ಹೇಗಿವೆ ಈ ವಾರದ ಸಿನಿಮಾಗಳು?: ಒಂದು 'ಆರೆಂಜ್' ಮತ್ತೊಂದು ರಕ್ತ ಕೆಂಪು!

By ಶಶಿಕರ ಪಾತೂರು

ಈ ವಾರ ಕೂಡ ಬಿಡುಗಡೆಗೊಂಡ ಚಿತ್ರಗಳಿಗೆ ಕೊರತೆಯಿಲ್ಲ. ಆದರೆ, ಜನಮಾನಸದಲ್ಲಿ ನಿರೀಕ್ಷೆ ಮೂಡಿಸಿದ್ದು ಎರಡು ಪ್ರಮುಖ ಚಿತ್ರಗಳು. ಅವುಗಳಲ್ಲಿ ಒಂದು ಗೋಲ್ಡನ್ ಸ್ಟಾರ್ ನಟನೆಯ 'ಆರೆಂಜ್' ಚಿತ್ರವಾದರೆ ಮತ್ತೊಂದು ಡಾಲಿ ಧನಂಜಯ ನಟನೆಯ ಚಿತ್ರ 'ಭೈರವ ಗೀತ'.

'ಝೂಮ್' ಚಿತ್ರದ ತಂಡವೇ ಮತ್ತೊಮ್ಮೆ ತೆರೆಗೆ ಬರುತ್ತಿದೆ ಎಂಬ ಪ್ರಚಾರದೊಂದಿಗೆ ಬಂದಂಥ ಸಿನಿಮಾ 'ಆರೆಂಜ್'. ಹಾಗಾಗಿಯೇ ಈ ಚಿತ್ರದ ಬಗ್ಗೆ ಆ ರೇಂಜ್ ನ ನಿರೀಕ್ಷೆಗಳನ್ನಿರಿಸಿ ಝೂಮ್ ಹಾಕಿ ನೋಡುವಂತಿಲ್ಲ. ಇನ್ನು ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮ ಕೃಪಾಪೋಷಿತ ಚಿತ್ರ ಎಂಬ ಕಾರಣಕ್ಕೆ ಚಿತ್ರೀಕರಣದ ಆರಂಭದಿಂದಲೇ ಸದ್ದು ಮಾಡಿದಂಥ ಸಿನಿಮಾ ಭೈರವಗೀತ. ಚಿತ್ರ ಬಿಡುಗಡೆಯ ಬಳಿಕ ಕೂಡ ವರ್ಮಾ ಮತ್ತು ತೆಲುಗು ಚಿತ್ರಗಳ ಛಾಯೆಯಿಂದ ಆಚೆಗಿನ ಮಾಯೆ ಮಾಡಿಲ್ಲ ಎನ್ನುವುದು ಸತ್ಯ.

ಈ ವಾರ ತೆರೆಗೆ ಬಂದಿರುವ ಈ ಸಿನಿಮಾಗಳ ವಿಮರ್ಶೆ ಮುಂದಿದೆ ಓದಿ..

'ಝೂಮ್' ನಷ್ಟು ಅರ್ಥಹೀನವಲ್ಲ

'ಝೂಮ್' ನಷ್ಟು ಅರ್ಥಹೀನವಲ್ಲ

'ಆರೆಂಜ್' ಸಿನಿಮಾ 'ಝೂಮ್' ನಷ್ಟು ಅರ್ಥಹೀನವಲ್ಲ ಮತ್ತು ದ್ವಂದ್ವಂರ್ಥದ ಸಂಭಾಷಣೆಗಳ ಪ್ರಯೋಗವಿಲ್ಲ ಎನ್ನುವುದು ಖುಷಿಯ ಸಂಗತಿ. ಹೋಲಿಸುವುದಾದರೆ ಗಣೇಶ್ ನಟನೆಯಲ್ಲೇ ತೆರೆಕಂಡಿದ್ದ 'ಚೆಲ್ಲಾಟ' ಚಿತ್ರದ ದೃಶ್ಯಗಳು ನೆನಪಾದರೆ ಅಚ್ಚರಿಯಿಲ್ಲ. ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರ ಇಮೇಜ್ ಅನ್ನು ಬಳಸಿಕೊಂಡೇ ಅಭಿಮಾನಿಗಳನ್ನು ಸೆಳೆಯುವ ಪ್ರಯತ್ನ ನಡೆಸಲಾಗಿದೆ.

ಟೈಮ್ ಪಾಸ್ ಸಿನಿಮಾ

ಟೈಮ್ ಪಾಸ್ ಸಿನಿಮಾ

ಕಳ್ಳತನಗೈದಾದರೂ ಸಂಬಂಧಗಳನ್ನು ಉಳಿಸುವ ನಾಯಕನ ಕ್ಯಾರೆಕ್ಟರೇ ಅದಕ್ಕೊಂದು ಉದಾಹರಣೆ. ನಾಯಕಿ ಜೊತೆಗೆ ಮನಸು ಬಿಚ್ಚಿ ಮಾತನಾಡುವ ವೇಳೆ ಸೇಂದಿ ಕುಡಿದಿರುವುದು.. ಇನ್ನೇನು ಮುಂಗಾರು ಮಳೆ ಸುರಿಯುವುದೊಂದೇ ಬಾಕಿ! ನಾಯಕಿ ನಾಯಕನಿಗೆ ಆರೆಂಜ್ ಹಣ್ಣು ಕೊಡುತ್ತಾಳೆ ಎನ್ನುವುದರ ಆಚೆ ಆರೆಂಜ್ ಗೂ ಚಿತ್ರಕ್ಕೂ ಸಂಬಂಧವಿಲ್ಲ. ಆರಂಭದಲ್ಲಿ ಚಿತ್ರ ಸಿಪ್ಪೆಯಂತೆ ಕಂಡರೂ ಕೂಡ ಒಳಗೆ ಮನರಂಜನೆಯ ಸವಿಗಷ್ಟೇ ಮೀಸಲಾದ ಸಾಕಷ್ಟು ಪಾತ್ರಗಳ ಎಸಳುಗಳಿವೆ. ಹಾಗಾಗಿ ಟೈಮ್ ಪಾಸ್ ಗೆಂದು ನೋಡುವವರು ಮೆಚ್ಚಬಹುದಾದ ಚಿತ್ರ ಇದು.

ರಕ್ತ-ಪ್ರೇಮದ ಕತೆ ಹೇಳುವ 'ಭೈರವ ಗೀತ'

ರಕ್ತ-ಪ್ರೇಮದ ಕತೆ ಹೇಳುವ 'ಭೈರವ ಗೀತ'

ಕತೆಯ ವಿಚಾರಕ್ಕೆ ಬಂದರೆ ತೊಂಬತ್ತರ ದಶಕದ ಸೂಪರ್ ಹಿಟ್ ಸಿನಿಮಾ ರಾಮಾಚಾರಿ. ಆದರೆ, ಇಲ್ಲಿ ನಾಯಕ ಭೈರವ ಪೆದ್ದನಲ್ಲ, ಆದರೆ, ಜೀತದಾಳಾಗಿ ನಡೆಸಿಕೊಳ್ಳಲ್ಪಟ್ಟವನು. ಅದೇ ಕಾರಣಕ್ಕೆ ಇದು ಜೀತದಾಳುಗಳು ಜಮೀನ್ದಾರರ ವಿರುದ್ಧ ನಡೆಸುವ ರಕ್ತ ಕ್ರಾಂತಿ ಎಂಬಂತೆ ತೋರಿಸಲಾಗಿದೆ. ಆದರೆ, ಜೀತ ಪದ್ಧತಿಯ ಆಳವನ್ನಾಗಲೀ ಜೋಡಿಗಳ ಪ್ರೀತಿಯನ್ನಾಗಲೀ ಆಳವಾಗಿ ತೋರಿಸಿಲ್ಲ.

ಎಲ್ಲವೂ ರಕ್ತಮಯ

ಎಲ್ಲವೂ ರಕ್ತಮಯ

ಧನಂಜಯ ಮತ್ತು ನಾಯಕಿ ಇರಾ ಸೇರಿಕೊಂಡು ಮೂರು ಮೂರು ಬಾರಿ ತುಟಿಗೆ ತುಟಿ ಬೆರೆಸಿದ್ದೇ ಕ್ರಾಂತಿ. ಉಳಿದಂತೆ, ಎಲ್ಲವೂ ರಕ್ತಮಯ. ಕತ್ತರಿಸಲ್ಪಡುವ ಕೈ ಕಾಲು, ಆಳುಕಾಳುಗಳಿಗೆ ಲೆಕ್ಕವಿಲ್ಲ. ಆದರೂ ಒಂದು ಹಾಡು, ಚಿತ್ರದ ಛಾಯಾಗ್ರಹಣ ಗಮನ ಸೆಳೆಯುತ್ತದೆ. ಧನಂಜಯ್ ಗೆ ಮಾಸ್ ಲುಕ್ ಸಿಕ್ಕಿರುವುದಂತೂ ನಿಜ.

More from Filmibeat

English summary
Actor Dhananjay's 'Bhairava Geetha' and Ganesh's 'Orange' kannada movie review.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X