Kaatera First Half Review: 'ಕಾಟೇರ' ದರ್ಶನ ಆರಂಭ, ಫಸ್ಟ್ ಹಾಫ್‌ನಲ್ಲಿ ಹೈಲೈಟ್ ಆಗಿದ್ದು ಏನೇನು..?
ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ನಟನೆಯ ಬಹಿನಿರೀಕ್ಷಿತ 'ಕಾಟೇರ' ಸಿನಿ ಅಪ್ಪಳಿಗೆ ಅಪ್ಪಳಿಸಿದೆ. ಗುರುವಾರ ಮಧ್ಯರಾತ್ರಿ 12 ಗಂಟೆಗೆ 'ಕಾಟೇರ'ನ ದರ್ಶನ ಆರಂಭವಾಗಿದ್ದು, ಹಲವು ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಕನ್ನಡಿಗರು ಕಾತೂರದಿಂದ ಕಾಯುತ್ತಿದ್ದ ಸಿನಿಮಾ ಕೊನೆಗೂ ಅವರ ಮುಂದಿದೆ.
ಮಧ್ಯರಾತ್ರಿಯೇ ಸಿನಿಮಾ ನೋಡಿದ ಮಂದಿ ಟ್ವಿಟ್ಟರ್, ಇನ್‌ಸ್ಟಾಗ್ರಾಮ್ ಫೇಸ್‌ಬುಕ್ ಸೇರಿದಂತೆ ಸೋಶಿಯಲ್ ಮೀಡಿಯಾಗಳಲ್ಲಿ 'ಕಾಟೇರ' ಸಿನಿಮಾದ ವಿಮರ್ಶೆ ಮಾಡುತ್ತಿದ್ದಾರೆ. ತರುಣ್ ಸುಧೀರ್ ನಿರ್ದೇಶನ, ನಟ ದರ್ಶನ್, ನಾಯಕಿಯಾಗಿ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿರುವ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ನಟನೆ ಬಗ್ಗೆ ಚರ್ಚೆಯಾಗುತ್ತಿದೆ. ಹಾಗಾದರೆ, ಸಿನಿಮಾದ ಮೊದಲಾರ್ಧ ಹೇಗಿದೆ ಎಂಬುದನ್ನು ಇಲ್ಲಿ ತಿಳಿಯೋಣ.

'ಕಾಟೇರ' ಸಿನಿಮಾದ ಮೊದಲಾರ್ಧ ಹೇಗಿದೆ?
ಕಾಟೇರ ಬಿಡುಗಡೆಯನ್ನು ಡಿಬಾಸ್ ಅಭಿಮಾನಿಗಳು ಹಬ್ಬದಂತೆ ಆಚರಿಸುತ್ತಿದ್ದಾರೆ. ಸಿನಿಮಾದ ಮೊದಲಾರ್ಧದಲ್ಲಿ ಸಕತ್ ಸಸ್ಪೆನ್ಸ್ ಮೂಲಕವೇ ಸಿನಿಮಾ ಆರಂಭಿಸಿದ್ದಾರೆ. ನಾಯಕ ದರ್ಶನ್, ನಾಯಕಿ ಆರಾಧಾನ ಅವರ ಪರಿಚಯ, ಭೀಮನಹಳ್ಳಿ ಕಾಟೇರ ತನ್ನ ಹಿನ್ನೆಲೆ ಹೇಳುವ ಮೂಲಕ ಸಿನಿಮಾ ಕಥೆ ನಿಮ್ಮ ಮುಂದೆ ಬರಲಿದೆ.
'ಕಾಟೇರ'ನ ಫಸ್ಟ್ ಹಾಫ್‌ನ ಪಾಯಿಂಟ್ಸ್‌ಗಳ ಮೂಲಕ ನೋಡುವುದಾದರೇ...
* ನಾಲೆ ಅಗೆಯುವಾಗ 100 ಕ್ಕೂ ಹೆಚ್ಚು ಮನುಷ್ಯರ ಅಸ್ತಿಪಂಜರಗಳು ಸಿಗುವುದರೊಂದಿಗೆ ಸಿನಿಮಾ ಶುರು..ಇದು 1989ರಲ್ಲಿ ನಡೆಯುವ ಘಟನೆ
* ಓಲ್ಡ್ ಏಜ್ ಲುಕ್ ನಲ್ಲಿ ದರ್ಶನ್ ತೂಗುದೀಪ ಎಂಟ್ರಿ
* ಯಾವುದೇ ಆಡಂಬರವಿಲ್ಲದೇ ಸಿಂಪಲ್ ಆಗಿ ನಟ ದರ್ಶನ್ ಎಂಟ್ರಿ
* ಭೀಮನಹಳ್ಳಿ ಕಾಟೇರ ಆಗಿ ದರ್ಶನ ನೀಡಿದ ಡಿಬಾಸ್, ಕಾಟೇರ ತನ್ನ ಹಿನ್ನಲೆಯನ್ನು ಹೇಳುವುದರೊಂದಿಗೆ ಕಥೆ ಆರಂಭ
* ಶಾನುಭೋಗರ ಮಗಳು ಪ್ರಭಾವತಿಯಾಗಿ ಕಾಣಿಸಿಕೊಂಡ ನಟಿ ಆರಾಧನ
* ಚಿಕ್ಕಂದಿನಿಂದ ನಾಯಕನನ್ನು ಪ್ರೀತಿಸುವ ನಾಯಕಿ ಪ್ರಭಾವತಿ

* ಭೀಮನಹಳ್ಳಿ, ಮಲ್ಲನಹಳ್ಳಿ ಊರುಗಳ ನಡುವಿನ ಕಥೆಯೇ 'ಕಾಟೇರ' ಸಿನಿಮಾದ ಮೂಲ
* ತನ್ನವರಿಗಾಗಿ... ತನ್ನೂರಿಗಾಗಿ ಹುಲಿ ಆಗೋಕು ಸಿದ್ಧ ..ಬಲಿ ಆಗೋಕು ಸಿದ್ಧ ಎನ್ನುವ ನಾಯಕ ಕಾಟೇರ
* ಹೊಲೆ ಮಾರಿಯನ್ನು ಕಾಟೇರ ಊರಿಗೆ ತರುವ ದೃಶ್ಯ ಫಸ್ಟ್ ಹಾಪ್‌ನ ಹೈಲೆಟ್
* ಊರಿನ ಧಣಿ ಜಗಪತಿ ಬಾಬು ತುಳಿತಕ್ಕೆ ಒಳಗಾದ ಜನ ಇಂಟರ್ ವಲ್ ವೇಳೆಗೆ ತಿರುಗಿ ಬೀಳುತ್ತಾರೆ
* ಕಾಟೇರ ಸಿನಿಮಾದ ಮೊದಲಾರ್ಧದಲ್ಲಿ ಜಗಪತಿ ಬಾಬು, ಆರಾಧನಾ, ಶೃತಿ ನಟನೆ ಚೆನ್ನಾಗಿದೆ
* ಮೊದಲಾರ್ಧದಲ್ಲಿಯೇ ನಟ ದರ್ಶನ್ ಎರಡು ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.
* ಮಾಲಾಶ್ರೀ ಪುತ್ರಿ ಆರಾಧನಾ ದರ್ಶನ್ ಪ್ರಿಯತಮೆ ಆಗಿ ಮತ್ತು ಪಸಂದಾಗೌನೆ ಎಂದು ಮೊದಲಾರ್ಧದಲ್ಲಿ ಕುಣಿದಿದ್ದಾರೆ.
* ಉಳುವವನೇ ಭೂಮಿಯ ಒಡೆಯ ಕಾಯ್ದೆ ಜಾರಿ ಎನ್ನುವ ಸುದ್ದಿಯೊಂದಿಗೆ ಇಂಟರ್ ವಲ್
* ಜಮೀನ್ದಾರನನ್ನು ಎದುರು ಹಾಕಿಕೊಂಡ ಜನರ ಕಥೆ ಏನಾಗುತ್ತದೆ ಅನ್ನೋದು ಸೆಕೆಂಡ್ ಹಾಫ್


Click it and Unblock the Notifications











