"ಸೈಕ್ ಆಗ್ಬಿಟ್ಟೆ".. "ಥಿಯೇಟರ್‌ನಲ್ಲಿ ಯಾಕೆ ನೋಡ್ಲಿಲ್ಲ ಅಂತ ಗಿಲ್ಟ್ ಫೀಲ್ ಆಗ್ತಿದೆ".. ಮಾಸ್ಟರ್‌ಪೀಸ್

ಕನ್ನಡ ಚಿತ್ರರಂಗದಲ್ಲಿ ಇತ್ತೀಚೆಗೆ ಭರ್ಜರಿ ರೆಸ್ಪಾನ್ಸ್ ಪಡೆದುಕೊಂಡ 'ಬ್ಲಿಂಕ್' ಸಿನಿಮಾ ಓಟಿಟಿಗೆ ಬಂದಿದೆ. ಸಾಕಷ್ಟು ಜನ ಓಟಿಟಿ ಸ್ಟ್ರೀಮಿಂಗ್‌ಗಾಗಿ ಕಾಯುತ್ತಿದ್ದರು. ಇದೀಗ ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ಛೇ.. ಇಂತಹ ಚಿತ್ರವನ್ನು ದೊಡ್ಡ ಪರದೆಯಲ್ಲಿ ನೋಡುವುದು ಮಿಸ್ ಮಾಡಿಕೊಂಡುಬಿಟ್ಟಿವೆ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಶ್ರೀನಿಧಿ ಬೆಂಗಳೂರು ನಿರ್ದೇಶನದ ಸೈನ್ಸ್ ಫಿಕ್ಷನ್ ಸಿನಿಮಾ ಇದು. 'ದಿಯಾ' ಸಿನಿಮಾ ಖ್ಯಾತಿಯ ದೀಕ್ಷಿತ್ ಶೆಟ್ಟಿ ಚಿತ್ರದ ಲೀಡ್ ರೋಲ್‌ನಲ್ಲಿ ನಟಿಸಿದ್ದಾರೆ. ಟೈಮ್​ ಟ್ರಾವೆಲ್ ಕಾನ್ಸೆಪ್ಟ್‌ನಲ್ಲಿ ಮೂಡಿ ಬಂದಿರುವ ಸಿನಿಮಾ ಮಾರ್ಚ್ 8ಕ್ಕೆ ತೆರೆಗೆ ಬಂದಿತ್ತು. ನಿಧಾನವಾಗಿ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆದಿತ್ತು. ಮೌತ್ ಟಾಕ್‌ನಿಂದ ಸ್ಕ್ರೀನ್‌ಗಳ ಸಂಖ್ಯೆ ಹೆಚ್ಚಿಸಿಕೊಂಡು ಸಿನಿಮಾ ಸದ್ದು ಮಾಡಿತ್ತು. ಆದರೂ ದೊಡ್ಡ ಮಟ್ಟದಲ್ಲಿ ಸಿನಿಮಾ ಗೆಲ್ಲಲಿಲ್ಲ.

Blink on OTT  Viewers Praising kannada film blink  Call It A Must Watch

ಕಳೆದ ವಾರವೇ 'ಬ್ಲಿಂಕ್' ಸಿನಿಮಾ ಅಮೇಜಾನ್ ಪ್ರೈಂಗೆ ಬಂದಿತ್ತು. ಆದರೆ ಯುಕೆ ಹಾಗೂ ಯುಎಸ್ ವೀಕ್ಷಕರು ಮಾತ್ರ ಹಣ ಕೊಟ್ಟು ಸಿನಿಮಾ ನೋಡುವ ಅವಕಾಶ ಸಿಕ್ಕಿತ್ತು. ಬಳಿಕ ಸಿನಿಮಾ ಪೈರಸಿ ಆಗಿ HD ಪ್ರಿಂಟ್ ಲಿಂಕ್‌ಗಳು ವೈರಲ್ ಆಗಿತ್ತು. ಈ ಬಗ್ಗೆ ನಿರ್ಮಾಪಕರು ಬೇಸರ ವ್ಯಕ್ತಪಡಿಸಿದ್ದರು. ಇದೆಲ್ಲದರ ನಡುವೆ ಸದ್ದಿಲ್ಲದೇ ಸಿನಿಮಾ ಭಾರತದಲ್ಲೂ ಸ್ಟ್ರೀಮಿಂಗ್ ಆರಂಭಿಸಿದೆ.

ಕೆಲವರು ಪ್ರೈಂನಲ್ಲಿ ಸಿನಿಮಾ ಸಿಗುತ್ತಿಲ್ಲ. ಸರಿಯಾಗಿ ಡಿಸ್‌ಪ್ಲೇ ಆಗುತ್ತಿಲ್ಲ. ಹೊಸದಾಗಿ ಸೇರ್ಪಡೆಯಾದ ಸಿನಿಮಾ ಲೀಸ್ಟ್‌ನಲ್ಲಿ ಕೂಡ ತೋರಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಸಿನಿಮಾ ನೋಡಿದವರು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

ಸೈಕ್ ಆಗ್ಬಿಟ್ಟೆ

"ಏನ್ ಮೂವಿ ಮಾಡಿದ್ದೀಯಾ ಗುರು. ಸೈಕ್ ಆಗ್ಬಿಟ್ಟೆ. ಕನ್ನಡದಲ್ಲಿ ಇಂತಹ ಸಿನಿಮಾ ಯಾವತ್ತು ನೋಡಿರಲಿಲ್ಲ. ನಿಜಕ್ಕೂ ಅದ್ಭುತ.. ಇಂತಹ ಚಿತ್ರವನ್ನು ಚಿತ್ರಮಂದಿರದಲ್ಲಿ ನೋಡಲಿಲ್ಲವಲ್ಲಾ ಎಂದು ಬೇಸರವಾಗುತ್ತಿದೆ. ಇಂತಹ ಮತ್ತಷ್ಟು ಸಿನಿಮಾಗಳನ್ನು ಮಾಡಿ. ಅದನ್ನು ಚಿತ್ರಮಂದಿರದಲ್ಲಿ ನೋಡುವವರಲ್ಲಿ ನಾನೇ ಮೊದಲಿಗನಾಗಿರುತ್ತೇನೆ" ಎಂದು ರಘು ಗೌಡ ಎಂಬುವವರು ಟ್ವೀಟ್ ಮಾಡಿದ್ದಾರೆ.

Blink on OTT  Viewers Praising kannada film blink  Call It A Must Watch

ಇಂತಹ ಚಿತ್ರ ಬೆಂಬಲಿಸಬೇಕು

'ಬ್ಲಿಂಕ್' ಚಿತ್ರವನ್ನು ಮಲಯಾಳಂನಲ್ಲಿ ತೆಗೆದಿದ್ದರೆ ಆಲ್‌ ಟೈಮ್ ಬ್ಲಾಕ್‌ ಬಸ್ಟರ್ ಆಗುತ್ತಿತ್ತು. ನಾನು ಇಂತಹ ಕನ್ನಡ ಸಿನಿಮಾಗಳಿಗೆ ಬೆಂಬಲ ನೀಡಬೇಕು" ಎಂದು ಬೀರ್ಲಿಂಗ ಕೊಲ್ಲಿ ಎಂಬುವವರು ಟ್ವೀಟ್ ಮಾಡಿದ್ದಾರೆ.

ತಂಡಕ್ಕೆ ಅಭಿನಂದನೆ

"ನೋಡಲೇಬೇಕಾದ ಸಿನಿಮಾ 'ಬ್ಲಿಂಕ್'. ನೀವು ಸೈನ್ಸ್ ಫಿಕ್ಷನ್ ಸಿನಿಮಾಗಳ ಅಭಿಮಾನಿಗಳಾಗಿದ್ದರೆ ನಮ್ಮ ಪ್ರತಿಭೆಗಳನ್ನು ಬೆಂಬಲಿಸಿ. ಪ್ರತಿಯೊಬ್ಬ ಕನ್ನಡ ತೆಲುಗು ತಮಿಳು ಮತ್ತು ಮಲಯಾಳಂ ಪ್ರೇಕ್ಷಕರು ಈ ಥ್ರಿಲ್ಲಿಂಗ್ ಸಿನಿಮಾ ನೋಡಲೇಬೇಕು. ನಿರ್ದೇಶಕರಿಗೆ ಮತ್ತು ತಂಡಕ್ಕೆ ಅಭಿನಂದನೆಗಳು" ಎಂದು ಮತ್ತೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಗಿಲ್ಡ್ ಫೀಲ್ ಆಗುತ್ತಿದೆ

"ಹೌದು, ಈ ಚಿತ್ರವನ್ನು ದೊಡ್ಡ ಪರದೆಯ ಮೇಲೆ ನೋಡದಿದ್ದಕ್ಕಾಗಿ ನನಗೆ ಗಿಲ್ಟ್ ಫೀಲ್ ಆಗುತ್ತಿದೆ. ಸಂಗೀತ, ಕಾಸ್ಟಿಂಗ್ ಮತ್ತು ಚಿತ್ರಕಥೆ ಎಲ್ಲವೂ ಸೊಗಸಾಗಿದೆ. ಈ ಚಿತ್ರ ಗಡಿ ಮೀರಿ ಹರಡಲಿ ಹಾಗೂ ನಾನು ಅದನ್ನು ಬೆಂಬಲಿಸುತ್ತೇನೆ" ಎಂದು ಶ್ರೀಜಿತ್ ಬರೆದಿದ್ದಾರೆ.

ನಿಜಕ್ಕೂ ಮಾಸ್ಟರ್‌ಪೀಸ್

ಮೈಂಡ್ ಬೆಂಡಿಂಗ್ ಮಾಸ್ಟರ್‌ಪೀಸ್. ಅಬ್ಬಬ್ಬಾ ಎಂತಹ ಸಿನಿಮಾ. ಎಮೋಷನ್ಸ್, ಹಲವು ಟ್ವಿಸ್ಟ್‌ ಹಾಗೂ ತಿರುವುಗಳ ಜೊತೆಗೆ 2 ಗಂಟೆ 14 ನಿಮಿಷ ಕಂಪ್ಲೀಟ್ ರೋಲರ್ ಕೋಸ್ಟರ್ ರೈಡ್. 'ಬ್ಲಿಂಕ್' ಚಿತ್ರಕ್ಕೆ ದೊಡ್ಡ ನಮನ" ಎಂದು ಪೃಥ್ವೀಶ್ ರಾಹುಲ್ ಟ್ವೀಟ್ ಮಾಡಿದ್ದಾರೆ.

More from Filmibeat

English summary
Blink OTT twitter review; Audience hail Dheekshith Shetty's performance in this science fiction thriller;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X