Chhaava Twitter (X) Review ; ಸಂಭಾಜಿ ಮಹಾರಾಜನ ಪಾತ್ರದಲ್ಲಿ ವಿಕ್ಕಿ ಕೌಶಲ್ ಧಗಧಗ, ರಶ್ಮಿಕಾ ಮಂದಣ್ಣ ಅಭಿನಯ ಹೇಗಿದೆ.. ?
ರಶ್ಮಿಕಾ ಮಂದಣ್ಣ- ವಿಕ್ಕಿ ಕೌಶಲ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಛಾವಾ ಇಂದು ಬಿಡುಗಡೆಯಾಗಿದೆ. ಛತ್ರಪತಿ ಶಿವಾಜಿಯ ಪುತ್ರ ಛತ್ರಪತಿ ಸಾಂಬಾಜಿ ಜೀವನ ಕಥೆಯನ್ನಾಧರಿಸಿದ ಚಿತ್ರದಲ್ಲಿ ವಿಕ್ಕಿ ಕೌಶಲ್ ಸಾಂಬಾಜಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಸಾಂಬಾಜಿಯ ಪತ್ಮಿ ಯೇಸುಭಾಯಿ ಪಾತ್ರವನ್ನು ನಿರ್ವಹಿಸಿದ್ದಾರೆ. ಹಾಗಿದ್ದರೆ ರಶ್ಮಿಕಾ ಮಂದಣ್ಣ ಮತ್ತು ವಿಕ್ಕಿ ಕೌಶಲ್ ಅಭಿನಯದ ಛಾವಾ ಹೇಗಿದೆ ? ಚಿತ್ರ ನೋಡಿದ ಪ್ರೇಕ್ಷಕರು ಚಿತ್ರದ ಬಗ್ಗೆ ಹೇಳಿದ್ದೇನು ಎಂದು ತಿಳಿಯಲು ಮುಂದೆ ಓದಿ.
ಇತಿಹಾಸ ಕಣ್ಮುಂದೆ ಬಂದು ಹೋಗುತ್ತೆ
ಚಿತ್ರದ ಆರಂಭದ ದೃಶ್ಯದಿಂದ ಕೊನೆಯವರೆಗೆ ವಿಕ್ಕಿ ಕೌಶಲ್ ಸಂಭಾಜಿ ಪಾತ್ರವನ್ನು ಜೀವಿಸಿದ್ದಾರೆ. ವಿಕ್ಕಿ ಕೌಶಲ್ ಅವರ ಅಭಿನಯ ನಿಜಕ್ಕೂ ಅದ್ಭುತ. ಇನ್ನು ಔರಂಗಜೇಬ್ ಪಾತ್ರದಲ್ಲಿ ನಟಿಸಿರುವ ಅಕ್ಷಯ್ ಖನ್ನಾ ಅವರನ್ನು ಜೀವನ ಪರ್ಯಂತ ಜನ ದ್ವೇಷ ಮಾಡಬೇಕು ಅಷ್ಟರ ಮಟ್ಟಿಗೆ ಅಕ್ಷಯ್ ಖನ್ನಾ ಪಾತ್ರವನ್ನು ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ, ಇತಿಹಾಸ ಕಣ್ಮುಂದೆ ಬಂದು ಹೋದಂತೆ ಆಗುತ್ತೆ ಎಂದು ಆರ್.ಜೆ.ಕರಣ್ ಚಿತ್ರವನ್ನು ವಿಶ್ಲೇಷಿಸಿದ್ದಾರೆ

ವಿಕ್ಕಿ ಕೌಶಲ್ ಹೊರತು ಪಡಿಸಿದರೆ ಮಿಕ್ಕವರ ಅಭಿನಯ ಸಪ್ಪೆ
ವಿಕ್ಕಿ ಕೌಶಲ್ ಅವರ ಅಭಿನಯವನ್ನು ಹೊರತು ಪಡಿಸಿದರೆ ಬೇರೆಯವರ ಆಕ್ಟಿಂಗ್ ಪರಿಣಾಮಕಾರಿಯಾಗಿಲ್ಲ. ಚಿತ್ರದ ಅವಧಿ ತುಸು ಹೆಚ್ಚಾಯ್ತು. ಕೊನೆಯ 20 ನಿಮಿಷ ಚಿತ್ರ ಅದ್ಭುತವಾಗಿ ಮೂಡಿ ಬಂದಿದೆ. ಈ 20 ನಿಮಿಷದ ದೃಶ್ಯಗಳು ನೆನಪಿನಲ್ಲಿ ಉಳಿಯುತ್ತವೆ. ಹಿನ್ನೆಲೆ ಸಂಗೀತ ಬೇರೆ ಕಾಲದ್ದು ಎಂಬ ಭಾವನೆ ಬರುತ್ತೆ ಎಂಬ ಅಭಿಪ್ರಾಯವನ್ನು ಒಬ್ಬರು ವ್ಯಕ್ತಪಡಿಸಿದ್ದಾರೆ
ಮಾಸ್ಟರ್ ಪೀಸ್
ವಿಕ್ಕಿ ಕೌಶಲ್ ವೃತ್ತಿ ಬದುಕಿನ ಅತ್ಯದ್ಭುತ ಸಿನಿಮಾ ಮತ್ತು ಪಾತ್ರ ಇದು. ಈ ಚಿತ್ರದಲ್ಲಿನ ಅಮೋಘ ಅಭಿನಯಕ್ಕೆ ವಿಕ್ಕಿ ಕೌಶಲ್ ಅವರಿಗೆ ಪ್ರಶಸ್ತಿ ಸಿಗುವುದು ಖಚಿತ. ರಶ್ಮಿಕಾ ಮಂದಣ್ಣ ಚಿತ್ರಕ್ಕೆ ಮೆರಗು ನೀಡಿದ್ದಾರೆ. ಅಕ್ಷಯ್ ಖನ್ನಾ ಬಗ್ಗೆ ದೂಸ್ರಾ ಮಾತು ಇಲ್ಲ ಎಂದು ವಿರಾಟ್ ಎಂಬುವರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ.
ವಿಕ್ಕಿ ಕೌಶಲ್‌ಗೆ ಸನ್ಮಾನ ಮಾಡಿ
ಹತ್ತು ಆಸ್ಕರ್ ಪ್ರಶಸ್ತಿಗಳನ್ನು ಕರಗಿಸಿ ಛತ್ರಪತಿ ಶಿವಾಜಿ ಮಹಾರಾಜ ಅವರ ಮೂರ್ತಿಯನ್ನು ಮಾಡಿ, ಆ ಮೂರ್ತಿಯನ್ನು ವಿಕ್ಕಿ ಕೌಶಲ್ ಅವರಿಗೆ ನೀಡಿ ಸನ್ಮಾನವನ್ನು ಮಾಡಿ ಎಂದು ಮತ್ತೊಬ್ಬರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಅಂದುಕೊಂಡಿದ್ದು ಒಂದು ಆಗಿದ್ದು ಇನ್ನೊಂದು
ಛಾವಾ ಚಿತ್ರದ ಮೇಲೆ ತುಂಬಾ ನಿರೀಕ್ಷೆಯನ್ನು ಇಟ್ಟುಕೊಂಡು ಹೋಗಿದ್ದೆ ಆದರೆ ಅಂದುಕೊಂಡಷ್ಟು ಚಿತ್ರ ಖುಷಿಯನ್ನು ಕೊಡಲಿಲ್ಲ. ವಿಕ್ಕಿ ಕೌಶಲ್ ಅಭಿನಯ ಅದ್ಭುತವಾಗಿದೆ. ಆದರೆ ರಶ್ಮಿಕಾ ಮತ್ತು ಅಕ್ಷಯ್ ಖನ್ನಾ ಅವರ ಅಭಿನಯ ಸಾಧಾರಣವಾಗಿದೆ. ಚಿತ್ರಕ್ಕೆ ಐದರಲ್ಲಿ ಮೂರು ಸ್ಟಾರ್ ಕೊಡಬಹುದು ಅಷ್ಟೇ ಎಂದು ಪಂಕಜ್ ಪಾಂಡೆ ಎನ್ನುವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒಟ್ನಲ್ಲಿ ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಛಾವಾ ಚಿತ್ರಕ್ಕೆ ಅನೇಕರು ಮನ ಸೋತಿದ್ದಾರೆ. ಇನ್ನು ಕೆಲವರು ಚಿತ್ರ ಅಷ್ಟಕಷ್ಟೇ ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಚಿತ್ರ ಇಷ್ಟವಾಗಲಿ, ಇಷ್ಟವಾಗಿರದಿರಲಿ ಎಲ್ಲರು ವಿಕ್ಕಿ ಕೌಶಲ್ ಅಭಿನಯಕ್ಕೆ ಮನ ಸೋತಿದ್ದಾರೆ. ವಿಕ್ಕಿ ಕೌಶಲ್ ಅವರ ಅಭಿನಯವನ್ನು ಹಾಡಿ ಹೊಗಳುತ್ತಿದ್ದಾರೆ. ಇನ್ನು ಇಂದು ಚಿತ್ರಕ್ಕೆ ಉತ್ತಮವಾದ ಓಪನಿಂಗ್ ಸಿಕ್ಕಿದ್ದು ಚಿತ್ರ ಮೊದಲ ದಿನ ಎಷ್ಟು ಹಣ ಗಳಿಸಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











