ್ಲಿ ಮ್ಯೂಸಿಕ್ 'ವಾವ್' ಅನಿಸುತ್ತದೆ. ಎರಡು ಹಾಡುಗಳು ಇಷ್ಟ ಆಗುತ್ತದೆ. ಇಡೀ ಸಿನಿಮಾದ ಸೌಂಡಿಂಗ್ ಚೆನ್ನಾಗಿದೆ. ಚಿತ್ರಮಂದಿರದಲ್ಲಿ ಕುಳಿತ ಪ್ರೇಕ್ಷಕರಿಗೆ ಶಬ್ದ ಥ್ರಿಲ್ ನೀಡುತ್ತದೆ.

  ಇದೊಂದು ದೊಡ್ಡ ಸಾಹಸ

  ಇದೊಂದು ದೊಡ್ಡ ಸಾಹಸ

  'ಅವನೇ ಶ್ರೀಮನ್ನಾರಾಯಣ' ಸಿನಿಮಾ ರಕ್ಷಿತ್ ಶೆಟ್ಟಿ ಮತ್ತು ತಂಡದ ಮೂರು ವರ್ಷದ ಪರಿಶ್ರಮ. ದೊಡ್ಡ ಬಜೆಟ್ ನಲ್ಲಿ ನಿರ್ಮಾಣವಾದ ದೊಡ್ಡ ಪ್ರಯತ್ನ. ಕಥೆ ಇನ್ನಷ್ಟು ಕುತೂಹಲಕಾರಿಯಾಗಿ ಇರಬೇಕಾಗಿತ್ತು ಅನಿಸುತ್ತದೆ. ಕೆಲವು ಅಂಶಗಳು ಬಿಟ್ಟು ನೋಡಿದರೆ, ಸಿನಿಮಾ ತುಂಬ ಚೆನ್ನಾಗಿದೆ. ಮೇಕಿಂಗ್ ನಲ್ಲಿ ಅವನೇ ಶ್ರೀಮನ್ನಾರಾಯಣ ಹೊಸ ಅಧ್ಯಾಯ ಬರೆದಿದ್ದಾರೆ.

  English summary
  Avane Srimannarayana kannada movie review.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X