Ayyana Mane ‍‍‍Twitter Review: ಮೊದಲ ಕನ್ನಡ ಥ್ರಿಲ್ಲರ್ ವೆಬ್‌ ಸೀರಿಸ್ ಹೇಗಿದೆ?

ಪ್ರತಿವಾರ ಸಾಕಷ್ಟು ಕನ್ನಡ ಸಿನಿಮಾಗಳು ತೆರೆಗೆ ಬರ್ತಾವೆ. ಇನ್ನು ಓಟಿಟಿಯಲ್ಲಿ ಒಂದಷ್ಟು ಸಿನಿಮಾ ಹಾಗೂ ವೆಬ್ ಸೀರಿಸ್‌ಗಳು ವೀಕ್ಷಕರನ್ನು ರಂಜಿಸುತ್ತವೆ. ಆದರೆ ಪರಭಾಷೆಯ ವೆಬ್‌ ಸೀರಿಸ್‌ಗಳು ಕನ್ನಡಕ್ಕೆ ಡಬ್ ಆಗಿ ಬರೋದೇ ಹೆಚ್ಚು. ಒರಿಜಿನಲ್ ಕನ್ನಡ ವೆಬ್ ಸೀರಿಸ್ ಬರ ಎದುರಿಸುವಂತಾಗಿದೆ.

ಹೊಂಬಾಳೆ ಫಿಲ್ಮ್ಸ್ ಸಂಸ್ಥೆ ಮುಂದಿನ ದಿನಗಳಲ್ಲಿ ಕನ್ನಡದಲ್ಲಿ ವೆಬ್ ಸೀರಿಸ್ ನಿರ್ಮಿಸುವ ಪ್ರಯತ್ನದಲ್ಲಿದೆ. ಈ ಬಗ್ಗೆ ನೆಟ್‌ಫ್ಲಿಕ್ಸ್‌ ಜೊತೆ ಮಾತುಕತೆ ನಡೆಸುತ್ತಿರುವುದಾಗಿ ನಿರ್ಮಾಪಕ ವಿಜಯ್ ಕಿರಗಂದೂರ್ ಹೇಳಿದ್ದರು. ಸದ್ಯ 'ಅಯ್ಯನ ಮನೆ' ಎಂಬ ಥ್ರಿಲ್ಲರ್ ಸರಣಿ ಜೀ-5ನಲ್ಲಿ ರಿಲೀಸ್ ಆಗಿದೆ.

Ayyana Mane          X Review  Ott users reacts on first Kannada web series

ರಮೇಶ್ ಇಂದಿರಾ ನಿರ್ದೇಶನದ ವೆಬ್ ಸೀರಿಸ್ ಅನ್ನು ಶ್ರುತಿ ನಾಯ್ಡು ನಿರ್ಮಾಣ ಮಾಡಿದ್ದಾರೆ. 6 ಸಂಚಿಕೆಗಳ ವೆಬ್ ಸೀರಿಸ್ ಈಗಾಗಲೇ ಓಟಿಟಿ ವೀಕ್ಷಕರ ಗಮನ ಸೆಳೆಯುತ್ತಿದೆ. ವೀಕೆಂಡ್‌ನಲ್ಲಿ ನೀವು ಕೂಡ ಅಚ್ಚಕನ್ನಡದ ವೆಬ್ ಸೀರಿಸ್ ಅನ್ನು ನೋಡಿ ಎಂಜಾಯ್ ಮಾಡಿ. ಈಗಾಗಲೇ ನೋಡಿದವರು 'X' ವೇದಿಕೆಯಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಖಂಡಿತ ನೋಡಿ

"ಅಯ್ಯನ ಮನೆ ವೆಬ್ ಸೀರಿಸ್ ನೋಡಲೇಬೇಕು. 'ಅಯ್ಯನ ಮನೆ'ಯಲ್ಲಿನ ನಿಗೂಢತೆ, ಸಸ್ಪೆನ್ಸ್, ಎಲ್ಲವೂ ಚೆನ್ನಾಗಿದೆ. ನೀವು ನೋಡಿ ಎಂದು ನಾನು ಶಿಫಾರಸ್ಸು ಮಾಡ್ತೀನಿ" ಎಂದು ಸಂಜಯ್ ಪೊನ್ನಪ್ಪ ಎಂಬುವವರು ಬರೆದುಕೊಂಡಿದ್ದಾರೆ.

ಕ್ಲೈಮ್ಯಾಕ್ಸ್ ಚಿಂದಿ

"ಕನ್ನಡ ವೆಬ್ ಸೀರಿಸ್ 'ಅಯ್ಯನ ಮನೆ' ನಾನು ನೋಡ್ಡೆ. 'ದಿಯಾ' ಚಿತ್ರದ ಖುಷಿ ರವಿ ಅವರ ಅತ್ಯುತ್ತಮ ಅಭಿನಯ, ಉಲ್ಲಾಸದಾಯಕ ಮತ್ತು ಆಕರ್ಷಕ ಕಥೆ. ಕ್ಲೈಮ್ಯಾಕ್ಸ್ ಅತ್ಯುತ್ತಮವಾಗಿತ್ತು. ಬರವಣಿಗೆ ಹಾಗೂ ಅದನ್ನು ಕಟ್ಟಿಕೊಟ್ಟಿರುವ ರೀತಿ ನನ್ನನ್ನು ತುಂಬಾ ಪ್ರಭಾವಿಸಿತು" ಎಂದು ಮತ್ತೊಬ್ಬರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಚೆನ್ನಾಗಿದೆ ನೋಡಿ

"ಜೀ-5 ನಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಕನ್ನಡ ವೆಬ್ ಸರಣಿ ಅಯ್ಯನ ಮನೆ. ಬಹಳ ಇಂಟೆನ್ಸ್ ಹಾಗೂ ಸೂಪರ್‌ನ್ಯಾಚುರಲ್ ಅಂಶಗಳಿಂದ ಕೂಡಿದ್ದು, ಆರಂಭದಲ್ಲೇ ಕಥಾವಸ್ತು ನಿಮ್ಮನ್ನು ಆಕರ್ಷಿಸುತ್ತದೆ. ಇಂಟೆನ್ಸ್ ಹಾಗೂ ರಾ ಎನಿಸುತ್ತದೆ. ಮುಖ್ಯಭೂಮಿಕೆಯಲ್ಲಿ ನಟಿಸಿರುವ ಅಭಿನಯ ಎದ್ದು ಕಾಣುತ್ತದೆ. ಚೆನ್ನಾಗಿದೆ ನೋಡಿ" ಎಂದು ವೆಂಟಕ್ ಸಾಯಿ ಕಟ್ಟಾ ಎಂಬುವವರು ಸಲಹೆ ನೀಡಿದ್ದಾರೆ.

ಒಂದೊಳ್ಳೆ ವೆಬ್ ಸೀರಿಸ್

"ಅಯ್ಯನ ಮನೆ ವೆಬ್ ಸೀರಿಸ್ ಈಗ ನೋಡಿ ಮುಗಿಸಿದೆ. ಇದು ನಮ್ಮ ಆಧ್ಯಾತ್ಮಿಕ ಅಭ್ಯಾಸದ ಸುತ್ತ ಸುತ್ತುವರೆದಿರುವ ಉತ್ತಮವಾಗಿ ನಿರ್ಮಿಸಲಾದ ವೆಬ್ ಸೀರಿಸ್. ಖುಷಿ ಹಾಗೂ ಅರ್ಚನಾ ಅವರ ಪವರ್‌ಫುಲ್ ಪರ್ಫಾರ್ಮನ್ಸ್ ಚಿಂದಿ. ಇದು ಜೀ-5ನ ಮೊದಲ ಒರಿಜಿನಲ್ ಕನ್ನಡ ವೆಬ್ ಸೀರಿಸ್. ಒಮ್ಮೆ ನೋಡಿ ನೀವು ತೃಪ್ತರಾಗುತ್ತೀರಿ" ಎಂದು ಸುಮಂತ್ ಎಂಬುವವರು ಬರೆದುಕೊಂಡಿದ್ದಾರೆ.

ಮಿಸ್‌ ಮಾಡಬೇಡಿ

"ಜೀ-5 ನಲ್ಲಿ 'ಅಯ್ಯನ ಮನೆ' ವೆಬ್ ಸೀರಿಸ್ ಸ್ಟ್ರೀಮಿಂಗ್ ಆಗುತ್ತಿದೆ. ಸಸ್ಪೆನ್ಸ್, ಸಂಪ್ರದಾಯ ಮತ್ತು ರೋಮಾಂಚನಗಳ ಅದ್ಭುತ ಮಿಶ್ರಣ. ಮಾನಸಿ ಸುಧೀರ್ ಅದ್ಭುತ ಪ್ರದರ್ಶನ ಇದೆ. ಸಂಪೂರ್ಣವಾಗಿ ಆಕರ್ಷಕವಾಗಿದೆ! ಈ ಅದ್ಭುತ ಮಾಸ್ಟರ್‌ ಪೀಸ್ ಅನ್ನು ಮಿಸ್ ಮಾಡಿಕೊಳ್ಳಬೇಡಿ." ಎಂದು ಮತ್ತೊಬ್ಬರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಖುಷಿ ರವಿ ನಟನೆ ಅದ್ಭುತ

"ಅಯ್ಯನ ಮನೆ ಕನ್ನಡದ ಅದ್ಭುತ ಥ್ರಿಲ್ಲರ್ ವೆಬ್ ಸೀರಿಸ್ ಆಗಿದ್ದು, ಸಂಪೂರ್ಣ ಹಳ್ಳಿಯ ವಾತಾವರಣವನ್ನು ಹೊಂದಿದೆ. ಕಥೆಯು ತನ್ನ ಗಂಡನ ಮನೆಗೆ ಪ್ರವೇಶಿಸುವ ನವ ವಧು ಜಾಜಿಯ ಸುತ್ತ ಸುತ್ತುತ್ತದೆ. ಖುಷಿ ರವಿ ಅದ್ಭುತವಾಗಿ ನಟಿಸಿದ್ದಾರೆ. ಬಿಜಿಎಂ, ಸೆಟ್‌ಗಳು ಮತ್ತು ಸಸ್ಪೆನ್ಸ್ ಎಲ್ಲವೂ ತುಂಬಾ ಚೆನ್ನಾಗಿವೆ. ನೀವು ಮಿಸ್ಟರಿ ಇಷ್ಟಪಟ್ಟರೆ ಇದನ್ನು ವೀಕ್ಷಿಸಿ" ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.

ಜಾಜಿಯ ಕಥೆ

"ರೋಮಾಂಚಕ ಕಥೆ. ಇದು ತನ್ನ ಗಂಡನ ಹಳೆಯ ಮನೆಯಲ್ಲಿ ವಿಚಿತ್ರವಾದ ವಿಷಯಗಳನ್ನು ಕಂಡುಕೊಳ್ಳುವ ಯುವ ವಧು ಜಾಜಿ ಕುರಿತ ಕಥೆ. ವಿಶೇಷವಾಗಿ ಖುಷಿ ರವಿ ಮತ್ತು ಮಾನಸಿ ಸುಧೀರ್ ಅವರ ನಟನೆ ನಿಜವಾಗಿಯೂ ಚೆನ್ನಾಗಿದೆ. ಕಥೆಯು ನಿಗೂಢತೆಯಿಂದ ತುಂಬಿದ್ದು ನಿಮ್ಮನ್ನು ಆಕರ್ಷಿಸುತ್ತದೆ. ಸಸ್ಪೆನ್ಸ್ ಮತ್ತು ನಾಟಕವನ್ನು ಆನಂದಿಸುವ ಯಾರಿಗಾದರೂ ಇದು ಉತ್ತಮವಾಗಿರುತ್ತದೆ" ಎಂದು ನೆಟ್ಟಿಗರೊಬ್ಬರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಟ್ವಿಸ್ಟ್‌ಗಳು ಚೆನ್ನಾಗಿದೆ

"ಕನ್ನಡದ ಮೊದಲ ಥ್ರಿಲ್ಲರ್ ವೆಬ್ ಸೀರಿಸ್ 'ಅಯ್ಯನ ಮನೆ' ವೀಕ್ಷಿಸಿದೆ. ಅದ್ಭುತವಾಗಿದೆ. ಸ್ವಲ್ಪ ಕೂಡ ಕಣ್ಣು ಮಿಟುಕಿಸದೇ ನೋಡುವಂತಿದೆ. ಕಲಾವಿದರ ಆಯ್ಕೆ, ಕಥೆ, ಛಾಯಾಗ್ರಹಣ, ಹಿನ್ನೆಲೆ ಸಂಗೀತ, ಕಲಾ ವಿಭಾಗ ಮತ್ತು ನಿರ್ದೇಶನ ವಿಭಾಗ ಚೆನ್ನಾಗಿದೆ. ಎಲ್ಲಾ ಸಂಚಿಕೆಗಳನ್ನು ವೀಕ್ಷಿಸಿದೆ. ಪ್ರತಿಯೊಂದು ಸಂಚಿಕೆಯೂ ತಿರುವುಗಳನ್ನು ಹೊಂದಿರುವುದು ಚೆನ್ನಾಗಿದೆ. ಆದರೆ ಕ್ಲೈಮ್ಯಾಕ್ಸ್‌ನಲ್ಲಿ, ಅಯ್ಯನಮನೆಯ ಎಲ್ಲಾ ಕೊಲೆಗಳ ಹಿಂದೆ ಯಾರಿದ್ದಾರೆ ಜನರಿಗೆ ನಿಗೂಢವಾಗಿಯೇ ಉಳಿದಿದೆ" ಎಂದು ಮಧು ಎಂಬುವವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಬಹಳ ಚೆನ್ನಾಗಿದೆ

'ಅಯ್ಯನ ಮನೆ' ವೆಬ್ ಸೀರಿಸ್ ತುಂಬಾ ಚೆನ್ನಾಗಿದೆ. ಮೊದಲ ಸೀನ್‌ನಿಂದಲೇ ನಮ್ಮನ್ನ ಕಥೆಯೊಳಗೆ ಸೆಳೆಯುತ್ತದೆ. ಭಯ ಮೂಡಿಸುವ ಕ್ಷಣಗಳು ತುಂಬಾ ಚೆನ್ನಾಗಿ ಬಂದಿವೆ ಎಂದು ಇನ್ನೊಬ್ಬರು ಟ್ವಿಟ್ ಮಾಡಿದ್ದಾರೆ.

ಖುಷಿ ಮನಮುಟ್ಟುವ ನಟನೆ

ಜೀ5 ನಲ್ಲಿ 'ಅಯ್ಯನ ಮನೆ' ನೋಡಿದೆ. ನಿಗೂಢತೆ, ಮೂಢನಂಬಿಕೆ ಮತ್ತು ಕೌಟುಂಬಿಕ ರಹಸ್ಯಗಳನ್ನು ಅದ್ಭುತವಾಗಿ ಬೆರೆಸುವ ಕನ್ನಡದ ಒಂದು ಆಕರ್ಷಕ ಥ್ರಿಲ್ಲರ್. ಜಾಜಿ ಪಾತ್ರದಲ್ಲಿ ಖುಷಿ ರವಿ ಅವರ ಮನಮುಟ್ಟುವ ಅಭಿನಯ ಚೆನ್ನಾಗಿದೆ. ಇದು ನೋಡಲೇಬೇಕಾದ ವೆಬ್ ಸೀರಿಸ್ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಹೀಗೆ ವೆಬ್ ಸೀರಿಸ್ ನೋಡಿದ ಪ್ರತಿಯೊಬ್ಬರು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ಕೆಲವರು ಮಾತ್ರ ಚೆನ್ನಾಗಿಲ್ಲ. ಸೀರಿಯಲ್ ರೀತಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಒಟ್ಟಾರೆ ಶ್ರುತಿ ನಾಯ್ಡು ಮತ್ತವರ ತಂಡದ ಪ್ರಯತ್ನಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಪ್ರತಿ ಎಪಿಸೋಡ್ 20 ನಿಮಿಷಗಳಿಗಿಂತ ಕಮ್ಮಿ ಅವಧಿ ಇದ್ದು ಎರಡು ಗಂಟೆಯೊಳಗೆ ನೋಡಿ ಮುಗಿಸಬಹುದು.

'ಅಯ್ಯನ ಮನೆ' ವೆಬ್ ಸೀರಿಸ್ ಕಥೆ ಏನು ಅಂತ ನೋಡುವುದಾದರೆ ಅದು ಚಿಕ್ಕಮಗಳೂರಿನ ಒಂದು ಮನೆ. ಜಾಜಿ(ಖುಷಿ ರವಿ) ಆ ಮನೆಗೆ ಸೊಸೆಯಾಗಿ ಬರುತ್ತಾಳೆ. ಆಕೆ ಮನೆಗೆ ಬರುತ್ತಿದ್ದಂತೆ ಮಾವ ಹೆಣವಾಗುತ್ತಾನೆ. ಅದಕ್ಕೆ ಕಾರಣ ಏನು ಎಂದು ಅಂದುಕೊಳ್ಳುವ ವೇಳೆಗೆ ಆ ಮನೆಯಲ್ಲಿ ನಿಗೂಢವಾಗಿ ಸತ್ತವರ ಕಥೆ ತೆರೆದುಕೊಳ್ಳುತ್ತದೆ. ಜಾಜಿಗೂ ಆತಂಕ ಎದುರಾಗುತ್ತದೆ. ಅದಕ್ಕೆ ಕಾರಣ ಏನು? ನಿಗೂಢವಾಗಿ ಸತ್ತವರ ಕಥೆಯೇನು? ಎನ್ನುವುದು ಇನ್ನುಳಿದ ಕಥೆ.

ಒಟ್ಟಾರೆ ವೆಬ್ ಸೀರಿಸ್ ಹೇಗಿದೆ? ಎನ್ನುವುದನ್ನು ನೋಡುವುದಾದರೆ ಒಳ್ಳೆಯ ಪ್ರಯತ್ನ ಎನ್ನಬಹುದು. ಆದರೂ ಸಣ್ಣ ಕಥೆಯನ್ನೂ ಬಹಳ ಹಿಗ್ಗಿಸಿದಂತೆ ಭಾಸವಾಗುತ್ತದೆ. ಮತ್ತಷ್ಟು ತಿದ್ದಿ ತೀಡಿ ಚೆನ್ನಾಗಿ ಕಟ್ಟಿಕೊಡುವ ಅವಕಾಶವಿತ್ತು ಎನಿಸುತ್ತದೆ. ಆದರೆ ಒಂದು ಸಸ್ಪೆನ್ಸ್ ಥ್ರಿಲ್ಲರ್ ಸರಣಿಗೆ ಬೇಕಾದಂತೆ ಕಥೆ ಹೇಳಿರುವ ರೀತಿ ಚೆನ್ನಾಗಿದೆ. 'ಅಯ್ಯನ ಮನೆ'ಗೆ ನಿಗೂಢ ಘಟನೆಗಳಿಗೆ ಕಾರಣನಾದ ವ್ಯಕ್ತಿ ಯಾರು ನೋಡುಗರಿಗೆ ಕುತೂಹಲ ಮೂಡುವಂತೆ ಮಾಡಿದ್ದಾರೆ. ಯಾರ್ಯಾರ ಮೇಲೆಯೋ ಅನುಮಾನ ಮೂಡುತ್ತದೆ.

ಕನ್ನಡದಲ್ಲಿ ವೆಬ್ ಸೀರಿಸ್ ಬರುವುದಿಲ್ಲ ಎನ್ನುವ ಆರೋಪ ಇತ್ತು. ಯಾರು ಕೂಡ ಅಂತಹ ಪ್ರಯತ್ನಕ್ಕೆ ಕೈ ಹಾಕುವ ಧೈರ್ಯ ಮಾಡುತ್ತಿರಲಿಲ್ಲ. ಸದ್ಯ 'ಅಯ್ಯನ ಮನೆ' ಅದನ್ನು ಸುಳ್ಳಾಗಿಸಿದೆ. ಮುಂದೆ ಇದೇ ತಂಡ ಮತ್ತಷ್ಟು ವೆಬ್ ಸೀರಿಸ್ ನಿರ್ಮಿಸಬಹುದು. 'ಅಯ್ಯನ ಮನೆ' ಕನ್ನಡದಲ್ಲಿ ಮತ್ತಷ್ಟು ವೆಬ್ ಸೀರಿಸ್ ತಯಾರಿಗೆ ಸ್ಫೂತಿಯಾಗಲಿದೆ.

More from Filmibeat

English summary
Ayyana Mane ‍‍‍Twitter Review; Check out what netizens have to say about the first kannada thriller series
Read more about: ott kannada sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X