twitter
    For Quick Alerts
    ALLOW NOTIFICATIONS  
    For Daily Alerts

    Bell Bottom Review : ಕಿಲಾಡಿ ದಿವಾಕರನ ಕಳ್ಳ, ಪೊಲೀಸ್ ಆಟ

    |

    'ಬೆಲ್ ಬಾಟಂ' ಒಂದು ಮಜಾವಾದ ಸಿನಿಮಾ. ಕಾಮಿಡಿಯ ಜೊತೆಗೆ ಥ್ರಿಲ್ ಸಿಗುವ ಪಕ್ಕಾ ಪತ್ತೇದಾರಿ ಚಿತ್ರ ಇದಾಗಿದೆ. ಈ ಶೈಲಿಯ ಸಿನಿಮಾ ಕನ್ನಡದಲ್ಲಿ ಬಂದು ತುಂಬ ವರ್ಷ ಆಗಿದೆ. ಹೀಗಾಗಿ ಪ್ರೇಕ್ಷಕರನ್ನು ಹಿಡಿದಿಡುವ ಶಕ್ತಿ ಚಿತ್ರದಲ್ಲಿದೆ. ಒಂದು ಕಳ್ಳತನದ ಸುತ್ತ ಇರುವ ಕಥೆಯೇ ಬೆಲ್ ಬಾಟಂ.

    Rating:
    3.5/5
    Star Cast: ರಿಷಬ್ ಶೆಟ್ಟಿ, ಹರಿಪ್ರಿಯಾ, ಯೋಗರಾಜ್ ಭಟ್
    Director: ಜಯತೀರ್ಥ

    ಕಳ್ಳ, ಪೊಲೀಸ್, ಪತ್ತೆದಾರಿ ಆಟ

    ಕಳ್ಳ, ಪೊಲೀಸ್, ಪತ್ತೆದಾರಿ ಆಟ

    ಒಂದು ಪೊಲೀಸ್ ಠಾಣೆಯ ಎದುರು ಪ್ರೆಸ್ ಮೀಟ್ ನಡೆಯುತ್ತಿರುತ್ತದೆ. ಸೀಜ್ ಮಾಡಿರುವ ಹಣವನ್ನು ವಶಪಡಿಸಿಕೊಂಡು ಪೊಲೀಸರು ಸಂತಸದಲ್ಲಿ ಇರುತ್ತಾರೆ. ಆದರೆ, ಪೊಲೀಸ್ ಠಾಣೆಯ ಆ ಹಣವೇ ಕಳ್ಳತನ ಆಗಿ ಬಿಡುತ್ತದೆ. ಬರೀ ಒಂದಲ್ಲ ಮೂರ್ನಾಲ್ಕು ಠಾಣೆಯ ಹಣವನ್ನು ಕಳ್ಳರು ಲೂಟಿ ಮಾಡುತ್ತಾರೆ. ಪೊಲೀಸ್ ಠಾಣೆಯಲ್ಲಿ ಕಳ್ಳತನ ಮಾಡುವ ಆ ಕಿಲಾಡಿಗಳು ಯಾರು ಎನ್ನುವುದರ ಹುಡುಕಾಟವೇ 'ಬೆಲ್ ಬಾಟಂ' ಕಥೆ.

    ಕಿಲಾಡಿಗಳ ಕಿಲಾಡಿ ದಿವಾಕರ

    ಕಿಲಾಡಿಗಳ ಕಿಲಾಡಿ ದಿವಾಕರ

    ಚಿಕ್ಕವಯಸ್ಸಿನಲ್ಲಿ ಪತ್ತೆದಾರಿ ಕಾದಂಬರಿ, ಸಿನಿಮಾಗಳನ್ನು ನೋಡಿಕೊಂಡೆ ಬೆಳೆದ ದಿವಾಕರ ಮುಂದೆ ಡಿಟೆಕ್ಟಿವ್ ಆಗಬೇಕು ಎಂಬ ನಿರ್ಧಾರ ಮಾಡುತ್ತಾನೆ. ಅಪ್ಪನ ಒತ್ತಾಯಕ್ಕೆ ಪೊಲೀಸ್ ಪೇದೆ ಆಗುವ ದಿವಾಕರನಿಗೆ ಯಾವಾಗಲು ಡಿಟೆಕ್ಟಿವ್ ಆಗಬೇಕು ಎನ್ನುವ ಹಠ ಇರುತ್ತದೆ. ಪೊಲೀಸ್ ಠಾಣೆಯಲ್ಲಿ ಆದ ಕಳ್ಳತನ ದಿವಾಕರನನ್ನು ಡಿಟೆಕ್ಟಿವ್ ಆಗುವಂತೆ ಮಾಡುತ್ತದೆ. ಪತ್ತೆದಾರಿಯಾದ ದಿವಾಕರ ಹೇಗೆ ಈ ಕಳ್ಳರನ್ನು ಹಿಡಿಯುತ್ತಾನೆ. ಪೊಲೀಸ್ ಠಾಣೆಯಲ್ಲಿಯೇ ಕಳ್ಳತನ ಮಾಡುವ ಆ ಕಿಲಾಡಿಗಳು ಯಾರು ಎನ್ನುವುದಕ್ಕೆ ಸಿನಿಮಾದಲ್ಲಿ ಉತ್ತರ ಸಿಗುತ್ತದೆ.

    'ಬೆಲ್ ಬಾಟಂ' ಹಾಡಿಗೆ ಸಿಕ್ಕಿದೆ ಬೊಗಸೆ ತುಂಬ ಪ್ರೀತಿ 'ಬೆಲ್ ಬಾಟಂ' ಹಾಡಿಗೆ ಸಿಕ್ಕಿದೆ ಬೊಗಸೆ ತುಂಬ ಪ್ರೀತಿ

    ಹೇಳಿ ಮಾಡಿಸಿದ ಪಾತ್ರಗಳು

    ಹೇಳಿ ಮಾಡಿಸಿದ ಪಾತ್ರಗಳು

    ಸಿನಿಮಾದ ಮುಖ್ಯ ಪಾತ್ರಗಳಾದ ದಿವಾಕರ ಹಾಗೂ ಕುಸುಮ ಪಾತ್ರಗಳಲ್ಲಿ ಜೀವಂತಿಕೆ ಇದೆ. ಎರಡು ಪಾತ್ರಗಳನ್ನು ಅದ್ಬುತವಾಗಿ ರಿಷಬ್ ಶೆಟ್ಟಿ ಹಾಗೂ ಹರಿಪ್ರಿಯಾ ನಿರ್ವಹಿಸಿದ್ದಾರೆ. ದಿವಕರ್ ಪಾತ್ರ ಸಖತ್ ಮಜಾ ನೀಡುತ್ತದೆ. ಇಬ್ಬರ ಲವ್ ಸ್ಟೋರಿ ಕ್ಯೂಟ್ ಆಗಿದೆ. ನಟನೆಯ ವಿಚಾರದಲ್ಲಿ ಈ ಇಬ್ಬರು ಹಿಂದೆ ಬಿದ್ದಿಲ್ಲ. ಈ ಇಬ್ಬರಿಗಾಗಿಯೇ ಈ ಪಾತ್ರಗಳನ್ನ ಹೇಳಿ ಮಾಡಿಸಿದ ಹಾಗಿದೆ.

    ಹೊಸ ಹೊಸ ಪಾತ್ರಗಳು

    ಹೊಸ ಹೊಸ ಪಾತ್ರಗಳು

    ನಟ, ನಟಿ ಬಿಟ್ಟರೆ ಸಿನಿಮಾದ ಸಣ್ಣ ಸಣ್ಣ ಪಾತ್ರಗಳು ಹೊಸ ರೀತಿಯಲ್ಲಿವೆ. ಸಗಣಿ ಪಿಂಟು, ಮರಕುಟುಕ ಸೇರಿದಂತೆ ಅನೇಕ ಪಾತ್ರಗಳನ್ನ ಹಿಂದೆ ಯಾವ ಸಿನಿಮಾದಲ್ಲಿಯೂ ನೋಡಿರಲು ಸಾಧ್ಯವಿಲ್ಲ. ಯೋಗರಾಜ್ ಭಟ್, ಪ್ರಮೋದ್ ಶೆಟ್ಟಿ ಹಾಗೂ ಶಿವಮಣಿಯವರ ಪಾತ್ರಗಳು ಚೆನ್ನಾಗಿವೆ. ಪ್ರತಿ ಪಾತ್ರಗಳು ಸಹ ವಿಭಿನ್ನ ಎನಿಸುತ್ತದೆ.

    'ಬೆಲ್ ಬಾಟಂ' ಹಾಕಿ ಬಂದ ಯೋಗರಾಜ್ ಭಟ್ 'ಬೆಲ್ ಬಾಟಂ' ಹಾಕಿ ಬಂದ ಯೋಗರಾಜ್ ಭಟ್

    ಮತ್ತೆ ಅಜನೀಶ್ ಅಬ್ಬರ

    ಮತ್ತೆ ಅಜನೀಶ್ ಅಬ್ಬರ

    'ಬೆಲ್ ಬಾಟಂ' ಚಿತ್ರಕ್ಕೆ ಒಂದು ಕಳೆ ಸಿಕ್ಕಿರುವುದು ಸಂಗೀತದಿಂದ. ಸಂಗೀತ ನಿರ್ದೇಶಕ ಅಜನೀಶ್ ಎಂದಿನಂತೆ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಕ್ಲಬ್ ಹಾಡು ಬಿಟ್ಟು ಉಳಿದ ಎರಡು ಹಾಡುಗಳು ಚೆನ್ನಾಗಿವೆ. ಹಿನ್ನಲೆ ಸಂಗೀತದಲ್ಲಿ ತಾವು ಮಾಸ್ಟರ್ ಎಂಬುದನ್ನು ಮತ್ತೆ ಸಾಬೀತು ಮಾಡಿದ್ದಾರೆ ಅಜನೀಶ್.

    ತಮ್ಮ ತನ ಬಿಡಲಿಲ್ಲ ನಿರ್ದೇಶಕರು

    ತಮ್ಮ ತನ ಬಿಡಲಿಲ್ಲ ನಿರ್ದೇಶಕರು

    ನಿರ್ದೇಶಕ ಜಯತೀರ್ಥ ಸಿನಿಮಾದಲ್ಲಿ ಅವರದ್ದೇ ಸ್ಟೈಲ್ ಇರುತ್ತದೆ. ಈ ಚಿತ್ರದಲ್ಲಿಯೂ ತಮ್ಮ ತನವನ್ನು ಅವರು ಬಿಟ್ಟುಕೊಟ್ಟಿಲ್ಲ. 'ಆದಿಯೋಗಿ ಬನ್ಯೋ..' ಹಾಡನ್ನು ಬಳಸಿಕೊಂಡಿರುವುದು ಚಿತ್ರದ ದೃಶ್ಯಗಳ ತೂಕ ಹೆಚ್ಚಿಸಿದೆ. ದಯಾನಂದ್ ಅವರ ಕಥೆ ಸಿನಿಮಾದ ಅಡಿಪಾಯವಾದರೆ, ರಘು ನೀಡುವಳ್ಳಿ ಸಂಭಾಷಣೆ ಚಿತ್ರಕ್ಕೆ ಆಧಾರ ಸ್ತಂಭದಂತಿದೆ. ಒಂದೊಳ್ಳೆ ಕಥೆಯನ್ನು ಅಷ್ಟೇ ಮಜಾವಾಗಿ ಹೇಳಿದ್ದಾರೆ ಜಯತೀರ್ಥ. ಅವರ ಮೇಕಿಂಗ್ ಶೈಲಿ ಇಷ್ಟ ಆಗುತ್ತದೆ.

    ಹಾಗಾದರೆ ಮೈನನ್ ಇಲ್ಲವೆ

    ಹಾಗಾದರೆ ಮೈನನ್ ಇಲ್ಲವೆ

    ಇಷ್ಟೆಲ್ಲ ಪ್ಲಾಸ್ ಇದ್ದ ಮೇಲೆ ಮೈನಸ್ ಇಲ್ಲವೆ..? ಇದೆ. ಪ್ರತಿ ಸಿನಿಮಾದಲ್ಲಿಯೂ ಅದು ಇದ್ದೇ ಇರುತ್ತದೆ. 'ಬೆಲ್ ಬಾಟಂ'ನಲ್ಲಿಯೂ ಚಿಕ್ಕ ಪುಟ್ಟ ಇಷ್ಟ ಆಗದ ಅಂಶಗಳು ಇರಬಹುದು. ಕ್ಲೈಮ್ಯಾಕ್ಸ್ ನಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಇದ್ದು, ಅದು ತುಸು ಜಾಸ್ತಿ ಆಯ್ತಾ ಅನಿಸುತ್ತದೆ.

    ಆ ಕಾಲಕ್ಕೆ ಹೋಗಿ ಬನ್ನಿ

    ಆ ಕಾಲಕ್ಕೆ ಹೋಗಿ ಬನ್ನಿ

    'ಬೆಲ್ ಬಾಟಂ' ಸಿನಿಮಾ ನೋಡುವ ಪ್ರೇಕ್ಷಕರನ್ನು ಆ ಕಾಲಕ್ಕೆ ಕರೆದುಕೊಂಡು ಹೋಗುತ್ತದೆ. ಮೇಕಿಂಗ್ ಸ್ಟೈಲ್, ಕಾಸ್ಟೂಮ್ ಎಲ್ಲ ನೋಡುಗರಿಗೆ ಇಷ್ಟ ಆಗುತ್ತದೆ. ಕಾಮಿಡಿ ಹಾಗೂ ಸಸ್ಪೆನ್ಸ್ ಮಿಶ್ರಿತ ಪಕ್ಕಾ ಪತ್ತೇದಾರಿ ಸಿನಿಮಾವನ್ನು ಒಮ್ಮೆ ಅಡ್ಡಿಯಿಲ್ಲದೆ ನೋಡಬಹುದು.

    English summary
    Actor Rishab Shett and Hariprriya' 'Bell Bottom' movie kannada movie review.
    Friday, February 15, 2019, 15:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X