Bhagavanth Kesari Review: ದಸರಾಗೆ ಹೇಳಿಮಾಡಿಸಿದ ಮಾಸ್ & ಎಮೋಷನಲ್ ಡ್ರಾಮಾ

By ಫಿಲ್ಮಿಬೀಟ್ ಡೆಸ್ಕ್

Rating:
3.0/5

ಕನ್ನಡದ 'ಘೋಸ್ಟ್', ತಮಿಳಿನ 'ಲಿಯೋ' ಜೊತೆಗೆ ತೆಲುಗಿನ 'ಭಗವಂತ್ ಕೇಸರಿ' ಸಿನಿಮಾ ಕೂಡ ವಿಶ್ವದಾದ್ಯಂತೆ ತೆರೆಗೆ ಬಂದಿದೆ. ಅನಿಲ್ ರಾವಿಪೂಡಿ ನಿರ್ದೇಶನದ ಈ ಚಿತ್ರದಲ್ಲಿ ನಂದಮೂರಿ ಬಾಲಕೃಷ್ಣ, ಶ್ರೀಲೀಲಾ ಹಾಗೂ ಕಾಜಲ್ ಅಗರ್‌ವಾಲ್ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ.

ಪೋಸ್ಟರ್, ಟೀಸರ್, ಟ್ರೈಲರ್, ಸಾಂಗ್ಸ್ ಅಂತೆಲ್ಲಾ 'ಭಗವಂತ್ ಕೇಸರಿ' ಸಿನಿಮಾ ಸದ್ದು ಮಾಡಿತ್ತು. ಈ ಕಾಮಿಡಿ ಆಕ್ಷನ್ ಡ್ರಾಮಾ ಸಿನಿಮಾ ಹೇಗಿದೆ? ಕತೆ ಏನು? ಕಲಾವಿದರ ಅಭಿನಯ ಹೇಗಿದೆ? ರೇಟಿಂಗ್ ಎಷ್ಟು? ಮುಂದೆ ಓದಿ..

Bhagavanth Kesari Movie Review in Kannada: Balakrishnas action comedy Film review and Ratings

'ಭಗವಂತ್ ಕೇಸರಿ' ಕಥೆ?

ಜೈಲಿನಿಂದ ಬಿಡುಗಡೆಯಾದ ನೆಲಕೊಂಡ ಭಗವಂತನ ಕೇಸರಿ (ಬಾಲಕೃಷ್ಣ) ತನ್ನ ಆರೈಕೆಯಲ್ಲಿ ಬೆಳೆಯುವ ವಿಜ್ಜಿ ಅಲಿಯಾಸ್ ವಿಜಯಲಕ್ಷ್ಮಿ (ಶ್ರೀಲೀಲಾ)ಯನ್ನು ಆರ್ಮಿಗೆ ಸೇರಿಸುವ ಪ್ರಯತ್ನ ಮಾಡುತ್ತಾನೆ. ಅದಕ್ಕಾಗಿ ಆಕೆಯನ್ನು ದೈಹಿಕವಾಗಿ, ಮಾನಸಿಕವಾಗಿ ಧೃಡವಾಗುವಂತೆ ಮಾಡಲು ಹರ ಸಾಹಸಪಡುತ್ತಿರುತ್ತಾನೆ. ಆದರೆ ಆರ್ಮಿಯಲ್ಲಿ ಸೇರುವುವು ವಿಜ್ಜಿಗೆ ಇಷ್ಟವಿರಲ್ಲ. ಚಿಚ್ಚಾ ಎಂದು ಕರೆಯುವ ಭಗವಂತ್ ಕೇಸರಿ ಸಲಹೆ, ಸೂಚನೆ ಅನುಸರಿಸುವುದಿಲ್ಲ. ಕಾಲೇಜಿನಲ್ಲಿ ತನ್ನ ಕ್ಲಾಸ್‌ಮೆಟ್‌ ಜೊತೆ ಪ್ರೀತಿಯಲ್ಲಿ ಬಿದ್ದ ವಿಜ್ಜಿ ತನ್ನ ಚಿಚ್ಚಾನಿಂದ ದೂರವಿರಲು ಬಯಸುತ್ತಾಳೆ.

ಮತ್ತೊಂದು ಕಡೆ ವಿಜ್ಜಿನ ಕೊಲ್ಲಲು ರಾಹುಲ್ ಸಿಂಘ್ವಿ (ಅರ್ಜುನ್ ರಾಂಪಾಲ್) ಪ್ರಯತ್ನಿಸುತ್ತಿರುತ್ತಾನೆ. ವಿಜ್ಜಿ ಆರೈಕೆ ಜವಾಬ್ದಾರಿಯನ್ನು ಭಗವಂತ ಕೇಸರಿ ಯಾಕೆ ಹೊತ್ತುಕೊಂಡ? ವಿಜ್ಜಿಗೆ ಇರುವ ಮಾನಸಿಕ ಸಮಸ್ಯೆ ಏನು? ಅದಕ್ಕೆ ಕಾರಣವೇನು? ಭಗವಂತ ಕೇಸರಿಗಾಗಿ ವಿಜ್ಜಿ ದೂರವಿರಬೇಕೆಂದು ನಿರ್ಧಾರ ತೆಗೆದುಕೊಂಡ ನಂತರ ಏನೆಲ್ಲಾ ಆಗುತ್ತದೆ?ರಾಹುಲ್ ಸಿಂಗ್ವಿ ಏಕೆ ವಿಜ್ಜಿನ ಕೊಲ್ಲಲು ಮುಂದಾದ? ರಾಹುಲ್ ಸಿಂಗ್ವಿ ಹಾಗೂ ಭಗವಂತ್ ಕೇಸರಿ ನಡುವಿನ ವೈಷಮ್ಯ ಏನು? ವಿಜ್ಜಿ ಕೊನೆಗೆ ಆರ್ಮಿ ಸೇರ್ತಾಳಾ? ಇದಕ್ಕೆಲ್ಲಾ ಉತ್ತರ ಬೇಕು ಅಂದರೆ ಸಿನಿಮಾ ನೋಡಬೇಕು.

Bhagavanth Kesari Movie Review in Kannada: Balakrishnas action comedy Film review and Ratings

ಸಿನಿಮಾ ಫಸ್ಟ್‌ ಹಾಫ್

ಭಗವಂತ್ ಕೇಸರಿ ಸೆರೆವಾಸ ಎಪಿಸೋಡ್ ಮೂಲಕ ಸಿನಿಮಾ ಕತೆ ಆರಂಭವಾಗುತ್ತದೆ. ಬಾಲಯ್ಯ ಪವರ್ ಫುಲ್ ಎಂಟ್ರಿ ಸಿನಿಮಾ ಮೇಲೆ ಕುತೂಹಲ ಹೆಚ್ಚಿಸುತ್ತದೆ. ಕತೆಯ ಡಿಟೈಲಿಂಗ್ ಕಾರಣಕ್ಕೆ ಫಸ್ಟ್ ಹಾಫ್ ಕೊಂಚ ಬೋರ್ ಎನಿಸುತ್ತದೆ. ಕತೆಯನ್ನು ಬಿಡಿಸಿ ಹೇಳಲು ನಿರ್ದೇಶಕರು ರಿಸ್ಕ್ ತೆಗೆದುಕೊಂಡಂತೆ ಕಾಣುತ್ತದೆ. ಆದರೆ ಒಮ್ಮೆ ಕತೆ ಒಳಗೆ ಎಂಟ್ರಿ ಕೊಟ್ಟಮೇಲೆ ಬಹಳ ವೇಗವಾಗಿ ಸಾಗುತ್ತದೆ. ಒಂದೊಳ್ಳೆ ಟ್ವಿಸ್ಟ್‌ ಜೊತೆಗೆ ಇಂಟರ್‌ವೆಲ್‌ನಲ್ಲಿ ಉತ್ತಮ ಟ್ವಿಸ್ಟ್‌ನೊಂದಿಗೆ ಫಸ್ಟಾಫ್‌ನ ಕೊಂಚ ಭಾವನಾತ್ಮಕ, ಅಷ್ಟೇ ಕ್ರೇಜಿಯಾಗಿ ಮುಗಿಸಿರುವುದು ಸೆಕೆಂಡ್‌ ಹಾಫ್ ಬಗ್ಗೆ ನಿರೀಕ್ಷೆ ಹೆಚ್ಚಿಸುತ್ತದೆ.

ಸಿನಿಮಾ ಸೆಕೆಂಡ್ ಹಾಫ್

ಸೆಕಂಡಾಫ್‌ನಲ್ಲಿ 'ಭಗವಂತ ಕೇಸರಿ' ಫ್ಲಾಶ್ ಬ್ಯಾಕ್ ಸ್ಟೋರಿ ರೊಟೀನ್ ಎನಿಸುವುದರಿಂದ ಕೊಂಚ ನಿಧಾನವಾಗಿ ಸಾಗುವ ಅನುಭವವಾಗುತ್ತದೆ. ಆದರೆ ಒಮ್ಮೆ ಶ್ರೀಲೀಲಾ ಆರ್ಮಿ ಟ್ರೈನಿಂಗ್ ಮುಗಿದ ಬಳಿಕ ಸಿನಿಮಾ ಮತ್ತೊಂದು ಹಂತಕ್ಕೆ ಹೋಗುತ್ತದೆ. ಸ್ಕೂಲ್ ಎಮೋಷನಲ್ ಸೀನ್ ಚಿತ್ರದ ಹೈಲೆಟ್ ಎನಿಸಿಕೊಳ್ಳುತ್ತದೆ. ಅಲ್ಲಿಂದ ಮುಂದೆ ಭಗವಂತ್ ಕೇಸರಿ ಹಿನ್ನೆಲೆ ಬಗ್ಗೆ ಹೇಳುವ ಸೀನ್ ಫ್ಯಾಮಿಲಿ ಸಿನಿಮಾ ಫೀಲ್ ಕೊಡುತ್ತದೆ. ಭಗವಂತ್ ಹಾಗೂ ವಿಜ್ಜಿ ಪಾತ್ರಗಳನ್ನು ನಿರ್ದೇಶಕರು ತಿದ್ದಿ ತೀಡಿರುವುದು ಚೆನ್ನಾಗಿದೆ. ಇನ್ನು ಕ್ಲೈಮ್ಯಾಕ್ಸ್‌ ವೇಳೆಗೆ ಬಾಲಯ್ಯ, ಶ್ರೀಲೀಲಾ ಆಕ್ಷನ್ ಧಮಾಕ ಅಭಿಮಾನಿಗಳಿಗೆ ಹಬ್ಬ. ಲಾಜಿಕ್ ಪಕ್ಕಕ್ಕಿಟ್ಟರೆ ಭಗವಂತ್ ಕೇಸರಿ ಒಂದೊಳ್ಳೆ ಫ್ಯಾಮಿಲಿ ಆಕ್ಷನ್ ಎಂಟರ್‌ಟೈನರ್.

ಸಿನಿಮಾ ಹೇಗಿದೆ?

ನಿರ್ದೇಶಕ ಅನಿಲ್ ರಾವಿಪುಡಿ ತಮ್ಮ ಆಕ್ಷನ್ ಕಾಮಿಡಿ ಸಿನಿಮಾಗಳಿಂದ ಹೆಚ್ಚು ಜನಪ್ರಿಯರಾಗಿದ್ದಾರೆ. ಆದರೆ 'ಭಗವಂತ ಕೇಸರಿ' ಚಿತ್ರದಲ್ಲಿ ಯಾರೂ ಊಹಿಸದ ಕತೆಯನ್ನು ಹೊತ್ತು ಈ ಬಾರಿ ಪ್ರೇಕ್ಷಕರ ಮುಂದೆ ಬಂದಿರೋ ರಿಸ್ಕ್ ಎನ್ನಬಹುದು. ನಿರ್ದೇಶಕರ ಧೈರ್ಯ ಮೆಚ್ಚಲೇಬೇಕು. ಬಾಲಯ್ಯ- ಶ್ರೀಲೀಲಾ ಜೋಡಿಯನ್ನು ತೋರಿಸಿರುವ ಬಗ್ಗೆ ಚೆನ್ನಾಗಿದೆ. ಫ್ಯಾನ್ಸ್‌ ಕೇಳುವುದನ್ನು ಪಕ್ಕಕ್ಕಿಟ್ಟು ಹಾಡುಗಳ ಸಹವಾಸಕ್ಕೆ ಹೋಗದೇ ಕತೆ ಹೇಳಿರುವ ಪ್ರಯತ್ನ ಮೆಚ್ಚಲೇಬೇಕು.

ಕಲಾವಿದರ ಅಭಿನಯ

'ಭಗವಂತ ಕೇಸರಿ' ಚಿತ್ರದಲ್ಲಿ ಬಾಲಯ್ಯ ತಮ್ಮನ್ನು ತಾವು ಹೊಸ ರೀತಿಯಲ್ಲಿ ನೋಡಿಕೊಳ್ಳಲು ಬಯಸಿರುವುದು ಗೊತ್ತಾಗುತ್ತದೆ. ತನಗೆ ಬಲ ಹಾಗೂ ಬಲಹೀನತೆ ಕೂಡ ಆಗಿರುವ ಕಮರ್ಷಿಯಲ್ ಎಲಿಮೆಂಟ್ಸ್ ಸಹವಾಸ್ಕೆ ಹೋಗದೇ ನಿರ್ದೇಶಕರ ನಟ ಆಗಿಬಿಟ್ಟಿದ್ದಾರೆ. ಭಗವಂತ್ ಕೇಸರಿಯಾಗಿ ಬಾಲಯ್ಯ ನಗಿಸ್ತಾರೆ? ಶಿಳ್ಳೆ ಹೊಡೆಯುವಂತೆ ಮಾಡುತ್ತಾರೆ, ಕಣ್ಣೀರು ಹಾಕುವಂತೆ ಮಾಡಿದ್ದಾರೆ. ವಿಜ್ಜಿ ಪಾತ್ರದಲ್ಲಿ ಶ್ರೀಲೀಲಾ ಮುಗ್ಧ ಹುಡುಗಿಯಾಗಿ ಚಿಚ್ಚಾಗಾಗಿ ಬದಲಾಗುವ ಎಮೋಷನಲ್ ಪಾತ್ರದಲ್ಲಿ ಬೆರತು ಹೋಗಿದ್ದಾರೆ. ಇಲ್ಲಿವರೆಗೂ ಒಳ್ಳೆ ಡ್ಯಾನ್ಸರ್ ಆಗಿ ಮಿಂಚಿದ್ದ ಶ್ರೀಲೀಲಾ ಈ ಬಾರಿ ತಮ್ಮಲ್ಲಿ ಮಾಸ್, ಆಕ್ಷನ್ ಹೀರೊಯಿನ್ ಕೂಡ ಇದ್ದಾರೆ ಎಂದು ತೋರಿಸಿದ್ದಾರೆ. ಚಿಕ್ಕ ಪಾತ್ರದಲ್ಲಿ ಕಾಜಲ್ ಇಷ್ಟವಾಗುತ್ತಾರೆ. ವಿಲನ್ ಆಗಿ ಅರ್ಜುನ್ ರಾಂಪಾಲ್ ಅಬ್ಬರಿಸಿದ್ದಾರೆ.

ಕೊನೆ ಮಾತು

ಮಹಿಳಾ ಸಬಲೀಕರಣ, ಹ್ಯುಮನ್ ಎಮೋಷನ್ಸ್, ಆ್ಯಕ್ಷನ್, ಕಾಮೆಡಿ ಸೇರಿಸಿ ಮಾಡಿರುವ ಚಿತ್ರ ಭಗವಂತ ಕೇಸರಿ. ಕೆಲ ಸನ್ನಿವೇಶಗಳು ಚೆನ್ನಾಗಿಲ್ಲ ಎನ್ನಿಸಿದರೂ ಅನಿಲ್ ರಾವಿಪುಡಿ ಅದನ್ನು ಸೊಗಸಾಗಿ ತರುವ ಪ್ರಯತ್ನ ಮಾಡಿದ್ದಾರೆ. ಇನ್ನುಳಿದಂತೆ ಬಾಲಕೃಷ್ಣ, ಶ್ರೀಲೀಲಾ, ಕಾಜಲ್, ಅರ್ಜುನ್ ರಾಂಪಾಲ್, ಶರತ್ ಕುಮಾರ್ ಇತರ ನಟ-ನಟಿಯರ ಅಭಿನಯ ಚಿತ್ರಕ್ಕೆ ಪ್ಲಸ್ ಆಗಿದೆ. ಮಾಸ್, ಕ್ಲಾಸ್ ಎನ್ನುವ ಭೇದ ಇಲ್ಲದೇ ಸಾಕಷ್ಟು ವಿಷಯಗಳು ಇಷ್ಟವಾಗುತ್ತದೆ. ದಸರಾ ಹಬ್ಬಕ್ಕೆ ಒಂದೊಳ್ಳೆ ಫ್ಯಾಮಿಲಿ ಎಂಟರ್‌ಟೈನರ್ 'ಭಗವಂತ್ ಕೇಸರಿ' ಎನ್ನುವಂತಿದೆ.

More from Filmibeat

English summary
Balakrishna, Sreeleela Starrer Bhagavanth Kesari Movie Review In Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X