Bigil Review: ವಿಜಯ್ 'ಬಿಗಿಲ್' ನೋಡಿ ಏನ್ ಹೇಳಿದ್ರು ಪ್ರೇಕ್ಷಕರು?
ಎರಡು ದಿನ ಮುಂಚಿತವಾಗಿ ಕಾಲಿವುಡ್ ಚಿತ್ರರಂಗದಲ್ಲಿ ದೀಪಾವಳಿ ಹಬ್ಬ ಶುರುವಾಗಿದೆ. ಕಾರಣ ಇಳಯದಳಪತಿ ವಿಜಯ್ ನಟನೆಯ 'ಬಿಗಿಲ್' ಸಿನಿಮಾ ಅದ್ದೂರಿಯಾಗಿ ಬಿಡುಗಡೆಯಾಗಿದೆ.
'ಬಿಗಿಲ್' ಸಿನಿಮಾದಲ್ಲಿ ವಿಜಯ್ ಮೂರು ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಫುಲ್ ಬಾಲ್ ಆಟದ ದೃಶ್ಯಗಳು ರೋಮಾಂಚಕವಾಗಿವೆ. ನಿರ್ದೇಶಕ ಅಟ್ಲೀ ಸ್ಕ್ರೀನ್ ಪ್ಲೇ ಯನ್ನು ಜನ ಮೆಚ್ಚಿಕೊಂಡಿದ್ದಾರೆ. ವಿಜಯ್ ಪವರ್ ಫುಲ್ ನಟನೆ ಇಷ್ಟ ಆಗಿದೆ. ಸಿನಿಮಾ ತುಂಬ ಎಮೋಷನ್ಸ್ ಹೊಂದಿದೆಯಂತೆ.
ಅಂದಹಾಗೆ, 'ಬಿಗಿಲ್' ಸಿನಿಮಾವನ್ನು ಫಸ್ಟ್ ಡೇ ಫಸ್ಟ್ ಶೋ ನೋಡಿದ ವೀಕ್ಷಕರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸಿನಿಮಾ ನೋಡಿದ ಅಭಿಪ್ರಾಯ ತಿಳಿಸಿದ್ದಾರೆ. ಬಹುತೇಕ ಮಂದಿ ಸಿನಿಮಾ ಮೆಚ್ಚಿಕೊಂಡಿದ್ದಾರೆ. ಆದರೆ, ಕೆಲವರಿಗೆ ಸಿನಿಮಾ ಇಷ್ಟ ಆಗಿಲ್ಲ. ಕೆಲವರು ಫಸ್ಟ್ ಹಾಫ್ ಬೆಸ್ಟ್ ಎಂದ್ರೆ, ಇನ್ನು ಕೆಲವರು ಸೆಕೆಂಡ್ ಹಾಫ್ ಗೆ ಹೆಚ್ಚು ಅಂಕ ನೀಡಿದ್ದಾರೆ.
ವಿಜಯ್ ಪವರ್ ಪ್ಯಾಕ್ ಫರ್ಫಾಮೆನ್ಸ್
''ಫಸ್ಟ್ ಹಾಫ್ ಅದ್ಭುತವಾಗಿದೆ. ಸೆಕೆಂಡ್ ಹಾಫ್ ಎಮೋಷನಲ್ ಆಗಿದೆ. ನಟ ವಿಜಯ್ ಪವರ್ ಪ್ಯಾಕ್ ಫರ್ಫಾಮೆನ್ಸ್ ಮಾಡಿದ್ದಾರೆ. ನಿರ್ದೇಶಕ ಅಟ್ಲೀ ಸ್ಕ್ರೀನ್ ಪ್ಲೇ ಚೆನ್ನಾಗಿದೆ. ಇಳಯದಳಪತಿ ವಿಜಯ್ ಮತ್ತೆ ಬಾಕ್ಸ್ ಆಫೀಸ್ ದಾಖಲೆ ಮಾಡುತ್ತಾರೆ.''
ಫುಟ್ ಬಾಲ್ ದೃಶ್ಯ ಚೆನ್ನಾಗಿದೆ
''ಅದ್ಬುತವಾದ ಸಿನಿಮಾ. ರೋಮಾಂಚನ ಆಗುತ್ತದೆ. ಸೆಕೆಂಡ್ ಹಾಫ್ ನಲ್ಲಿ ಬರುವ ಇಳಿಯದಳಪತಿಯ ಎರಡು ನಿಮಿಷದ ಫುಟ್ ಬಾಲ್ ದೃಶ್ಯ ಚೆನ್ನಾಗಿದೆ. ಸಿನಿಮಾ ಸಖತ್ ಮಾಸ್.'' ಎಂದಿರುವ ಒಬ್ಬ ಪ್ರೇಕ್ಷಕ ಸಿನಿಮಾಗೆ 4 ಸ್ಟಾರ್ ನೀಡಿದ್ದಾರೆ. ಈ ಮೂಲಕ ಸಿನಿಮಾ ತುಂಬ ಇಷ್ಟ ಆಗಿದೆ ಎಂದು ತಿಳಿಸಿದ್ದಾರೆ.
ಫಸ್ಟ್ ಹಾಫ್ ತುಂಬ ನಿಧಾನವಾಗಿದೆ
''ಫಸ್ಟ್ ಹಾಫ್ ತುಂಬ ನಿಧಾನವಾಗಿದೆ. ಒಳ್ಳೆಯ ಹಾಸ್ಯ ದೃಶ್ಯಗಳನ್ನು ನೀಡಲು ಪ್ರಯತ್ನ ಮಾಡಿ ಅದರಲ್ಲಿ ಸೋತಿದ್ದಾರೆ. ನಯನತಾರ ಧ್ವನಿ ಬದಲಾವಣೆ ಚೆನ್ನಾಗಿ ಇಲ್ಲ.'' ಎಂದು ಫಸ್ಟ್ ಹಾಫ್ ನೋಡಿ ಪ್ರೇಕ್ಷಕರೊಬ್ಬರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಸೆಕೆಂಡ್ ಹಾಫ್ ಗಾಗಿ ಅವರು ಕಾಯುತ್ತಿದ್ದೇನೆ ಎಂದಿದ್ದಾರೆ.
ಸಿನಿಮಾ ಬೋರ್ ಆಗುತ್ತದೆ
''ಸಿನಿಮಾ ಬೋರ್ ಆಗುತ್ತದೆ. ಜಡವಾದ ಸ್ಕ್ರೀನ್ ಪ್ಲೇ ಇದೆ. ಕಥೆ ಗಟ್ಟಿಯಾಗಿ ಇಲ್ಲ. ತುಂಬ ಪಾತ್ರಗಳು ಇವೆ. ವಿ ಎಫ್ ಎಕ್ಸ್ ಮೊಬೈಲ್ ಗೇಮ್ ನಷ್ಟು ಕೂಡ ಚೆನ್ನಾಗಿ ಇಲ್ಲ. ಬಲವಂತವಾಗಿ ಪ್ರೇಮ ದೃಶ್ಯಗಳನ್ನು ತುಂಬಲಾಗಿದೆ. ಹಾಡುಗಳು ಕೂಡ ಚೆನ್ನಾಗಿ ಇಲ್ಲ. ವಿಜಯ್ ಅಭಿಮಾನಿಗಳಿಗೂ ಸಿನಿಮಾ ಬೇಸರ ಆಗುತ್ತದೆ.''
ಸಿನಿಮಾವನ್ನು ವಿಜಯ್ ಮುಂದೆ ತೆಗೆದುಕೊಂಡು ಹೋಗುತ್ತಾರೆ
''ಎಮೋಷನಲ್ ದೃಶ್ಯಗಳು ಹಾಗೂ ಸಿನಿಮಾವನ್ನು ಮೇಲೆ ಎತ್ತುವ ದೃಶ್ಯಗಳು ಚಿತ್ರದಲ್ಲಿ ಸಮನಾಗಿ ಇವೆ. ವಿಜಯ್ ಪ್ರಮಾಣಿಕವಾಗಿ ನಟಿಸಿದ್ದರೆ, ಸಿನಿಮಾವನ್ನು ಅವರೇ ಮುಂದೆ ತೆಗೆದುಕೊಂಡು ಹೋಗುತ್ತಾರೆ. ಸೆಕೆಂಡ್ ಹಾಫ್ ಕೊನೆಯಲ್ಲಿ ಕಥೆ ಎಳೆದಿದ್ದಾರೆ. ನಿರ್ದೇಶಕ ಅಟ್ಲೀ ತಮ್ಮ ಮತ್ತೊಂದು ಕಮರ್ಷಿಯಲ್ ಟಿಪಿಕಲ್ ಸಿನಿಮಾ ನೀಡಿದ್ದಾರೆ.''


Click it and Unblock the Notifications











