Bachelor Party Review:'ಬ್ಯಾಚುಲರ್ ಪಾರ್ಟಿ' ಮಾಡೋಕೆ ಹೋಗಿ ಆಗಿದ್ದೇನು? ಪ್ಲಸ್ ಏನು ಮೈನಸ್ ಏನು?

By ಯಶವಂತ್

Rating:
3.0/5
Star Cast: Diganth, Loose Mada Yogesh, Achyuth Kumar
Director: Abhijith Mahesh

ಈ ವಾರ ಎರಡು ಕಾಮಿಡಿ ಸಿನಿಮಾ ರಿಲೀಸ್ ಆಗುತ್ತಿದೆ. ಒಂದು ಕಡೆ ಚಿಕ್ಕಣ್ಣ ಹೀರೊ ಆಗಿ ಎಂಟ್ರಿ ಕೊಡುತ್ತಿರುವ 'ಉಪಾದ್ಯಕ್ಷ'. ಅದೇ ಇನ್ನೊಂದು ಕಡೆ ದಿಗಂತ್, ಲೂಸ್ ಮಾದ ಯೋಗಿ ಹಾಗೂ ಅಚ್ಯುತ್ ಕುಮಾರ್ ನಟಿಸಿರುವ 'ಬ್ಯಾಚುಲರ್ ಪಾರ್ಟಿ'. ಅಭಿಜಿತ್ ಮಹೇಶ್ ನಿರ್ದೇಶಿಸಿರುವ ಈ ಸಿನಿಮಾ ಪಕ್ಕಾ ಹಾಸ್ಯ ಪ್ರಧಾನ ಸಿನಿಮಾವೆಂದು ಚಿತ್ರತಂಡ ಹೇಳಿಕೊಂಡಿದೆ.

ದಿಗಂತ್, ಲೂಸ್ ಮಾದ ಯೋಗಿ, ಅಚ್ಯುತ್ ಕುಮಾರ್ ಮೂವರ ಕಾಂಬಿನೇಷನ್ ಇದ್ಮೇಲೆ ಸಿನಿಮಾದಲ್ಲಿ ಹಾಸ್ಯದ ಸನ್ನಿವೇಶಗಳಿಗೇನು ಕಮ್ಮಿಯಿರೋದಿಲ್ಲ ಅನ್ನೋ ನಿರೀಕ್ಷೆಯಿದೆ. ಹಾಗೇ ರಕ್ಷಿತ್ ಶೆಟ್ಟಿ ಈ ಸಿನಿಮಾವನ್ನು ನಿರ್ಮಾಣ ಮಾಡಿರುವುದರಿಂದ ಸಿನಿಮಾ ಮೇಕಿಂಗ್‌ನಲ್ಲಿ ಕಾಂಪ್ರಮೈಸ್ ಆಗಿರುವುದಿಲ್ಲ ಅನ್ನೋದು ನಂಬಿಕೆ.

Bachelor Party Review in Kannada: Diganth, Yogi, Achyuth Kumar Starrer Comedy-Drama Movie Review

ಹಾಗಿದ್ದರೆ, 'ಬ್ಯಾಚುಲರ್ ಪಾರ್ಟಿ' ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತಾ? ಸಿನಿಮಾ ಕಥೆಯೇನು? ಮೂವರು ಪ್ರಮುಖ ಪಾತ್ರಗಳ ಪರ್ಫಾಮೆನ್ಸ್ ಹೇಗಿದೆ? ಸಿನಿಮಾದ ಪ್ಲಸ್ ಏನು? ಮೈನಸ್ ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

'ಬ್ಯಾಚುಲರ್ ಪಾರ್ಟಿ'ಗಳ ಕಥೆ ಏನು?

ದಿಗಂತ್ ಪಾತ್ರದಿಂದಲೇ 'ಬ್ಯಾಚುಲರ್ ಪಾರ್ಟಿ'ಗಳ ಕಥೆ ಆರಂಭ ಆಗುತ್ತೆ. ದಿಗಂತ್ ಅಲಿಯಾಸ್ ಸಂತೋಷ್ ಒಬ್ಬ ಸಾಪ್ಟ್‌ವೇರ್ ಇಂಜಿನಿಯರ್. ಜೀವನದಲ್ಲಿ ಜಿಗುಪ್ಸೆ ಬರುವ ಹಂತದಲ್ಲಿರೋ ವ್ಯಕ್ತಿ. ಇಎಂಐ, ಕಮಿಟ್‌ಮೆಂಟ್ ಅಂತ ಬೇಸತ್ತು ಹೋಗಿರುವ ಸಂತೋಷ್‌ಗೆ ಒಂದೊಳ್ಳೆ ಜೀವನ ಸಾಗಿಸಬೇಕು ಅನ್ನೋ ಆಸೆ. ಇತ್ತ ವೈವಾಹಿಕ ಬದುಕು ಕೂಡ ಚೆನ್ನಾಗಿಲ್ಲ. ಸಂತೋಷ್ ಪತ್ನಿಯ ಪಾತ್ರದಲ್ಲಿ ನಟಿ ಸಿರಿ ರವಿಕುಮಾರ್ ಕಾಣಿಸಿಕೊಂಡಿದ್ದಾರೆ. ದಿಗಂತ್ ವೃತ್ತಿ ಬದುಕು ಹಾಗೂ ವೈಯಕ್ತಿಕ ಬದುಕು ಎರಡೂ ಹದಗೆಟ್ಟಿದೆ. ಹೀಗೊಮ್ಮೆ ಗೆಳೆಯ ಬ್ಯಾಚುಲರ್ ಪಾರ್ಟಿಗೆ ಹೋಗಿ ಅದು ಮುಗಿಯೋ ಹೊತ್ತಿಗೆ ಬ್ಯಾಂಕಾಕ್‌ನಲ್ಲಿ ಇರುತ್ತಾರೆ. ಅಲ್ಲಿ ಏನೇನಾಗುತ್ತೆ? ಅನ್ನೋದೇ ಕಥೆ.

ಲೂಸ್ ಮಾದ, ಅಚ್ಯುತ್ ಕಥೆಯೇನು?

ಬ್ಯಾಚುಲರ್ ಪಾರ್ಟಿಯಲ್ಲಿ ಬ್ಯಾಚುಲರ್ ಆಗಿ ಎಂಟ್ರಿ ಕೊಟ್ಟಿರೋದು ಲೂಸ್ ಮಾದ ಯೋಗಿ. ದಿಗಂತ್ ಲೈಫ್‌ನಲ್ಲಿ ಯೋಗಿ ಬಂದಾಗಲೆಲ್ಲಾ ಏನಾದರೂ ಯಡವಟ್ಟು ಆಗ್ತಾನೇ ಇರುತ್ತೆ. ಇತ್ತ ಅಚ್ಯುತ್ ಕುಮಾರ್ ಇವರಿಬ್ಬರ ದೈಹಿಕ ಶಿಕ್ಷಕನಾಗಿ ಕಾಣಿಸಿಕೊಂಡಿದ್ದಾರೆ. ಈ ಮೂವರು ಬ್ಯಾಚುಲರ್ ಪಾರ್ಟಿ ಮಾಡಿ ಬ್ಯಾಂಕಾಕ್‌ಗೆ ಹೇಗೆ ಹೋದ್ರು? ಅಲ್ಲಿ ಈ ಮೂವರ ಪರಿಸ್ಥಿತಿ ಏನಾಯ್ತು? ಅನ್ನೋದನ್ನು ಹಾಸ್ಯದ ರೂಪದಲ್ಲಿ ಹೇಳಿದ್ದಾರೆ.

Bachelor Party Review in Kannada: Diganth, Yogi, Achyuth Kumar Starrer Comedy-Drama Movie Review

ಯಾರ ಪರ್ಫಾಮೆನ್ಸ್ ಹೇಗಿದೆ?

'ಬ್ಯಾಚುಲರ್ ಪಾರ್ಟಿ'ಯಲ್ಲಿ ಲೂಸ್ ಮಾದ ಯೋಗಿಯ ಪ್ರೇಕ್ಷಕರ ಗಮನ ಸೆಳೆಯುತ್ತಾರೆ. 'ಹುಡುಗರು' ಸಿನಿಮಾ ನೋಡಿ ಯೋಗಿಯನ್ನು ಕಾಮಿಡಿ ಪಾತ್ರದಲ್ಲಿ ನೋಡಲು ಇಷ್ಟಪಡುವವರಿಗೆ ಈ ಸಿನಿಮಾ ಇಷ್ಟ ಆಗುತ್ತೆ. ಹಾಸ್ಯದ ಸನ್ನಿವೇಶಗಳಲ್ಲಿ ಯೋಗಿ ನಕ್ಕು ನಲಿಸುತ್ತಾರೆ. ಅವರ ಕಾಮಿಡಿ ಟೈಮಿಂಗ್ ಇಷ್ಟ ಆಗುತ್ತೆ. ನೊಂದ ವ್ಯಕ್ತಿ ಪಾತ್ರದಲ್ಲಿ ದಿಗಂತ್ ಕನಿಕರ ಹುಟ್ಟಿಸುತ್ತಾರೆ. ಅಚ್ಯುತ್ ಕುಮಾರ್ ಎಂದಿನಂತೆ ಸಹಜ ನಟನೆಯಿಂದ ಗಮನ ಸೆಳೆದಿದ್ದಾರೆ. ದಿಗಂತ್ ಪತ್ನಿಯಾಗಿ ಸಿರಿ ರವಿಕುಮಾರ್ ಕೂಡ ಇಷ್ಟ ಆಗುತ್ತಾರೆ.

ಚಿತ್ರಕಥೆ ಕಡೆಗೆ ವರ್ಕ್‌ಔಟ್ ಮಾಡಬೇಕಿತ್ತು

'ಬ್ಯಾಚುಲರ್ ಪಾರ್ಟಿ' ಅದ್ಭುತವಾದ ಕಥೆಯನ್ನು ಹುಡುಕುವುದಕ್ಕೆ ಆಗೋದಿಲ್ಲ. ಕೆಲವು ಹಾಸ್ಯದ ಸನ್ನಿವೇಶಗಳು ಇಷ್ಟ ಆಗುತ್ತವೆ. ಮತ್ತೆ ಕೆಲವು ಅಷ್ಟಕ್ಕಷ್ಟೇ ಅಂತ ಅನಿಸುತ್ತೆ. ಬ್ಯಾಂಕಾಕ್‌ನ ಕೆಲವು ಸನ್ನಿವೇಶಗಳು ಚೆನ್ನಾಗಿದೆ. ಕೆಲವು ಸಂದರ್ಭದಲ್ಲಿ ಇನ್ನೂ ಏನೋ ಬೇಕಿತ್ತು ಅಂತ ಅನಿಸದೆ ಇರೋದಿಲ್ಲ. ನಿರೀಕ್ಷೆ ಏನೋ ಬಹಳಷ್ಟಿತ್ತು. ಆದರೆ, ಅದು ಫುಲ್‌ಫಿಲ್ ಆಗಿಲ್ಲ. ನಿರ್ದೇಶಕ ಅಭಿಜಿತ್ ಮಹೇಶ್ ಮೊದಲ ಸಿನಿಮಾದಲ್ಲೇ ಜನರನ್ನು ನಗಿಸೋಕೆ ಹೋಗಿದ್ದು ಹಿನ್ನೆಡೆಯಾಗಿದೆ. ಚಿತ್ರಕಥೆ ಕಡೆ ಹೆಚ್ಚು ಗಮನ ಹರಿಸಬೇಕಿತ್ತು.

ಪ್ಲಸ್ ಪಾಯಿಂಟ್ ಏನು?

ದಿಗಂತ್, ಲೂಸ್ ಮಾದ ಯೋಗಿ, ಅಚ್ಯುತ್ ಕುಮಾರ್ ಕಾಂಬಿನೇಷನ್ ಇಷ್ಟ ಆಗುತ್ತೆ. ಅದರಲ್ಲೂ ಲೂಸ್ ಮಾದ ಯೋಗಿ ಕಾಮಿಡಿ ಟೈಟಲ್‌ಗೆ ಶಿಳ್ಳೆ ಹಾಕದೆ ಇರೋದಿಲ್ಲ. ಯೋಗಿ ಜೊತೆ ಪ್ರಕಾಶ್ ತುಮ್ಮಿ ನಾಡು ಕೂಡ ಹಾಸ್ಯ ಸನ್ನಿವೇಶಗಳಿಂದ ಗಮನ ಸೆಳೆಯುತ್ತಾರೆ. ಪ್ರೇಕ್ ಸಿನಿಮಾ ಮೇಕಿಂಗ್ ಶ್ರೀಮಂತವಾಗಿದೆ. ಕೆಲವು ಸಂದರ್ಭದಲ್ಲಿ ಕಾಮಿಡಿ ಸನ್ನಿವೇಶಗಳು ಇಷ್ಟ ಆಗುತ್ತವೆ.

ಮೈನಸ್ ಏನು?

ಸ್ಕ್ರೀನ್ ಪ್ಲೇಯಲ್ಲಿ ಮತ್ತಷ್ಟು ಧಮ್ ಇರಬೇಕಿತ್ತು. ಕಾಮಿಡಿ ಜೊತೆಗೆ ಎಮೋಷನಲ್ ಸೀನ್‌ಗಳು ಇದ್ದರೂ, ಅದು ಕ್ಷಣಾರ್ಧಕ್ಕೆ ಕಣ್ಮರೆಯಾಗುತ್ತವೆ. ಇನ್ನು ಹಾಡುಗಳು ವಿಜಯ್ ಪ್ರಕಾಶ್ ಹಾಡಿಯೋ ಒಂದು ಹಾಡು ಇಷ್ಟ ಆಗುತ್ತೆ. ಅದು ಬಿಟ್ಟು ಉಳಿದಿದ್ದು ಓಕೆ ಓಕೆ. ಮೊದಲೇ ಹೇಳಿದ ಹಾಗೇ ಕಥೆಯಲ್ಲಿ ಇನ್ನೊಂದು ಸ್ವಲ್ಪ ಧಮ್ ಬೇಕು ಅಂತ ಅನಿಸುತ್ತೆ.

More from Filmibeat

English summary
Diganth, Loose Maadha Yogi Starrer Bachelor Party Kannada Movie Review
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X