Bad Manners Twitter Review: ಮತ್ತೊಂದು ಟಿಪಿಕಲ್ ಸೂರಿ ಚಿತ್ರ.. ಜ್ಯೂ. ರೆಬಲ್ ಸ್ಟಾರ್ ಗೆದ್ರು

ಈ ವಾರ ಕನ್ನಡದ 5 ಸಿನಿಮಾಗಳು ಬಿಡುಗಡೆಯಾಗಿದೆ. ಅದರಲ್ಲಿ ಸೂರಿ ನಿರ್ದೇಶನದ 'ಬ್ಯಾಡ್ ಮ್ಯಾನರ್ಸ್' ಬಗ್ಗೆ ನಿರೀಕ್ಷೆ ಹೆಚ್ಚಾಗಿತ್ತು. ಸೂರಿ ಅಭಿಮಾನಿಗಳಂತೂ ಫಸ್ಟ್ ಡೇ ಫಸ್ಟ್ ಶೋ ಸಿನಿಮಾ ನೋಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

'ಬ್ಯಾಡ್ ಮ್ಯಾನರ್ಸ್' ಚಿತ್ರದಲ್ಲಿ ಅಭಿಷೇಕ್ ಅಂಬರೀಶ್ ಜೊತೆ ರಚಿತಾ ರಾಮ್ ನಾಯಕಿಯಾಗಿ ನಟಿಸಿದ್ದಾರೆ. ಆದರೆ ಇದು ಮಾಮೂಲಿ ಕಮರ್ಷಿಯಲ್ ಸಿನಿಮಾ ಅಲ್ಲ. ಪಕ್ಕಾ ಸೂರಿ ಸ್ಟೈಲ್ ಕ್ರೈಂ ಥ್ರಿಲ್ಲರ್. 'ಪಾಪ್‌ಕಾರ್ನ್ ಮಂಕಿಟೈಗರ್' ರಿಲೀಸ್ ಆಗಿ 3 ವರ್ಷಗಳ ಬಳಿಕ 'ಬ್ಯಾಡ್ ಮ್ಯಾನರ್ಸ್' ತೆರೆಗೆ ಬಂದಿದೆ. ಸುಧೀರ್ ಕೆ. ಎಂ ನಿರ್ಮಾಣದ ಈ ಚಿತ್ರಕ್ಕೆ ಸುರೇಂದ್ರ ನಾಥ್ ಕತೆ ಬರೆದಿದ್ದಾರೆ. ಸೂರಿ ಚಿತ್ರಕತೆ ಬರೆದಿದ್ದಾರೆ.

Bad Manners Twitter Review: Twitters Take on Abishek Ambareeshs New Film: Audience Reactions

ಮಾಸ್ತಿ ಹಾಗೂ ಅಮ್ರಿ ಸಂಭಾಷಣೆ, ಚರಣ್ ರಾಜ್ ಸಂಗೀತ, ಶೇಖರ್ ಸಿನಿಮಾಟೋಗ್ರಫಿ ಚಿತ್ರಕ್ಕಿದೆ. ರಾಜ್ಯಾದ್ಯಂತ 300ಕ್ಕೂ ಅಧಿಕ ಥಿಯೇಟರ್‌ಗಳಲ್ಲಿ ಸಿನಿಮಾ ರಿಲೀಸ್ ಆಗಿ ಪ್ರದರ್ಶನ ಕಾಣುತ್ತಿದೆ. ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾ ನೋಡಿದ ಪ್ರೇಕ್ಷಕರು ಟ್ವಿಟ್ಟರ್‌ನಲ್ಲಿ ಏನೆಲ್ಲಾ ಬರೆದಿದ್ದಾರೆ. ಬನ್ನಿ ನೋಡೋಣ.

ಒಟ್ಟಾರೆ ಒಳ್ಳೆ ಸಿನಿಮಾ

ಉಜ್ವಲ್ ಎಂಬುವವರು ಟ್ವೀಟ್ ಮಾಡಿ "ಫಸ್ಟ್ ಆಫ್ ಏನಾಗ್ತಿದೆ ಅಂತ ಗೊತ್ತಾಗಲ್ಲ. ವಿಷ್ಯುವಲ್ಸ್ ಚೆನ್ನಾಗಿದೆ. ಆಕ್ಷನ್ ಸನ್ನಿವೇಶಗಳು ಅಭಿಗಾಗಿಯೇ ಡಿಸೈನ್ ಮಾಡಿದಂತಿದೆ. ಸೆಕೆಂಡ್‌ ಆಫ್‌ನಲ್ಲಿ ಸೂರಿ ಸಿನಿಮಾಗಳ ರೀತಿ ಎಲ್ಲದಕ್ಕೂ ಉತ್ತರ ಸಿಗುತ್ತದೆ. ಟಗರು ಸ್ಕ್ರೀನ್ ಪ್ಲೇ ನೆನಪಿಸುತ್ತದೆ. ಆ ಲೊಕೇಶನ್ಸ್ ಎಲ್ಲಿ ಹುಡುಕ್ತೀರಾ ಸೂರಿ ಸರ್, ಬೇರೆ ಜಾಗಕ್ಕೆ ಕರ್ಕೊಂಡ್ ಹೋಗ್ತೀರಾ. ವಿಲನ್‌ಗಳಾಗಿ ಇಬ್ಬರೂ ಚೆನ್ನಾಗಿ ಮಾಡಿದ್ದಾರೆ. ಆದ್ರು ಅವರ ವಿಚಾರಲ್ಲಿ ಎಲ್ಲಾ ಬೇಗ ಮುಗೀತು ಅನಿಸುತ್ತದೆ. ಅಭಿ ಅಣ್ಣ ಡೈಲಾಗ್ ಡೆಲಿವರಿ ಸ್ವಲ್ಪ ಸುಧಾರಿಸಿಕೊಂಡರೆ ಚೆನ್ನಾಗಿರುತ್ತದೆ. ಓವರ್‌ ಆಲ್ ಒಳ್ಳೆ ಸಿನಿಮಾ" ಎಂದು ಬರೆದುಕೊಂಡಿದ್ದಾರೆ.

ಜ್ಯೂ. ರೆಬಲ್ ಸ್ಟಾರ್ ಗೆದ್ರು

"ಮಾಸ್ ಹೀರೋ ಸಿನಿಮಾ ಇಂದ ಆಚೆ ಬಂದ್ ಹೇಗ್ ಆ ಮ್ಯಾನರಿಸಂ ಕ್ಯಾರಿ ಮಾಡ್ತೀವಲ್ಲ, ಅದೇ ಅನುಭವ.. ಅಲ್ಲಿ ಜ್ಯೂ. ರೆಬಲ್ ಸ್ಟಾರ್ ಗೆದ್ರು. ಡಿಬಾಸ್ ಹೇಳ್ದಾಗೆ 2ನೇ ಸಿನಿಮಾಗೆ ತುಂಬಾ ಸುಧಾರಿಸಿದ್ದೀರಾ. ಸ್ಕ್ರೀನ್ ಮೇಲೆ ಆಜಾನುಬಾಹು. ಚರಣ್ ರಾಜ್ ಮಾಸ್, ಕ್ಲಾಸ್ ಯಾವುದೇ ಇದ್ದರೂ ಒಳ್ಳೆ ಆಸ್ತಿ" ಎಂದು ನೂತನ್ ಎಂಬುವವರು ಟ್ವೀಟ್ ಮಾಡಿದ್ದಾರೆ.

Bad Manners Twitter Review: Twitters Take on Abishek Ambareeshs New Film: Audience Reactions

ಒಳ್ಳೆ ಸ್ಕ್ರೀನ್‌ಪ್ಲೇ

"ಕೆಟ್ಟ ಆಕ್ಷನ್ ಸನ್ನಿವೇಶಗಳು. ಪಾತ್ರಗಳ ಹೆಸರುಗಳು ಚೆನ್ನಾಗಿದೆ. ಆದರೆ ಆಳವಿಲ್ಲದೇ ಪಾತ್ರಗಳಿಗೆ ಕನೆಕ್ಟ್ ಆಗುವುದಿಲ್ಲ. ಕೆಲ ಡೈಲಾಗ್ಸ್ ಚೆನ್ನಾಗಿದೆ. ಒಳ್ಳೆ ಸ್ಕ್ರೀನ್‌ಪ್ಲೇ, ಚರಣ್‌ ರಾಜ್‌ ಬಿಜಿಎಂ ಕೊಂಚ ಜಾಸ್ತಿ ಅನ್ನಿಸುತ್ತೆ" ಎಂದು ಅಕ್ಷಯ್ ಎಂಬುವವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಒಳ್ಳೆ ಕಮರ್ಷಿಯಲ್ ಸಿನಿಮಾ

"ಮತ್ತೊಂದು ಟಿಪಿಕಲ್ ಸೂರಿ ಸಿನಿಮಾ. ಅಭಿಷೇಕ್ ನಟನೆ ಚೆನ್ನಾಗಿದೆ. ಚರಣ್ ರಾಜ್ ಬಿಜಿಎಂ, ರವಿವರ್ಮಾ ಸ್ಟಂಟ್ಸ್, ಕತೆ, ಚಿತ್ರಕತೆ, ಸಂಭಾಷಣೆ ಚಿತ್ರಕ್ಕೆ ಪ್ಲಸ್ ಪಾಯಿಂಟ್. ಒಳ್ಳೆ ಕಮರ್ಷಿಯಲ್ ಸಿನಿಮಾ. ನನ್ನ ರೇಟಿಂಗ್ 3.5/5 ಎ

ಕ್ಲೈಮ್ಯಾಕ್ಸ್ ಟ್ವಿಸ್ಟ್ ಇಷ್ಟ ಆಯ್ತು

ಶ್ರೀಧರ ಎಂಬುವವರು "ಫಸ್ಟ್ ಹಾಫ್ ಆಕ್ಷನ್ ಸೀನ್ಸ್ ಮೇಲೆ ಆಕ್ಷನ್ ಸೀನ್ಸ್ ಇದೆ. ಕಥೆ ಏನು ಅಂತ ಅರ್ಥ ಆಗಲ್ಲ. ಆದ್ರೂ ಡೈಲಾಗ್ಸ್ ಮತ್ತು ಬಿಜಿಎಂ ನೋಡಿಸಿಕೊಂಡು ಹೋಗುತ್ತದೆ. ಏನ್ ಕತೆ ಅಂತ ಗೊತ್ತಾಗೊದೇ ಸೆಕೆಂಡ್ ಹಾಫ್ ಇಂದ. ಕ್ಲೈಮ್ಯಾಕ್ಸ್ ಟ್ವಿಸ್ಟ್ ಇಷ್ಟ ಆಯ್ತು. ಪಾಪ್‌ಕಾರ್ನ್ ಮಂಕಿ, ಟಗರುಗಿಂತ ವೈಲೆನ್ಸ್ ಕಮ್ಮಿ. ಸೂರಿಯ ಡೀಸೆಂಟ್ ಸಿನಿಮಾ" ಎಂದು ಬರೆದಿದ್ದಾರೆ.

More from Filmibeat

English summary
Explore What Twitter Audience Responses To Bad Manners Kannada Movie:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X