twitter
    For Quick Alerts
    ALLOW NOTIFICATIONS  
    For Daily Alerts

    Bharath Review : ಮಿಡಲ್ ಕ್ಲಾಸ್ ಹುಡುಗನ ಕಲರ್ ಫುಲ್ ಕಥೆ

    |

    'ಟೈಗರ್ ಜಿಂದಾ ಹೈ' ಹಾಗೂ 'ಸುಲ್ತಾನ್' ಸಿನಿಮಾಗಳ ಬಳಿಕ ಮತ್ತೆ 'ಭಾರತ್' ಚಿತ್ರದಲ್ಲಿ ನಿರ್ದೇಶಕ ಅಲಿ ಅಬ್ಬಾಸ್ ಜಾಫರ್ ಹಾಗೂ ಸಲ್ಮಾನ್ ಖಾನ್ ಒಂದಾಗಿದ್ದಾರೆ. 'Ode to my Father' ಎಂಬ ದಕ್ಷಿಣ ಕೊರಿಯಾ ಸಿನಿಮಾ ರಿಮೇಕ್ ಇದಾಗಿದೆ. ಭಾರತ್ ಎಂಬ ಮಿಡಲ್ ಕ್ಲಾಸ್ ಹುಡುಗನ ಕಲರ್ ಫುಲ್ ಕಥೆ ಪ್ರೇಕ್ಷಕರಿಗೆ ಇಷ್ಟ ಆಗುತ್ತದೆ.

    Rating:
    3.5/5
    Star Cast: ಸಲ್ಮಾನ್ ಖಾನ್, ಕತ್ರೀನಾ ಕೈಫ್
    Director: ಅಬ್ಬಾಸ್ ಜಾಫರ್

    ಭಾರತ್ ಎಂಬ ಹುಡುಗನ ಏಳು ಬೀಳಿನ ಬದುಕು

    ಭಾರತ್ ಎಂಬ ಹುಡುಗನ ಏಳು ಬೀಳಿನ ಬದುಕು

    ಭಾರತ್ (ಸಲ್ಮಾನ್ ಖಾನ್) ಒಬ್ಬ ಮಿಡನ್ ಕ್ಲಾಸ್ ಹುಡುಗ. ಸಣ್ಣ ವಯಸ್ಸಿನಲ್ಲಿಯೇ ಅಪ್ಪನಿಂದ ದೂರ ಆಗುತ್ತಾನೆ. ಆಗಲೇ ಎಲ್ಲ ಜವಾಬ್ದಾರಿ ಹೊತ್ತುಕೊಳ್ಳುವ ಈ ಹುಡುಗನಿಗೆ ತನ್ನ ಬಾಲ್ಯದ ಬಗ್ಗೆ ಯಾವುದೇ ದುಃಖ ಇರುವುದಿಲ್ಲ. ದೇಶದ ಹೆಸರನ್ನೇ ತಂದೆ ಅವನಿಗೆ ಇಟ್ಟಿದ್ದು, ಅದೇ ರೀತಿಯ ದೇಶಪ್ರೇಮ ಹೊಂದಿರುತ್ತಾನೆ. ಹೀಗೆ ಸಾಕುವ ಈತನ ಕಥೆಯಲ್ಲಿ ಅನೇಕ ಏಳು ಬೀಳು ಆಗುತ್ತದೆ. ಭಾರತ್ ನ ಕಲರ್ ಫುಲ್ ಬದುಕಿನ ಅನಾವರಣ ಇಲ್ಲಿದೆ.

    1947 ರಿಂದ 2010 ವರೆಗೆ ನಡೆಯುವ ಕಥೆ

    1947 ರಿಂದ 2010 ವರೆಗೆ ನಡೆಯುವ ಕಥೆ

    ಚಿತ್ರದ ಕಥೆ 1947 ರಿಂದ ಶುರುವಾಗಿ 2010 ರವರೆಗೆ ನಡೆಯುತ್ತದೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಸಮಯದಲ್ಲಿ ಆಗುವ ಗೊಂದಲದ ಪರಿಸ್ಥಿತಿಯಲ್ಲಿ ಭಾರತ್ ತನ್ನ ತಂದೆ ಹಾಗೂ ತಂಗಿಯನ್ನು ಕಳೆದುಕೊಳ್ಳುತ್ತಾನೆ. ಮುಂದೆ ತನ್ನ ತಂದೆಗೆ ನೀಡಿದ್ದ ಭಾಷೆಯಂತೆ ಜೀವನದ ತುಂಬ ನಡೆದುಕೊಳ್ಳುತ್ತಾನೆ. ರಿಸ್ಕಿ ಕೆಲಸದ ಜೊತೆಗೆ ಮುಂದುವರೆಯುವ ಆತನ ಜೀವನ ರಿಸ್ಕ್ ಆಗುತ್ತದೆ.

    ಸಲ್ಮಾನ್ ಖಾನ್-ಕತ್ರಿನಾ ಕೈಫ್ ಹೆಸರಿನಲ್ಲಿ 638 ಕೋಟಿ.! ಸಲ್ಮಾನ್ ಖಾನ್-ಕತ್ರಿನಾ ಕೈಫ್ ಹೆಸರಿನಲ್ಲಿ 638 ಕೋಟಿ.!

    ಸಲ್ಮಾನ್ ನಟನೆ ಚಿತ್ರದ ಹೈಲೈಟ್

    ಸಲ್ಮಾನ್ ನಟನೆ ಚಿತ್ರದ ಹೈಲೈಟ್

    ಸಲ್ಮಾನ್ ಖಾನ್ ನಟನೆ ಸಿನಿಮಾದ ದೊಡ್ಡ ಪ್ಲಾಸ್ ಪಾಯಿಂಟ್. ಅವರ ಅಭಿಮಾನಿಗಳಿಗೆ ಏನು ಬೇಕು ಎಲ್ಲ ಅಂಶಗಳು ಚಿತ್ರದಲ್ಲಿ ಇವೆ. ನಾಲ್ಕೈದು ಶೇಡ್ ಗಳಲ್ಲಿ ಸಲ್ಮಾನ್ ಕಾಣಿಸಿಕೊಂಡಿದ್ದಾರೆ. ಸಾಹಸ, ಎಮೋಷನ್, ಲವ್, ಕಾಮಿಡಿ ಹೀಗೆ ಎಲ್ಲ ಸೀನ್ ಗಳಲ್ಲಿ ಸಲ್ಲು ಮಿಂಚಿದ್ದಾರೆ. ಅವರನ್ನು ತೆರೆ ಮೇಲೆ ನೋಡಲು ಖುಷಿ ಆಗುತ್ತದೆ.

    ಎಮೋಷನ್ಸ್ ಹಾಗೂ ಫನ್

    ಎಮೋಷನ್ಸ್ ಹಾಗೂ ಫನ್

    ತನ್ನ ಜರ್ನಿಯಲ್ಲಿ ಸಮಾಜದ ಸಮಸ್ಯೆಗಳ ವಿರುದ್ಧ ಕಥಾ ನಾಯಕ ಹೋರಾಡುತ್ತಾನೆ. ಜೊತೆಗೆ ಆತನ ಲವ್ ಸ್ಟೋರಿ ಕೂಡ ಓಪನ್ ಆಗುತ್ತದೆ. ಚಿತ್ರದಲ್ಲಿ ಎಮೋಷನ್ಸ್ ಹಾಗೂ ಫನ್ ಮಿಶ್ರಣ ಚೆನ್ನಾಗಿದೆ. ಕೆಲವು ದೃಶ್ಯಗಳು ಭಾವುಕತೆಯಿಂದ ಕೂಡಿದ್ದರೆ, ಕೆಲವು ಅಷ್ಟೇ ಕಾಮಿಡಿಯಾಗಿವೆ. ಗೆಳೆಯನ ಪಾತ್ರದಲ್ಲಿ ಸುನಿಲ್ ಗ್ರೋವರ್ ನಗಿಸುತ್ತಾರೆ.

    ಟ್ರೆಂಡಿಂಗ್ ನಲ್ಲಿ ಸಲ್ಮಾನ್ ಖಾನ್ 'ಭಾರತ್' ಸಿನಿಮಾ ಟ್ರೆಂಡಿಂಗ್ ನಲ್ಲಿ ಸಲ್ಮಾನ್ ಖಾನ್ 'ಭಾರತ್' ಸಿನಿಮಾ

    ಕತ್ರಿನಾ ಕೈಫ್ ದಿ ಬೆಸ್ಟ್ ಆಕ್ಟಿಂಗ್

    ಕತ್ರಿನಾ ಕೈಫ್ ದಿ ಬೆಸ್ಟ್ ಆಕ್ಟಿಂಗ್

    ನಟಿ ಕತ್ರಿನಾ ಕೈಫ್ ಈವರೆಗೆ ಮಾಡಿರುವ ಬೆಸ್ಟ್ ನಟನೆಯಲ್ಲಿ ಈ ಸಿನಿಮಾ ಕೂಡ ಒಂದಾಗಿದೆ. ಚಿತ್ರದಲ್ಲಿ ಫೇಯ್ಸ್ಟಿ ಕುಮುದ್ ಯಾಗಿರುವ ಕತ್ರಿನಾ ಭಾರತ್ ಗೆ ತಾನೇ ಪ್ರಮೋಸ್ ಮಾಡಿ ಲವ್ ಮಾಡುತ್ತಾಳೆ. ಸಲ್ಮಾನ್ ಖಾನ್ ಮತ್ತು ಕತ್ರಿನಾ ಕಾಂಬಿನೇಶನ್ ಇಷ್ಟ ಆಗುತ್ತದೆ. ಇಬ್ಬರ ಸಹಜ ನಟನೆ ಗಮನ ಸೆಳೆಯುತ್ತದೆ.

    ಉಳಿದ ಅಂಶಗಳು ಹೇಗಿವೆ?

    ಉಳಿದ ಅಂಶಗಳು ಹೇಗಿವೆ?

    ಸಿನಿಮಾದ ನಿರೂಪಣೆ ಶೈಲಿ ಚೆನ್ನಾಗಿದೆ. ದೇಶ ಭಕ್ತಿ ದೃಶ್ಯಗಳು ಮನ ಮುಟ್ಟುತ್ತವೆ. ಹಾಡುಗಳು ಹಾಗೂ ಹಿನ್ನಲೆ ಸಂಗೀತ ಸೂಪರ್. ಸೋನಾಲಿ ಕುಲ್ಕರ್ಣಿ ಹಾಗೂ ಜಾಕಿ ಶ್ರಾಫ್ ನಟನೆ ಬಗ್ಗೆ ಮಾತನಾಡುವ ಹಾಗಿಲ್ಲ. ದಿಶಾ ಪಟಾನಿ ಗ್ಲಾಮರ್ ತೋರಿಸಿದ್ದಾರೆ. ಒಟ್ಟಾರೆ, ಮತ್ತೆ ಅಲಿ ಅಬ್ಬಾಸ್ ಜಾಫರ್ ಗೆಲ್ಲುವ ಸೂಚನೆ ನೀಡಿದ್ದಾರೆ .

    ಈದ್ ಗೆ ಬಂದ ಉಡುಗೊರೆ

    ಈದ್ ಗೆ ಬಂದ ಉಡುಗೊರೆ

    ಸಲ್ಮಾನ್ ಖಾನ್ ಈದ್ ಹಬ್ಬಕ್ಕೆ ಅಭಿಮಾನಿಗಳಿಗೆ ಉಡುಗೊರೆ ನೀಡಿದ್ದಾರೆ. ಸಿಕ್ಕಾಪಟ್ಟೆ ಮನರಂಜನೆ ಜೊತೆಗೆ ಒಂದಷ್ಟು ಒಳ್ಳೆಯ ಅಂಶಗಳು ಸಿನಿಮಾದಲ್ಲಿ ಇವೆ. ಫ್ಯಾಮಿಲಿ ಆಡಿಯನ್ಸ್ ಹಾಗೂ ಸಲ್ಲು ಅಭಿಮಾನಿಗಳಿಗೆ ಸಿನಿಮಾ ಇಷ್ಟ ಆಗುತ್ತದೆ.

    English summary
    Bollywood actor Salman Khan starrer Bharat movie review. This movie is directed by ali abbas zafer. Bharat released on the occasion of eid.
    Wednesday, June 5, 2019, 13:38
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X