twitter
    For Quick Alerts
    ALLOW NOTIFICATIONS  
    For Daily Alerts

    Kabir singh review : ಉತ್ತಮ ನಟ ಎನ್ನುವುದನ್ನ ಮತ್ತೊಮ್ಮೆ ಸಾಬೀತು ಮಾಡಿದ ಶಾಹಿದ್

    |

    ಬಾಲಿವುಡ್ ನ ಹ್ಯಾಂಡ್ ಸಮ್ ಹಂಕ್ ಶಾಹಿದ್ ಕಪೂರ್ ಅಭಿನಯದ ಕಬೀರ್ ಸಿಂಗ್ ಇಂದು ದೇಶದಾದ್ಯಂತ ತೆರೆಗೆ ಬಂದಿದೆ. ಕಬೀರ್ ಸಿಂಗ್ ತೆಲುಗಿನ ಸೂಪರ್ ಹಿಟ್ ಅರ್ಜುನ್ ರೆಡ್ಡಿ ಸಿನಿಮಾದ ಹಿಂದಿ ರಿಮೇಕ್ ಎನ್ನುವುದು ಗೊತ್ತಿರಲಿ. ವಿಜಯ್ ದೇವರಕೊಂಡ ಮತ್ತು ಶಾಲಿನಿ ಪಾಂಡೆ ಅಭಿನಯದ ಅರ್ಜುನ್ ರೆಡ್ಡಿ ಚಿತ್ರಕ್ಕೆ ನಿರ್ದೇಶಕ ಸಂದೀಪ್ ವಾಂಗ ಆಕ್ಷನ್ ಕಟ್ ಹೇಳಿದ್ದರು.

    ಈಗ ಕಬೀರ್ ಸಿಂಗ್ ಚಿತ್ರವು ಸಂದೀಪ್ ಸಾರಥ್ಯದಲ್ಲಿ ಮೂಡಿಬಂದಿದೆ. ಚಿತ್ರದ ಅನೇಕ ದೃಶ್ಯಗಳು ನೋಡಲು ಹಿಂಸೆ ಎನಿಸಿದರು ಚಿತ್ರವನ್ನು ಸುಂದರವಾಗಿ ಕಟ್ಟಿಕೊಡುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ. ಮೂಲ ಚಿತ್ರ ಅರ್ಜುನ್ ರೆಡ್ಡಿಗೂ ಕಬೀರ್ ಸಿಂಗ್ ಗೂ ಯಾವುದೆ ವ್ಯತ್ಯಾಸವಿಲ್ಲ.

    ಫ್ರೇಮ್ ಟು ಫ್ರೇಮ್ ಅರ್ಜುನ್ ರೆಡ್ಡಿಯನ್ನೆ ಕಾಪಿ ಮಾಡಲಾಗಿದೆ. ಹಾಗಾಗಿ ಮೂಲ ಚಿತ್ರ ನೋಡಿದವರಿಗೆ ಹೊಸ ಅನುಭವವೇನು ನೀಡುವುದಿಲ್ಲ. ಆದ್ರೆ ಶಾಹಿದ್ ಅಭಿಮಾನಿಗಳಿಗೆ ಕಬೀರ್ ಸಿಂಗ್ ಫುಲ್ ಮೀಲ್ಸ್ ಆಗಿದೆ. ಶಾಹಿದ್ ಅದ್ಭುತ ಅಭಿನಯ ಮತ್ತೊಮ್ಮೆ ಇಲ್ಲಿ ಸಾಬೀತಾಗಿದೆ. ಮುಂದೆ ಓದಿ..

    ಕಬೀರ್ ಸಿಂಗ್ ಕಥೆ

    ಕಬೀರ್ ಸಿಂಗ್ ಕಥೆ

    ಕಾಲೇಜಿನ ಅತೀ ಬುದ್ದಿವಂತ, ಕಾಲೇಜ್ ಟಾಪರ್ ವೈದ್ಯಕೀಯ ವಿದ್ಯಾರ್ಥಿ ಕಬೀರ್ ಸಿಂಗ್, ಆತನ ಜ್ಯೂನಿಯರ್ ಪ್ರೀತಿಯನ್ನು ನೋಡಿದ ತಕ್ಷಣ ಪ್ರೀತಿಯಲ್ಲಿ ಬೀಳುತ್ತಾನೆ. ಲವ್ ಅಟ್ ಫಸ್ಟ್ ಸೈಟ್ ಆಗಿ ನಂತರ ಆಕೆಯನ್ನು ಅತಿಯಾಗಿ ಪ್ರೀತಿಸಲು ಪ್ರಾರಂಭಿಸುತ್ತಾನೆ. ಆಕೆಯ ಬಳಿ ಪ್ರೀತಿಯನ್ನು ವ್ಯಕ್ತಪಡಿಸದೆ, ಚುಂಬಿಸುವುದು, ಹೊಡೆಯುವುದು. ಒಬ್ಬ ಉತ್ತಮ ಡಾಕ್ಟರ್, ಸರ್ಜನ್ ಮತ್ತು ಕಾಲೇಜ್ ಟಾಪರ್ ಆಗಿರುವ ಕಬೀರ್ ಸಿಂಗ್ ನಂತರ ಪ್ರೀತಿಯ ವಿಚಾರಕ್ಕೆ ಸೈಕ್ ಆಗುವುದು ದುರಂತ. ಹುಡುಗಿ ದೂರ ಆದ್ಲು ಅಂತ ಅದೆ ದುಃಖದಲ್ಲಿ, ಅತಿಯಾದ ಕುಡಿತ, ಡ್ರಗ್ಸ್, ಸೆಕ್ಸ್ ಚಟಕ್ಕೆ ಬೀಳುತ್ತಾನೆ. ಇಷ್ಟಾದರು ಅಂತಿಮವಾಗಿ ನಾಯಕಿಯನ್ನು ಪಡೆಯುತ್ತಾನಾ ಎನ್ನುವುದು ಕಥೆ.

    ಶಾಹಿದ್ ಮತ್ತು ಕಿಯಾರಾ ಅಭಿನಯ

    ಶಾಹಿದ್ ಮತ್ತು ಕಿಯಾರಾ ಅಭಿನಯ

    ಶಾಹಿದ್ ಕಪೂರ್ ಅದ್ಭುತವಾದ ಅಭಿನಯ ನೀಡಿದ್ದಾರೆ. ಕಬೀರ್ ಸಿಂಗ್ ಪಾತ್ರ ಶಾಹಿದ್ ಕಪೂರ್ ಒಬ್ಬ ಉತ್ತಮ ನಟ ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ. ಸವಾಲಿನ ಪಾತ್ರವನ್ನು ಅಷ್ಟೆ ಲೀಲಾಜಾಲವಾಗಿ ಅಭಿನಯಿಸಿ ಸೈ ಎನಿಸಿಕೊಳ್ಳುತ್ತಾರೆ. ಶಾಹಿದ್ ಕಳೆದ ಎಲ್ಲಾ ಸಿನಿಮಾಗಳಿಗಿಂದ ಈ ಸಿನಿಮಾದ ಅಭಿನಯ ಮತ್ತೊಂದು ಹಂತಕ್ಕೆ ತೆೆಗೆದು ಕೊಂಡು ಹೋಗಿದೆ. ಇನ್ನು ಪ್ರೀತಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ನಟಿ ಕಿಯಾರ ಅಡ್ವಾನಿ ಅದ್ಭತವಾಗಿ ಅಭಿನಯಿಸಿದ್ದಾರೆ. ತನ್ನ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಆದ್ರೆ ಮೂಲ ಸಿನಿಮಾ ಪಾತ್ರಕ್ಕೆ ಹೋಲಿಸಿದರೆ ಶಾಲಿನಿ ಪಾಂಡೆ ಅಷ್ಟು ಮುಗ್ಧತೆ ಕಿಯಾರ ಮುಖದಲ್ಲಿ ಕಾಣುವುದಿಲ್ಲ. ಜೊತೆಗೆ ಕಬೀರ್ ಸಿಂಗ್ ಸ್ನೇಹಿತ ಶಿವನ ಪಾತ್ರದಲ್ಲಿ ಮಿಂಚಿರುವ ಸೋಹಮ್ ಮಜುಮ್ ದಾರ್ ಪಾತ್ರ ನೋಡುಗರನ್ನು ಅತಿಯಾಗಿ ಕಾಡುವ ಪಾತ್ರವಾಗಿದೆ. ಯಾಕಂದ್ರೆ ಹಾಸ್ಯದ ಜೊತೆ ಭಾವನಾತ್ಮಕ ಸನ್ನಿವೇಶವನ್ನು ಅದ್ಭುತವಾಗಿ ಮಾಡಿದ್ದಾರೆ.

    ಚಿತ್ರದ ತಾಂತ್ರಿಕ ಅಂಶ

    ಚಿತ್ರದ ತಾಂತ್ರಿಕ ಅಂಶ

    ನಿರ್ದೇಶಕ ಸಂದೀಪ್ ವಾಂಗ ಮೂಲ ಸಿನಿಮಾದಂತೆ ಇಲ್ಲೂ ನೀಟಾಗಿ ಕಟ್ಟಿಕೊಟ್ಟಿದ್ದಾರೆ. ಜೊತೆಗೆ ಶಾಹಿದ್ ಕಪೂರ್ ಅವರಿಂದ ಅದ್ಭುತವಾದ ಅಭಿನಯ ತೆಗೆಸಿದ್ದಾರೆ. ಎಲ್ಲೂ ಅನಾವಶ್ಯಕ ದೃಶ್ಯಗಳನ್ನು ತುರುಕಿದ ಹಾಗೆ ಮಾಡಿಲ್ಲ. ಚಿತ್ರದ ಸಂಗೀತ ಕೂಡ ಉತ್ತಮವಾಗಿ ಮೂಡಿ ಬಂದಿದೆ. ಹಿನ್ನಲೆ ಸಂಗೀತ ಚಿತ್ರವನ್ನು ಮತ್ತೊಂದು ಲೆವೆಲ್ ತೆಗೆದುಕೊಂಡು ಹೋಗಿದೆ.

    ಕೊನೆಯ ಮಾತು

    ಕೊನೆಯ ಮಾತು

    ಚಿತ್ರದ ಅನೇಕ ದೃಶ್ಯಗಳು ನೋಡಲು ತುಂಬಾ ಹಿಂಸೆ ಎನಿಸುತ್ತೆ. ಅಲ್ಲದೆ ಪ್ರೀತಿ ಪಾತ್ರವನ್ನು ಬಳಸಿಕೊಂಡ ರೀತಿ ನಿಜಕ್ಕು ನಿರ್ದೇಶಕರ ಮೇಲೆ ಸಿಟ್ಟುತರಿಸುತ್ತೆ. ಕುಡಿತ, ಸ್ಮೋಕಿಂಗ್, ಸೆಕ್ಸ್ ಅತಿ ಎನಿಸುತ್ತೆ. ಶಾಹಿದ್ ಕಪೂರ್ ಉತ್ತಮ ನಟ ಎನ್ನುವುದು ಇಲ್ಲಿ ಮತ್ತೊಮ್ಮೆ ಸಾಬೀತಾಗಿದೆ. ಇಷ್ಟೆಲ್ಲ ಏನೆ ಆದ್ರೂ ಅರ್ಜುನ್ ರೆಡ್ಡಿ ಚಿತ್ರದಲ್ಲಿ ಸಕ್ಸಸ್ ಆದ ಎಲ್ಲಾ ಅಂಶಗಳನ್ನು ಬಾಲಿವುಡ್ ಚಿತ್ರದಲ್ಲೂ ಬಳಸಿಕೊಂಡಿದ್ದಾರೆ. ಶಾಹಿದ್ ಅಭಿಮಾನಿಗಳಿಗೆ ಈ ಸಿನಿಮಾ ಇಷ್ಟವಾಗುವುದ್ರಲ್ಲಿ ಯಾವುದೆ ಅನುಮಾನವಿಲ್ಲ.

    English summary
    Bollywood Kabir Singh film review. Shahid Kapoor touches level he has never done in the past.
    Friday, June 21, 2019, 17:14
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X