Avatar: Fire and Ash Movie Review: ಬೆಂಕಿಯಂತಹ ಪ್ಯಾಂಡೋರಾ ಲೋಕದಲ್ಲಿ ಮುಗ್ಗರಿಸಿ ಬಿದ್ದ ಜೇಮ್ಸ್ ಕ್ಯಾಮರೂನ್

Rating:
3.0/5
Star Cast: ಸ್ಯಾಮ್ ವರ್ದಿಂಗ್ಟನ್, ಜೊಯಿ ಸಲ್ಡಾನಾ, ಸಿಗೋರ್ನಿ ವೀವರ್, ಸ್ಟೀಫನ್ ಲ್ಯಾಂಗ್ ಕೇಟ್ ವಿನ್ಸ್ಲೆಟ್, ಮುಂತಾದವರು
Director: ಜೇಮ್ಸ್ ಕ್ಯಾಮರೂನ್

ಕಲ್ಪನೆಗೆ ನಿಲುಕದ ಉದ್ಯಮ ಹಾಲಿವುಡ್. ಬೆಳ್ಳಿತೆರೆಯ ಮೇಲೆ ಅದ್ಭುತ ಸೃಷ್ಟಿಸುವ ಕಲೆ ಇವರಿಗೆ ಚೆನ್ನಾಗಿಯೇ ಕರಗತವಾಗಿರುತ್ತೆ. ಅದರಲ್ಲಿಯೂ ಈಗ ತಂತ್ರಜ್ಞಾನ ಇಂದು ನಮ್ಮ ಜೀವನವನ್ನು ಆವರಿಸಿಕೊಂಡಿದೆ. ಅದನ್ನು ಹೇಗೆ ಬಳಸಬೇಕೆಂಬುದೇ ಜಾಣತನ. ಈ ಜಾಣತನವನ್ನು ಹೊಂದಿರುವ ಹಾಲಿವುಡ್ ಮಂದಿ ತಮ್ಮ ಪ್ರಯತ್ನ ಮತ್ತು ಪ್ರಯೋಗಗಳ ಮೂಲಕ ಹಲವರನ್ನು ನಿಬ್ಬೇರಗಾಗಿಸುತ್ತಲೇ ಬಂದಿದ್ದಾರೆ. ಅದರಲ್ಲಿಯೂ ಭಾರತದಲ್ಲಿ ಈ ಹಾಲಿವುಡ್‌ನವರ ಕೈಚಳಕಕ್ಕೆ...

ಮಾರು ಹೋಗುವವರ ಸಂಖ್ಯೆ ತುಸು ಹೆಚ್ಚೇ ಇದೆ. ಇದಕ್ಕೆ ಕೈಗನ್ನಡಿ ಎಂಬಂತೆ ಹಾಲಿವುಡ್‌ನಲ್ಲಿ ಸೃಷ್ಟಿಯಾಗುವ ಅದ್ಭುತ ಲೋಕ ಕಣ್ತುಂಬಿಕೊಳ್ಳಲು ಭಾರತೀಯರು ಸದಾ ಒಂದು ಹೆಜ್ಜೆ ಮುಂದಿರುತ್ತಾರೆ. ಹಾಲಿವುಡ್‌ ಸಿನಿಮಾ ನೋಡಲು ಕಾತುರದಿಂದ ಕಾಯುತ್ತಿರುತ್ತಾರೆ. ಇಂತಹದ್ದೇ ಒಂದು ಕಾಯುವಿಕೆಯ ವಾತಾವರಣವನ್ನು ''ಅವತಾರ್ 3'' ನಿರ್ಮಾಣ ಮಾಡಿತ್ತು. ಸದ್ಯ ಈಗ ಈ ಕಾಯುವಿಕೆಗೆ ಬ್ರೇಕ್ ಬಿದ್ದಿದೆ. ''ಅವತಾರ್ :ಫೈರ್ ಆಂಡ್ ಆಶ್'' ಬಿಡುಗಡೆಯಾಗಿದೆ. ಹಾಗಿದ್ದರೆ ಹೇಗಿದೆ ಅವತಾರ್ 3..? ಚಿತ್ರದ ಕಥಾಹಂದರವೇನು..? ನಿರೀಕ್ಷೆಯ ಪರೀಕ್ಷೆಯಲ್ಲಿ ಈ ಚಿತ್ರ ಪಾಸಾ..? ಫೇಲಾ..? ಎಂದು ತಿಳಿಯಲು ಮುಂದೆ ಓದಿ.

Avatar 3 Review  James Cameron   s    Fire and Ash    Stuns the Eyes but Leaves the Soul Cold

ಕಥಾಹಂದರ

''ಅವತಾರ್‌''ನ ಹಿಂದಿನ ಭಾಗ '' ದಿ ವೇ ಆಫ್ ವಾಟರ್'' ಹಿನ್ನೆಲೆಯಲ್ಲಿಯೇ ಈ ಚಿತ್ರದ ಕಥೆ ಅನಾವರಣವಾಗುತ್ತೆ. ಜೇಕ್ ಸಲ್ಲಿ (ಸ್ಯಾಮ್ ವರ್ತಿಂಗ್‌ಟನ್ ) ಮತ್ತು ನೇತಿರಿ ( ಜೋ ಸಲ್ದಾನಾ ) ತಮ್ಮ ಪುತ್ರ ನೆತೆಮಿಯಂನ ನಿಧನದಿಂದ ದುಖದಲ್ಲಿ ಮುಳುಗಿರುತ್ತಾರೆ. ಜೇಕ್ ಸುಲ್ಲಿ ಜವಾಬ್ಧಾರಿಯುತ ನಾಯಕ. ಆದರೆ.. ನೇಯ್ತಿರಿ ಭಾವುಕ. ಇವರ ಈ ತದ್ವಿರುದ್ದ ಭಾವನೆ ಚಿತ್ರದ ಜೀವಾಳ.

ಮಾನವನ ಪ್ರದೇಶದ ಮೇಲೆ ದಾಳಿಯನ್ನು ಮಾಡಲು ಜೇಕ್ ಸುಲ್ಲಿ ಸಿದ್ಧವಾದಾಗ ವಾರಂಗ್ (ಊನಾ ಚಾಪ್ಲಿನ್) ಪ್ರವೇಶವಾಗುತ್ತೆ. ಮಾನವರ ಸಹಯೋಗದೊಂದಿಗೆ ಈ ವಾರಂಗ್ ನೇತೃತ್ವದ ತಂಡ ಆಶ್ ಪೀಪಲ್ ತಮ್ಮ ಎದುರಾಳಿ ನಾವಿ ಜನಾಂಗ್ ಮೇಲೆ ಆಕ್ರಮಣ ಮಾಡುತ್ತೆ. ಸಾವು-ನೋವು-ಯುದ್ಧ-ಯೋಜನೆ-ತಂತ್ರ-ಪ್ರತಿತಂತ್ರ ಈ ಸಂಘರ್ಷವೇ ಪ್ಯಾಂಡೋರಾ ಪ್ರಪಂಚದ ಕಥಾಹಂದರ.


ಬೆಕ್ಕಸ ಬೆರಗಾಗಿಸುವ ಪ್ಯಾಂಡೋರಾ ಪ್ರಪಂಚ

ಅವತಾರ್ ಸರಣಿ ತನ್ನ ದೃಶ್ಯ ವೈಭವಕ್ಕೆ ಹೆಸರುವಾಸಿ. ಇಲ್ಲಿಯೂ ಕೂಡ ನಿರ್ದೇಶಕ ಜೇಮ್ಸ್ ಕ್ಯಾಮರೂನ್ ಅದ್ಭುತವಾದ ಲೋಕ ಸೃಷ್ಟಿಸಿದ್ದಾರೆ. ಪ್ಯಾಂಡೋರಾ ಪ್ರಪಂಚ ಮತ್ತು ಅಲ್ಲಿನ ಸಾಹಸಗಾಥೆ ಈ ಚಿತ್ರದ ಪ್ರಮುಖ ಆಸ್ತಿ. ನೋಡುಗರು ಈ ಲೋಕ ಕಣ್ತುಂಬಿಕೊಳ್ಳುವಾಗ ಮಂತ್ರಮುಗ್ದಗೊಳ್ಳುವುದು ಖಚಿತ.


ಪ್ಲಸ್ ಪಾಯಿಂಟ್ಸ್ ಏನು ?

ಆಶ್ ಪೀಪಲ್ ಪಂಗಡದ ಪರಿಚಯವನ್ನು ಜೇಮ್ಸ್ ಕ್ಯಾಮರೂನ್ ಸೊಗಸಾಗಿ ಮಾಡಿದ್ದಾರೆ. ಇನ್ನು ನವಿ ಜನಾಂಗ ಶಾಂತಿ ಪ್ರಿಯರೆಂದು ಹಲವರು ಅಂದುಕೊಂಡಿದ್ದಾರೆ. ಆದರೆ ಇಲ್ಲಿ ಈ ಜನಾಂಗದಲ್ಲಿ ಅಡಗಿದ್ದ ಜ್ವಾಲಾಮುಖಿಯನ್ನು ನೀವು ನೋಡಬಹುದು. ಜೇಕ್ ಸಲ್ಲಿ ಮತ್ತು ಆ ತಂಡದ ಮೇಲಿನ ಆರಂಭಿಕ ದಾಳಿ.. ಆರ್‌ಡಿಎ ಕಪಿಮುಷ್ಠಿಯಿಂದ ಜೇಕ್ ಸಲ್ಲಿಯನ್ನು ಪಾರು ಮಾಡುವ ದೃಶ್ಯ, ಕ್ಲೈಮ್ಯಾಕ್ಸ್ ರೋಚಕ ಅನುಭವ ನೀಡುತ್ತೆ. ಇನ್ನೂ ವಿಎಫ್‌ಎಕ್ಸ್‌ ತಂತ್ರಜ್ಞಾನವನ್ನು ಜೇಮ್ಸ್ ಕ್ಯಾಮರೂನ್ ಇಲ್ಲಿ ಅದ್ಭುತವಾಗಿ ಉಪಯೋಗಿಸಿದ್ದಾರೆ. ದೃಶ್ಯ ವೈಭವದ ಜೊತೆ ಕೆಲ ಭಾವನಾತ್ಮಕ ಸನ್ನಿವೇಶಗಳು ಕೂಡ ಇಲ್ಲಿ ಇವೆ. ವರಾಂಗ್ ಪಾತ್ರ ಮತ್ತು ಆ ಪಾತ್ರವನ್ನು ಪೋಷಿಸಿರುವ ರೀತಿ ಚೆನ್ನಾಗಿದೆ.

avatar-3-review-james-cameron-s-fire-and-ash-stuns-the-eyes-but-leaves-the-soul-cold

ಮೈನಸ್ ಪಾಯಿಂಟ್ಸ್ ಏನು ?

ಜೇಮ್ಸ್ ಕ್ಯಾಮರೂನ್ ನಿರ್ದೇಶನದ ಹಿಂದಿನ ಚಿತ್ರ ''ಅವತಾರ್-ದಿ ವೇ ಆಫ್ ವಾಟರ್‌'' ಚಿತ್ರದಲ್ಲಿ ಕೂಡ ನ್ಯೂನತೆಗಳಿದ್ದವು. ಆದರೆ..ಎಲ್ಲವೂ ನೀರಿನಲ್ಲಿ ತೇಲಿ ಹೋಗಿದ್ದವು. ಆದರೆ ಇಲ್ಲಿ ನ್ಯೂನತೆಗಳು ಕಣ್ಣಿಗೆ ಕಾಣಿಸುತ್ತವೆ. ಈ ಚಿತ್ರಕ್ಕೆ ಚಿತ್ರದ ಚಿತ್ರಕಥೆಯೇ ಮುಳುವಾಗಿದೆ. ಈ ಸಿನಿಮಾ ಜೇಮ್ಸ್ ಕ್ಯಾಮರೂನ್ ಅವರದ್ದೇನಾ..? ಎನ್ನುವ ಪ್ರಶ್ನೆ ಮೂಡುವಷ್ಟು ಚಿತ್ರಕಥೆ ಪೇಲವವಾಗಿದೆ. ಅದರಲ್ಲಿಯೂ ಚಿತ್ರದ ಮೊದಲಾರ್ಧ ಪ್ರೇಕ್ಷಕರ ತಾಳ್ಮೆಯನ್ನು ಪರೀಕ್ಷೆ ಮಾಡುತ್ತೆ. ಹೊಸತನದ ನಿರೀಕ್ಷೆಯಲ್ಲಿ ನೀವು ಈ ಚಿತ್ರ ನೋಡಲು ಹೋದರೆ ನಿಮಗೆ ನಿರಾಸೆ ಕಟ್ಟಿಟ್ಟ ಬುತ್ತಿ.

ದ್ವಿತೀಯಾರ್ಧದಲ್ಲಿಯೂ ಕೂಡ ಹೆಚ್ಚೇನು ಮ್ಯಾಜಿಕ್‌ನ ಈ ಚಿತ್ರ ಮಾಡುವುದಿಲ್ಲ. ವಿಎಫ್‌ಎಕ್ಸ್‌ ಅಬ್ಬರ ಇದ್ದರೂ ಕೂಡ ಭಾವನೆಗಳು ಇಲ್ಲಿ ಕಣ್ಮರೆಯಾಗಿವೆ. ಇನ್ನು ಹಲವು ದೃಶ್ಯಗಳು ಈ ಮೊದಲೇ ''ಅವತಾರ್ 2''ದಲ್ಲಿ ನೋಡಿದಂತೆ ನಿಮಗೆ ಭಾಸವಾಗುತ್ತವೆ. ಒಂದರ್ಥದಲ್ಲಿ ಜೇಮ್ಸ್ ಕ್ಯಾಮರೂನ್ ವೃತ್ತಿ ಬದುಕಿನ ಅತ್ಯಂತ ಸಾಮಾನ್ಯ ಮತ್ತು ಸಾಧಾರಣ ಸಿನಿಮಾ ಈ ಅವತಾರ್ : ಫೈರ್ ಆಂಡ್ ಆಶ್ ಎಂದರೆ ಅದು ತಪ್ಪಾಗಲಿಕ್ಕಿಲ್ಲ.

ಅಭಿನಯ ಹೇಗಿದೆ..?

ಚಿತ್ರದ ಪ್ರಮುಖ ಪಾತ್ರಧಾರಿಗಳಾದ ಸ್ಯಾಮ್ ವರ್ದಿಂಗ್ಟನ್.. ಜೊತಿ ಸಲ್ಡಾನಾ.. ತಮ್ಮ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಾರಂಗ್ ಪಾತ್ರವನ್ನು ನಿರ್ವಹಿಸಿರುವ ಊನಾ ಚಾಪ್ಲಿನ್ ಈ ಚಿತ್ರದ ಅಚ್ಚರಿ ಮತ್ತು ಆಕರ್ಷಣೆ. ಕೇಟ್ ವಿನ್ಸಲೆಟ್ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಉಳಿದವರು ತಮಗೆ ನೀಢಿದ ಕೆಲಸವನ್ನು ಅಚ್ಚು ಕಟ್ಟಾಗಿ ನಿರ್ವಹಿಸಿದ್ದಾರೆ.

ಇನ್ನು ತಾಂತ್ರಿಕ ವಿಭಾಗಕ್ಕೆ ಬಂದರೆ ರಸ್ಸೆಲ್ ಕಾರ್ಪೆಂಟರ್ ಛಾಯಾಗ್ರಹಣ ಮತ್ತು ಸೈಮನ್ ಫ್ರಾಂಗ್ಲೆನ್ ಅವರ ಸಂಗೀತ ನಿರ್ದೇಶನ ಈ ಚಿತ್ರದ ಬೆನ್ನೆಲುಬು. ಗ್ರಾಫಿಕ್ಸ್ ಬಗ್ಗೆ ಕೆಮ್ಮಂಗಿಲ್ಲ. ಚಿತ್ರದ ಹಲವು ಭಾಗಗಳಿಗೆ ಕತ್ತರಿ ಹಾಕಬಹುದಿತ್ತು.

ಕೊನೆ ಮಾತು

ಒಟ್ನಲ್ಲಿ ''ಅವತಾರ್'' ಸರಣಿಗೆ ಅದ್ದರದ್ದೇ ಆದ ಅಭಿಮಾನಿ ಬಳಗ ಇದೆ. ಜೇಮ್ಸ್ ಕ್ಯಾಮರೂನ್ ಅವರನ್ನು ಆರಾಧಿಸುವ ಪ್ರೇಕ್ಷಕರ ಬಣ ಇದೆ. ಹಿಂದಿನ ಎರಡು ಭಾಗಗಳಿಗೆ ಹೋಲಿಸಿದರೆ ಈ ಚಿತ್ರ ಖಂಡಿತವಾಗಿಯೂ ನಿರಾಸೆ ಮಾಡುತ್ತೆ. ಹೊಸತನ ಇಲ್ಲದೆ ಚಿತ್ರ ಸೊರಗಿದೆ. ಕ್ಯಾಮರೂನ್ ಕೈಚಳಕ ಇಲ್ಲಿ ಸಂಪೂರ್ಣವಾಗಿ ಕಣ್ಮರೆಯಾಗಿದೆ. ಆದರೂ ಕೂಡ ಇಷ್ಟೆಲ್ಲಾ ನ್ಯೂನತೆಗಳ ಹೊರತಾಗಿಯೂ ಜೇಮ್ಸ್ ಕ್ಯಾಮರೂನ್ ಅವರ ಮೇಲಿನ ಅಭಿಮಾನದಿಂದ ಅವರ ಅಭಿಮಾನಿಗಳು ಈ ಚಿತ್ರವನ್ನು ಒಮ್ಮೆ ನೋಡಲು ಅಡ್ಡಿ ಇಲ್ಲ. ಉಳಿದವರು ಈ ಚಿತ್ರ ಓಟಿಟಿ ವೇದಿಕೆಗೆ ಬರುವವರೆಗೆ ಕಾಯಬಹುದು.

More from Filmibeat

English summary
Is Avatar: Fire and Ash worth the hype? Explore the first reviews of James Cameron’s sequel. Experience the visual triumph and see why the story is dividing audiences.
Read more about: avatar hollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X