Brahmachari Review: ಬ್ರಹ್ಮಚಾರಿ.....100 % ಕಾಮಿಡಿ

ಶ್ರೀರಾಮಚಂದ್ರನ ಪರಮಭಕ್ತ. ರಾಮನಂತೆ ಏಕಪತ್ನಿ ವ್ರತಸ್ಥ. ಮದುವೆ ಆದ್ಮೇಲೆ ಹೆಂಡತಿಯನ್ನು ಬಿಟ್ಟು ಮದುವೆಗೂ ಮುಂಚೆ ಯಾರನ್ನು ಕಣ್ಣೆತ್ತಿ ನೋಡಲ್ಲ, ಪ್ರೀತಿ ಮಾಡಲ್ಲ ಎಂದು ಶಪಥ ಮಾಡಿರುವ ಅಪ್ಪಟ ಬ್ರಹ್ಮಚಾರಿಯ ದಾಂಪತ್ಯ ಸಂಕಟದ ಕಥೆ. ಸಿನಿಮಾ ಪ್ರೇಕ್ಷಕರಿಗೆ ಖುಷಿ ಕೊಡುತ್ತೆ. ಪೂರ್ತಿ ವಿಮರ್ಶೆ ಮುಂದೆ ಓದಿ...

Rating:
3.5/5

ಚಿತ್ರ: ಬ್ರಹ್ಮಚಾರಿ

ನಿರ್ದೇಶಕ: ಚಂದ್ರಮೋಹನ್

ನಿರ್ಮಾಪಕ: ಉದಯ್ ಕೆ ಮೆಹ್ತಾ

ಕಲಾವಿದರು: ಸತೀಶ್ ನೀನಾಸಂ, ಅದಿತಿ ಪ್ರಭುದೇವ, ಅಚ್ಯುತ್ ಕುಮಾರ್, ದತ್ತಣ್ಣ, ಶಿವರಾಜ್ ಕೆ ಆರ್ ಪೇಟೆ, ಅಶೋಕ್ ಮತ್ತು ಇತರರು

ಬಿಡುಗಡೆ: 29 ನವೆಂಬರ್ 2019

ಬ್ರಹ್ಮಚಾರಿಯ ಮದುವೆ ಕಥೆ

ಬ್ರಹ್ಮಚಾರಿಯ ಮದುವೆ ಕಥೆ

ಅಪ್ಪಟ ಬ್ರಹ್ಮಚಾರಿ ರಾಮು (ಸತೀಶ್ ನೀನಾಸಂ) ಸಂಸಾರಿ ಆಗಲು ಸಿದ್ಧವಾಗ್ತಾನೆ. ಜೀವನದಲ್ಲಿ ಯಾವುದೇ ತಪ್ಪು ಮಾಡದ, ಯಾವುದೇ ಕೆಟ್ಟ ಅಭ್ಯಾಸಗಳು ಇಲ್ಲದ ಸ್ವಚ್ಛ ಮನಸ್ಸಿನ ಸರ್ಕಾರಿ ನೌಕರನಿಗೆ ಹುಡುಗಿ ಹುಡುಕುವುದು, ಇಬ್ಬರು ಸ್ನೇಹಿತರು ಅದಕ್ಕೆ ಬೆಂಬಲವಾಗಿ ನಿಲ್ಲುವುದು ಚಿತ್ರದ ಮೊದಲಾರ್ಧ. ವಾಸ್ತವದಲ್ಲಿ ಇಂತಹ ವ್ಯಕ್ತಿಯೊಬ್ಬ ಇದ್ದರೆ, ಅವನಿಗೆ ಮದುವೆ ಮಾಡಿಸುವುದು ಎಷ್ಟು ಕಷ್ಟ ಎಂದು ಹಾಸ್ಯಾಸ್ಪದವಾಗಿ ತೋರಿಸಲಾಗಿದೆ. ಈ ಸನ್ನಿವೇಶಗಳಲ್ಲಿ ಸತೀಶ್ ನೀನಾಸಂ, ಶಿವರಾಜ್ ಕೆ ಆರ್ ಪೇಟೆ ಮತ್ತು ಅಶೋಕ್ ಕಾಂಬಿನೇಷನ್ ನೋಡುಗರಿಗೆ ಮಜಾ ಕೊಡುತ್ತೆ.

ಬ್ರಹ್ಮಚಾರಿಯ ದಾಂಪತ್ಯ ಸಂಕಟ

ಬ್ರಹ್ಮಚಾರಿಯ ದಾಂಪತ್ಯ ಸಂಕಟ

ಬ್ರಹ್ಮಚಾರಿ ಜೀವನದಲ್ಲೂ ಒಂದು ಮುದ್ದಾದ ಲವ್ ಸ್ಟೋರಿ ಇದೆ. ಆ ಪ್ರೀತಿ ದಾಂಪತ್ಯಕ್ಕೆ ಏಣಿಯಾಗುತ್ತೆ. ಬ್ರಹ್ಮಚಾರಿಯ ಅಸಲಿ ಕಥೆ ಶುರುವಾಗುವುದು ಇಲ್ಲಿಂದ. ಬ್ರಹ್ಮಚಾರಿ ದಾಂಪತ್ಯ ಜೀವನದಲ್ಲಿ ಅಚಾನಕ್ ಆಗಿ ಆಗಬಾರದೊಂದು ಸಮಸ್ಯೆ ಎದುರಾದಾಗ ಗಂಡಸು ಎಂಬುವನು ಅದನ್ನು ಹೇಗೆ ನಿಭಾಯಿಸುತ್ತಾನೆ ಎಂಬುದು ಆತನಿಗೆ ಸಂಕಟ, ಪ್ರೇಕ್ಷಕರಿಗೆ ಮನರಂಜನೆ.

ಕಾಶೀನಾಥ್ ಚಿತ್ರಗಳನ್ನು ಸ್ಮರಿಸಬಹುದು

ಕಾಶೀನಾಥ್ ಚಿತ್ರಗಳನ್ನು ಸ್ಮರಿಸಬಹುದು

ಸ್ವತಃ ಚಿತ್ರತಂಡವೇ ಹೇಳಿದಂತೆ ಬ್ರಹ್ಮಾಚಾರಿ ಸಿನಿಮಾ ನೋಡಿದ್ಮೇಲೆ ಕಾಶೀನಾಥ್ ಚಿತ್ರಗಳನ್ನ ಸ್ಮರಿಸಬಹುದು. ನಮ್ಮ ಸುತ್ತಮುತ್ತಿನ ಅಥವಾ ಸಾಂಸಾರಿಕ ಜೀವನದಲ್ಲಿ ಕಂಡು ಬರುವ ಸಣ್ಣ ಸಮಸ್ಯೆಯೊಂದನ್ನು ಕಥೆಯನ್ನಾಗಿಸಿ ಅದನ್ನು ಹಾಸ್ಯದ ಮೂಲಕ ಕಾಶೀನಾಥ್ ಹೇಗೆ ಸಿನಿಮಾ ಮಾಡುತ್ತಿದ್ದರೋ ಅದೇ ರೀತಿಯ ಕಲ್ಪನೆ ಇಲ್ಲಿಯೂ ಗಮನಿಸಬಹುದು. ಡಬಲ್ ಮೀನಿಂಗ್ ಡೈಲಾಗ್ ಗಳ ಅತಿರೇಕ ಇಲ್ಲ, ಓವರ್ ಆಕ್ಟಿಂಗ್ ಇಲ್ಲ, ಬಹಳ ನೀಟ್ ಆಗಿ ಪ್ರೆಸೆಂಟ್ ಮಾಡಿದ್ದಾರೆ.

ಕಲಾವಿದರ ನಟನೆ ಇಷ್ಟ ಆಗುತ್ತೆ

ಕಲಾವಿದರ ನಟನೆ ಇಷ್ಟ ಆಗುತ್ತೆ

ಸ್ವಚ್ಚ ಮನಸ್ಸಿನ ಬ್ರಹ್ಮಚಾರಿಯಾಗಿ ಹಾಗೂ ಮದುವೆ ಬಳಿಕ ಸಂಕಟ ಎದುರಿಸುವ ಪುರುಷನಾಗಿ ಸತೀಶ್ ನೀನಾಸಂ ಇಷ್ಟ ಆಗ್ತಾರೆ. ಸುನೀತಾ ಕೃಷ್ಣಮೂರ್ತಿ ಪಾತ್ರದಲ್ಲಿ ಅದಿತಿ ಪ್ರಭುದೇವ ಗಮನಾರ್ಹ ನಟನೆ. ಸ್ನೇಹಿತರಾಗಿ ಶಿವರಾಜ್ ಕೆ ಆರ್ ಪೇಟೆ ಮತ್ತು ಅಶೋಕ್ ಗೆ ಫುಲ್ ಮಾರ್ಕ್ಸ್. ಅತ್ತೆ-ಮಾವ ಅಚ್ಯುತ್ ಕುಮಾರ್ ಮತ್ತು ಪದ್ಮಜಾ ರಾವ್ ಹಾಗೂ ಯೋಗ ಡಾಕ್ಟರ್ ಪಾತ್ರದಲ್ಲಿ ದತ್ತಣ್ಣ ಅವರು ಸೂಕ್ತ ನಟನೆ. ಅಕ್ಷತಾ ಶ್ರೀನಿವಾಸ್ ಕೂಡ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಚಿತ್ರಕ್ಕೆ ಗ್ಲಾಮರ್ ಕಿಕ್ ಕೊಟ್ಟಿದ್ದಾರೆ.

ನೋಡಬಹುದಾದ ಬ್ರಹ್ಮಚಾರಿ

ನೋಡಬಹುದಾದ ಬ್ರಹ್ಮಚಾರಿ

ಚೊಚ್ಚಲ ನಿರ್ದೇಶನದಲ್ಲಿ ಚಂದ್ರಮೋಹನ್ ಗೆದ್ದಿದ್ದಾರೆ. ಸಂಗೀತ ನಿರ್ದೇಶಕ ಧರ್ಮ್ ವಿಶ್, ರವಿ ವಿ ಅವರ ಛಾಯಾಗ್ರಹಣ ಸಾಥ್ ನೀಡಿದೆ. ಕೊನೆಯದಾಗಿ ಹೇಳುವುದಾದರೇ ಫ್ಯಾಮಿಲಿ ಆಡಿಯೆನ್ಸ್ ಗೆ ಹೇಳಿಮಾಡಿಸಿದ ಸಿನಿಮಾ. ಕುಟುಂಬ ಸಮೇತ ಎಲ್ಲರೂ ನೋಡಬಹುದಾದ ಚಿತ್ರ.

More from Filmibeat

English summary
Sathish ninasam starrer Brahmachari movie review in kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X