Veera Simha Reddy Review : ಬಾಲಕೃಷ್ಣ ಡೈಲಾಗ್ಸ್‌ಗೆ ಥಿಯೇಟರ್‌ ಚಿಂದಿ.. ವೈ.ಎಸ್.ಜಗನ್ ಸರ್ಕಾರವೇ ಟಾರ್ಗೆಟ್!

By ರಾಜಬಾಬು

ಬಾಲಕೃಷ್ಣ ಹಾಗೂ ನಿರ್ದೇಶಕ ಗೋಪಿಚಂದ್ ಮಾಲಿನೇನಿ ಇಬ್ಬರಿಗೂ ಸಕ್ಸಸ್ ಸಿಕ್ಕ ಬಳಿಕ, ಒಂದಾಗಿ ನಿರ್ಮಿಸಿರೋ ಸಿನಿಮಾವೇ 'ವೀರ ಸಿಂಹ ರೆಡ್ಡಿ'. ಬಾಲಕೃಷ್ಣ 'ಅಖಂಡ' ಸಿನಿಮಾ ಯಶಸ್ಸಿನಲ್ಲಿ ತೇಲಾಡುತ್ತಿದ್ದರೆ, ಇತ್ತ ಗೋಪಿಚಂದ್ 'ಕ್ರ್ಯಾಕ್' ಸಿನಿಮಾ ಸಕ್ಸಸ್ ಖುಷಿಯಲ್ಲಿದ್ದಾರೆ. ಈಗ ಈ ಜೋಡಿಯ 'ವೀರ ಸಿಂಹ ರೆಡ್ಡಿ' ಥಿಯೇಟರ್‌ಗೆ ಲಗ್ಗೆ ಇಟ್ಟಿದೆ.

ಮೈತ್ರಿ ಮೂವಿ ಮೇಕರ್ಸ್ ನಿರ್ಮಿಸಿರೋ ಈ ಸಿನಿಮಾದಲ್ಲಿ ಬಾಲಯ್ಯಗೆ ಶ್ರುತಿ ಹಾಸನ್ ನಾಯಕಿ. ಈಗಾಗಲೇ ಸಿನಿಮಾ ಟೀಸರ್, ಟ್ರೈಲರ್ ಹಾಡುಗಳಿಂದ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಾಕಿದೆ. ಸಾಕಷ್ಟು ನಿರೀಕ್ಷೆಗಳನ್ನು ಹೊತ್ತು 'ವೀರ ಸಿಂಹ ರೆಡ್ಡಿ' ಥಿಯೇಟರ್‌ಗೆ ಲಗ್ಗೆ ಇಟ್ಟಿದೆ. ಹಾಗಿದ್ದರೆ, ನಂದಮೂರಿ ಅಭಿಮಾನಿಗಳಿಗೆ ಈ ಸಿನಿಮಾ ಖುಷಿ ಕೊಟ್ಟಿದ್ಯಾ? ಸಿನಿಮಾದ ಪ್ಲಸ್ ಏನು? ಮೈನಸ್ ಏನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

Rating:
3.0/5
Star Cast: Balakrishna, Shruti Haasan
Director: Gopichand Malineni

'ವೀರ ಸಿಂಹ ರೆಡ್ಡಿ' ಹಿನ್ನೆಲೆ ಏನು?

'ವೀರ ಸಿಂಹ ರೆಡ್ಡಿ' ಹಿನ್ನೆಲೆ ಏನು?

ವೀರ ಸಿಂಹ ರೆಡ್ಡಿ ಅವತಾರವತ್ತಿರೋ ಬಾಲಕೃಷ್ಣ ಕರ್ನೂಲಿನ ಪುಲಿಚಾರ್ಲಾ ಪ್ರದೇಶದ ಪವರ್‌ಫುಲ್ ವ್ಯಕ್ತಿ. ಅಲ್ಲಿ ಅರಾಜಕತೆ, ಸೇಡು ಮತ್ತು ಅದರ ವಿರುದ್ಧ ತಿರುಗಿಬೀಳುತ್ತಿರುತ್ತಾನೆ. ಇದೇ ವೇಳೆ ವೀರ ಸಿಂಹ ರೆಡ್ಡಿ ಹಾಗೂ ಅವನ ಸಹೋದರಿ ಭಾನುಮತಿ (ವರಲಕ್ಷ್ಮಿ) ಮತ್ತು ಪ್ರತಾಪ್ ರೆಡ್ಡಿ (ದುನಿಯಾ ವಿಜಯ್) ಜೊತೆ ಇರುವ ದ್ವೇಷ ಹಾಗೇ ಮುಂದುವರೆದಿರುತ್ತೆ. ವೀರ ಸಿಂಹ ರೆಡ್ಡಿಯನ್ನು ಪ್ರತಾಪ್ ರೆಡ್ಡಿ ಹಾಗೂ ಸಹೋದರಿ ಕೊಲ್ಲಲು ಯತ್ನಿಸುತ್ತಾರೆ. ಹೀಗಿದ್ದರೂ ಸಹೋದರಿಯನ್ನು ಕ್ಷಮಿಸಿ, ಊರು ಬಿಟ್ಟು ದೂರ ಹೋಗುತ್ತಾನೆ. ಹಲವು ವರ್ಷಗಳ ಬಳಿಕ ತನ್ನ ಮಗನನ್ನು ಭೇಟಿಯಾಗಲು ಇಸ್ತಾಂಬುಲ್‌ಗೆ ಹೋದ ವೀರಸಿಂಹ ರೆಡ್ಡಿಯನ್ನು ಗುರಿಯಾಗಿಸಿ, ಭಾನುಮತಿ ಮತ್ತು ಪ್ರತಾಪ್ ರೆಡ್ಡಿ ದಾಳಿ ಮಾಡುತ್ತಾರೆ. ಮುಂದೇನಾಗುತ್ತೆ ಅನ್ನೋದೇ ಕಥೆ.

ಭಯಂಕರ ಟ್ವಿಸ್ಟ್

ಭಯಂಕರ ಟ್ವಿಸ್ಟ್

'ವೀರ ಸಿಂಹ ರೆಡ್ಡಿ' ಸಿನಿಮಾ ಕಥೆಯಲ್ಲಿ ಸಾಕಷ್ಟು ಟ್ವಿಸ್ಟ್‌ಗಳಿವೆ. ಹೀಗಾಗಿ ಹಲವು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ತಂಗಿ ಭಾನುಮತಿ, ವೀರಸಿಂಹ ರೆಡ್ಡಿ ವಿರುದ್ಧ ತಿರುಗಿ ಬೀಳೋದ್ಯಾಕೆ? ವೀರಸಿಂಹ ರೆಡ್ಡಿಯ ಹೆಂಡತಿ ಮೀನಾಕ್ಷಿ ದೂರವಿರಲು ಕಾರಣವೇನು? ವೀರಸಿಂಹ ರೆಡ್ಡಿ ರಾಯಲಸೀಮ ಬಿಟ್ಟು ಇಸ್ತಾಂಬುಲ್‌ಗೆ ಹೋಗಿದ್ದೇಕೆ? ಇಸ್ತಾನ್‌ಬುಲ್‌ನಲ್ಲಿ ವೀರಸಿಂಹರೆಡ್ಡಿ ಹಾಗೂ ಮಗ ಜೈ ಸಿಂಹರೆಡ್ಡಿ ಭೇಟಿ ಹಾಗೂ ಆತನಲ್ಲಾದ ಬದಲಾವಣೆ ಏನು? ಇಶಾ (ಶ್ರುತಿ ಹಾಸನ್) ಮತ್ತು ಜೈ ಸಿಂಹ ರೆಡ್ಡಿ ನಡುವೆ ಪ್ರೀತಿ ಹುಟ್ಟಿದ್ದೇಗೆ? ತಂದೆಯ ಆಸೆ ಈಡೇರಿಸಲು ಮುಂದಾದ ಜೈ ಸಿಂಹರೆಡ್ಡಿಗೆ ಏನಾಯಿತು? ಅಣ್ಣ ವೀರಸಿಂಹ ರೆಡ್ಡಿಗೆ ದ್ರೋಹ ಮಾಡಿದ್ದಕ್ಕೆ ಭಾನುಮತಿಗೆ ಯಾವ ಶಿಕ್ಷೆ ಸಿಕ್ಕಿತು? ಈ ಎಲ್ಲಾ ಪ್ರಶ್ನೆಗಳಿಗೆ 'ವೀರ ಸಿಂಹ ರೆಡ್ಡಿ' ಸಿನಿಮಾದ ಕಥೆಯೇ ಉತ್ತರ ಕೊಡಲಿದೆ.

ಮೊದಲಾರ್ಧ ಹೈ ಸ್ಪೀಡ್

ಮೊದಲಾರ್ಧ ಹೈ ಸ್ಪೀಡ್

ಸಿನಿಮಾ ಮೊದಲಾರ್ಧ ಇಸ್ತಾನ್‌ಬುಲ್‌ನಿಂದ ಆರಂಭ ಆಗುತ್ತೆ. ಜೈ ಸಿಂಹರೆಡ್ಡಿ ಮತ್ತು ಅವರ ತಾಯಿ ಮೀನಾಕ್ಷಿ ನಡುವಿನ ದೃಶ್ಯಗಳೊಂದಿಗೆ ಸಿನಿಮಾ ಆರಂಭ ಆಗುತ್ತೆ. ಆ ಬಳಿಕ ವೀರಸಿಂಹ ರೆಡ್ಡಿ ಎಂಟ್ರಿಯಿಂದ ಹಿಡಿದು ಫಸ್ಟ್ ಹಾಫ್ ಮುಗಿಯೋವರೆಗೂ ಹೈ ಸ್ಪೀಡ್‌ನಲ್ಲಿ ಸಾಗುತ್ತೆ. ಪ್ರತಾಪ್ ರೆಡ್ಡಿ ಮತ್ತು ಗೃಹ ಸಚಿವರ (ರವಿಶಂಕರ್) ನಡುವಿನ ಸೀನ್ಸ್, ರಾಯಲಸೀಮೆ ಕುರಿತು ವೀರಸಿಂಹ ರೆಡ್ಡಿಯ ಡೈಲಾಗ್ಸ್ ಸಿನಿಮಾದ ಹೈಲೈಟ್.

ಸೆಕೆಂಡ್ ಹಾಫ್ ಫುಲ್ ಸೆಂಟಿಮೆಂಟ್

ಸೆಕೆಂಡ್ ಹಾಫ್ ಫುಲ್ ಸೆಂಟಿಮೆಂಟ್

'ವೀರ ಸಿಂಹ ರೆಡ್ಡಿ' ಸಿನಿಮಾದ ಸೆಕೆಂಡ್ ಹಾಫ್ ಹೆಚ್ಚು ಫ್ಲ್ಯಾಶ್ ಬ್ಯಾಕ್ ಹಾಗೂ ಭಾವನಾತ್ಮಕ ದೃಶ್ಯಗಳಿಗೆ ಒತ್ತು ನೀಡಲಾಗಿದೆ. ವೀರ ಸಿಂಹ ರೆಡ್ಡಿ ತನ್ನ ಮಹತ್ವಾಕಾಂಕ್ಷೆಯನ್ನು ಈಡೇರಿಸಿಕೊಳ್ಳಲು ನಿರ್ಧರಿಸಿದ ಬಳಿಕ ಸಿನಿಮಾದ ಕಥೆ ಮತ್ತಷ್ಟು ಉತ್ತುಂಗಕ್ಕೆ ಹೋಗುತ್ತೆ. ವರಲಕ್ಷ್ಮಿ ಶರತ್ ಕುಮಾರ್, ದುನಿಯಾ ವಿಜಯ್ ಪವರ್‌ಫುಲ್ ಪರ್ಫಾಮೆನ್ಸ್ ಕೊಟ್ಟಿದ್ದಾರೆ.

ಗೋಪಿಚಂದ್ ಮ್ಯಾಜಿಕ್

ಗೋಪಿಚಂದ್ ಮ್ಯಾಜಿಕ್

ನಿರ್ದೇಶಕ ಮಾಲಿನೇನಿ ಗೋಪಿಚಂದ್ ತೆಗೆದುಕೊಂಡಿರೊ ಕಥೆ ಸಿಂಪಲ್ ಆಗಿದೆ. ಆದರೆ, ಸ್ಕ್ರೀನ್ ಪ್ಲೇನಲ್ಲಿ ಗೆದ್ದಿದ್ದಾರೆ. ಭಾವನಾತ್ಮಕ ದೃಶ್ಯಗಳು, ಪಾತ್ರಗಳ ನಡುವಿನ ಲಿಂಕ್, ಸೆಂಟಿಮೆಂಟ್‌ನಲ್ಲಿ ಗೋಪಿಚಂದ್ ಗೆದ್ದಿದ್ದಾರೆ. ಪವರ್ ಫುಲ್ ಡೈಲಾಗ್ಸ್ ಈ ಸಿನಿಮಾದ ಮತ್ತೊಂದು ಪ್ಲಸ್ ಪಾಯಿಂಟ್.

ಬಾಲಯ್ಯ ಪವರ್‌ಫುಲ್.. ಜಗನ್ ಸರ್ಕಾವೇ ಟಾರ್ಗೆಟ್

ಬಾಲಯ್ಯ ಪವರ್‌ಫುಲ್.. ಜಗನ್ ಸರ್ಕಾವೇ ಟಾರ್ಗೆಟ್

ನಂದಮೂರಿ ಬಾಲಕೃಷ್ಣ ಈ ಸಿನಿಮಾದಲ್ಲೂ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಂದೆ-ಮಗನಾಗಿ ಎರಡೂ ಪಾತ್ರಗಳಲ್ಲೂ ಸಲೀಸಾಗಿ ಅಭಿನಯಿಸಿದ್ದಾರೆ. ಎರಡೂ ಅವತಾರಗಳಲ್ಲೂ ಹೆಚ್ಚು ಪವರ್‌ಫುಲ್, ಉತ್ತಮ ನಟನೆಯಿಂದ ಗಮನ ಸೆಳೆಯುತ್ತಾರೆ. ತಂಗಿ ಜೊತೆಗಿನ ಸೆಂಟಿಮೆಂಟ್ ಸೀನ್‌ಗಳಲ್ಲಿ, ಇಸ್ತಾಂಬುಲ್‌ ಇಂಟರ್‌ವಲ್ ಸೀನ್‌ನಲ್ಲಿ ಬಾಲಯ್ಯ ತಮ್ಮ ಅಭಿಮಾನಿಗಳನ್ನು ಕಾಡುತ್ತಾರೆ. ಅದರಲ್ಲೂ ವೈ ಎಸ್ ಜಗನ್ ಸರ್ಕಾರವನ್ನು ಟಾರ್ಗೆಟ್ ಮಾಡಿದ್ದಾರೆ. ತಮ್ಮ ಡೈಲಾಗ್‌ಗಳ ಮೂಲಕವೇ ತಿರುಗೇಟು ನೀಡಿದ್ದಾರೆ ಎನ್ನಬಹುದು.

ವರಲಕ್ಷ್ಮಿ, ದುನಿಯಾ ವಿಜಯ್ ಸೂಪರ್

ವರಲಕ್ಷ್ಮಿ, ದುನಿಯಾ ವಿಜಯ್ ಸೂಪರ್

'ವೀರ ಸಿಂಹ ರೆಡ್ಡಿ' ಸಿನಿಮಾದಲ್ಲಿ ಶ್ರುತಿ ಹಾಸನ್, ಹನಿ ರೋಸ್, ವರಲಕ್ಷ್ಮಿ ಶರತ್ ಕುಮಾರ್ ಮತ್ತು ದುನಿಯಾ ವಿಜಯ್ ಅವರ ಪಾತ್ರಗಳು ಪ್ರಮುಖವಾಗಿವೆ. ಶ್ರುತಿ ಹಾಸನ್ ಗ್ಲಾಮರ್‌ನಿಂದ ಗಮನ ಸೆಳೆಯಲು ಯತ್ನಿಸಿದ್ದಾರೆ. ಹಾಡುಗಳು ಮತ್ತು ಡ್ಯಾನ್ಸ್‌ನಲ್ಲಿ ಮಿಂಚಿದ್ದಾರೆ. ಮಲಯಾಳಂ ನಟಿ ಹನಿ ರೋಸ್ ಸೆಂಟಿಮೆಂಟ್ ದೃಶ್ಯಗಳಲ್ಲಿ ಸೂಪರ್. ಭಾನುಮತಿ ಅವತಾರದಲ್ಲಿ ವರಲಕ್ಷ್ಮಿ ಶರತ್ ಕುಮಾರ್ ಇಡೀ ಕಥೆಯನ್ನು ತಮ್ಮ ಹೆಗಲ ಮೇಲೆ ಹೊತ್ತಿದ್ದಾರೆಯೇ ಎಂಬ ಅನುಮಾನ ಮೂಡುತ್ತೆ. ಇನ್ನೊಂದು ಕಡೆ ಖಳನಾಯಕನಾಗಿ ದುನಿಯಾ ವಿಜಯ್ ದೃಶ್ಯಗಳನ್ನು ತಿಂದು ಹಾಕಿದ್ದಾರೆ. ದುನಿಯಾ ವಿಜಯ್ ಮಾಸ್ ಅವತಾರದಲ್ಲಿ ತೆಲುಗಿನಲ್ಲಿ ಟ್ರೇಡ್ ಮಾರ್ಕ್ ಒತ್ತಿದ್ದಾರೆ.

ಪವರ್ ಫುಲ್ ಡೈಲಾಗ್ಸ್

ಪವರ್ ಫುಲ್ ಡೈಲಾಗ್ಸ್

'ವೀರಸಿಂಹ ರೆಡ್ಡಿ'ಯ ಸಂಭಾಷಣೆ ಸಿನಿಮಾಗೆ ಜೀವ ತುಂಬಿವೆ. ಡೈಲಾಗ್‌ಗಳು ಪವರ್‌ಫುಲ್ ಆಗಿಲ್ಲದೆ ಇದ್ದಿದ್ದರೆ, ಸಿನಿಮಾ ಈ ರೇಂಜ್‌ ಇರುತ್ತಿರಲಿಲ್ಲ. ಬುರ್ರಾ ಸಾಯಿಮಾಧವ್ ಡೈಲಾಗ್ಸ್ ಲೇಖನಿಗಿಂತಲೂ ಬಂದೂಕಿನಿಂದ ಸಿಡಿದಿರುವಂತಿದೆ. ಇಂತಹ ಶಕ್ತಿಯುತ ಮತ್ತು ಪೊಲಿಟಿಕಲ್ ಪಂಚ್ ಸಿನಿಮಾಗಳನ್ನು ನೋಡುವುದೇ ಹೊಸ ಅನುಭವ ಅನಿಸುತ್ತೆ. ಹಲವು ದೃಶ್ಯಗಳಲ್ಲಿ ಡೈಲಾಗ್‌ಗಳು ಎಪಿ ಸರ್ಕಾರವನ್ನೇ ಗುರಿಯಾಗಿಸಿದೆ ಎಂದೆನಿಸುತ್ತೆ. ಹಾಗೇ ಎಸ್‌ ಎಸ್ ತಮನ್ ಮ್ಯೂಸಿಕ್ ಹಾಗೂ ಬಿಜಿಎಂ ಉತ್ತಮ ಎನಿಸುತ್ತೆ.

'ವೀರ ಸಿಂಹ ರೆಡ್ಡಿ' ಮೈನಸ್ ಏನು?

'ವೀರ ಸಿಂಹ ರೆಡ್ಡಿ' ಮೈನಸ್ ಏನು?

ಸಿನಿಮಾದಲ್ಲಿ ಲಾಜಿಕ್ ಹುಡುಕುವುದು ಅಸಾಧ್ಯ. ಕತ್ತಿ ಹಿಡಿದು ನರಕಕ್ಕೆ ಹೋಗುವುದು ಬಾಲಕೃಷ್ಣ ಮಾತ್ರ ಎಂಬುದನ್ನು ಈ ಸಿನಿಮಾ ಮತ್ತೊಮ್ಮೆ ಸಾಬೀತುಪಡಿಸಿದೆ. ಮಾಸ್, ಮಸಾಲಾ, ಆ್ಯಕ್ಷನ್, ಸೆಂಟಿಮೆಂಟ್ ಹಾಗೂ ಹೀರೊಯಿಸಂ ಇಷ್ಟ ಪಡುವವರಿಗೆ ಈ ಸಿನಿಮಾ ಫುಲ್ ಮೀಲ್ ಅಷ್ಟೇ. ಉಳಿದವರಿಗೆ ಕಿರಿಕಿರಿ ಅನಿಸಿದ್ದರೂ ಅಚ್ಚರಿ ಪಡಬೇಕಿಲ್ಲ.

More from Filmibeat

English summary
Balakrisha Movie Veera Simha Reddy Review In Kannada It Targets YS Jagan Govt,Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X