For Quick Alerts
  ALLOW NOTIFICATIONS  
  For Daily Alerts

  ಬಾಸ್ ವಿಮರ್ಶೆ: ಹಳೆ ಮಸಾಲೆ, ಹೊಸ ಶೈಲಿ ರುಚಿ

  By ಜೇಮ್ಸ್ ಮಾರ್ಟಿನ್
  |

  ಮನರಂಜನೆಯೊಂದೇ ಚಿತ್ರದಿಂದ ಬಯಸುವ ಅಂಶ ಎಂದು ಯಾರಾದರೂ ಹೇಳಿದರೆ ಅವರನ್ನು ಬಾಸ್ ಚಿತ್ರ ನೋಡಲು ಬಿಟ್ಟು ಬಿಡಿ. ಮನರಂಜನೆಯೇ ಪ್ರಧಾನವಾಗಿರುವ ಮಸಾಲೆ ಭರಿತ ಚಿತ್ರ 'ಬಾಸ್' ಅಕ್ಷಯ್ ಕುಮಾರ್ ಅವರ ವೃತ್ತಿ ಜೀವನದ ಈ ಕಾಲಘಟ್ಟದಲ್ಲಿ ಬೇಕಿತ್ತಾ? ಎಂಬ ಪ್ರಶ್ನೆ ಅವರ ಅಭಿಮಾನಿಗಳು ಕೇಳುತ್ತಿದ್ದಾರೆ.

  ಬ್ಲೂ ಎಂಬ ಹೆಸರಿನ ಚಿತ್ರ ನೀಡಿದ್ದ ನಿರ್ದೇಶಕ ಅಂಥೋಣಿ ಡಿ'ಸೋಜಾ ಈಗ ಆಕ್ಷನ್ ಕಾಮಿಡಿ ಬೆರೆಸಿ ಅಕ್ಷಯ್ ಜನಪ್ರಿಯತೆ ಮುಂದಿಟ್ಟುಕೊಂಡು ಬಾಸ್ ಚಿತ್ರ ತಂದಿದ್ದಾರೆ. ಒಮ್ಮೆ ನೋಡಿ ಮರೆಯಬಹುದು ಅಷ್ಟೇ. ಅಂದ ಹಾಗೆ ಈ ಚಿತ್ರ ಮಲೆಯಾಳಂನ ಪೊಕ್ಕಿರಿ ರಾಜಾ ಚಿತ್ರದ ಮೂಲ ಚಿತ್ರದಲ್ಲಿ ಮಮ್ಮೂಟಿ, ಪೃಥ್ವಿರಾಜ್ ಹಾಗೂ ಶ್ರೇಯಾ ಸರನ್ ಅಭಿನಯಿಸಿದ್ದರು.

  ಚಿತ್ರದ ಕಥೆಯೇನು?: ಅಪ್ಪ(ಸತ್ಯಕಾಂತ್ ಶಾಸ್ತ್ರಿ ಮಿಥುನ್ ಚಕ್ರವರ್ತಿ) ಮಗ(ಬಾಸ್ ಅಕ್ಷಯ್ ಕುಮಾರ್) ನಡುವಿನ ಸಂಬಂಧ ಹಳಸಿರುತ್ತದೆ. ಬಿಗ್ ಬಾಸ್ ಎಂಬ ಡಾನ್ ಗೆ ನಮ್ಮ ಹೀರೋ ಬಾಸ್ ಬಲಗಿ ಬಂಟನಾಗಿರುತ್ತಾನೆ.

  ಅಕ್ಷಯ್ ಅವರ ಕಿರಿಯ ಸೋದರ ಶಿವ್(ಶಿವ ಪಂಡಿತ್) ಗೆ ಅಂಕಿತಾ(ಅದಿತಿ ರಾವ್ ಹೈದರಿ) ಮೇಲೆ ಪ್ಯಾರ್ ಆಗಿರುತ್ತದೆ. ಖಳನಂತೆ ವರ್ತಿಸುವ ಕಾಪ್ ಆಯುಷ್ಮಾನ್ ಠಾಕೂರ್ (ರೋನಿತ್ ರಾಯ್) ಜತೆ ಶಿವ್ ಗೆ ಕಿರಿಕ್ ಆಗಿರುತ್ತದೆ. ನಿರೀಕ್ಷೆಯಂತೆ ಶಿವ್ ಲವರ್ ಅಂಕಿತಾಗೆ ಠಾಕೂರ್ ಬ್ರದರ್ ಆಗಿರುತ್ತಾನೆ. ಬಾಸ್ ಕೈಗೆ ಈ ಲವ್ ಮ್ಯಾಟರ್ ಡೀಲ್ ಮಾಡೋ ಕೆಲ್ಸ ಸಿಗುತ್ತದೆ ಮುಂದೇನಾಗುತ್ತದೆ ನೋಡಿ. ಅಕ್ಷಯ್ ಕುಮಾರ್ ಹೊಸ ಅವತಾರ ಆತನ ಆಭಿಮಾನಿಗಳಿಗೆ ಇಷ್ಟವಾಗಬಹುದು. ಚಿತ್ರ ನೋಡಬಹುದೇ ಇಲ್ಲವೇ ಎಂಬುದರ ಬಗ್ಗೆ ಮುಂದೆ ಓದಿ...

  ಬಾಸ್ ಗೆ ಯಾರೂ ಜೋಡಿ ಇಲ್ಲ

  ಬಾಸ್ ಗೆ ಯಾರೂ ಜೋಡಿ ಇಲ್ಲ

  ಈ ಚಿತ್ರದಲ್ಲಿ ಕುತೂಹಲಕಾರಿ ಅಂಶ ಎಂದರೆ ಅಕ್ಷಯ್ ಕುಮಾರ್ ಅವರಿಗೆ ನಾಯಕಿಯೇ ಇಲ್ಲ. ಚಿತ್ರಕ್ಕೂ ಮುನ್ನ ಅದಿತಿ ರಾವ್ ಜೋಡಿ ಎನ್ನಲಾಗಿತ್ತು. ಆದರೆ, ಅದಿತಿ ಈ ಚಿತ್ರದಲ್ಲಿ ಶಿವ್ ಪಂಡಿತ್ ಜೋಡಿಯಾಗಿದ್ದಾರೆ. ಒಂದು ರೀತಿ ವಿಷ್ಣುವರ್ಧನ್ ಅವರ ಬಳ್ಳಾರಿ ನಾಗ ತರಾ ಅನ್ಸುತ್ತೆ.

  ಸೋನಾಕ್ಷಿ ಸಿನ್ಹಾ

  ಸೋನಾಕ್ಷಿ ಸಿನ್ಹಾ

  ಅಕ್ಷಯ್ ನಾಯಕಿ ಇಲ್ಲದಿದ್ದರೂ ಹಳೆ ಚಿತ್ರದ ಜೋಡಿ ಸೋನಾಕ್ಷಿ ಸಿನ್ಹಾ ಈ ಚಿತ್ರದಲ್ಲಿ ಫ್ಲಾಶ್ ಬ್ಲಾಕ್ ಸಾಂಗ್ ನಲ್ಲಿ ಅಕ್ಕಿ ಜೋಡಿ ಕುಣಿಯಲಿದ್ದಾರೆ. ಶ್ರೀದೇವಿ ಅಭಿನಯದ 'ಹರ್ ಕಿಸಿ ಕೊ' ಹಾಡಿಗೆ ಸೋನಾಕ್ಷಿ ಕುಣಿದಿದ್ದಾರೆ.

  ಅಕ್ಷಯ್ ಸೋನಾಕ್ಷಿ ಜೋಡಿ

  ಅಕ್ಷಯ್ ಸೋನಾಕ್ಷಿ ಜೋಡಿ

  ರೌಡಿ ರಾಥೋರ್ ನಲ್ಲಿ ಕಮಾಲ್ ಮಾಡಿದ ಅಕ್ಷಯ್ ಕುಮಾರ್ ಹಾಗೂ ಸೋನಾಕ್ಷಿ ಜೋಡಿ ಹಾಡಿ ಕುಣಿಯುವ ದೃಶ್ಯಗಳೇ ಚಿತ್ರದ ಪಾಸಿಟಿವ್ ಭಾಗ ಎನ್ನಬಹುದು.

  ಅದಿತಿ ರಾವ್ ಹೈದರಿ

  ಅದಿತಿ ರಾವ್ ಹೈದರಿ

  ಕೆಲಕಾಲ ಪಡ್ಡೆಗಳು ಪರದೆಯನ್ನು ಕುಕ್ಕುವಂತೆ ನೋಡುವ ಸೀನ್ ಇದೆ. ಪಿಂಕ್ ಬಣ್ಣದ ಬಿಕಿನಿಯಲ್ಲಿ ಕಾಣಿಸಿಕೊಂಡಿರುವ ಸಪೂರ ಮೈಕಟ್ಟಿನ ಅದಿತಿ ಕಾಣಿಸಿಕೊಂಡಿದ್ದಾರೆ.

  ಅದಿತಿ-ಶಿವ್

  ಅದಿತಿ-ಶಿವ್

  ಚಿತ್ರದಲ್ಲಿ ಅದಿತಿ ರಾವ್ ಹೈದರಿ ಹಾಗೂ ಶಿವ್ ಪಂಡಿತ್ ಇಬ್ಬರು ಜೋಡಿಯಾಗಿ ನಟಿಸಿದ್ದು ಉತ್ತಮ ಹೊಂದಾಣಿಕೆ ಕಂಡು ಬಂದಿದೆ.

  ಸಾಹಸ ದೃಶ್ಯ

  ಸಾಹಸ ದೃಶ್ಯ

  ಸಾಹಸ ಪ್ರಿಯ ಅಕ್ಷಯ್ ಕುಮಾರ್ ಅವರು ಸಾಹಸ ದೃಶ್ಯಗಳಲ್ಲಿ ಲೀಲಾಜಾಲವಾಗಿ ನಟಿಸಿದ್ದಾರೆ.ಆದರೆ, ಅಕ್ಷಯ್ ಗೆ ಸವಾಲೊಡ್ಡುವ ಸಾಹಸ ದೃಶ್ಯಗಳೇನು ಚಿತ್ರದಲ್ಲಿಲ್ಲ.

  ಪ್ರಭುದೇವ ಡ್ಯಾನ್ಸ್

  ಪ್ರಭುದೇವ ಡ್ಯಾನ್ಸ್

  'ಹಮ್ ನಾ ತೊಡೆ' ಹಾಡಿನಲ್ಲಿ ಪ್ರಭುದೇವ ಕಾಣಿಸಿಕೊಂಡು ಕೆಲಹೊತ್ತು ಡ್ಯಾನ್ಸ್ ಮೂಲಕ ರಂಜಿಸುತ್ತಾರೆ.

  ಸಂಗೀತ

  ಸಂಗೀತ

  ಚಿತ್ರದಲ್ಲಿ ಸುಮಾರು 9 ಹಾಡುಗಳಿವೆ. ಅಂಜಾನ್, ದೀಪಕ್, ಚಿರಂತನ್ ಭಟ್ ಸಂಯೋಜನೆಯ ಹಾಡುಗಳು ಚಿತ್ರಕ್ಕೆ ಒಗ್ಗಿಕೊಂಡಿದ್ದರೂ ಪ್ರೇಕ್ಷಕರ ಮನಸ್ಸಿಗೆ ನಾಟಲು ಸಾಧ್ಯವಿಲ್ಲ. ಚಿತ್ರಮಂದಿರ ತೊರೆದ ಮೇಲೆ ಹಾಡು ನೆನಪಲ್ಲಿ ಉಳಿಯುವುದೇ ಕಷ್ಟ

  ಬಾಸ್ ಕಥೆ

  ಬಾಸ್ ಕಥೆ

  ಈ ಚಿತ್ರಕ್ಕೆ ಮೊದಲಿಗೆ ನಾಮ್ ಹೈ ಬಾಸ್ ಎಂದು ಹೆಸರಿಡಲಾಗಿತ್ತು. ಬಾಸ್ ಎಂಬ ಶೀರ್ಷಿಕೆಯನ್ನು ಹಾಗೂ ಹೀಗೂ ಪಡೆಯುವಲ್ಲಿ ಅಕ್ಷಯ್ ಕುಮಾರ್ ತಂಡ ಯಶಸ್ವಿಯಾಯಿತು.

  ರಿಮೇಕ್ ಚಿತ್ರ

  ರಿಮೇಕ್ ಚಿತ್ರ

  ಮೊದಲೇ ಹೇಳಿದಂತೆ ಬಾಸ್ ಚಿತ್ರ ಮಲೆಯಾಳಂನ ಸೂಪರ್ ಹಿಟ್ ಚಿತ್ರ ಪೊಕ್ಕಿರಿ ರಾಜ ರಿಮೇಕ್. 82.5 ಮಿಲಿಯನ್ ರುಪಾಯಿ ಬಂಡವಾಳದಲ್ಲಿ ತಯಾರಾದ ಪೊಕ್ಕಿರಿ ರಾಜ ಚಿತ್ರ 2010ರಲ್ಲಿ ತೆರೆ ಕಂಡು 670 ಮಿಲಿಯನ್ ರುಪಾಯಿ ಗಳಿಸಿತ್ತು.

  ಗಿನ್ನೆಸ್ ರೆಕಾರ್ಡ್

  ಗಿನ್ನೆಸ್ ರೆಕಾರ್ಡ್

  ಮುಂಬೈನ ಅಂಧೇರಿ ಕ್ರೀಡಾಂಗಣದಲ್ಲಿ ಸುಮಾರು 193 ಅಡಿ 1 ಇಂಚು ಅಗಲ ಹಾಗೂ 180 ಅಡಿ ಹಾಗೂ 2 ಇಂಚು ಉದ್ದದ ಪೋಸ್ಟರ್ ನಿರ್ಮಿಸಿ ಅಕ್ಷಯ್ ಕುಮಾರ್ ಅವರ ಚಿತ್ರ ಗಿನ್ನೆಸ್ ದಾಖಲೆ ನಿರ್ಮಿಸಿದೆ.

  ಇದಕ್ಕೂ ಮುನ್ನ ಮೈಕಲ್ ಜಾಕ್ಸನ್ ಅವರ this is it ಚಿತ್ರದ ಹೆಸರಿನಲ್ಲಿ ಅತಿದೊಡ್ಡ ಪೋಸ್ಟರ್ ದಾಖಲೆ ಇತ್ತು.

  English summary
  Boss is a typical masala flick with clichés and we mostly see what we expected; nothing fresh. There won't be many surprises in the film. The point is most masala entertainers tend to be this way.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X