Bheema Twitter Review: ಪ್ಯೂರ್ ರಾ ಮೂವಿ, ಕೊನೆ ಟ್ವಿಸ್ಟ್ ಚಿಂದಿ, C ಸೆಂಟರ್ಸ್ ಬ್ಲಾಸ್ಟ್
ಚಿತ್ರಮಂದಿರಗಳಲ್ಲಿ 'ಭೀಮ'ನ ಆರ್ಭಟ ಶುರುವಾಗಿದೆ. ಪ್ರೇಕ್ಷಕರು ಬಹಳ ದಿನಗಳ ಬಳಿಕ ಕನ್ನಡ ಸಿನಿಮಾ ನೋಡಲು ಮುಗಿಬಿದ್ದಿರುವುದು ಗೊತ್ತಾಗುತ್ತಿದೆ. ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲಿ ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. 'ಭೀಮ'ನ ಡ್ರಗ್ಸ್ ಮುಕ್ತ ಸಮಾಜದ ಹೋರಾಟವನ್ನು ಪ್ರೇಕ್ಷಕರು ಒಪ್ಪಿಕೊಂಡಿದ್ದಾರೆ.
'ಸಲಗ' ಬಳಿ ವಿಜಯ್ ನಿರ್ದೇಶಿಸಿ ನಟಿಸಿರುವ ಮತ್ತೊಂದು ಸಿನಿಮಾ ಇದು. ಹಾಗಾಗಿ ಸಹಜವಾಗಿಯೇ ಸಿನಿಮಾ ನಿರೀಕ್ಷೆ ಮೂಡಿಸಿತ್ತು. ಒಂದರ್ಥದಲ್ಲಿ ಈ ವರ್ಷ ಬಂದಿರುವ ಮೊದಲ ಸ್ಟಾರ್ ನಟನ ಸಿನಿಮಾ. ಹಾಗಾಗಿ ಶುಕ್ರವಾರ ಬೆಳಗಿನ ಶೋಗೂ ತಕ್ಕ ಮಟ್ಟಿಗೆ ಪ್ರೇಕ್ಷಕರು ಚಿತ್ರಮಂದಿರಗಳಿಗೆ ಬಂದಿದ್ದಾರೆ. ಚಿತ್ರದಲ್ಲಿ ದುನಿಯಾ ವಿಜಯ್ ಪಕ್ಕಾ ಮಾಸ್ ಕಥೆಯನ್ನು ಹೇಳಿದ್ದಾರೆ.

ಡ್ರಗ್ಸ್ ಹಾನಿಕರ, ಇದರಿದ ಯುವ ಜನತೆ ಹಾಳಾಗುತ್ತಿದೆ. ಅದನ್ನು ಬುಡ ಸಮೇತ ಕಿತ್ತು ಹಾಕಬೇಕು ಎನ್ನುವ ಸಂದೇಶ ಚಿತ್ರದಲ್ಲಿದೆ. ಇದರ ಸುತ್ತಾ ಒಂದು ಕಮರ್ಷಿಯಲ್ ಕಥೆಯನ್ನು ವಿಜಯ್ ಹೆಣೆದುಕೊಂಡಿದ್ದಾರೆ. ಆರಂಭದಿಂದಲೇ ಮಾಸ್ ಪ್ರೇಕ್ಷಕರನ್ನು ಸಿನಿಮಾ ಸೆಳೆಯುತ್ತಾ ಸಾಗುತ್ತದೆ. ಸಿನಿಮಾ ನೋಡಿದ ಕೆಲವರು ಈಗಾಗಲೇ ಟ್ವಿಟ್ಟರ್‌ನಲ್ಲಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಸೀ ಸೆಂಟರ್‌ಗಳು ಬ್ಲಾಸ್ಟ್
ಲೋಕಲ್‌ಗೆ ಲೋಕಲ್ ಮೂವಿ ಗುರು. ಫಸ್ಟ್ ಹಾಫ್ ಸಾಂಗ್ಸ್, ಕಾಮಿಡಿ ಸೂಪರ್. ಸೆಕೆಂಡ್ ಹಾಫ್ ಸೆಂಟಿಮೆಂಟಲ್ ಹಾಗೂ ರಿವೇಂಜ್ ಸ್ಟೋರಿ. ಮತ್ತೊಂದು ಯಶಸ್ವಿ ಸಿನಿಮಾ ಕೊಟ್ಟ ದುನಿಯಾ ವಿಜಯ್ ಅವರಿಗೆ ಹ್ಯಾಟ್ಸಾಫ್. ಇನ್ಸ್‌ಪೆಕ್ಟರ್ ಗಿರಿಜಾ ನಟನೆ ಸಖತ್ತಾಗಿದೆ. ಸೀ ಸೆಂಟರ್‌ಗಳು ಬ್ಲಾಸ್ಟ್ ಆಗೋದು ಗ್ಯಾರೆಂಟಿ ಎಂದು ನೆಟ್ಟಿಗರೊಬ್ಬರು ಬರೆದುಕೊಂಡಿದ್ದಾರೆ.
2nd ಹಾಫ್ ಸ್ವಲ್ಪ ಲ್ಯಾಗ್
ಫಸ್ಟ್ ಡೇ ಫಸ್ಟ್ ಶೋ ನೋಡ್ದೆ. ದುನಿಯಾ ವಿಜಯ್ ಡೈರೆಕ್ಷನ್ ಕಲಿತುಬಿಟ್ಟಿದ್ದಾರೆ. ಫಸ್ಟ್ ಹಾಫ್ ಅಂತೂ ಫುಲ್ ಎಂಗೇಜಿಂಗ್ ಆಗಿದೆ. ಕಾಮಿಡಿ ಮಜಾ ಕೊಡುತ್ತೆ. ಅವರು ಅವರನ್ನು ಪ್ರೊಜೆಕ್ಟ್ ಮಾಡಿಕೊಂಡಿರೋ ರೀತಿ ಚೆನ್ನಾಗಿದೆ. ಸೆಕೆಂಡ್ ಹಾಫ್ ಸ್ವಲ್ಪ ಲ್ಯಾಗ್ ಅನ್ಸತ್ತೆ. ಅಷ್ಟು ಮಜಾ ಕೊಡಲ್ಲ. ಕೆಲ ವೇಸ್ಟ್ ಎನಿಸುವ ಸನ್ನಿವೇಗಳಿವೆ. ಆದರೂ ಮಾಸ್ತಿ ಡೈಲಾಗ್ಸ್ ಹಾಗೂ ಚರಣ್ ರಾಜ್ ಮ್ಯೂಸಿಕ್ ಕ್ರೇಜಿ. ಫುಲ್ ಮಜಾ. ನೋಡಬಹುದು. ನಿರಾಸೆ ಮೂಡಿಸಲ್ಲ. ಬೇಗ ಸಿನಿಮಾ ನೋಡಿ ಎಂದು ಮತ್ತೊಬ್ಬರು ಪೋಸ್ಟ್ ಮಾಡಿದ್ದಾರೆ.
ಪ್ಯೂರ್ ಮಾಸ್ ಎಂಟರ್‌ಟ್ರೈನರ್
ಭೀಮ ಪ್ಯೂರ್ ರಾ ಮೂವಿ. ಪ್ಯೂರ್ ಮಾಸ್ ಎಂಟರ್‌ಟ್ರೈನರ್. ಫಸ್ಟ್ ಹಾಫ್ ಹಾಗೂ ಕ್ಲೈಮ್ಯಾಕ್ಸ್ ಬೆಂಕಿ. ಆಲ್ ದಿ ಬೆಸ್ಟ್ ಭೀಮ ಎಂದು ಇನ್ನೊಬ್ಬರು ಟ್ವೀಟ್ ಮಾಡಿದ್ದಾರೆ.

ಗೆದ್ದು ಬಂದ 'ಭೀಮ'
ಭೀಮ.. ಮೊದಲಿನಿಂದಲೇ ಕಥೆಯೊಳಗೆ ಇಳಿಯುವ ಚಿತ್ರ ಇದು. ಮೊದಲ ಅರ್ಧ ನಗಿಸಿ,ಹುಚ್ಚೆಬ್ಬಿಸಿ,ಶಿಳ್ಳೆ ಹೊಡಿಸುತ್ತದೆ. ಎರಡನೇ ಅರ್ಧ ಅದ್ಭುತವಾಗಿ ಕಥೆಯ ಆಳ ತೋರಿಸಿ ಗೆದ್ದಿದ್ದಾರೆ. ಇದು ನೈಜ ಘಟನೆಗಳನ್ನು ತಲೆಯಲ್ಲಿ ಇಟ್ಟಿಕೊಂಡು ಮಾಡಿರುವಂತಹ ಚಿತ್ರ. ಈಗಿನ ಯುವ ಪೀಳಿಗೆ ಬಗ್ಗೆ ಬಹಳ ಅಂದ್ರೆ ಬಹಳ ನೈಜವಾಗಿ ತೋರಿಸಿದ್ದಾರೆ. ಗೆದ್ದು ಬಂದ 'ಭೀಮ' ಎನ್ನುವುದು ಮತ್ತೊಬ್ಬರ ರಿವ್ಯೂ.
ಆ ಕೊನೆ ಟ್ವಿಸ್ಟ್ ಚಿಂದಿ
ಈಗಷ್ಟೇ ನೋಡಿದೆ ಭೀಮ ಸಿನಿಮಾ ನೋಡಿದೆ. ಬಲವಾದ ನಿರೂಪಣೆ ಮತ್ತು ಕಲಾವಿದರ ನಟನೆ ಗಮನ ಸೆಳೆಯುತ್ತದೆ. ಆದರೆ ಲೋಕಲ್ ದೃಶ್ಯಗಳು ಮತ್ತು ಪುನರಾವರ್ತನೆ ಆಗುವ ಆಕ್ಷನ್ ಚಿತ್ರಕ್ಕೆ ಹಿನ್ನಡೆ ಆಗುತ್ತದೆ. ಸೆಕೆಂಡ್ ಹಾಫ್ ಕೊಂಚ ನಿರಾಸೆ ಮೂಡಿಸುತ್ತದೆ. ಆದರೂ ಸಿನಿಮಾ ನೋಡಿಸಿಕೊಳ್ಳುತ್ತದೆ. ಆ ಕೊನೆ ಟ್ವಿಸ್ಟ್? ಸೂಪರ್. 3.5/5 ನನ್ನ ರೇಟಿಂಗ್ ಎಂದು ಮತ್ತೊಬ್ಬ ನೆಟ್ಟಿಗ ಬರೆದುಕೊಂಡಿದ್ದಾನೆ.
ಎಲ್ಲೂ ಬೋರ್ ಆಗಲ್ಲ
'ಭೀಮ' ಪಕ್ಕಾ ಲೋಕಲ್ ರಿವೇಂಜ್ ಡ್ರಾಮಾ. ಮಾಸ್ತಿ ಡೈಲಾಗ್ಸ್ ಬೆಂಕಿ. ಚರಣ್ ರಾಜ್ ಮ್ಯೂಸಿಕ್, ಬಿಜಿಎಂ ಸೂಪರ್. ವಿಜಯ್ ಅಣ್ಣ ಸೂಪರ್. ಎಲ್ಲೂ ಬೋರ್ ಆಗಲ್ಲ, ಸಖತ್ ಮೂವಿ ಎನ್ನುವುದು ಮತ್ತೊಬ್ಬರ ಅಭಿಪ್ರಾಯ.
ಸ್ಕ್ರೀನ್‌ಪ್ಲೇ ಸೂಪರ್
ವಿಜಯ್ ಮತ್ತೊಮ್ಮೆ ತಮ್ಮ ತಾಂತ್ರಿಕ ಪ್ರತಿಭೆಯನ್ನು ಸಾಬೀತು ಮಾಡಿದ್ದಾರೆ. ಸ್ಕ್ರೀನ್‌ಪ್ಲೇ ಸೂಪರ್. ನಿರ್ದೇಶನ ಕೂಡ ಚೆನ್ನಾಗಿದೆ. ತಾರಾಬಳಗದ ನಟನೆ ಬೆಂಕಿ. ಬ್ಲ್ಯಾಕ್ ಕೋಬ್ರಾ Vs ಬ್ಲ್ಯಾಕ್ ಡ್ರ್ಯಾಗನ್ ಡೆಡ್ಲಿ. ಕ್ಲೈಮ್ಯಾಕ್ಸ್ ಚಿಂದಿ. ಚರಣ್ ರಾಜ್ ಬಿಜಿಎಂ ಕೂಡ ಸೂಪರ್ ಎಂದು ಮತ್ತೊಬ್ಬರು ಟ್ವೀಟ್ ಮಾಡಿದ್ದಾರೆ.


Click it and Unblock the Notifications











