'ಕುರುಕ್ಷೇತ್ರ' ನೋಡಿದ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಹೇಳಿದ್ದೇನು?

Recommended Video

Kurukshetra Movie: ಕುರುಕ್ಷೇತ್ರ' ನೋಡಿದ ಅಭಿಮಾನಿಗಳು ಟ್ವಿಟ್ಟರ್ ನಲ್ಲಿ ಹೇಳಿದ್ದೇನು?

Kurukshetra Movie Twitter Review :' ಕುರುಕ್ಷೇತ್ರ' ಸಿನಿಮಾಗಾಗಿ ಸುಮಾರು ಎರಡು ವರ್ಷಗಳಿಂದ ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಇಂದು ಆ ಅದ್ಭುತ ಕ್ಷಣ ಬಂದಿದೆ. ಮಹಾಭಾರತದ ಕಥೆ, 3 ಡಿ ಎಫೆಕ್ಟ್, ದರ್ಶನ್ 50ನೇ ಸಿನಿಮಾ, ಬಹುದೊಡ್ಡ ತಾರಾಬಳಗ ಹೀಗೆ ಸಾಕಷ್ಟು ವಿಶೇಷತೆಗಳಿಂದ ಚಿತ್ರಮಂದಿರಕ್ಕೆ ಎಂಟ್ರಿ ಕೊಟ್ಟಿದೆ.

ಮದ್ಯ ರಾತ್ರಿಯಿಂದನೆ ಕುರುಕ್ಷೇತ್ರ ಪ್ರದರ್ಶನವಾಗುತ್ತಿತ್ತು ಅಭಿಮಾನಿಗಳು ಸಿನಿಮಾ ನೋಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಈಗಾಗಲೆ ಚಿತ್ರದ ನೋಡಿದ ಒಂದಿಷ್ಟು ಮಂದಿ ಹೇಗಿದೆ ಎಂದು ಟ್ವಿಟ್ಟರ್ ನಲ್ಲಿ ಹೇಳಿಕೊಳ್ಳುತ್ತಿದ್ದಾರೆ.

ಅಭಿಮಾನಿಗಳು ಮಾತ್ರವಲ್ಲದೆ ಚಿತ್ರರಂಗದವರು ಸಿನಿಮಾ ನೋಡಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಕುರುಕ್ಷೇತ್ರ ಐದು ಭಾಷೆಯಲ್ಲಿ ತೆರೆಗೆ ಬರಲು ಸಿದ್ಧವಾಗಿತ್ತು. ಆದ್ರೀಗ ತೆಲುಗು ಮತ್ತು ಕನ್ನಡದಲ್ಲಿ ಮಾತ್ರ ರಿಲೀಸ್ ಆಗಿದೆ. ಆದ್ರೆ ಇನ್ನು ಉಳಿದ ಮೂರು ಭಾಷೆಯ ಕುರುಕ್ಷೇತ್ರ ಸಧ್ಯದಲ್ಲೇ ತೆರೆಗೆ ಬರಲಿದೆ. ಈಗ ರಿಲೀಸ್ ಆಗಿರುವ ಕುರುಕ್ಷೇತ್ರದ ಬಗ್ಗೆ ಯಾರೆಲ್ಲ ಏನು ಹೇಳಿದ್ದಾರೆ ಎಂದು ಮುಂದೆ ಓದಿ.

ಪ್ರತಿಯೊಬ್ಬರು ನೋಡಲೆಬೇಕಾದ ಸಿನಿಮಾ

ಪ್ರತಿಯೊಬ್ಬರು ನೋಡಲೆಬೇಕಾದ ಸಿನಿಮಾ

"ಪ್ರತಿಯೊಬ್ಬರ ಅಭಿನಯ ಅದ್ಭುತವಾಗಿದೆ. ಇದು ಕೇವಲ ಸಿನಿಮಾ ಅವಲ್ಲ ಇದೊಂದು ಮಹಾಭಾರತದ ಅನುಭವ. ಪ್ರತಿಯೊಬ್ಬರು ನೋಡಲೆ ಬೇಕಾದ ಸಿನಿಮಾ. ದರ್ಶನ್ ಅವರ ಮೊದಲ ನೂರು ಕೋಟಿ ಗಳಿಸಿದ ಸಿನಿಮಾ ಆಗಲಿದೆ. ನೂರು ಕೋಟಿ ಗಳಿಸಿದ ಸ್ಯಾಂಡಲ್ ವುಡ್ ನ ಎರಡನೆ ಸಿನಿಮಾ ಕುರುಕ್ಷೇತ್ರ ಆಗಲಿದೆ" ಎಂದು ಕೀರ್ತಿ ಎನ್ ಬರೆದುಕೊಂಡಿದ್ದಾರೆ.

ಭರತ ಭೂಮಿಯ ಹೆಮ್ಮೆಯ ಮಹಾಕಾವ್ಯ

ಭರತ ಭೂಮಿಯ ಹೆಮ್ಮೆಯ ಮಹಾಕಾವ್ಯ

ಮುನಿರತ್ನ ಕುರುಕ್ಷೇತ್ರ ನೋಡುತ್ತಿದ್ದೀನಿ. 3ಡಿಯಲ್ಲಿ ನೋಡಿದ್ರೆ ಎದೆಮೇಲೆ ಓಡಾಡಿದಂಗೆ ಆಗಿತ್ತೆ. ನೀವು ಯಾರ್ ಪ್ಯಾನ್ಸ್ ಆದ್ರು ಆಗಿ, ಭರತ ಭೂಮಿಯ ಹೆಮ್ಮೆಯ ಮಹಾಕಾವ್ಯ. ಎಲ್ಲರೂ ನೋಡಿ. ಮತ್ತೆ ಇಂತ ಪೌರಾಣಿಕ ಸಿನಿಮಾ ಬರೋದು ಡೌಟು" ಎಂದು ನಟ ಪ್ರಥಮ್ ಹೇಳಿದ್ದಾರೆ.

ಪ್ರತಿಯೊಬ್ಬರು ಅದ್ಭುತವಾಗಿ ಅಭಿನಯಿಸಿದ್ದಾರೆ

ಪ್ರತಿಯೊಬ್ಬರು ಅದ್ಭುತವಾಗಿ ಅಭಿನಯಿಸಿದ್ದಾರೆ

ಒನ್ ಮ್ಯಾನ್ ಆರ್ಮಿ ದರ್ಶನ್ ತೂಗುದೀಪ ಶ್ರೀನಿವಾಸ್ ಅಣ್ಣ ಅದ್ಭುತವಾಗಿ ಅಭಿನಯಿಸಿದ್ದಾರೆ. ಚಿತ್ರದ ತುಂಬ ಅವರೆ ಅಬ್ಬರಿಸಿದ್ದಾರೆ. ಪ್ರತಿಯೊಬ್ಬರು ಅದ್ಭುತವಾಗಿ ಅಭಿನಯಿಸಿದ್ದಾರೆ. ಅರ್ಜುನ್ ಸರ್ಜಾ ಅಭಿನಯ ಅತ್ತ್ಯುತ್ತಮವಾಗಿದೆ.

ತಾಂತ್ರಿಕವಾಗಿ ಚಿತ್ರ ಉತ್ತಮವಾಗಿದೆ

ತಾಂತ್ರಿಕವಾಗಿ ಚಿತ್ರ ಉತ್ತಮವಾಗಿದೆ

"ಪ್ರತಿಯೊಬ್ಬ ಕನ್ನಡಿಗನು ಮಹಾಭಾರತ ಮಹಾಕಾವ್ಯವನ್ನು ತಪ್ಪದೆ ನೋಡಿ. ಅದ್ಭುತವಾಗಿದೆ. ಪ್ರತಿಯೊಬ್ಬ ಕಲಾವಿದರು ಅದ್ಭುತವಾಗಿ ಅಭಿನಯಿಸಿದ್ದಾರೆ. ದರ್ಶನ್ ಸ್ಕ್ರೀನ್ ಪ್ರೆಸೆನ್ಸ್ ಚೆನ್ನಾಗಿದೆ. ತಾಂತ್ರಿಕವಾಗಿಯು ಚಿತ್ರ ಉತ್ತಮವಾಗಿದೆ. ಖಂಡಿತವಾಗಿಯು ಈ ಸಿನಿಮಾ ಕನ್ನಡ ಚಿತ್ರರಂಗದ ಮತ್ತೊಂದು ಸೂಪರ್ ಹಿಟ್ ಸಿನಿಮಾವಾಗಲಿದೆ. ಕುಟುಂಬದ ಜೊತೆಗೆ ಸಿನಿಮಾ ನೋಡಿ" ಮಯೂರ್

More from Filmibeat

English summary
Darshan starrer 50th film Kurukshetra twitter review.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X