'ಅವನೇ ಶ್ರೀಮನ್ನಾರಾಯಣ' ಟ್ವಿಟ್ಟರ್ ವಿಮರ್ಶೆ: ಸಿನಿಮಾ ನೋಡಿ ಪ್ರೇಕ್ಷಕ ಹೇಳಿದ್ದೇನು?

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷೆಯ ಅವನೇ ಶ್ರೀಮನ್ನಾರಾಯಣ ಇಂದು ರಾಜ್ಯದಾದ್ಯಂತ ಅದ್ದೂರಿಯಾಗಿ ತೆರೆಗೆ ಬಂದಿದೆ. ಕನ್ನಡ ಚಿತ್ರಾಭಿಮಾನಿಗಳು ಭಾರಿ ಕುತೂಹಲದಿಂದ ಕಾಯುತ್ತಿದ್ದ ಶ್ರೀಮನ್ನಾರಾಯಣ ಇಂದು ದರ್ಶನ ನೀಡಿದ್ದಾರೆ. ಶ್ರೀಮನ್ನಾರಾಯಣನಾಗಿ ರಕ್ಷಿತ್ ಶೆಟ್ಟಿ ಮಿಂಚಿದ್ದಾರೆ. ಲಕ್ಷ್ಮಿ ಪಾತ್ರದಲ್ಲಿ ನಟಿ ಶಾನ್ವಿ ಶ್ರೀವಾತ್ಸವ್ ಕಾಣಿಸಿಕೊಂಡಿದ್ದಾರೆ.

ನಿರ್ದೇಶಕ ಸಚಿನ್ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬಂದ ಸಿನಿಮಾ ಶ್ರೀಮನ್ನಾರಾಯಣನಿಗೆ ಪುಷ್ಕರ್ ಮಲ್ಲಿಕಾರ್ಜುನಯ್ಯ ಬಂಡವಾಳ ಹೂಡಿದ್ದಾರೆ. ಭಾರಿ ಕುತೂಹಲ ಮತ್ತು ನಿರೀಕ್ಷೆಯೊಂದಿಗೆ ಬಂದ ಶ್ರೀಮನ್ನಾರಾಯಣನ್ನು ಮೊದಲು ನೋಡಿ ಪ್ರೇಕ್ಷಕರು ಹೇಳಿದ್ದೇನು? ಟ್ವಿಟ್ಟರ್ ನಲ್ಲಿ ಬಂದ ಪ್ರೇಕ್ಷಕರ ವಿಮರ್ಶೆ ಹೇಗಿದೆ?ಮುಂದೆ ಓದಿ..

ಮಾಸ್ ಮಸಾಲ ಎಂಟಟೈನರ್ ಸಿನಿಮಾ

ಮಾಸ್ ಮಸಾಲ ಎಂಟಟೈನರ್ ಸಿನಿಮಾ

"ಅವನೇ ಶ್ರೀಮನ್ನಾರಾಯಣ ವೆಲ್ ಪ್ಯಾಕಡ್ ಮಸಾಲ ಎಂಟಟೈನರ್ ಸಿನಿಮಾ. ಅದ್ಭುತವಾದ ಸಂಭಾಷಣೆ, ರಕ್ಷಿತ್ ಶೆಟ್ಟಿ ಅತ್ಯುತ್ತಮವಾದ ಅಭಿನಯ, ಅದ್ಭುತ ದೃಶ್ಯಗಳು ಶಿಳ್ಳೆ, ಚಪ್ಪಾಳೆ ಸುರಿಮಳೆ ಬೀಳುತ್ತೆ"ಎಂದು ಹೇಳಿದ್ದಾರೆ.

ಎಲ್ಲವೂ ರಕ್ಷಿತ್ ಮಯ

ಎಲ್ಲವೂ ರಕ್ಷಿತ್ ಮಯ

"ಹೇಗಿದ್ದಾನೇ ಶ್ರೀಮನ್ನಾರಾಯಣ (ಅವನೇ)? ಒಂದು ಹೊಸ ಪ್ರಯತ್ನ-ಹೊಸ ರೀತಿ. ಎಲ್ಲವೂ ರಕ್ಷಿತ್ ಶೆಟ್ಟಿ ಮಯ. ರಕ್ಷಿತ್ ನಟನೆ, ಕಾಮಿಡಿ ಟೈಮಿಂಗ್, ಹಿನ್ನಲೆ ಸಂಗೀತ ಎಲ್ಲವು ಸೂಪರ್. ಚಿತ್ರದ ಕಥೆ ಮತ್ತು ಹೇಳುವ ರೀತಿ ಚೆನ್ನಾಗಿ ಇದೆ ಮತ್ತು ಹೊಸದಾಗಿದೆ. ಚಿತ್ರದ ಮೊದಲಾರ್ಧ ಹೊಸತನ ಮತ್ತು ಟ್ವಿಸ್ಟ್ ಗಳಿಂದ ಅದ್ಭುತವಾಗಿದೆ"

ಭಾರತೀಯ ಚಿತ್ರರಂಗಕ್ಕೆ ಅದ್ಭುತ ಕೊಡುಗೆ

ಭಾರತೀಯ ಚಿತ್ರರಂಗಕ್ಕೆ ಅದ್ಭುತ ಕೊಡುಗೆ

"ನೀವು ಯಾವ ರೀತಿ ಕಥೆ ಹೇಳುವ ಮನುಷ್ಯ. ಸಂಪೂರ್ಣ ವಿಭಿನ್ನವಾದ ಸಿನಿಮಾವಿದು. ಭಾರತೀಯ ಸಿನಿಮಾದಲ್ಲಿ ಈ ರೀತಿಯ ಕಥೆಯನ್ನು ನಿರೂಪಿಸುವುದನ್ನು ನಾನು ಇದುವೆರೆಗೂ ನೋಡಿಯೆ ಇಲ್ಲ. ವೈಭವಯುತವಾದ ನಾರಾಯಣ. ಭಾರತೀಯ ಚಿತ್ರರಂಗಕ್ಕೆ ಅದ್ಭುತ ಕೊಡುಗೆ. ಸಾಮಾನ್ಯ ಕಥೆಯಂತೆ ನಿರೀಕ್ಷೆ ಮಾಡಬೇಡಿ. ಸಂಪೂರ್ಣವಾಗಿ ಹೊಸ ರೀತಿಯ ಸಿನಿಮಾ.

ಸಿನಿಮಾ ಸಖತ್ ಬೋರ್ ಆಗಿದೆ

ಸಿನಿಮಾ ಸಖತ್ ಬೋರ್ ಆಗಿದೆ

"ಅವನೇ ಶ್ರೀಮನ್ನಾರಾಯಣ ಸಿನಿಮಾ ಸಖತ್ ಬೋರಿಂಗ್ ಆಗಿದೆ. ನಿರಾಸೆ ಮೂಡಿಸಿದೆ. ಸಿನಿಮಾದ ಮೊದಲ ದೃಶ್ಯ ಸಿನಿಮಾ ಕಥೆಗೆ ಸಂಪರ್ಕ ಪಡೆಯುವುದಿಲ್ಲ. ರಕ್ಷಿತ್ ಮುಂದಿನ ಸಿನಿಮಾ ಪುಣ್ಯಕೋಟಿ ಸಿನಿಮಾಗೆ ಒಳ್ಳೆಯದಾಗಲಿ" ಎಂದು ಹೇಳಿದ್ದಾರೆ.

More from Filmibeat

English summary
Avane Srimannarayana Kannada movie Twitter review.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X