twitter
    For Quick Alerts
    ALLOW NOTIFICATIONS  
    For Daily Alerts

    Beast Movie Review: ಹಳೆ ಸೂತ್ರಗಳ, ಹೊಸ ಆ್ಯಕ್ಷನ್ ಚಿತ್ರ 'ಬೀಸ್ಟ್'!

    |

    ಸನ್ ಪಿಕ್ಚರ್ಸ್ ಅಡಿಯಲ್ಲಿ ಕಲಾನಿಧಿಮಾರನ್ 'ಬೀಸ್ಟ್' ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನ ಚಿತ್ರಕ್ಕಿದೆ. ವಿಜಯ್, ಪೂಜಾ ಹೆಗ್ಡೆ, ಸೆಲ್ವರಾಘವನ್, ಗಣೇಶ್, ಅಪರ್ಣಾ ದಾಸ್, ಯೋಗಿ ಬಾಬು ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿ ಇದ್ದಾರೆ.

    Rating:
    3.0/5

    ವೀರರಾಘವನ್ ಪತ್ರದಲ್ಲಿ ನಟ ವಿಜಯ್ ತೆರೆಯ ಮೇಲೆ ಅಬ್ಬರಿಸಿದ್ದಾರೆ. ಚಿತ್ರದ ಶುರುವಿನಲ್ಲಿ ನಟ ವಿಜಯ್ ಅಂಡರ್ ಕವರ್ ಏಜೆಂಟ್ ಎನ್ನುವುದು ರಿವೀಲ್ ಆಗುತ್ತದೆ. ನಂತರ ವಿಜಯ್ ಈ ಕಾರ್ಯವನ್ನು ಬಿಟ್ಟು ಏನು ಮಾಡುತ್ತಾರೆ? ಮಾಲ್ ಹೈಜಾಕ್ ಆಗೋದು ಹೇಗೆ? ಅಲ್ಲಿಂದ ವಿಜಯ್ ಮಾಡುವ ಸಾಹಸಗಳೇನು? ಎನ್ನುವುದು ರಿಲೀಸ್ ಆಗುತ್ತಾ ಹೋಗುತ್ತದೆ.

    Beast Twitter Review : ಟ್ವಿಟರ್‌ನಲ್ಲೂ 'ಬೀಸ್ಟ್'ಗೆ ಟಕ್ಕರ್, ಸಿನಿಮಾ ನೋಡಿ ಏನಂದ್ರು? Beast Twitter Review : ಟ್ವಿಟರ್‌ನಲ್ಲೂ 'ಬೀಸ್ಟ್'ಗೆ ಟಕ್ಕರ್, ಸಿನಿಮಾ ನೋಡಿ ಏನಂದ್ರು?

    ಚಿತ್ರದ ಆರಂಭದಲ್ಲಿ ಪುಟ್ಟ ಮಗು ಒಂದು ಬಲೂನ್ ಸಿಗದೇ ಬೇಸರದಲ್ಲಿದ್ದಾಗ, ಮಗುವಿಗೆ ವಿಜಯ್ ಬಲೂನ್ ಕೊಡಿಸುತ್ತಾನೆ. ಆದರೆ ಗೊತ್ತಾಗದೇ ಅದೇ ಮಗುವನ್ನು ಬ್ಲಾಸ್ಟ್‌ನಲ್ಲಿ ಕೊಂದು ಬಿಡುತ್ತಾನೆ. ಈ ಘಟನೆ ಇಂದ ಮನನೊಂದು ಕೆಲಸ ಬಿಟ್ಟು ಭಾರತಕ್ಕೆ ಬಂದು ಬಿಡುತ್ತಾನೆ.

    ಆರಂಭದಲ್ಲೇ ವಿಜಯ್ ಪಾತ್ರ ರಿವೀಲ್!

    ಆರಂಭದಲ್ಲೇ ವಿಜಯ್ ಪಾತ್ರ ರಿವೀಲ್!

    ಭಾರತದಲ್ಲಿ ನಟಿ ಪೂಜಾ ಹೆಗ್ಡೆಗೆ ಸೆಕ್ಯೂರಿಟಿ ಕೊಡುವ ಕೆಲಸದಲ್ಲಿ ಇರುತ್ತಾನೆ ವೀರರಾಘವನ್. ಆಗಲೇ ಮಾಲ್ ಹೈಜಾಕ್ ಆಗುತ್ತದೆ. ಅಲ್ಲಿಂದ ಕೆಲವು ಥ್ರಿಲ್ಲರ್ ಅಂಶಗಳು ತೆರೆದುಕೊಳ್ಳುತ್ತಾ ಹೋಗುತ್ತವೆ. ಜೊತೆಗೆ ವಿಜಯ್ ಆ್ಯಕ್ಷನ್ ಶುರುವಾಗುತ್ತೆ.

    ಮಗು ಸತ್ತಾಗ, ವಿಜಯ್ RAW ನಿಂದ ಹೊರಬರುತ್ತಾನೆ. ಸೈನ್ಯದ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುತ್ತಾನೆ. ನಂತರ ವೀರರಾಘವನ್ ಭದ್ರತಾ ಸೇವೆಯಲ್ಲಿ ಕೆಲಸ ಮಾಡುತ್ತಾರೆ. ಸೆಕ್ಯುರಿಟಿ ಸರ್ವೀಸ್ ಮೂಲಕ ಪೂಜಾ ಹೆಗ್ಡೆ ಭೇಟಿ ಆಗುತ್ತದೆ. ಪೂಜಾ ಹೆಗ್ಡೆ ಮತ್ತು ವಿಟಿವಿ ಗಣೇಶ್ ಇರುವ ಸನ್ನಿವೇಶಗಳು ಸಿಕ್ಕಾಪಟ್ಟೆ ನಗಿಸುತ್ತವೆ.

    ವಿಜಯ್ ಪಾತ್ರದ ಸುತ್ತಲು ಸುತ್ತಿಕೊಳ್ಳುವ ಕಥೆ!

    ವಿಜಯ್ ಪಾತ್ರದ ಸುತ್ತಲು ಸುತ್ತಿಕೊಳ್ಳುವ ಕಥೆ!

    ಚೆನ್ನೈನಲ್ಲಿರುವ ಮಾಲ್‌ಗೆ ಭದ್ರತಾ ಸೇವೆಯನ್ನು ಒದಗಿಸಲು ಗಣೇಶ್ ಗುತ್ತಿಗೆಯನ್ನು ಪಡೆಯುತ್ತಾನೆ. ಅವನ ತಂಡವು ಅಲ್ಲಿಗೆ ಹೋಗುತ್ತದೆ. ಆ ಸಮಯದಲ್ಲಿ ಅದೇ ಮಾಲ್ ಭಯೋತ್ಪಾದಕರಿಂದ ಹೈಜಾಕ್ ಆಗುತ್ತದೆ. ಭಯೋತ್ಪಾದಕನನ್ನು ಬಿಟ್ಟರೆ ಇಲ್ಲಿನ ಜನರು ಜೀವಂತವಾಗಿ ಉಳಿಯುತ್ತಾರೆ. ಅಲ್ಲಿ ಅವರೊಂದಿಗೆ ನಾಯಕ ವಿಜಯ್ ಕೂಡ ಸಿಕ್ಕಿ ಹಾಕಿಕೊಂಡಿರುತ್ತಾರೆ.

    ಕಾಮಿಡಿ ಟೈಮಿಂಗ್ 'ಬೀಸ್ಟ್' ಪ್ಲಸ್ ಪಾಯಿಂಟ್!

    ಕಾಮಿಡಿ ಟೈಮಿಂಗ್ 'ಬೀಸ್ಟ್' ಪ್ಲಸ್ ಪಾಯಿಂಟ್!

    ಇನ್ನು ಸೆಲ್ವರಾಘವನ್ ಅಲ್ತಾಫ್ ಉಸೇನ್ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ಸೆಲ್ವಾ ರಾಘವನ್ ನಿಭಾಯಿಸಿದ್ದಾರೆ. ಚಿತ್ರದಲ್ಲಿ ಅವರನು ನೋಡಿದ ಅಭಿಮಾನಿಗಳು ಕೊಂಡಾಡಿದ್ದಾರೆ. ಜೊತೆಗೆ ಪೂಜಾ ಹೆಗ್ಡೆ ಪಾತ್ರವೂ ಕೆಲವು ದೃಶ್ಯಗಳಿಗೆ ಸೀಮಿತಾ ಆಗಿದ್ದರೂ ಕೂಡ ಗಮನಾರ್ಹವಾಗಿದೆ.

    ನಿರ್ದೇಶಕ ನೆಲ್ಸನ್ ಅವರ ಕಾಮಿಡಿ ಟೈಮಿಂಗ್ ಸೆನ್ಸ್ 'ಬೀಸ್ಟ್' ಚಿತ್ರದ ದೊಡ್ಡ ಪ್ಲಸ್ ಪಾಯಿಂಟ್. 'ಬೀಸ್ಟ್' ನಿರ್ದೇಶಕ ನೆಲ್ಸನ್ ಒಂದು ಕಾಲ್ಪನಿಕ ಕಥೆಯಾದರೂ, ಅದನ್ನು ಚಿತ್ರಕಥೆ ಮಾಡಿದ ರೀತಿಯಿಂದ ಗಮನ ಸೆಳೆದಿದ್ದಾರೆ. ನಟ ವಿಜಯ್ ಅಭಿನಯ, ಫಿಟ್ನೆಸ್ ಸಾಹಸ ದೃಶ್ಯಗಳಲ್ಲಿ ಸಿಕ್ಕಾಪಟ್ಟೆ ಗಮನ ಸೆಳೆದಿದೆ.

    ಸೆಟ್, ಕ್ಯಾಮೆರಾ, ಸಂಗೀತಾ ಚಿತ್ರಕ್ಕೆ ಮೆರುಗು!

    ಸೆಟ್, ಕ್ಯಾಮೆರಾ, ಸಂಗೀತಾ ಚಿತ್ರಕ್ಕೆ ಮೆರುಗು!

    ಛಾಯಾಗ್ರಾಹಕ ಮನೋಜ್ ಪರಮಹಂಸ ಕೆಲಸ ಉತ್ತಮವಾಗಿ ಮೂಡಿ ಬಂದಿದೆ. ಇನ್ನು ಕಿರಣ್ ಸೃಷ್ಟಿಸಿರುವ ಮಾಲ್ ಸೆಟ್ ನೋಡುಗರನ್ನು ಬೆರಗುಗೊಳಿಸುತ್ತದೆ. ಆದರೆ ಸಂಕಲನ (ಎಡಿಟಿಂಗ್) ಇನ್ನೂ ಸ್ವಲ್ಪ ಶಾರ್ಪ್ ಆಗಿರಬಹುದಿತ್ತು ಎನಿಸುತ್ತದೆ. 'ಬೀಸ್ಟ್' ಚಿತ್ರ ಮತ್ತೊಂದು ದೊಡ್ಡ ಶಕ್ತಿ ಅಂದರೆ ಅನಿರುದ್ಧ್ ಸಂಗೀತಾ ಮತ್ತು ಹಾಡುಗಳು.

    ಚಿತ್ರದ ಮೈನಸ್ ಪಾಯಿಂಟ್ ವಿಲನ್!

    ಚಿತ್ರದ ಮೈನಸ್ ಪಾಯಿಂಟ್ ವಿಲನ್!

    ಇನ್ನು 'ಬೀಸ್ಟ್' ಚಿತ್ರದ ಮೈನಸ್ ಪಾಯಿಂಟ್ ಅಂದರೆ ಭಯೋತ್ಪಾದಕರಲ್ಲಿ ಒಬ್ಬನಾಗಿ ಬರುವ ಖ್ಯಾತ ಮಲಯಾಳಂ ನಟ 'ಶೈನ್ ಟಾಮ್ ಚಾಕೋ' ಚಿತ್ರದ ದೊಡ್ಡ ವಿಲನ್. ಆದರೆ ಅನಿರೀಕ್ಷಿತ ಎಂದರೆ ಈತನೆ ವಿಜಯ್‌ಗೆ ಸಹಾಯ ಮಾಡುವುದು. ಇದು ಚಿತ್ರದಲ್ಲಿ ಸೂಪರ್ ಟ್ವಿಸ್ಟ್ ಆಗಿದ್ದರೂ, ಈ ಮೂಲಕ ವಿಲನ್ ಡಮ್ಮಿ ಆಗಿ ಬಿಡುತ್ತಾನೆ.

    English summary
    Thalapathy Vijay and Pooja Hegde Starrer Beast Tamil Movie Review and Rating. Movie directed by Nelson Dilip Kumar
    Wednesday, April 13, 2022, 14:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X