ಹೇಗಿದೆ 'ಭಜರಂಗಿ 2': ಅರ್ಲಿ ಮಾರ್ನಿಂಗ್ ಶೋ ನೋಡಿದವರ ಅಭಿಪ್ರಾಯ
ಶಿವರಾಜ್ ಕುಮಾರ್ ನಟನೆಯ 'ಭಜರಂಗಿ 2' ಸಿನಿಮಾ ಇಂದು ಬಿಡುಗಡೆ ಆಗಿದ್ದು, ಸಿನಿಮಾದ 5 ಗಂಟೆ ಶೋ, 6 ಗಂಟೆ ಶೋಗಳು ಈಗಾಗಲೇ ಮುಗಿದು 10:30, 11 ಗಂಟೆ ಶೋಗಳು ಆರಂಭವಾಗಿವೆ.
'ಭಜರಂಗಿ 2' ಸಿನಿಮಾದ ಅರ್ಲಿ ಮಾರ್ನಿಂಗ್ ಶೋ ನೋಡಿದ ಅಭಿಮಾನಿಗಳು ಥ್ರಿಲ್ ಆಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. ಸಿನಿಮಾದ ರಿಪೋರ್ಟ್ ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಬಂದಾಗಿದೆ.
'ಭಜರಂಗಿ 2' ಸಿನಿಮಾದ ಅರ್ಲಿ ಮಾರ್ನಿಂಗ್ ಶೋ ನೋಡಿದ ಹಲವರು ಸಿನಿಮಾವನ್ನು ಬಹುವಾಗಿ ಹೊಗಳಿದ್ದಾರೆ. ಸಿನಿಮಾದ ಗ್ರಾಫಿಕ್ಸ್, ದೃಶ್ಯಗಳ ಕಟ್ಟುವಿಕೆ, ವಿಎಫ್‌ಎಕ್ಸ್, ಎಲ್ಲವನ್ನೂ ಹೊಗಳುತ್ತಿದ್ದಾರೆ. ಎಲ್ಲಕ್ಕೂ ಕಳಶವಿಟ್ಟಂತೆ ಶಿವರಾಜ್ ಕುಮಾರ್ ಅಭಿನಯ ಇದೆಯಂತೆ. ಹಾಗಿದ್ದರೆ ಸಿನಿಮಾ ನೋಡಿ ಯಾರ್ಯಾರು ಏನು ಹೇಳಿದರು? ಇಲ್ಲಿದೆ ಮಾಹಿತಿ.
''ಎರಡು ಪಾತ್ರಗಳಲ್ಲಿ ಶಿವಣ್ಣ ಅಭಿನಯ ಸೂಪರ್''
'ಭಜರಂಗಿ 2' ಸಿನಿಮಾ ದೃಶ್ಯ ವೈಭವ ಅದ್ಭುತ. ನಿರ್ದೇಶಕನಾಗಿ ಹರ್ಷ ಅದ್ಭುತವಾಗಿ ಕೆಲಸ ಮಾಡಿದ್ದಾರೆ. ಎರಡು ಪಾತ್ರಗಳಲ್ಲಿ ಶಿವರಾಜ್ ಕುಮಾರ್ ಬಹಳ ಚೆನ್ನಾಗಿ ನಟಿಸಿದ್ದಾರೆ. ಚೆಲುವರಾಜ್ ಅಭಿನಯ ಅದ್ಭುತವಾಗಿದೆ. ಸಿನಿಮಾದ ದ್ವಿತೀಯಾರ್ಧವಂತೂ ಅದ್ಭುತ. ಸಿನಿಮಾಕ್ಕೆ 5 ರಲ್ಲಿ 4 ಅಂಕ ಕೊಡುತ್ತೇನೆ ಎಂದು ದರ್ಶನ್ ಎಂಬುವರು ಟ್ವೀಟ್ ಮಾಡಿದ್ದಾರೆ.
''ಒಬ್ಬ ಸೂಪರ್ ಸ್ಟಾರ್ ಅನ್ನು ಹೀಗೆಯೇ ತೋರಿಸಬೇಕು''
''ಎಂಥಹಾ ಅದ್ಭುತವಾದ ಸಿನಿಮಾವನ್ನು ಹರ್ಷ ಕೊಟ್ಟಿದ್ದಾರೆ. ಒಬ್ಬ ಸೂಪರ್ ಸ್ಟಾರ್ ಅನ್ನು ಹೀಗೆಯೇ ದೊಡ್ಡ ಪರದೆಯ ಮೇಲೆ ತೋರಿಸಬೇಕು. ಪ್ರತಿ ಫ್ರೇಮ್‌ನಲ್ಲಿ ಶಿವರಾಜ್ ಕುಮಾರ್ ಅದ್ಭುತವಾಗಿ ಕಾಣುತ್ತಾರೆ. ಎಲ್ಲ ಪಾತ್ರವರ್ಗವೂ ಅದ್ಭುತವಾಗಿ ನಟಿಸಿದೆ. ಸಿಜಿ, ವಿಎಫ್‌ಎಕ್ಸ್ ಸಿನಿಮಾದ ಧನತ್ಮಕ ಅಂಶ. ಫೈಟ್‌ಗಳಂತೂ ಅದ್ಭುತವಾಗಿವೆ. ಸಿನಿಮಾದ ಹಿನ್ನೆಲೆ ಸಂಗೀತ ಬಹಳ ಚೆನ್ನಾಗಿದೆ'' ಎಂದು ಟ್ವೀಟ್ ಮಾಡಿದೆ ಸಿನಿಮಾ 777 ಟ್ವಿಟ್ಟರ್ ಪೇಜ್.
ತಾಂತ್ರಿಕವಾಗಿ ಅದ್ಭುತವಾಗಿದೆ ಸಿನಿಮಾ: ಸಂಜಯ್ ಭಟ್
''ಸಿನಿಮಾವೊಂದು ತಾಂತ್ರಿಕವಾಗಿ ಅದ್ಭುತವಾಗಿರಬಹುದು ಎಂಬುದಕ್ಕೆ 'ಭಜರಂಗಿ 2' ಉದಾಹರಣೆಯಾಗಿ ನಿಲ್ಲುತ್ತದೆ. ವಿಎಫ್‌ಎಕ್ಸ್ ಅಂತೂ ಅದ್ಭುತವಾಗಿದೆ. ಅಂಥಹಾ ಅದ್ಭುತವಾದ ಗ್ರಾಫಿಕ್ಸ್ ದೃಶ್ಯಗಳನ್ನು ನಾನು ನಿರೀಕ್ಷಿಸಿಯೇ ಇರಲಿಲ್ಲ. ದೃಶ್ಯ ಸಂಯೋಜನೆ, ವಿಎಫ್ಎಕ್ಸ್ ಮತ್ತು ಹಿನ್ನೆಲೆ ಸಂಗೀತ ಅತ್ಯದ್ಭುತವಾಗಿದೆ. ಬೇರೆ ಲೆವೆಲ್‌ನ ಸಿನಿಮಾ ಇದು'' ಎಂದಿದ್ದಾರೆ ಸಂಜಯ್ ಭಟ್.
ಫ್ಯಾಂಟಸಿ ಮತ್ತು ಕೌಟುಂಬಿಕ ಕತೆ
'ಭಜರಂಗಿ 2' ಬಹಳ ಚೆನ್ನಾಗಿ ಕಟ್ಟಲ್ಪಟ್ಟಿರುವ ಫ್ಯಾಂಟಸಿ ಕತೆ. ಇದರೊಳಗೆ ಕೌಟುಂಬಿಕ ಮೌಲ್ಯಗಳನ್ನು ಸೇರಿಸುವುದು ಸಹ ಬಹಳ ಚೆನ್ನಾಗಿದೆ. ಮಾಸ್ ಹಾಗೂ ಕೌಟುಂಬಿಕ ಎರಡೂ ಅಂಶಗಳನ್ನು ಸೇರಿ ಮಾಡಿದ ಸಿನಿಮಾ ಇದಾಗಿದೆ. ತಾಂತ್ರಿಕವಾಗಿ ಸಿನಿಮಾ ಅದ್ಭುತವಾಗಿದೆ. ವಿಎಫ್‌ಎಕ್ಸ್, ಸಿಜಿಐ, ಸಂಗೀತ, ಕಲಾ ನಿರ್ದೇಶನ, ಕ್ಯಾಮೆರಾ ಕೆಲಸ ಎಲ್ಲವೂ ಚೆನ್ನಾಗಿದೆ. ಎರಡು ಪಾತ್ರಗಳಲ್ಲಿ ಶೀವರಾಜ್ ಕುಮಾರ್ ಅದ್ಭುತವಾಗಿ ನಟಿಸಿದ್ದಾರೆ. ಶ್ರುತಿ, ಚೆಲುವರಾಜ್, ಭಾವನಾ ಪಾತ್ರಗಳು ಸಹ ಬಹಳ ಚೆನ್ನಾಗಿವೆ'' ಎಂದಿದೆ ಸಿನಿಲೋಕ.
ಇದು ಸಿನಿಮಾ ಅಲ್ಲ ಮ್ಯಾಜಿಕ್: ರಾಜೇಶ್
''ಭಜರಂಗಿ 2' ಕೇವಲ ಸಿನಿಮಾ ಅಲ್ಲ, ಅದೊಂದು ಮ್ಯಾಜಿಕ್. ಸಿನಿಮಾದ ದ್ವಿತೀಯಾರ್ಧವಂತೂ ನಿಮ್ಮನ್ನು ನಡುಗುವಂತೆ ಮಾಡಿಬಿಡುತ್ತದೆ. ಹರ್ಷಾಕೆ ಸಲಾಂ ಹೇಳಲೇಬೇಕು ಎಂದಿದ್ದಾರೆ ರಾಜೇಶ್. ''ನೆಕ್ಸ್ಟ್ ಲೆವೆಲ್‌ಗೇ ನೆಕ್ಸ್ಟ್ ಲೆವೆಲ್ ಸಿನಿಮಾ 'ಭಜರಂಗಿ 2'. ದ್ವಿತೀಯಾರ್ಧದಲ್ಲಿಯಂತೂ ರೋಮಾಂಚನದ ಅನುಭವವಾಗುತ್ತದೆ'' ಎಂದಿದ್ದಾರೆ ಚೇತನ್ ವೆಂಕಟೇಶಪ್ಪ.


Click it and Unblock the Notifications











