Bagheera Twitter Review: ಫಸ್ಟ್ ಹಾಫ್ ಚಿಂದಿ, ಶ್ರೀಮುರಳಿ ಬೆಂಕಿ, ಮಿಸ್ ಮಾಡ್ಕೊಬೇಡಿ
ಶ್ರೀಮುರಳಿ ನಟನೆಯ 'ಬಘೀರ' ಸಿನಿಮಾ ದೀಪಾವಳಿ ಸಂಭ್ರಮದಲ್ಲಿ ತೆರೆಗೆ ಬಂದಿದೆ. ಈಗಾಗಲೇ ಸಿನಿಮಾ ನೋಡಿದ ಪ್ರೇಕ್ಷಕರು ಮೆಚ್ಚಿಕೊಂಡಾಡುತ್ತಿದ್ದಾರೆ. ಪ್ರಶಾಂತ್ ನೀಲ್ ಚಿತ್ರಕ್ಕೆ ಕಥೆ ಬರೆದಿದ್ದು ಡಾ. ಸೂರಿ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಪೊಲೀಸ್ ಆಫೀಸರ್ ಪಾತ್ರದಲ್ಲಿ ರೋರಿಂಗ್ ಸ್ಟಾರ್ ಅಬ್ಬರಿಸಿದ್ದಾರೆ.
ಪೊಲೀಸ್ ಅಧಿಕಾರಿ ಆಗಿದ್ದರೂ ವೇದಾಂತ್ ಯಾಕೆ ಕಾನೂನನ್ನು ಕೈಗೆ ತೆಗೆದುಕೊಳ್ಳುತ್ತಾನೆ? ಸೂಪರ್ ಹೀರೋ ವೇಷದಲ್ಲಿ ಅಪರಾಧಿಗಳನ್ನು ಹೆಡೆಮುರಿ ಕಟ್ಟುತ್ತಾನೆ ಎನ್ನುವುದು ಚಿತ್ರದ ಒನ್‌ಲೈನ್ ಸ್ಟೋರಿ. ಈಗಾಗಲೇ ಸಿನಿಮಾ ನೋಡಿದವರು ಕನ್ನಡಕ್ಕೆ ಒಬ್ಬ ಸೂಪರ್ ಹೀರೊ ಸಿಕ್ಕ ಎಂದು ಸಂಭ್ರಮಿಸುತ್ತಿದ್ದಾರೆ. ಕೆಲ ತಪ್ಪುಗಳ ಹೊರತಾಗಿಯೂ ಸಿನಿಮಾ ಪ್ರೇಕ್ಷಕರನ್ನು ರಂಜಿಸುತ್ತಿದೆ.

'ಬಘೀರ' ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ಈಗ ನಿಧಾನವಾಗಿ ಪ್ರೇಕ್ಷಕರು ಸಿನಿಮಾ ನೋಡಲು ಮುಂದಾಗಿದ್ದಾರೆ. ಅದು ಬುಕ್‌ಮೈ ಶೋ ಟ್ರೆಂಡಿಂಗ್‌ನಲ್ಲಿ ಗೊತ್ತಾಗುತ್ತಿದೆ. ಸಾಕಷ್ಟು ಮಂದಿ ಚಿತ್ರಮಂದಿರದಲ್ಲೇ ಟಿಕೆಟ್ ಖರೀದಿಸಿ ಸಿನಿಮಾ ನೋಡುತ್ತಿದ್ದಾರೆ. ಫಸ್ಟ್ ಡೇ ಫಸ್ಟ್ ಶೋ ನೋಡಿವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಚಿತ್ರದ ಪ್ರತಿ ಫ್ರೇಮ್ ಹಬ್ಬ
ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ 'ಬಘೀರ' ಬ್ಲಾಕ್‌ಬಸ್ಟರ್ ಎಂದು ಶ್ರೇಯಸ್ ಎಂಬುವವರು ಬರೆದುಕೊಂಡಿದ್ದಾರೆ. ಉಗ್ರಂ ಬಳಿಕ ಶ್ರೀಮುರಳಿ ಅದ್ಭುತ ಪರ್ಫಾರ್ಮನ್ಸ್, ಅವರ ಸ್ಕ್ರೀನ್ ಪ್ರಸೆನ್ಸ್ ಅದ್ಭುತ. ಸೂಪರ್ ಹೀರೊ ಸನ್ನಿವೇಶಗಳ ಬೆಂಕಿ. ಎಲ್ಲಾ ವಿಭಾಗಗಳ ಪರಿಶ್ರಮದಿಂದ ಚಿತ್ರದ ಪ್ರತಿ ಫ್ರೇಮ್ ಹಬ್ಬ. ಕನ್ನಡಿಗರೇ ಒಳ್ಳೆ ಕನ್ನಡ ಸಿನಿಮಾ ಪರ ನಿಲ್ಲುವ ಸಮಯ ಇದು. 'ಬಘೀರ' ಸಿನಿಮಾ ನೋಡಿ ಎಂದು ಟ್ವೀಟ್ ಮಾಡಿದ್ದಾರೆ.
ರುಕ್ಕು ಪಾತ್ರಕ್ಕೆ ಮಹತ್ವ ಇಲ್ಲ
ಬಘೀರ ಇಂಡಸ್ಟ್ರಿ ಹಿಟ್ ಆಗುವಂತಿದೆ. ಕನ್ನಡ ಚಿತ್ರರಂಗಕ್ಕೆ ಇಂತಹ ಸಿನಿಮಾ ಬೇಕಾಗಿತ್ತು. ಶ್ರೀಮರಳಿ ನಟನೆ ಅದ್ಭುತ. ರುಕ್ಮಿಣಿ ವಸಂತ್ ಅವರನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಅವರ ಪಾತ್ರಕ್ಕೆ ಹೆಚ್ಚಿನ ಮಹತ್ವ ಇಲ್ಲ. ಪ್ಯಾನ್ ಇಂಡಿಯಾ ಮಾಡದೇ ಇದ್ದಿದ್ದೇ ಒಳ್ಳೆದಾಯಿತು, ತೆಲುಗು, ಕನ್ನಡ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎನ್ನುವುದು ಮತ್ತೊಬ್ಬರ ಅಭಿಪ್ರಾಯ.
ಮತ್ತೊಂದು ಬ್ಲಾಕ್‌ಬಸ್ಟರ್
ಡಾ. ಸೂರಿ ಸರ್ 'ಬಘೀರ' ಮೇಕಿಂಗ್ ಚೆನ್ನಾಗಿದೆ. ಮೊದಲೇ ಹೇಳಿದಂತೆ ಸಿನಿಮಾ ಬಹಳ ವಿಭಿನ್ನವಾಗಿದೆ. ಶ್ರೀಮುರಳಿ ಘರ್ಜನೆ ಜೋರಾಗಿದೆ. ಬ್ಲ್ಯಾಕ್ ಫ್ಯಾಂಥರ್ ಆಗಿ ಕೆಲ ಸನ್ನಿವೇಶಗಳು ಸೂಪರ್. ಮತ್ತೊಂದು ಬ್ಲಾಕ್‌ಬಸ್ಟರ್. ಹೊಂಬಾಳೆ ಸಂಸ್ಥೆಗೆ ಅಭಿನಂದನೆ ಎಂದು ಪವನ್ ಎಂಬುವವರು ಬರೆದುಕೊಂಡಿದ್ದಾರೆ.
ಮಿಸ್ ಮಾಡಿಕೊಳ್ಳದಿರಿ
ಬಹಳ ಒಳ್ಳೆಯ ಕಥೆ. ಬರವಣಿಗೆ ಹಾಗೂ ಆಕ್ಷನ್ ಸನ್ನಿವೇಶಗಳು ನಿಜಕ್ಕೂ ನೋಡಲು ಚೆನ್ನಾಗಿದೆ. ಪಾತ್ರ ಪೋಷಣೆಯಲ್ಲಿ ಖಂಡಿತ ಮಾರ್ವೆಲ್ ಸಿನಿಮಾಗಳ ಪ್ರೇರಣೆ ಪಡೆಯಲಾಗಿದೆ. ಶ್ರೀಮುರಳಿ ಪರ್ಫಾರ್ಮನ್ಸ್ ಅದ್ಭುತ. ಕನ್ನಡಿಗರೇ, ದೀಪಾವಳಿಯ ಸಡಗರಕ್ಕೆ 'ಬಘೀರ' ಸಿನಿಮಾ ಮಿಸ್ ಮಾಡಿಕೊಳ್ಳದಿರಿ ಎನ್ನುವುದು ಸನತ್ ಕುಮಾರ್ ಎಂಬುವವರ ಅಭಿಪ್ರಾಯ.
ಒಟ್ಟಾರೆ ಸೂಪರ್ ಹಿಟ್
ಚಿತ್ರದ ಫಸ್ಟ್ ಹಾಫ್ ಎಂಗೇಜಿಂಗ್ ಸ್ಕ್ರೀನ್‌ಪ್ಲೇ. ಬಿಜಿಎಂ ಹಾಗೂ ವಿಷ್ಯುವಲ್ಸ್ ಸೂಪರ್. ಸೆಕೆಂಡ್ ಹಾಫ್‌ನಲ್ಲಿ ಕ್ಲೈಮ್ಯಾಕ್ಸ್ ಟ್ವಿಸ್ಟ್ ಚೆನ್ನಾಗಿದೆ. ಇಂತಹ ಅದ್ಭುತ ಆಕ್ಷನ್ ಸನ್ನಿವೇಶಗಳನ್ನು ಕಂಡಿತ ನಿರೀಕ್ಷಿಸಿರಲಿಲ್ಲ. ಒಟ್ಟಾರೆ ಎಕ್ಸಲೆಂಟ್ ಸಿನಿಮಾ, ಸೂಪರ್ ಹಿಟ್ ಎಂದು ಮತ್ತೊಬ್ಬರು ಪೋಸ್ಟ್ ಮಾಡಿದ್ದಾರೆ.
ಫಸ್ಟ್ ಹಾಫ್ ಓಕೆ.. ಆದ್ರೆ
ಫಸ್ಟ್ ಹಾಫ್ ಸಖತ್ತಾಗಿದೆ. ಸೆಕೆಂಡ್ ಹಾಫ್ ಇನ್ನು ಚೆನ್ನಾಗಿ ಮಾಡಬಹುದಿತ್ತು. ಬಟ್ ಒಟ್ಟಾರೆ ಚಿತ್ರಮಂದಿರದಲ್ಲಿ ಉತ್ತಮ ಅನುಭವ ಕೊಡುತ್ತದೆ. ಶ್ರೀಮುರಳಿ ಕಂಬ್ಯಾಕ್ ಮಾಡಿದ್ದಾರೆ. ಅಜನೀಶ್ ಸರ್ ಕೆಲವೊಮ್ಮೆ ಸೂಪರ್, ಕೆಲವೊಮ್ಮೆ ಓಕೆ, ರುಕ್ಮಿಣಿಗೆ ಪಾತ್ರಕ್ಕೆ ಪ್ರಾಮುಖ್ಯತೆಯಿಲ್ಲ ಎನ್ನುವುದು ರಾಜಶೇಖರ್ ಎಂಬುವವರ ಅಭಿಪ್ರಾಯ.


Click it and Unblock the Notifications











