twitter
    For Quick Alerts
    ALLOW NOTIFICATIONS  
    For Daily Alerts

    ವಿಮರ್ಶೆ: ಕಾಲೇಜು ಲೈಫಿನ ಗೆಳೆತನ, ಪ್ರೀತಿ ಮರುಕಳಿಸುವ 'ನೂರೊಂದು ನೆನಪು'

    |

    ಸಂಜಯ್ ಜಾಧವ್ ರವರ 'ದುನಿಯಾದಾರಿ' ಚಿತ್ರದ ಅಫೀಶಿಯಲ್ ರಿಮೇಕ್ ಸಿನಿಮಾ 'ನೂರೊಂದು ನೆನಪು. ಚಿತ್ರವನ್ನು ಲೇಖಕ ಸುಹಾಸ್ ಶಿರ್ವಾಲ್ಕರ್ ರವರ 'ದುನಿಯಾದಾರಿ' ಕಾದಂಬರಿಯಲ್ಲಿಯ ಪ್ರಮುಖ ಅಂಶಗಳನ್ನು ಆಯ್ದುಕೊಂಡು ನಿರ್ದೇಶಕರು ತೆರೆ ಮೇಲೆ ತಂದಿದ್ದಾರೆ. ಎಲ್ಲರ ಜೀವನದಲ್ಲಿ ನಡೆಯುವ ಸಹಜ ಸನ್ನಿವೇಶಗಳ ಸುತ್ತ ಸುತ್ತುವ ಚಿತ್ರಕಥೆ 'ನೂರೊಂದು ನೆನಪು'. ಚಿತ್ರ ನೋಡಿದ ಮೇಲೆ ಪ್ರಮುಖವಾಗಿ ಕಾಲೇಜು ದಿನಗಳ, ಕಾಲೇಜು ಗೆಳೆಯರ ನಡುವಿನ ಅವಿನಾಭಾವ ಗೆಳೆತನದ ಬಗ್ಗೆ ಮತ್ತು ಅಂದಿನ ಪ್ರೀತಿಯ ಬಗ್ಗೆ ಎಲ್ಲರಿಗೂ ನೆನಪುಗಳು ಮರುಕಳಿಸುವಲ್ಲಿ ಸಂಶಯವಿಲ್ಲ.

    Rating:
    3.5/5
    Star Cast: 'ಆ ದಿನಗಳು' ಚೇತನ್, ರಾಜ ವರ್ಧನ್, ಮೇಘನಾ ರಾಜ್, ಸುಶ್ಮಿತಾ ಜೋಶಿ, ಅರ್ಚನಾ, ಯಶ್ ಶೆಟ್ಟಿ
    Director: ಕುಮಾರೇಶ್ ಎಂ

    ನೂರೊಂದು ನೆನಪು

    ನೂರೊಂದು ನೆನಪು

    'ನೂರೊಂದು ನೆನಪು' ಚಿತ್ರದಲ್ಲಿ ಪ್ರೀತಿ ಇದೆ, ಗೆಳೆತನವಿದೆ. ಅದರ ಜೊತೆಗೆ 80 ರ ದಶಕದ ಸಂದರ್ಭದಲ್ಲಿ ಹೆಣ್ಣು ಮಗು ಎಂದರೆ ಫೋಷಕರು ತೋರಿಸುತ್ತಿದ್ದ ತಾತ್ಸಾರ ಮನೋಭಾವನೆ ಇದೆ. ಅಂದಿನ ದಿನದಲ್ಲಿ ಪ್ರೀತಿ ಎಂದರೇ ಹೆಣ್ಣು ಮಕ್ಕಳ ಪೋಷಕರು ಯಾವ ರೀತಿಯ ಅಲೋಚನೆ ಹೊಂದಿದ್ದರು ಎಂಬುದರ ಬಗ್ಗೆ ಬೆಳಕು ಚೆಲ್ಲಲಾಗಿದೆ. ಚಿತ್ರ ನೋಡಿದವರಿಗೆ ಕೊನೆಗೆ ಸಿಗುವ ಸಂದೇಶ ಪ್ರೀತಿಯಲ್ಲಿ ಯಾರು ಸೋಲದಿರಿ ಎಂಬುದು.

    ಕಾಲೇಜು ಲೈಫ್ ಮತ್ತು ಗೆಳೆತನ

    ಕಾಲೇಜು ಲೈಫ್ ಮತ್ತು ಗೆಳೆತನ

    1989 ರಲ್ಲಿ ಶುರುವಾಗುವ ಚಿತ್ರ ದಿಢೀರನೇ 1980 ರ ಫ್ಲ್ಯಾಶ್ ಬ್ಯಾಕ್ ಗೆ ಹೋಗುತ್ತದೆ. ಪದವಿಯಲ್ಲಿ 40 ಪರ್ಸೆಂಟ್ ತೆಗೆದುಕೊಂಡ ಶ್ರೇಯಸ್ ಬಹದ್ದೂರ್(ಚೇತನ್) ಅಮ್ಮನ ಆಜ್ಞೆಯಂತೆ ಉನ್ನತ ಶಿಕ್ಷಣಕ್ಕೆ ಎಸ್‌.ವಿ.ಕಾಲೇಜ್ ಗೆ ಬರುತ್ತಾನೆ. ಅಲ್ಲಿ ಪಾಟೀಲ್(ರಾಜ್ ವರ್ಧನ್) ಎಂಬಾತನ ಗೆಳೆತನವಾದ ನಂತರ ನಡೆಯುವುದೆಲ್ಲಾ ಇತಿಹಾಸ. ಅನಿರೀಕ್ಷಿತವಾಗಿ ಶೃತಿ ಅರಸ್(ಮೇಘನ ರಾಜ್) ಮೇಲೆ ಪ್ರೀತಿ ಆದ ನಂತರ ಈ ಮೂವರು ಪ್ರಮುಖ ಪಾತ್ರಗಳ ಸುತ್ತ ಸುತ್ತುವ ಕಾಲೇಜ್ ಲೈಫ್, ಪ್ರೀತಿ ಹೇಗೆ ಅಂತ್ಯವಾಗುತ್ತದೆ ಎಂಬುದೇ ಕುತೂಹಲ. ಅದನ್ನು ಚಿತ್ರಮಂದಿರದಲ್ಲಿ ನೋಡಿದರೇನೇ ಮಜಾ.

    ಮುಗ್ಧತೆಯಿಂದ ಇಷ್ಟವಾಗುವ 'ಆ ದಿನಗಳು' ಚೇತನ್

    ಮುಗ್ಧತೆಯಿಂದ ಇಷ್ಟವಾಗುವ 'ಆ ದಿನಗಳು' ಚೇತನ್

    ತಾವು ಉತ್ತಮ ಕಥೆ ಸಿಕ್ಕರೇ, ಅದರಿಂದ ಏನಾದರೂ ಕಲಿಯುವ ಹಾಗಿದ್ದರೇ ಮಾತ್ರ ಅಭಿನಯ ಮಾಡುತ್ತೇನೆ ಎಂದು ಹೇಳುವ ನಟ 'ಆ ದಿನಗಳು' ಚೇತನ್ ಗೆ ಚಿತ್ರದಲ್ಲಿನ ಅವರ ಪಾತ್ರ ಅವರ ಉದ್ದೇಶ ಈಡೇರಿಸಿದೆ. ಅಷ್ಟೊಂದು ಮುಗ್ಧರಾಗಿ ಕಾಲೇಜು ಹುಡುಗನಾಗಿ ಪಾತ್ರವನ್ನು ನಿರ್ವಹಿಸಿದ್ದಾರೆ.

    ಖಡಕ್ ರೋಮಿಯೋ ರಾಜ ವರ್ಧನ್

    ಖಡಕ್ ರೋಮಿಯೋ ರಾಜ ವರ್ಧನ್

    ಚಿತ್ರದಲ್ಲಿ ರಫ್ ಅಂಡ್ ಟಫ್ ಖಡಕ್ ಕಾಲೇಜ್ ರೋಮಿಯೋ ಆಗಿ, ಉತ್ತಮ ಗೆಳೆಯನಿಂದ ತಾನು ಬದಲಾಗುವ ವ್ಯಕ್ತಿಯಾಗಿ ಚೊಚ್ಚಲ ಚಿತ್ರದಲ್ಲೇ ಡಿಂಗ್ರಿ ನಾಗರಾಜ್ ರವರ ಮಗ ರಾಜ ವರ್ಧನ್ ಪಾತ್ರ ನಿರ್ವಹಿಸಿದ್ದಾರೆ. ಅವರ ಅಭಿನಯ, ಹೈಟ್, ಡೈಲಾಗ್ ಡೆಲಿವರಿ ಗಮನಿಸಿದರೆ ಸ್ಯಾಂಡಲ್ ವುಡ್ ನಲ್ಲಿ ಅವರಿಗೆ ಉತ್ತಮ ಭವಿಷ್ಯವಿದೆ ಎನ್ನಬಹುದು.

    ಮೇಘನಾ ರಾಜ್ ಮತ್ತು ಇತರರು

    ಮೇಘನಾ ರಾಜ್ ಮತ್ತು ಇತರರು

    ಮೆಡಿಕಲ್ ಸ್ಟೂಡೆಂಟ್ ಶೃತಿ ಅರಸ್ ಆಗಿ ಮೇಘನಾ ರಾಜ್ ಬಣ್ಣ ಹಚ್ಚಿದ್ದರು ಹೆಚ್ಚು ಲವರ್ ಗರ್ಲ್ ಆಗಿಯೇ ಮಿಂಚಿದ್ದಾರೆ. ಮೇಘನಾ ತಮ್ಮ ಬೋಲ್ಡ್ ಅಭಿನಯದ ಜೊತೆಗೆ ಹೆಚ್ಚಾಗಿ ಅವರ ಕಾಸ್ಟ್ಯೂಮ್ ನಿಂದಲೇ ಗಮನ ಸೆಳೆಯುವ ಹಾಗೆ ಮಿಂಚಿದ್ದಾರೆ. ಚಿತ್ರದ ನಾಯಕಿಯರಾಗಿಯೇ ನಟಿಸಿರುವ ಸುಶ್ಮಿತಾ ಜೋಶಿ ಮತ್ತು ಅರ್ಚನಾ ಅಭಿನಯ ಅಷ್ಟಕ್ಕಷ್ಟೆ. ಉಳಿದಂತೆ ಮಿಕ್ಕವರೆಲ್ಲಾ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.

    ಕುಮಾರೇಶ್ ಎಂ ನಿರ್ದೇಶನ

    ಕುಮಾರೇಶ್ ಎಂ ನಿರ್ದೇಶನ

    80ರ ದಶಕದ ಕಥಾಹಂದರ ಹೊಂದಿರುವ ಚಿತ್ರವನ್ನು ತೆರೆಮೇಲೆ ತರಲು ಎಲ್ಲಾ ರೀತಿಯಿಂದಲೂ ಪ್ರಯತ್ನ ಪಟ್ಟಿದ್ದರೂ ನಿರ್ದೇಶಕರು ಕೊಂಚ ಎಡವಿದಹಾಗೆ ಭಾಷವಾಗುತ್ತದೆ. ಚಿತ್ರದ ನಾಯಕರ ಉಡುಗೆಯಲ್ಲಿ 80ದಶಕವನ್ನು ತೋರಿಸಿರುವ ನಿರ್ದೇಶಕ ಚಿತ್ರದ ನಾಯಕಿಯರಲ್ಲಿ ಆ ಪ್ರಜ್ಞೆಯನ್ನು ಮರೆತಿದ್ದಾರೆ. ಕಥೆಯಲ್ಲಿ ಗಟ್ಟಿತನವಿದ್ದರೂ ಸಂಭಾಷಣೆಯಿಂದ ಪ್ರೇಕ್ಷಕರ ಗಮನ ಸೆಳೆಯುವ ಪ್ರಯತ್ನ ನಡೆದಿಲ್ಲ.

    ತಾಂತ್ರಿಕವಾಗಿ ಚಿತ್ರ

    ತಾಂತ್ರಿಕವಾಗಿ ಚಿತ್ರ

    ಚಿತ್ರದಲ್ಲಿಯ ಕಾಲೇಜು ದೃಶ್ಯಗಳು ಮತ್ತು ಇತರೆ ಸನ್ನಿವೇಶಗಳನ್ನು 80ರ ದಶಕದ ಸಂದರ್ಭಕ್ಕೆ ತಕ್ಕಂತೆ ಸೆರೆಹಿಡಿಯುವ ಪ್ರಯತ್ನಕ್ಕೆ ಫುಲ್ ಮಾರ್ಕ್ ಕೊಡಬಹುದು. ಆದರೆ ಚಿತ್ರದ ಹಾಡುಗಳ ಸನ್ನಿವೇಶದಿಂದ ಆ ಫೀಲ್ ಮಾಯವಾಗುತ್ತದೆ. ಕಾರಣ ಸಾಂಗ್ ಚಿತ್ರೀಕರಣ ಪೂರ್ಣ ಆಧುನಿಕತೆಗೆ ಒಗ್ಗಿಕೊಂಡಿದೆ. ಮಾಂಟಾಜ್ ಸಾಟ್ಸ್ ಮೂಲಕ ಚಿತ್ರ ಸೆರೆಹಿಡಿದಿದ್ದರೂ ಅದರ ಎಫೆಕ್ಟ್ ತೆರೆಮೇಲೆ ಕಾಣುವುದಿಲ್ಲ.

    ಸಂಗೀತ

    ಸಂಗೀತ

    ಗಗನ್ ಬದೇರಿಯಾ ಸಂಗೀತದ 4 ಹಾಡುಗಳು ತೆರೆ ಮೇಲೆ ದೃಶ್ಯಗಳ ಮೂಲಕ ನೋಡಲು ಮಾತ್ರ ಚೆನ್ನಾಗಿವೆ. ಚಿತ್ರಮಂದಿರದಿಂದ ಹೊರಗೆ ಬಂದ ನಂತರ ಹಾಡುಗಳು ತಲೆಯಲ್ಲಿ ಉಳಿಯುವುದಿಲ್ಲ. ಹಿನ್ನೆಲೆ ಸಂಗೀತ ಉತ್ತಮವಾಗಿ ಮೂಡಿಬಂದಿದೆ.

    ಕುಟುಂಬ ಸಮೇತ ನೋಡಬಹುದಾದ ಚಿತ್ರ

    ಕುಟುಂಬ ಸಮೇತ ನೋಡಬಹುದಾದ ಚಿತ್ರ

    ಚಿತ್ರದ ಉದ್ದೇಶಕ್ಕೆ ತಕ್ಕನಾಗಿ ಎಷ್ಟು ಬೇಕೋ ಅಷ್ಟೇ ಹಾಡುಗಳಿವೆ. ಎರಡು ಫೈಟ್ ಗಳಿದ್ದು ಅವು ಸಹ ಹಳೇ ಕಾಲದ ಸಿನಿಮಾಗಳ ಫೈಟ್ ಗಳಂತೆ ಫೀಲ್ ನೀಡುತ್ತವೆ. ಒಂದೊಳ್ಳೆ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ 'ನೂರೊಂದು ನೆನಪು'. ಪ್ರೀತಿಯಲ್ಲಿ ಸೋಲದಿರಿ ಎಂಬ ಸಂದೇಶವನ್ನು ಹೊತ್ತು ತಂದ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ 'ನೂರೊಂದು ನೆನಪು'.

    English summary
    Chetan and Meghana Raj Starrer romantic drama Kannada Movie 'Noorondu Nenapu' has hit the screens today(June 09). The Movie is directed by Kumaresh M. Here is the movie review.
    Saturday, September 29, 2018, 15:15
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X