Baaghi 4 X Review ;ಕನ್ನಡಿಗ ಎ.ಹರ್ಷ ನಿರ್ದೇಶನದ ಬಾಘಿ-4 ಹೇಗಿದೆ?ಟೈಗರ್ ಶ್ರಾಫ್ ಸಾಹಸಗಾಥೆ ನೋಡಿದವರು ಹೇಳಿದ್ದೇನು?

ಆರಂಭದ ''ಗೆಳೆಯ''.. ''ಬಿರುಗಾಳಿ'' ಮತ್ತು ''ಚಿಂಗಾರಿ'' ಹೊರತು ಪಡಿಸಿದರೆ, ತಮ್ಮ ಪ್ರತಿ ಚಿತ್ರದಲ್ಲಿಯೂ ಹನುಮನ ಆರಾಧನೆಯನ್ನು ಮಾಡುತ್ತಾ ಬಂದವರು ಎ. ಹರ್ಷ. ''ಭಜರಂಗಿ''.. ''ವಜ್ರಕಾಯ''.. ''ಜೈ ಮಾರುತಿ''.. ''ಅಂಜನೀಪುತ್ರ''.. ''ಸೀತಾರಾಮ ಕಲ್ಯಾಣ''.. ''ಭಜರಂಗಿ-2'' ಹೀಗೆ ರಾಮಧೂತನನ್ನೇ ಪ್ರದಕ್ಷಿಣೆ ಹಾಕಿದ ಹರ್ಷ ಆ ನಂತರ ''ವೇದ'' ಚಿತ್ರವನ್ನು ನಿರ್ದೇಶಿಸಿದರು. ಬಳಿಕ ಆಂಧ್ರದತ್ತ ಮುಖ ಮಾಡಿದರು. ಗೋಪಿಚಂದ್‌ಗೆ ''ಭೀಮ'' ಬಲ ತುಂಬುವ ಕೆಲಸವನ್ನೂ ಮಾಡಿದರು.

ಇಂಥಾ ಹರ್ಷ ಸದ್ಯ ಬಾಲಿವುಡ್‌ನಲ್ಲಿ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಂಡಿದ್ದು ಇಂದು (ಸೆಪ್ಟೆಂಬರ್ 5) ಹರ್ಷ ನಿರ್ದೇಶನದ ''ಬಾಘಿ 4'' ತೆರೆಗೆ ಬಂದಿದೆ. ಹಾಗಿದ್ದರೆ ಎ ಹರ್ಷ ನಿರ್ದೇಶನದ ''ಬಾಘಿ 4'' ಹೇಗಿದೆ..? ಚಿತ್ರವನ್ನು ಮೊದಲ ದಿನದಂದು ನೋಡಿದ ಪ್ರೇಕ್ಷಕರು ಹೇಳಿದ್ದೇನು..? ಬಾಲಿವುಡ್‌ನಲ್ಲಿ ತಮ್ಮ ಮೊದಲ ಪ್ರಯತ್ನದಲ್ಲಿಯೇ ಹರ್ಷ ಗೆದ್ದರಾ ? ಎಂದು ತಿಳಿಯಲು ಮುಂದೆ ಓದಿ

Baaghi 4  Twitter Review  Tiger Shroff Is The Star  But Is A Harsha s Film A Hit


ಪರಿಪೂರ್ಣ ಆಕ್ಷನ್ ಚಿತ್ರ

''ಬಾಘಿ-4'' ಪರಿಪೂರ್ಣವಾದ ಆಕ್ಷನ್ ಸಿನಿಮಾ. ಇಲ್ಲಿ ಕಥೆ ಕೂಡ ಅಷ್ಟೇ ಗಟ್ಟಿಯಾಗಿದೆ. ಚಿತ್ರದಲ್ಲಿನ ಸಾಹಸ ಸನ್ನಿವೇಶಗಳು ಉನ್ನತ ಗುಣಮಟ್ಟದಲ್ಲಿದ್ದು ಜನಸಾಮಾನ್ಯರಿಗೆ ಇಷ್ಟವಾಗುವಂತೆ ಇವೆ. ಟೈಗರ್ ಶ್ರಾಫ್ ತಮ್ಮ ವೃತ್ತಿ ಬದುಕಿನಲ್ಲಿ ಅತ್ಯುತ್ತಮ ಅಭಿನಯಿಸಿರುವ ಸಿನಿಮಾ ಇದು. ನಾಯಕಿ ಹರ್ನಾಜ್ ಸಂಧು ಕೂಡ ಗಮನ ಸೆಳೆಯುತ್ತಾರೆ. ಬ್ಲಾಕ್ ಬಸ್ಟರ್

Baaghi 4  Twitter Review  Tiger Shroff Is The Star  But Is A Harsha s Film A Hit

ಅದ್ಭುತ

ಟೈಗರ್ ಶ್ರಾಫ್ ರೋನಿ ಪಾತ್ರವನ್ನು ಜೀವಿಸಿದ್ದಾರೆ. ಅನಿರೀಕ್ಷಿತ ತಿರುವುಗಳಿಂದ ಕೂಡಿರುವ ಈ ಚಿತ್ರದ ಕಥೆ ನಿಮ್ಮನ್ನು ಸೀಟಿನಂಚಿಗೆ ದೂಡುತ್ತೆ. ಸಂಜಯ್ ದತ್ ಅವರ ಪಾತ್ರ ರೋಮಾಂಚನವನ್ನು ಹೆಚ್ಚಿಸುತ್ತೆ. ಖಂಡಿತ ನೋಡಲೇಬೇಕಾದ ಚಿತ್ರ ಇದು ಎಂದು 5ಕ್ಕೆ 3.5 ಸ್ಟಾರ್‌ಗಳನ್ನು ಒಬ್ಬರು ನೀಡಿದ್ದಾರೆ.

Baaghi 4  Twitter Review  Tiger Shroff Is The Star  But Is A Harsha s Film A Hit

ಸಿನಿಮಾ ಅಲ್ಲ ಅನುಭವ

ಟೈಗರ್ ಶ್ರಾಫ್ ತಮ್ಮ ವೃತ್ತಿ ಬದುಕನ್ನು ಬದಲಿಸುವ ಪಾತ್ರವನ್ನು ನಿರ್ವಹಿಸಿದ್ದಾರೆ. ನಿರ್ದಯಿಯಾದ ಸಂಜಯ್ ದತ್ ಅವರ ಜೊತೆ ಇಲ್ಲಿ ಮುಖಾಮುಖಿಯಾಗಿದ್ಧಾರೆ. ಇದು ಕೇವಲ ಸಿನಿಮಾ ಅಲ್ಲ. ಬಾಲಿವುಡ್‌ನ ಆಕ್ಷನ್ ಚಿತ್ರಕ್ಕೆ ಮರು ವ್ಯಾಖ್ಯಾನ ನೀಡುವಂತಹ ಒಂದು ಅನುಭವ. ರೇಟಿಂಗ್: (4/5)

ಸಾಹಸವೇ ಚಿತ್ರದ ಜೀವಾಳ

''ಬಾಘಿ 4'' ಸಾಹಸ ಪ್ರಧಾನ ಸಿನಿಮಾ. ಆಕ್ಷನ್ ದೃಶ್ಯಗಳಲ್ಲಿ ಟೈಗರ್ ಶ್ರಾಫ್ ಮಿಂಚಿದ್ದಾರೆ. ಆದರೆ.. ದ್ವೀತಿಯಾರ್ಧದಲ್ಲಿ ಕಥೆಯನ್ನು ಅನಾಯಾಸವಾಗಿ ಊಹಿಸಬಹುದು. ಆಕ್ಷನ್ ಪ್ರಿಯರಿಗೆ ಚಿತ್ರದಲ್ಲಿನ ಸ್ಟೈಲಿಶ್ ದೃಶ್ಯಗಳು ಮತ್ತು ಸಾಹಸಗಳು ಇಷ್ಟವಾಗುತ್ತವೆ.

ಅವಶ್ಯಕತೆಯಾದರೂ ಏನಿತ್ತು ?

''ಬಾಘಿ-4'' ಮಾಡುವ ಅವಶ್ಯಕತೆಯಾದರೂ ಏನಿತ್ತು. ತಪ್ಪಾದ ಜಾಗದಲ್ಲಿ ಟೈಗರ್ ಶ್ರಾಫ್ ತಮ್ಮ ಶ್ರಮವನ್ನು ಹಾಕುತ್ತಿದ್ದಾರೆ. ಟೈಗರ್ ಸಾಮಾನ್ಯ ನಟ ಆಗಿರಬಹುದು ಆದರೆ ಅವರು ತಮ್ಮ ಪ್ರತಿ ಚಿತ್ರಕ್ಕೆ 100 ಕ್ಕೆ 100 ಪಟ್ಟು ಶ್ರಮ ಹಾಕುತ್ತಾರೆ. ''ವಾರ್'' ಚಿತ್ರದಲ್ಲಿ ಅವರ ಅಭಿನಯದ ತುಂಬಾ ಚೆನ್ನಾಗಿತ್ತು. ''ಸಿಂಗಂ ಅಗೇನ್‌''ನಲ್ಲಿ ಕೂಡ ಅವರು ಅಭಿನಯದ ವಿಚಾರದಲ್ಲಿ ಹಲವರನ್ನು ಹಿಂದಿಕ್ಕಿದ್ದರು. ಇನ್ನು ''ಬಾಘಿ-2'' ಚಿತ್ರವನ್ನು ಸಂಪೂರ್ಣವಾಗಿ ಟೈಗರ್ ಶ್ರಾಫ್ ತಮ್ಮ ಹೆಗಲ ಮೇಲೆ ವಹಿಸಿಕೊಂಡು ಮುನ್ನಡೆದಿದ್ದರು. ಆದರೆ ಈಗ ಅದೇ ಪ್ರಾಂಚೈಸಿ ಅವರ ವೃತ್ತಿ ಬದುಕನ್ನು ಮುಗಿಸುತ್ತಿದೆ.

ಬೋರ್ ಹೊಡೆಸುವ ಸಿನಿಮಾ

''ಬಾಘಿ 4'' ನಿರಾಶಾದಾಯಕವಾದ ಚಿತ್ರ. ಅರ್ಥಹೀನ ಆಕ್ಷನ್ ಚಿತ್ರ ಎಂದು ಕೂಡ ಒಬ್ಬರು ಸೋಶೀಯಲ್ ಮೀಡಿಯಾದಲ್ಲಿ ತಮ್ಮ ರಿವ್ಯೂವ್ ಹಂಚಿಕೊಂಡಿದ್ದಾರೆ. ಚಿತ್ರಕ್ಕೆ 2 ಸ್ಟಾರ್‌ಗಳನ್ನು ನೀಡಿದ್ದಾರೆ.

ಹೀಗೆ ''ಬಾಘಿ-4'' ಚಿತ್ರ ಕೆಲವರಿಗೆ ಇಷ್ಟವಾಗಿದೆ. ಇನ್ನೂ ಕೆಲವರಿಗೆ ಅಷ್ಟಕಷ್ಟೇ ಎಂದು ಅನಿಸಿದೆ. ಈ ಮಿಶ್ರ ಪ್ರತಿಕ್ರಿಯೆಯ ನಡುವೆ ಇಂದು ಚಿತ್ರಕ್ಕೆ ಉತ್ತಮವಾದ ಓಪನಿಂಗ್ ಸಿಕ್ಕಿದ್ದು ಮೊದಲ ದಿನ ಚಿತ್ರ ಭರ್ಜರಿ ಗಳಿಕೆ ಮಾಡುವ ನಿರೀಕ್ಷೆ ಇದೆ. ಮುಂಬರು ದಿನಗಳಲ್ಲಿ ''ಬಾಘಿ-4'' ಬಾಕ್ಸಾಫೀಸ್‌ನಲ್ಲಿ ಎಷ್ಟು ಹಣ ಗಳಿಸುತ್ತೆ ಎನ್ನುವುದನ್ನು ನೋಡಬೇಕಿದೆ.

More from Filmibeat

English summary
'Baaghi 4' is here, but does it live up to the hype? Our review breaks down the film's stunning action and compares it with the mixed reactions on its story and direction. Read the honest truth from Twitter.
Read more about: a harsha tiger shroff bollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X